IND-PAK ಆಟಗಾರ್ತಿಯರ ಅಪ್ಪುಗೆ! – ಜೆಮಿಮಾ & ಫಾತಿಮಾ ಟ್ರೋಲ್ ಸರಿನಾ?
HUG ಇಲ್ಲದಿದ್ರೆ ಕ್ರಿಕೆಟ್ ಆಡೋದ್ಯಾಕೆ?

ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳು ಅಂದ್ರೆ ಈಗ ಡೋಂಟ್ಟಚ್ ಮ್ಯಾಚ್ಗಳಾಗಿವೆ. ಹ್ಯಾಂಡ್ಶೇಕ್ ಮಾಡಲ್ಲ. ಪರಸ್ಪರ ಅಪ್ಪುಗೆಯೂ ಇಲ್ಲ. ಕಣ್ಣಲ್ಲೇ ಗುರಾಯಿಸ್ಕೊಂಡು, ಸ್ಲೆಡ್ಜ್ ಮಾಡ್ಕೊಂಡು ಇರ್ತಾರೆ. ಕಳೆದೊಂದು ವರ್ಷದಿಂದ ಸಿಚುಯೇಷನ್ ಇನ್ನೂ ಟೈಟ್ ಆಗಿದೆ. ಆದ್ರೆ ವಿಷ್ಯ ಅದಲ್ಲ. ಭಾರತ ಮತ್ತು ಪಾಕಿಸ್ತಾನದ ಆಟಗಾರ್ತಿಯರು ಈಗ ಮೈದಾನದಲ್ಲಿ ಹಗ್ ಮಾಡಿದ್ದಾರೆ. ಕೈಕೈ ಕುಲುಕಿ ಅಪ್ಪಿಕೊಂಡಿದ್ದಾರೆ. ಇದೇ ಈಗ ದೊಡ್ಡ ಕಾಂಟ್ರವರ್ಸಿಯಾಗಿದೆ.
ಇದನ್ನೂ ಓದಿ : ಸಂಜು ಸಿಡಿಗುಂಡು.. ಗಂಭೀರ್ ಹುಚ್ಚಾಟಕ್ಕೆ ಡಿಚ್ಚಿ – ಆಟ ಕಲಿಸಬೇಡಿ ಎಂದಿದ್ದೇಕೆ?
ಇಂಡೋ-ಪಾಕ್ ಅಂದ್ರೆ ಎಣ್ಣೆ ಸಿಗೆಕಾಯಿ ಇದ್ದಂತೆ ಅನ್ನೋದು ಎಲ್ರಿಗೂ ಗೊತ್ತಿರೋದೇ. ಕ್ರೀಡೆ ವಿಚಾರಕ್ಕೆ ಬಂದ್ರೂ ಅಷ್ಟೇ. ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯಗಳು ನಡೀತಾ ಇರೋದೇ ಐಸಿಸಿ ವಿಶ್ವಕಪ್ ಮತ್ತು ಏಷ್ಯಾಕಪ್ನಂತ ಟೂರ್ನಿಗಳಲ್ಲಿ. ಎರಡೂ ತಂಡಗಳ ನಡುವೆ ದ್ವಿಪಕ್ಷೀಯ ಸರಣಿ ನಡೆದು ದಶಕವೇ ಕಳೆದೋಯ್ತು. ಕಳೆದ ವರ್ಷದಿಂದ ಎರಡೂ ರಾಷ್ಟ್ರಗಳ ನಡುವಿನ ಅಂತರ ಇನ್ನೂ ಜಾಸ್ತಿಯಾಗಿದೆ. ಹೀಗಿರುವಾಗ್ಲೇ ಪಾಕಿಸ್ತಾನದ ಆಟಗಾರ್ತಿ ಮತ್ತು ಭಾರತದ ಆಟಗಾರ್ತಿ ತಬ್ಬಿಕೊಂಡಿರೋದೇ ಹೊಸ ವಿವಾದವಾಗಿದೆ.
ಹಂಡ್ರೆಡ್ ಲೀಗ್ ನಲ್ಲಿ ಜೆಮಿಮಾ ಮತ್ತು ಫಾತಿಮಾ ಅಪ್ಪುಗೆ!
ಇಂಗ್ಲೆಂಡ್ ಌಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ ಆಯೋಜನೆ ಮಾಡುವ ದಿ ಹಂಡ್ರೆಡ್ ವುಮೆನ್ಸ್ ಲೀಗ್ನಲ್ಲಿ ಭಾರತೀಯ ಆಟಗಾರ್ತಿಯರು ಕೂಡ ಆಡ್ತಾ ಇದ್ದಾರೆ. ಸ್ಮೃತಿ ಮಂದಾನ, ರಿಚಾ ಘೋಷ್, ದೀಪ್ತಿ ಶರ್ಮಾ, ಜೆಮಿಮಾ ರೋಡ್ರಿಗಸ್ ಸೇರಿದಂತೆ ಹಲವು ಭಾರತೀಯ ತಾರೆಯರು ಇದ್ದಾರೆ. ಅಟ್ ದಿ ಸೇಮ್ ಟೈಂ ಪಾಕಿಸ್ತಾನದ ಪ್ಲೇಯರ್ಸ್ ಕೂಡ ವಿವಿಧ ಫ್ರಾಂಚೈಸಿಗಳ ಪರ ಆಡ್ತಿದ್ದಾರೆ. ಆದ್ರೆ ಇತ್ತೀಚೆಗೆ ಈ ಲೀಗ್ನಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಪ್ಲೇಯರ್ ಜೆಮಿಮಾ ರೊಡ್ರಿಗಸ್ ಹಾಗೇ ಪಾಕಿಸ್ತಾನದ ಆಲ್ ರೌಂಡರ್ ಫಾತಿಮಾ ಸನಾ ಇಬ್ಬರೂ ಪಂದ್ಯದ ವೇಳೆ ತಬ್ಬಿಕೊಂಡಿದ್ದಾರೆ. ಸದರ್ನ್ ಬ್ರೇವ್ ಮತ್ತು ಬರ್ಮಿಂಗ್ಹ್ಯಾಮ್ ಫೀನಿಕ್ಸ್ ನಡುವಿನ ಪಂದ್ಯ ಮುಗಿದ ನಂತರ ಇಬ್ಬರು ಆಟಗಾರ್ತಿಯರು ಶೇಕ್ ಹ್ಯಾಂಡ್ ಮಾಡಿದ್ದಾರೆ. ಹಾಗೇ ಕ್ಯಾಶುಯಲ್ ಆಗಿ ಹಗ್ ಮಾಡಿದ್ದಾರೆ. ಸೋ ಇದೇ ಈಗ ದೊಡ್ಡ ವಿವಾದವಾಗಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗ್ತಿದೆ. ಎರಡೂ ದೇಶಗಳ ನಡುವಿನ ರಾಜಕೀಯ ಸಂಬಂಧಗಳು ಸದಾ ಹದಗೆಟ್ಟಿರುವ ಸಂದರ್ಭದಲ್ಲಿ ಬರುವ ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಭಾರತ-ಪಾಕ್ ಪಂದ್ಯಗಳ ವೇಳೆ ಪರಸ್ಪರ ಆಟಗಾರರು ಅಥವಾ ಆಟಗಾರ್ತಿಯರು ಈಗ ಶೇಕ್ ಹ್ಯಾಂಡ್ ಮಾಡಲ್ಲ, ಹಗ್ ಮಾಡಲ್ಲ. ಹೀಗಿರುವಾಗ ವಿದೇಶಿ ಲೀಗ್ನಲ್ಲಿ ಈ ರೀತಿಯಾಗಿ ವರ್ತಿಸಿದ್ದು ಸರಿ ಅಲ್ಲ ಅನ್ನೋದು ಕೆಲವರ ಆರೋಪ. ಆದ್ರೆ ಕ್ರಿಕೆಟ್ನಲ್ಲಿ ಈ ರೀತಿಯಾದಂತ ವರ್ತನೇಗಳೇ ತಪ್ಪು.
ಮುಟ್ಟದ ಮೇಲೆ ಕ್ರಿಕೆಟ್ ಯಾಕೆ?
2025ರ ಏಷ್ಯಾಕಪ್ ವೇಳೆ ಹ್ಯಾಂಡ್ ಶೇಕ್ ನಿರಾಕರಿಸಿದ್ದ ಸೂರ್ಯ
ಏಕದಿನ ಮಹಿಳಾ ವಿಶ್ವಕಪ್, 2026ರ ಟಿ-20 ವಿಶ್ವಕಪ್ ನಲ್ಲೂ ಕಂಟಿನ್ಯೂ
ಕ್ರಿಕೆಟ್ ಅಷ್ಟೇ ಅಲ್ಲದೇ ಬೇರೆ ಬೇರೆ ಕ್ರೀಡೆಗಳಲ್ಲೂ ಹಬ್ಬಿದ್ದ ಪದ್ಧತಿ
ಇಂಗ್ಲೆಂಡ್ ನಲ್ಲಿ ದಿ ಹಂಡ್ರೆಡ್ ಲೀಗ್ ಆಡ್ತಾ ಇರುವ ಆಟಗಾರ್ತಿಯರು
ಭಾರತ, ಪಾಕ್ ಮಹಿಳಾ ಪ್ಲೇಯರ್ ಗಳು ಬೇರೆ ಬೇರೆ ಫ್ರಾಂಚೈಸಿಗಳಲ್ಲಿ ಆಟ
ವಿದೇಶಿ ಲೀಗ್ ಗಳಲ್ಲಿ ಇಂಡೋ-ಪಾಕ್ ವೈರತ್ವ ಮುಂದುವರಿಸೋದು ಕಷ್ಟ
ಹಂಡ್ರೆಡ್ ಲೀಗ್ ಆಡಲು ಭಾರತೀಯರಿಗೆ ಬಿಸಿಸಿಐ ಅನುಮತಿ ನೀಡಿದ್ದಕ್ಕೆ ಆಟ
ಶೇಕ್ ಹ್ಯಾಂಡ್ ಮಾಡಲ್ಲ, ಹಗ್ ಮಾಡಲ್ಲ ಅಂದಾಗ ಕ್ರಿಕೆಟ್ ಆಡುವುದೇ ತಪ್ಪು
ಇಲ್ಲಿ ಕ್ರಿಕೆಟ್ ಅನ್ನೋದೇ ಟೀಂ ಗೇಮ್. ಇಂಡಿವಿಶ್ಯೂಯಲ್ ಪರ್ಫಾಮೆನ್ಸ್ ಇರ್ಬೇಕು. ಆದ್ರೆ ಒಬ್ರೇ ಮ್ಯಾಚ್ ಆಡ್ತೀನಿ, ಗೆಲ್ಲಿಸ್ತೀನಿ ಅನ್ನೋದೆಲ್ಲಾ ಸುಳ್ಳು. ಹೀಗಿರುವಾಗ ಎದುರಾಳಿ ಟೀಂ ಪ್ಲೇಯರ್ಸ್ ಜೊತೆ ಹಗ್ ಮಾಡಲ್ಲ, ಶೇಕ್ ಹ್ಯಾಂಡ್ ಮಾಡಲ್ಲ ಅಂದಾಗ ಅಲ್ಲಿ ಕ್ರೀಡಾ ಸ್ಪೂರ್ತಿಯೇ ಇರೋದಿಲ್ಲ. ಹಾಗ್ ಬೇಕು ಅಂದ್ರೆ ಕ್ರಿಕೆಟ್ ಆಡಿಸೋದೇ ತಪ್ಪು. ಎಲ್ಲಾ ನಿಯಮಗಳನ್ನ ಪಾಲನೆ ಮಾಡ್ಕೊಂಡು ಆಡೋದಾದ್ರೆ ಆಡ್ಬೇಕು. ಎರಡೂ ರಾಷ್ಟ್ರಗಳ ನಡುವೆ ಎಷ್ಟೇ ವೈಮಸ್ಸಿದ್ರೂ ಆನ್ಫೀಲ್ಟ್ನಲ್ಲಿ ರೂಲ್ಸ್ ಫಾಲೋ ಮಾಡ್ಲೇಬೇಕಾಗುತ್ತೆ.

ನೋಡಿರಿ

