ಲಂಕೆಯಲ್ಲಿ KL ಮೈಲುಗಲ್ಲು? – 10,000ದ ಚಾಲೆಂಜ್ ಗೆಲ್ಲುತ್ತಾರಾ?
ರಾಹುಲ್ ಮುಂದಿನ ಟಾರ್ಗೆಟ್ ಎಷ್ಟು?

ಲಂಕೆಯಲ್ಲಿ KL ಮೈಲುಗಲ್ಲು? – 10,000ದ ಚಾಲೆಂಜ್ ಗೆಲ್ಲುತ್ತಾರಾ?ರಾಹುಲ್ ಮುಂದಿನ ಟಾರ್ಗೆಟ್ ಎಷ್ಟು?

ಭಾರತ ಮತ್ತು ಶ್ರೀಲಂಕಾ ನಡುವಿನ ಟೆಸ್ಟ್ ಸರಣಿ ಟೀಂ ಇಂಡಿಯಾ ಪಾಲಿಗೆ ಮಾಡು ಇಲ್ಲವೇ ಮಡಿ ಸರಣಿ. ಡಬ್ಲ್ಯೂಟಿಸಿ ಫೈನಲ್​ ರೇಸ್​ನಲ್ಲಿ ಉಳೀಬೇಕು ಅಂದ್ರೆ ಇಲ್ಲಿ ಕ್ಲೀನ್ ಸ್ವೀಪ್ ಮಾಡ್ಲೇಬೇಕು. ಅಟ್ ದಿ ಸೇಮ್ ಟೈಂ ಕನ್ನಡಿಗ ಕೆಎಲ್ ರಾಹುಲ್ ಪಾಲಿಗೆ ಈ ಸರಣಿಗೆ ತಮ್ಮ ಕ್ರಿಕೆಟ್ ಕರಿಯರ್​ನ ಗೋಲ್ಡನ್ ಸಿರೀಸ್​ ಆಗೋ ಅವಕಾಶವೂ ಇದೆ.

ಇದನ್ನೂ ಓದಿ : ಬ್ರ್ಯಾಂಡ್ ವ್ಯಾಲ್ಯೂನಲ್ಲೂ RCBಯೇ ಬಾಸ್ – ಧೋನಿ ಇಲ್ಲದೆ ಜಾರಿ ಬಿತ್ತು CSK

ಲಂಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯ ಆಗಸ್ಟ್ 15 ರಿಂದ ಗ್ಯಾಲೆ ಫೋರ್ಟ್ ಬಳಿಯ ಗ್ಯಾಲೆ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಈ ಸರಣಿಗೆ ಶುಭ್​ಮನ್ ಗಿಲ್ ಕ್ಯಾಪ್ಟನ್ ಆಗಿದ್ರೆ ಕೆಎಲ್ ರಾಹುಲ್ ವೈಸ್ ಕ್ಯಾಪ್ಟನ್ ಆಗಿದ್ದಾರೆ. ಇದೇ ಸಿರೀಸ್​ನಲ್ಲಿ ಕೆಎಲ್ ರಾಹುಲ್  ತಮ್ಮ ವೃತ್ತಿಜೀವನದಲ್ಲಿ ಅತಿದೊಡ್ಡ ಮೈಲುಗಲ್ಲು ದಾಟುವ ಹೊಸ್ತಿಲ್ಲಿದ್ದಾರೆ.

10,000 ರನ್ಸ್ ಕಂಪ್ಲೀಟ್ ಮಾಡ್ತಾರಾ ಕೆಎಲ್ ರಾಹುಲ್?

ಟೀಂ ಇಂಡಿಯಾದ ಒನ್ ಆಫ್ ದಿ ಸ್ಟಾರ್ ಪ್ಲೇಯರ್ ಕೆಎಲ್ ರಾಹುಲ್ ಭಾರತ ತಂಡದ ಪರ 10,000 ರನ್​ಗಳ ಗಡಿ ದಾಟಲು ಹತ್ತಿರದಲ್ಲಿ ಇದ್ದಾರೆ. ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ 10,000 ರನ್‌ಗಳನ್ನು  ಕಂಪ್ಲೀಟ್ ಮಾಡೋಕೆ ಕೇವಲ 170 ರನ್‌ಗಳು ಮಾತ್ರ ಬೇಕು. ಪ್ರಸ್ತುತ, ರಾಹುಲ್ ಭಾರತ ಪರ 238 ಅಂತರರಾಷ್ಟ್ರೀಯ ಪಂದ್ಯಗಳನ್ನ ಆಡಿದ್ದು 9830 ರನ್ ಗಳಿಸಿದ್ದಾರೆ. 199 ರನ್‌ಗಳ ಗರಿಷ್ಠ ಸ್ಕೋರ್‌ನೊಂದಿಗೆ, 62 ಅರ್ಧಶತಕಗಳು ಮತ್ತು 19 ಶತಕಗಳನ್ನು ಸಹ ಗಳಿಸಿದ್ದಾರೆ. ಲೆಜೆಂಡರಿ ಬ್ಯಾಟರ್ ಸಚಿನ್ ತೆಂಡೂಲ್ಕರ್ 664 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 34,357 ರನ್‌ಗಳನ್ನು ದಾಖಲಿಸಿ ಮೊದಲ ಸ್ಥಾನದಲ್ಲಿದ್ದಾರೆ. ಅಜೇಯ 248 ರನ್‌ಗಳ ಗರಿಷ್ಠ ಸ್ಕೋರ್‌ನೊಂದಿಗೆ 164 ಅರ್ಧಶತಕಗಳು ಮತ್ತು 100 ಶತಕಗಳನ್ನು ಸಹ ಹೊಂದಿದ್ದಾರೆ. ಇನ್ನು ಟೆಸ್ಟ್ ಫಾರ್ಮೆಟ್​ನಲ್ಲಿ ರಾಹುಲ್ ಟ್ಯಾಲೆಂಟೆಡ್ ಪ್ಲೇಯರ್ ಆಗಿದ್ದಾರೆ.

2014ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್‌ನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ರಾಹುಲ್ ತಮ್ಮ ಎರಡನೇ ಪಂದ್ಯದಲ್ಲೇ ಸಿಡ್ನಿಯಲ್ಲಿ  ಓಪನರ್ ಆಗಿ ಕಣಕ್ಕಿಳಿದು 110 ರನ್ ಗಳಿಸುವ ಮೂಲಕ ತಮ್ಮ ಚೊಚ್ಚಲ ಶತಕ ದಾಖಲಿಸಿದರು. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಸತತವಾಗಿ 7 ಇನ್ನಿಂಗ್ಸ್‌ಗಳಲ್ಲಿ ಅರ್ಧಶತಕ ಬಾರಿಸಿದ ಜಂಟಿ ವಿಶ್ವದಾಖಲೆ ಕೆ.ಎಲ್. ರಾಹುಲ್ ಹೆಸರಲ್ಲಿದೆ. ಇತ್ತೀಚಿನ ಫಾರ್ಮ್ ನೋಡೋದಾದ್ರೆ 2026ರ ಜೂನ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಕೊನೆಯದಾಗಿ ಆಡಿದ್ದ ಇವರು, ಆ ಪಂದ್ಯದಲ್ಲಿ 100 ರನ್* ಸಿಡಿಸಿ ಭರ್ಜರಿ ಫಾರ್ಮ್ ನಲ್ಲಿದ್ದಾರೆ. ಕೆಎಲ್ ರಾಹುಲ್ ಅವ್ರ ಮತ್ತೊಂದು ಪ್ಲಸ್ ಪಾಯಿಂಟ್ ಅಂದ್ರೆ ವಿದೇಶಿ ಪಿಚ್​ಗಳಲ್ಲಿ ಅದ್ಭುತ ಪ್ರದರ್ಶನಗಳು ಬಂದಿವೆ. ಹೆಚ್ಚಿನ ಟೆಸ್ಟ್ ಶತಕಗಳು ಭಾರತದ ಹೊರಗೆ ಅಂದ್ರೆ ವಿದೇಶಗಳಲ್ಲಿ ಬಂದಿದೆ. ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ಮಣ್ಣಿನಲ್ಲಿ ಶತಕ ಬಾರಿಸಿದ ಕೆಲವೇ ಕೆಲ ಭಾರತೀಯ ಆಟಗಾರರಲ್ಲಿ ಇವರೂ ಒಬ್ಬರು. ಹೀಗಾಗಿ ಲಂಕಾ ಸರಣಿಯಲ್ಲೇ ರಾಹುಲ್ 10,000 ರನ್​ಗಳ ಗಡಿ ದಾಟುವ ಎಲ್ಲಾ ಲಕ್ಷಣಗಳಿವೆ. ಇನ್ನು ರಾಹುಲ್ ದಾಖಲೆ ಅಷ್ಟೇ ಅಲ್ಲದೆ ಎರಡು ಪಂದ್ಯಗಳ ಸರಣಿ 2025-27 ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸೈಕಲ್​ನಡಿ ನಡೀತಾ ಇರೋದ್ರಿಂದ ಭಾರತ ಎರಡೂ ಪಂದ್ಯಗಳನ್ನ ಗೆಲ್ಲಲೇಬೇಕಿದೆ. ಹೀಗಾಗಿ ನಾಯಕ ಶುಭ್​ಮನ್ ಗಿಲ್ ಮೇಲೆಯೂ ಹೆಚ್ಚಿನ ಪ್ರೆಶರ್ ಕೂಡ ಇದೆ.

Shantha Kumari

Leave a Reply

Your email address will not be published. Required fields are marked *