ಆಷಾಢ ಮಾಸದಲ್ಲಿ ಚಿನ್ನ ಖರೀದಿ ಮಾಡಬಹುದಾ? -ಏನ್ ಹೇಳುತ್ತೆ ಜ್ಯೋತಿಷ್ಯ ಶಾಸ್ತ್ರ?

ಈಗ ಆಷಾಢ ಮಾಸ. ಹಿಂದೂ ಧರ್ಮದಲ್ಲಿ ಪ್ರತಿಯೊಂದು ಶುಭ ಕಾರ್ಯಕ್ಕೂ ಮುಹೂರ್ತ ಮತ್ತು ಮಾಸಗಳನ್ನು ನೋಡಲಾಗುತ್ತದೆ. ಆಷಾಢ ಮಾಸವನ್ನು ‘ಶೂನ್ಯ ಮಾಸ’ ಎಂದು ಕರೆಯಲಾಗುತ್ತದೆ. ಈ ಮಾಸದಲ್ಲಿ ಮದುವೆ, ಗೃಹಪ್ರವೇಶ ಸೇರಿದಂತೆ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಸಾಕಷ್ಟು ಜನಕ್ಕೆ ಒಂದು ಡೌಟ್ ಇರುತ್ತೆ. ಆಷಾಢ ಅಥವಾ ಶೂನ್ಯ ಮಾಸದಲ್ಲಿ ಚಿನ್ನ ಅಥವಾ ಬೆಳ್ಳಿಯನ್ನು ಖರೀದಿಸ ಬಹುದಾ ಅಂತ. ನಾವು ಇವತ್ತು ಆಷಾಢ ಮಾಸದಲ್ಲಿ ಚನ್ನ ಖರೀದಿ ಮಾಡಬಹುದಾ ಅನ್ನೋದ್ದನ್ನ ತಿಳಿಯೋಣ ಬನ್ನಿ.
ಧರ್ಮಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆಷಾಢ ಮಾಸದಲ್ಲಿ ಶುಭ ಕಾರ್ಯಗಳನ್ನು ಮಾಡದಿದ್ದರೂ, ಚಿನ್ನ ಅಥವಾ ಬೆಳ್ಳಿಯನ್ನು ಖರೀದಿಸಲು ಯಾವುದೇ ನಿರ್ಬಂಧವಿಲ್ಲ. ಚಿನ್ನವನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ಆಷಾಢ ಮಾಸದಲ್ಲಿ ಲಕ್ಷ್ಮಿ ದೇವಿ ಹಾಗೂ ಲಲಿತಾ ದೇವಿಯ ಆರಾಧನೆಗೆ ಹೆಚ್ಚಿನ ಮಹತ್ವವಿದೆ. ಆದ್ದರಿಂದ ಈ ಮಾಸದಲ್ಲಿ ಚಿನ್ನ ಖರೀದಿಸುವುದರಿಂದ ಯಾವುದೇ ನಷ್ಟವಾಗುವುದಿಲ್ಲ.
ಇದನ್ನೂ ಓದಿ: ಆಷಾಢ ಮಾಸದಲ್ಲಿ ಶನಿವಾರ ಶನಿದೇವರನ್ನ ಹೇಗೆ ಆರಾಧನೆ ಮಾಡಬೇಕು ಗೊತ್ತಾ?
ಆರ್ಥಿಕ ದೃಷ್ಟಿಕೋನದಿಂದ ನೋಡುವುದಾದರೆ ಆಷಾಢ ಮಾಸದಲ್ಲಿ ಚಿನ್ನ ಖರೀದಿಸುವುದು ಅತ್ಯಂತ ಲಾಭದಾಯಕವಾಗಿದೆ. ಏಕೆಂದರೆ.. ಆಷಾಢ ಡಿಸ್ಕೌಂಟ್ಗಳು ಈ ಮಾಸದಲ್ಲಿ ಮದುವೆಗಳು ಇಲ್ಲದಿರುವುದರಿಂದ ಚಿನ್ನಾಭರಣಗಳ ಬೇಡಿಕೆ ಕೊಂಚ ಕಡಿಮೆಯಿರುತ್ತದೆ. ಹಾಗಾಗಿ ಪ್ರಮುಖ ಜ್ಯುವೆಲ್ಲರಿಗಳು ಗ್ರಾಹಕರನ್ನು ಸೆಳೆಯಲು ಆಷಾಢ ಮಾಸದ ವಿಶೇಷ ರಿಯಾಯಿತಿಗಳು ಮತ್ತು ಮೇಕಿಂಗ್ ಚಾರ್ಜ್ಗಳಲ್ಲಿ ಭಾರಿ ವಿನಾಯಿತಿ ನೀಡುತ್ತವೆ. ಮುಂಬರುವ ಶ್ರಾವಣ ಮತ್ತು ಹಬ್ಬಗಳ ಸೀಸನ್ನಲ್ಲಿ ಚಿನ್ನದ ದರ ಮತ್ತೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಆಷಾಢದಲ್ಲಿ ರಿಯಾಯಿತಿ ದರದಲ್ಲಿ ಚಿನ್ನ ಖರೀದಿಸಿ ಇಡುವುದು ಲಾಭ ತರುತ್ತದೆ.

ನೋಡಿರಿ

