ಧೋನಿ ಗರಡಿಯಲ್ಲಿ ರಿಷಬ್ – ಲಂಕಾ ಪರೀಕ್ಷೆ ಪಾಸ್ ಆಗ್ತಾರಾ?
ಪಂತ್ ಫಾರ್ಮ್ ಗೆ MSD ಗುರು!

ಧೋನಿ ಗರಡಿಯಲ್ಲಿ ರಿಷಬ್ – ಲಂಕಾ ಪರೀಕ್ಷೆ ಪಾಸ್ ಆಗ್ತಾರಾ?ಪಂತ್ ಫಾರ್ಮ್ ಗೆ MSD ಗುರು!

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಆಗಸ್ಟ್ 15ರಿಂದ ಆರಂಭ ಆಗಲಿದೆ. ಈ ಸರಣಿಯನ್ನ ಗೆಲ್ಲೋದು ಭಾರತಕ್ಕೆ ತುಂಬಾನೇ ಮುಖ್ಯ. ವಿಶ್ವಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ರೇಸ್​ನಲ್ಲಿ ಉಳೀಬೇಕು ಅಂದ್ರೆ ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡ್ಬೇಕು. ಹಾಗೇ ಕೆಲ ಪ್ಲೇಯರ್​ಗಳಿಗೆ ಇಂಡಿವಿಶ್ಯುಯಲ್ ಪರ್ಫಾಮೆನ್ಸ್ ಕೂಡ ತುಂಬಾನೇ ಮುಖ್ಯ. ಈ ಲಿಸ್ಟ್​ನಲ್ಲಿ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಕೂಡ ಇದ್ದಾರೆ. ವೈಟ್ ಬಾಲ್ ಫಾರ್ಮೆಟ್​ನಲ್ಲಿ ಫಾರ್ಮ್ ಕಳ್ಕೊಂಡಿರೋ ಪಂತ್ ರೆಡ್ ಬಾಲ್ ಮಾದರಿಯಲ್ಲಿ ತಮ್ಮ ಸ್ಥಾನವನ್ನ ಭದ್ರಪಡಿಸಿಕೊಳ್ಳೋಕೆ ಈಗ ಮಹೇಂದ್ರ ಸಿಂಗ್ ಧೋನಿ ಮೊರೆ ಹೋಗಿದ್ದಾರೆ. ಧೋನಿ ಜೊತೆ ಭರ್ಜರಿ ತಾಲೀಮು ನಡೆಸ್ತಿದ್ದಾರೆ.

ಇದನ್ನೂ ಓದಿ : ಪಾಕ್‌ನಲ್ಲಿ ಭೀಕರ ದುರಂತ- ಕಲ್ಲಿದ್ದಲು ಗಣಿಯಲ್ಲಿ ಸ್ಫೋ*ಟದಿಂದ 32 ಮಂದಿ ಬಲಿ

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ರಿಷಬ್ ಪಂತ್ ಪ್ರಾಕ್ಟೀಸ್ ಶುರು ಮಾಡಿದ್ದಾರೆ. ಅದೂ ಕೂಡ ಪಂತ್ ರಾಂಚಿಯಲ್ಲಿ ಭಾರತದ ಮಾಜಿ ಕ್ಯಾಪ್ಟನ್ ಎಂಎಸ್ ಧೋನಿ ಜೊತೆ ತರಬೇತಿ ಪಡೆಯುತ್ತಿದ್ದಾರೆ ಅನ್ನೋದೇ ಸ್ಪೆಷಾಲಿಟಿ. ಭಾರತದ ಮಾಜಿ ಸ್ಪಿನ್ನರ್ ಶಹಬಾಜ್ ನದೀಮ್ ಇತ್ತೀಚೆಗೆ ಜಿಮ್ ಒಳಗೆ ಇಬ್ಬರು ವಿಕೆಟ್ ಕೀಪರ್‌ಗಳ ಜೊತೆಯಲ್ಲಿ ತೆಗೆಸಿಕೊಂಡಿರುವ ಫೋಟೊವನ್ನು ಶೇರ್ ಮಾಡಿದ್ದಾರೆ. ಭಾರತೀಯ ಕ್ರಿಕೆಟ್‌ನ ಇಬ್ಬರು ಅತ್ಯುತ್ತಮ ಫಿನಿಷರ್‌ಗಳು ರಿಷಭ್ ಪಂತ್ ಮತ್ತು ಎಂಎಸ್ ಧೋನಿ ಭಾಯ್ ಅಂತಾ ಕ್ಯಾಪ್ಶನ್ ಕೊಟ್ಟು ಪೋಸ್ಟ್ ಹಾಕಿದ್ದಾರೆ. ಈ ಫೋಟೋ ವೈರಲ್ ಆದ್ಮೇಲೆ ಪಂತ್ ಧೋನಿ ಬಳಿಯೇ ಪ್ರಾಕ್ಟೀಸ್ ಮಾಡ್ತಿದ್ದಾರೆ ಅನ್ನೋ ಸುದ್ದಿ ಹೊರಬಿದ್ದಿದೆ.

ಟಿ-20ಐ ಮತ್ತು ಏಕದಿನ ತಂಡದಿಂದ ಹೊರಬಿದ್ದಿರುವ ಪಂತ್!

ರಿಷಬ್ ಪಂತ್ ಸದ್ಯ ರಾಂಚಿಯಲ್ಲಿ ಧೋನಿ ಅವರ ಗೈಡೆನ್ಸ್​ನಲ್ಲಿ ಸ್ಪೆಷಲ್ ಫಿಟ್‌ನೆಸ್ ಹಾಗೂ ಕಮ್‌ಬ್ಯಾಕ್​ಗಾಗಿ ತರಬೇತಿ ಪಡೀತಿದ್ದಾರೆ. ಪ್ರಸ್ತುತ ಭಾರತದ ಸೀಮಿತ ಓವರ್‌ಗಳ ಅಂದ್ರೆ ವೈಟ್-ಬಾಲ್ ಫಾರ್ಮೆಟ್​ನಿಂದ ಹೊರಗುಳಿದಿದ್ದದ್ದಾರೆ. ಟಿ-20ಐ ಮತ್ತು ಏಕದಿನ ತಂಡಕ್ಕೆ ಅವ್ರನ್ನ ಸೆಲೆಕ್ಟ್ ಮಾಡ್ತಿಲ್ಲ. ಶುಭಮನ್ ಗಿಲ್ ನಾಯಕತ್ವದ ಭಾರತೀಯ ಟೆಸ್ಟ್ ತಂಡದಲ್ಲಿ ಪಂತ್ ಪ್ರಮುಖ ವಿಕೆಟ್ ಕೀಪರ್ ಬ್ಯಾಟರ್ ಆಗಿ ಮುಂದುವರಿದಿದ್ದಾರೆ. ಆದ್ರೂ 2026 ರ ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದ ಪಂತ್ ಕಳಪೆ ಪ್ರದರ್ಶನ ನೀಡಿದ್ರು. 28.36ರ ಸರಾಸರಿ ಮತ್ತು 138.05ರ ಸ್ಟ್ರೈಕ್ ರೇಟ್‌ನೊಂದಿಗೆ ಕೇವಲ 312 ರನ್‌ಗಳನ್ನು ಗಳಿಸಲಷ್ಟೇ ಶಕ್ತರಾದರು. ಹಾಗೇ ಐಪಿಎಲ್ ಬಳಿಕ ಲಕ್ನೋ ತಂಡ ಬಿಟ್ಟು ಡೆಲ್ಲಿ ಕ್ಯಾಪಿಟಲ್ಸ್ ಸೇರಿದ್ದಾರೆ. ಐಪಿಎಲ್ ಬಳಿಕ ಕಳೆದ ಜೂನ್ ತಿಂಗಳಲ್ಲಿ ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದ ಬಳಿಕ ಮತ್ತೆ ಮೈದಾನಕ್ಕಿಳಿದಿಲ್ಲ. ಈಗ ಧೋನಿಯವರ ಗರಡಿಯಲ್ಲಿ ಭರ್ಜರಿ ಕಂ ಬ್ಯಾಕ್ ನಿರೀಕ್ಷೆಯಲ್ಲಿದ್ದಾರೆ.  ಭಾರತದ ಪರ ಟೆಸ್ಟ್ ಮಾದರಿಯಲ್ಲಿ ಪಂತ್ ಒಳ್ಳೊಳ್ಳೆ ಇನ್ನಿಂಗ್ಸ್ ಆಡಿದ್ದಾರೆ.

ಪವರ್ ಫುಲ್ ಪಂತ್!

2020-21ರ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಬ್ಬರ

ಸಿಡ್ನಿಯಲ್ಲಿ 97 ಮತ್ತು ಗಬ್ಬಾದಲ್ಲಿ ಅಜೇಯ 89 ರನ್ ಗಳಿಸಿ ಭಾರತಕ್ಕೆ ಗೆಲುವು

ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಶತಕ ಬಾರಿಸಿದ

ಮೊದಲ ಭಾರತೀಯ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆ ರಿಷಬ್ ಪಂತ್ ಪಾಲು

ಭಾರತದ ಪರ ಅತಿ ವೇಗವಾಗಿ 1,000 ರನ್ ಪೂರೈಸಿದ ವಿಕೆಟ್-ಕೀಪರ್

ಆಸ್ಟ್ರೇಲಿಯಾ ವಿರುದ್ಧದ ಒಂದೇ ಟೆಸ್ಟ್ ಪಂದ್ಯದಲ್ಲಿ 11 ಕ್ಯಾಚ್‌ ಗಳ ವಿಶ್ವದಾಖಲೆ

ಹೀಗೆ ರಿಷಭ್ ಪಂತ್ ಸ್ವಲ್ಪ ಡಲ್ ಎಂದಾಗಲೆಲ್ಲಾ ಮತ್ತೆ ಫೀನಿಕ್ಸ್ ನಂತೆ ಎದ್ದು ಬಂದಿದ್ದಾರೆ. ಈಗ ಟೆಸ್ಟ್ ಮಾದರಿಯಲ್ಲಿ ಮಾತ್ರ ಆಡ್ತಿದ್ದು ತಮ್ಮ ಸ್ಥಾನವನ್ನ ಭದ್ರಪಡಿಸಿಕೊಳ್ಖೋಕೆ ಭರ್ಜರಿ ಪ್ರಾಕ್ಟೀಸ್ ಮಾಡ್ತಿದ್ದಾರೆ.

Shantha Kumari