CSKಗೆ KL.. DCಗೆ ಹಾರ್ದಿಕ್ ಪಾಂಡ್ಯ? ಲಂಕಾ ಬೇಟೆಗೆ ಭಾರತದ ಬ್ರಹ್ಮಾಸ್ತ್ರ ರೆಡಿ

CSKಗೆ KL.. DCಗೆ ಹಾರ್ದಿಕ್ ಪಾಂಡ್ಯ?  ಲಂಕಾ ಬೇಟೆಗೆ ಭಾರತದ ಬ್ರಹ್ಮಾಸ್ತ್ರ ರೆಡಿ

ಸಾಯಿ ಸುದರ್ಶನ್ ಹಾಗೂ ಜಸ್ಪ್ರಿತ್ ಬುಮ್ರಾ ಇವರಿಬ್ಬರಲ್ಲಿ, ಬುಮ್ರಾ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಆಗಸ್ಟ್‌ 15ರಿಂದ ಶ್ರೀಲಂಕಾ ವಿರುದ್ಧ ನಡೆಯಲಿರುವ ಎರಡು ಟೆಸ್ಟ್ ಸರಣಿಯಲ್ಲಿ ಆಡಲು ಬೆಂಗಳೂರಿನಲ್ಲಿರುವ ಸೆಂಟರ್ ಆಫ್ ಎಕ್ಸಲೆನ್ಸ್ ಅವರಿಗೆ ಅನುಮತಿ ನೀಡಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯಲು ಈ ಪಂದ್ಯ ಮುಖ್ಯವಾಗಿದ್ದು, ಬುಮ್ರಾರಿಂದ ಟೀಂ ಇಂಡಿಯಾಗೆ ಮತ್ತಷ್ಟು ಬಲ ಬಂದಿದೆ.

ಲಂಕಾ ಸರಣಿಯಲ್ಲಿ ಕೆಎಲ್ ರಾಹುಲ್ ವಿಶಿಷ್ಟ ದಾಖಲೆ ನಿರ್ಮಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಇದುವರೆಗೆ ಮೂರು ಸ್ವರೂಪಗಳಲ್ಲಿ ಒಟ್ಟು 9,830 ರನ್‌ಗಳನ್ನು ಗಳಿಸಿದ್ದಾರೆ. ಶ್ರೀಲಂಕಾ ಪ್ರವಾಸದಲ್ಲಿ ಇವರು 170 ರನ್‌ಗಳನ್ನು ಗಳಿಸಿದರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದು ಬಾಲ್ ಕೂಡ ಬೌಲ್ ಮಾಡದೇ 10,000 ರನ್‌ಗಳನ್ನು ಪೂರ್ಣಗೊಳಿಸಿದ ಏಕೈಕ ಕ್ರಿಕೆಟರ್ ಆಗಲಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾಗೆ ಸೂರ್ಯ ವಾಪಸ್ – BCCI ಕೊಟ್ಟಿರೋ ಟಾಸ್ಕ್ ಗೆಲ್ತಾರಾ?

ಕೆಎಲ್‌ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್‌ ಬಿಟ್ಟು ಸಿಎಸ್‌ಕೆ ಸೇರ್ತಾರಾ ಅನ್ನೋ ಚರ್ಚೆ ಜೋರಾಗಿದೆ. ಈ ತರ ಚರ್ಚೆಗೆ ಕಾರಣವಾಗಿದ್ದು, ರಾಹುಲ್‌ ಅವರ ಇನ್‌ಸ್ಟಾಗ್ರಾಮ್‌ ಪೋಸ್ಟ್‌. ಎರಡು ದಿನಗಳ ಹಿಂದೆ ರಾಹುಲ್‌ ತಮ್ಮ ಪತ್ನಿ ಅಥಿಯಾ ಶೆಟ್ಟಿ ಜತೆಗಿನ ಫೋಟೋವೊಂದನ್ನು ಪೋಸ್ಟ್‌ ಮಾಡಿದ್ದರು. ಈ ಪೋಸ್ಟ್‌ಗೆ ಅವರು ಹಳದಿ ಬಣ್ಣದ ಹಾರ್ಟ್‌ ಎಮೋಜಿಯನ್ನು ಹಾಕಿದ್ದರು.  ಹಾಗೇ ಈ ಫೋಟೋದಲ್ಲಿ ಮಕ್ಕಳನ್ನ ತಳ್ಳಿಕೊಂಡು ಹೋಗುವ ಚೇರ್ ಇದ್ದು, ಅದರ ಮೇಲೆ ಕೂಡ ಎಲ್ಲೋ ಬ್ಯಾಗ್ ಇದೆ. ಹೀಗಾಗಿ ಎಲ್ಲರು ಕೆ ಎಲ್ ಸಿಎಸ್‌ಕೆ ಸೇರ್ತಾರೆ ಅನ್ನೋ ಚರ್ಚೆ ಹುಟ್ಟುಕೊಂಡಿದೆ. ಈ ಹಿಂದೆ ಸಂಜು ವಿಷ್ಯದಲ್ಲಿ ಇದು ನಿಜವಾಗಿತ್ತು.

ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ತಂಡದಿಂದ ಸೆಳೆಯಲು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಮುಂಬೈ ಇಂಡಿಯನ್ಸ್‌ಗೆ ಇಬ್ಬರು ಸ್ಟಾರ್ ಆಟಗಾರರು ಹಾಗೂ ಭಾರಿ ನಗದು ಒಳಗೊಂಡ ಮೆಗಾ ಆಫರ್ ನೀಡಿದೆ. ಅಕ್ಷರ್ ಪಟೇಲ್ ಹಾಗೂ ಪೃಥ್ವಿ ಶಾ ಅವರನ್ನು ನೀಡುವುದಾಗಿ ಡೆಲ್ಲಿ ಕ್ಯಾಪಿಟಲ್ಸ್ ತಿಳಿಸಿದೆ. ಇದರ ಜೊತೆಗೆ 10 ಕೋಟಿ ರೂ. ಹೆಚ್ಚುವರಿ ನಗದನ್ನು ಪಾವತಿಸುವುದಾಗಿ ಹೇಳಿಕೊಂಡಿದೆ. ಮುಂಬೈ ಪೃಥ್ವಿ ಶಾ ಬದಲಿಗೆ ಯುವ ಆಟಗಾರ ಸಮೀರ್ ರಿಝ್ವಿ ಅವರನ್ನು ನೀಡುವಂತೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ.

ಉದ್ಯಮಿ ಮತ್ತು ಆರ್‌ಸಿಬಿ ಒಡತಿ ಅನನ್ಯ ಬಿರ್ಲಾ ಅವರು ಅಸ್ಸಾಂ ಪ್ರವಾಹ ಪೀಡಿತ ಪ್ರದೇಶಗಳಿಗೆ ಸ್ವತಃ ಭೇಟಿ ನೀಡಿ, ಸಂತ್ರಸ್ತರ ಕಷ್ಟಗಳನ್ನು ಆಲಿಸಿದ್ದಾರೆ. ಅವರು ಆಹಾರ ಮತ್ತು ಅಗತ್ಯ ವಸ್ತುಗಳನ್ನು ವಿತರಿಸಿ, ತಮ್ಮ ಮಾನವೀಯ ನಡೆಯ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದು, ಈ ಅನುಭವವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಶ್ರೀಲಂಕಾ ವಿರುದ್ಧದ ಮುಂಬರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಸಿದ್ಧತೆಗಳನ್ನು ಪ್ರಾರಂಭಿಸಿದ್ದಾರೆ. ಪಂತ್ ರಾಂಚಿಯಲ್ಲಿ ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರೊಂದಿಗೆ ತರಬೇತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ.  ಭಾರತದ ಮಾಜಿ ಸ್ಪಿನ್ನರ್ ಶಹಬಾಜ್ ನದೀಮ್ ಈ ಬಗ್ಗೆ ಪೋಸ್ಟ್ ಹಾಕಿ  ಕ್ರಿಕೆಟ್‌ನ ಇಬ್ಬರು ಅತ್ಯುತ್ತಮ ಫಿನಿಷರ್‌ಗಳು ರಿಷಭ್ ಪಂತ್ ಮತ್ತು ಎಂಎಸ್ ಧೋನಿ ಬಾಯ್ ಎಂದು ಬರೆದುಕೊಂಡಿದ್ದಾರೆ.

2027ರ ಐಸಿಸಿ ಏಕದಿನ ವಿಶ್ವಕಪ್‌ಗೆ ಭಾರತ ತಂಡ ಹೇಗಿರಬೇಕೆಂದು ದಿನೇಶ್ ಕಾರ್ತಿಕ್ ತಿಳಿಸಿದ್ದಾರೆ. ಆರಂಭಿಕ ಆಟಗಾರರಾಗಿ ಶುಭ್‌ಮನ್ ಗಿಲ್ , ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್. ಮಿಡಲ್ ಆರ್ಡರ್‌ನಲ್ಲಿ  ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ , ವಿಕೆಟ್ ಕೀಪರ್‌ಗಳಾಗಿ ಕೆ.ಎಲ್ ರಾಹುಲ್, ಇಶಾನ್ ಕಿಶನ್, ಆಲ್-ರೌಂಡರ್‌ ವಿಭಾಗದಲ್ಲಿ ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ನಿತೀಶ್ ಕುಮಾರ್ ರೆಡ್ಡಿ.  ಸ್ಪಿನ್ ಬೌಲರ್‌ ಆಗಿ ಕುಲ್ದೀಪ್ ಯಾದವ್, ವೇಗದ ಬೌಲರ್​ಗಳಾಗಿ ಬುಮ್ರಾ, ಸಿರಾಜ್,   ಶಮಿ, ಭುವನೇಶ್ವರ ಕುಮಾರ್ ಇರಬೇಕು ಎಂದಿದ್ದಾರೆ.

ಮುಂಬರುವ 2027ರ ಐಸಿಸಿ ಏಕದಿನ ವಿಶ್ವಕಪ್‌  ಟೂರ್ನಿಯ ಭಾರತ ತಂಡದಲ್ಲಿ ಹಿರಿಯ ವೇಗದ ಬೌಲರ್‌ ಭುವನೇಶ್ವರ್‌ ಕುಮಾರ್‌  ಅವಕಾಶ ನೀಡಬೇಕೆಂದು ಸ್ಪಿನ್‌ ದಿಗ್ಗಜ ರವಿಚಂದ್ರನ್‌ ಅಶ್ವಿನ್‌ ಆಗ್ರಹಿಸಿದ್ದಾರೆ. ಭುವನೇಶ್ವರ್ ಕುಮಾರ್ ಅವರನ್ನು ಖಂಡಿತವಾಗಿಯೂ ತಂಡದಲ್ಲಿ ಪರಿಗಣಿಸಬೇಕು. ನಾನು ಆಯ್ಕೆಗಾರನಾಗಿದ್ದರೆ ಚಾನ್ಸ್ ನೀಡುತ್ತಿದ್ದೆ.   2027ರ ವಿಶ್ವಕಪ್‌ ಟೂರ್ನಿಗೂ ಮುನ್ನ ದಕ್ಷಿಣ ಆಫ್ರಿಕಾ ಪರಿಸ್ಥಿತಿಗೆ ಅವರನ್ನು ಸಂಪೂರ್ಣವಾಗಿ ಸಿದ್ಧಗೊಳಿಸಬೇಕು. ಅಲ್ಲಿ ಅವರಂತಹ ಅನುಭವಿ ಸ್ವಿಂಗ್ ಬೌಲರ್ ಭಾರತ ತಂಡಕ್ಕೆ ಅತ್ಯಗತ್ಯ, ಎಂದು ಆರ್ ಅಶ್ವಿನ್ ಹೇಳಿದ್ದಾರೆ.

ಸೌತ್ ಆಫ್ರಿಕಾ, ಝಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ಜಂಟಿಯಾಗಿ ನಡೆಯಲಿರುವ 2027ರ ಏಕದಿನ ವಿಶ್ವಕಪ್ ಟೂರ್ನಿಗೆ 10 ತಂಡಗಳು ನೇರ ಅರ್ಹತೆ ಪಡೆದುಕೊಂಡಿವೆ. ಭಾರತ, ನ್ಯೂಝಿಲೆಂಡ್ , ಆಸ್ಟ್ರೇಲಿಯಾ, ಸೌತ್ ಆಫ್ರಿಕಾ, ಪಾಕಿಸ್ತಾನ, ಶ್ರೀಲಂಕಾ, ಇಂಗ್ಲೆಂಡ್ ಅಫ್ಘಾನಿಸ್ತಾನ, ಬಾಂಗ್ಲಾದೇಶ್, ಝಿಂಬಾಬ್ವೆ ಸ್ಥಾನ ಪಡೆದುಕೊಂಡಿವೆ.

ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಕ್ಯಾಂಡಿ ರಾಯಲ್ಸ್ ಪರ ಆಡುತ್ತಿರುವ ಭಾರತದ ಮಾಜಿ ಆಟಗಾರ ವಿಜಯ್ ಶಂಕರ್ ಸಖತ್ ಟ್ರೋಲ್ ಆಗಿದ್ದಾರೆ. ಕೊನೆಯ ಓವರ್‌ನಲ್ಲಿ ಕ್ಯಾಂಡಿ ರಾಯಲ್ಸ್ ಗೆಲ್ಲಲು 21 ರನ್‌ಗಳ ಅಗತ್ಯವಿತ್ತು. ಜಾಪ್ನಾ ಪರ ಕೊನೆಯ ಓವರ್ ಬೌಲಿಂಗ್ ಮಾಡುವ ಜವಾಬ್ದಾರಿಯನ್ನು ದಿಲ್ಶಾನ್ ಮದುಶನಕ ಹೊತ್ತುಕೊಂಡರು. ಕ್ಯಾಂಡಿ ಪರ  ವಿಜಯ್ ಶಂಕರ್ ಹಾಗೂ ನುವಾನ್ ತುಷಾರ ಕ್ರೀಸ್‌ನಲ್ಲಿದ್ದರು. ಆದ್ರೆ ಮ್ಯಾಚ್ ಗೆಲ್ಲಿಸಬೇಕಿದ್ದ ವಿಜಯ್ ಒಂದೇ ಒಂದು ರನ್‌ಗಳಿಸದೇ, ಲಾಸ್ಟ್‌ ಬಾಲ್‌ನಲ್ಲಿ ಔಟ್ ಆಗಿದ್ದಾರೆ. ಇದು ಫ್ಯಾನ್ಸ್‌ ಗೆ ನಿರಾಸೆ ತರಿಸಿದ್ದು, ವಿಜಯ್ ಶಂಕರ್ ಸಖತ್ ಟ್ರೋಲ್‌ ಆಗುತ್ತಿದ್ದಾರೆ.

 

Kishor KV

Leave a Reply

Your email address will not be published. Required fields are marked *