ಬೆಂಗಳೂರಿನ ಜನರೇ ಬೇಕಾ ಬಿಟ್ಟಿ ನೀರು ಬಳಸುವ ಮುನ್ನ ಹುಷಾರ್‌ – ಜಲಮಂಡಳಿ ಕೊಡಲಿದೆ ವಾರ್ನಿಂಗ್

ಬೆಂಗಳೂರಿನ ಜನರೇ ಬೇಕಾ ಬಿಟ್ಟಿ ನೀರು ಬಳಸುವ ಮುನ್ನ ಹುಷಾರ್‌ – ಜಲಮಂಡಳಿ ಕೊಡಲಿದೆ ವಾರ್ನಿಂಗ್

ಕಾವೇರಿ ನೀರಿನ ಕೊರತೆಯ ಮಧ್ಯೆ ಜಲಮಂಡಳಿಯು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಿದೆ. ಜಲಮಂಡಳಿ ಅಧ್ಯಕ್ಷೆ ಮಂಜುಳಾ ಅವರು ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಬೆಂಗಳೂರು ಜನರು ಸುಮ್ಮ ಸುಮ್ಮನೇ ನೀರು ವ್ಯರ್ಥ  ಮಾಡುತ್ತಿದ್ದು, ಕುಡಿಯುವ ನೀರಿನ ಬಳಕೆಗೆ ಹೊಸ ಗೈಡ್ ಲೈನ್ಸ್  ಜಾರಿ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಬೆಂಗಳೂರಿಗೆ ಪ್ರತಿದಿನ ಸುಮಾರು 2.2 ಟಿಎಂಸಿ ನೀರು ಬೇಕಾಗುತ್ತದೆ. ಆದರೆ ಕಾವೇರಿ ಕೊಳದಲ್ಲಿ ಪ್ರಸ್ತುತ 17 ಟಿಎಂಸಿ ನೀರು ಮಾತ್ರ ಇದೆ. ಈ ನೀರು ಕೇವಲ ಬೆಂಗಳೂರಿಗೆ ಮಾತ್ರವಲ್ಲ. ಮಂಡ್ಯ, ಮೈಸೂರು ಸೇರಿದಂತೆ ಇತರ ನಗರಗಳಿಗೂ ಬೇಕಾಗುತ್ತದೆ. ಆದ್ದರಿಂದ ಬೆಂಗಳೂರು ಒಂದಕ್ಕೆ ಮಾತ್ರ ನೀರು ಕೊಡಲು ಸಾಧ್ಯವಿಲ್ಲ ಎಂದು ಜಲಮಂಡಳಿ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಸೈಟ್ ಪಡೆದು ಮನೆ ಕಟ್ಟದವರಿಗೆ ಡಿಕೆಶಿ ಶಾಕ್ – ನಿವೇಶನ ವಶ, ನಿಮ್ಮ ಹಣ ಬಡ್ಡಿ ಸಮೇತ ವಾಪಸ್

ಕುಡಿಯುವ ನೀರಿನ ಬಳಕೆಯನ್ನು ನಿಯಂತ್ರಿಸಲು ಜಲಮಂಡಳಿಯು ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ತಯಾರಿಸುತ್ತಿದೆ. ಸದ್ಯ ಈಗ ಕೂಡಗಿನಲ್ಲಿ ಮಳೆಯಾಗುತ್ತಿದ್ದು, ಕೆಆರ್‌ಎಸ್ ತುಂಬುವ ವಿಶ್ವಾಸ ವ್ಯಕ್ತವಾಗಿದೆ. ಆದ್ರೆ ಮಳೆ ಕಮ್ಮಿಯಾದ್ರೆ ಈ ಕೆಳಕಂಡ ಮಾರ್ಗ ಸೂಚಿ ಪ್ರಕಟ ಮಾಡಬಹುದು.

  • ಕುಡಿಯುವ ನೀರನ್ನು ಇತರ ಕೆಲಸಗಳಿಗೆ ಬಳಸಬಾರದು.
  • ಕಟ್ಟಡ ನಿರ್ಮಾಣಕ್ಕೆ ಕುಡಿಯುವ ನೀರು ಬಳಸುವುದನ್ನು ನಿಷೇಧಿಸಲಾಗುವುದು.
  • ವಾಹನಗಳನ್ನು ತೊಳೆಯಲು ಕುಡಿಯುವ ನೀರು ಬಳಸಬಾರದು.
  • ಮನೆಗಳಲ್ಲಿ ಮತ್ತು ಕಟ್ಟಡಗಳಲ್ಲಿ ಹೆಚ್ಚು ಏರೇಟರ್‌ಗಳನ್ನು ಅಳವಡಿಸುವುದು ಕಡ್ಡಾಯ.
  • ನೀರಿನ ಕೊರತೆ ಇರುವ ಪ್ರದೇಶಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗುವುದು.
  • ಬೋರ್‌ವೆಲ್‌ಗಳನ್ನು ಮರು ತೋಡುವ (ರಿ-ಬೋರ್) ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು.
ಈ ಮಾರ್ಗಸೂಚಿಗಳು ನೀರಿನ ನಷ್ಟವನ್ನು ಕಡಿಮೆ ಮಾಡುವುದು ಮತ್ತು ಲಭ್ಯವಿರುವ ನೀರನ್ನು ಸರಿಯಾಗಿ ಬಳಸುವುದು ಗುರಿಯಾಗಿದೆ.

Kishor KV

Leave a Reply

Your email address will not be published. Required fields are marked *