ಭುವನೇಶ್ವರ್ ಕುಮಾರ್ ಗೆ ಭಾರತದ ಬಾಗಿಲು ಓಪನ್? -2027ರ ODI ವಿಶ್ವಕಪ್ ಆಡ್ತಾರಾ?
ಗಂಭೀರ್ ಗೆ ಅನುಭವಿಗಳು ಬೇಕಿಲ್ವಾ?

ಭುವನೇಶ್ವರ್ ಕುಮಾರ್ ಗೆ ಭಾರತದ ಬಾಗಿಲು ಓಪನ್? -2027ರ ODI ವಿಶ್ವಕಪ್ ಆಡ್ತಾರಾ?ಗಂಭೀರ್ ಗೆ ಅನುಭವಿಗಳು ಬೇಕಿಲ್ವಾ?

2027ರ ಏಕದಿನ ವಿಶ್ವಕಪ್ ಮೇಲೆ ಕಣ್ಣಿಟ್ಟಿರೋ ಭಾರತ ಇನ್ನಷ್ಟು ಸ್ಟ್ರಾಂಗ್ ಆಗ್ಬೇಕು.. ಅದ್ರಲ್ಲೂ ಬೌಲಿಂಗ್​ ಯುನಿಟ್​ಗೆ ಮೇಜರ್ ಸರ್ಜರಿಗಳೇ ಆಗ್ಬೇಕಿದೆ. ಇದಕ್ಕೆ ಒನ್ ಆಫ್ ದಿ ಬೆಸ್ಟ್ ಸಲ್ಯೂಷನ್ ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್. ಮಾಜಿ ಕ್ರಿಕೆಟಿಗರೇ ಭುವಿ ಬೆನ್ನಿಗೆ ನಿಂತಿದ್ದಾರೆ.

ಇದನ್ನೂ ಓದಿ : ಪಾಕ್‌ನಲ್ಲಿ ಭೀಕರ ದುರಂತ- ಕಲ್ಲಿದ್ದಲು ಗಣಿಯಲ್ಲಿ ಸ್ಫೋ*ಟದಿಂದ 32 ಮಂದಿ ಬಲಿ

ಏಕದಿನ ಮಾದರಿಯಲ್ಲಿ ಟೀಂ ಇಂಡಿಯಾದ ಇತ್ತೀಚಿನ ಪರ್ಫಾಮೆನ್ಸ್ ಅಷ್ಟಕ್ಕಷ್ಟೇ ಇದೆ. ಈ ವರ್ಷ ಆಡಿರುವಂಥ ಮೂರು ಏಕದಿನ ಸರಣಿಗಳಲ್ಲಿ ಎರಡನ್ನ ಸೋತಿದ್ದಾರೆ. ಗೆದ್ದಿರೋದು ಅಫ್ಘಾನಿಸ್ತಾನದಂಥ ವೀಕ್ ಟೀಂ ಎದುರು.. ನ್ಯೂಜಿಲೆಂಡ್ ಹಾಗೇ ಇಂಗ್ಲೆಂಡ್ ವಿರುದ್ಧ ಸರಣಿ ಸೋತಿದ್ದಾರೆ. ಇನ್ನು 2023ರಲ್ಲಿ ಜಸ್ಟ್ ಮಿಸ್ ಆಗಿರೋ ಏಕದಿನ ವಿಶ್ವಕಪ್​ನ 2027ರಲ್ಲಿ ಗೆಲ್ಬೇಕು ಅಂದ್ರೆ ಭಾರತದ ಬೌಲಿಂಗ್​ ವಿಭಾಗಕ್ಕೆ ಭುವನೇಶ್ವರ್ ಕುಮಾರ್​​ರನ್ನ ಸೆಲೆಕ್ಟ್ ಮಾಡ್ಬೇಕು ಅಂತಾ ಮಾಜಿ ಕ್ರಿಕೆಟಿಗ ಆರ್. ಅಶ್ವಿನ್ ಹೇಳಿದ್ದಾರೆ. ಸದ್ಯಕ್ಕೆ ತಂಡದಲ್ಲಿ ಸೀಮ್ ಬೌಲರ್​ ಇಲ್ಲ. ಈ ಸ್ಲಾಟ್​ಗೆ ಭುವಿಯನ್ನ ಪಿಕ್ ಮಾಡ್ಬೇಕು ಅಂತಾ ಸಲಹೆ ನೀಡಿದ್ದಾರೆ. ಹಾಗೇ ಟೀಂ ಇಂಡಿಯಾದ ಪ್ರಸ್ತುತ ವೇಗದ ಬೌಲಿಂಗ್‌ ಪರಿಸ್ಥಿತಿ ನೋಡಿದ್ರೆ ಅನಿವಾರ್ಯವೂ ಇದೆ.

ಪ್ರಸಿದ್ಧ್ ಕೃಷ್ಣ ಮತ್ತು ಗುರ್ನೂರ್ ಬ್ರಾರ್ ಬೌಲಿಂಗ್ ಅಷ್ಟಕ್ಕಷ್ಟೇ!

ಅಷ್ಟಕ್ಕೂ ಇಲ್ಲಿ ಆರ್.ಅಶ್ವಿನ್ ಭುವಿ ಪರವಾಗಿ ಸ್ಟ್ರಾಂಗ್ ಆಗಿ ನಿಲ್ಲೋಕೆ ಕಾರಣವೂ ಇದೆ. ಪ್ರಸ್ತುತ ಟೀಮ್​ನಲ್ಲಿ ಬೌಲಿಂಗ್​ನಲ್ಲಿ ಎಕ್ಸ್​​ಪೀರಿಯನ್ಸ್ ಕೊರತೆ ಎದ್ದು ಕಾಣ್ತಿದೆ. ಗುರ್ನೂರ್ ಬ್ರಾರ್, ಪ್ರಸಿದ್ಧ್ ಕೃಷ್ಣ ಮತ್ತು ಪ್ರಿನ್ಸ್ ಯಾದವ್​ರಂಥ ಬೌಲರ್ಸ್ ಇಟ್ಕೊಂಡು ವಿಶ್ವಕಪ್ ಗೆಲ್ಲೋದು ಕಷ್ಟ. ಇವ್ರಲ್ಲಿ ಒಬ್ರು ಅಥವಾ ಇಬ್ರನ್ನ ಬೇಕಿದ್ರೆ ಪಿಕ್ ಮಾಡ್ಲಿ. ಆದ್ರೆ ಬುಮ್ರಾ ಜೊತೆ ಭುವಿಯಂಥ ಬೌಲರ್ಸ್ ಇದ್ದಾಗ ಮಾತ್ರನೇ ಎದುರಾಳಿ ಬ್ಯಾಟರ್​ಗಳಿಗೆ ಪ್ರೆಶರ್ ಕ್ರಿಯೇಟ್ ಮಾಡ್ಬೋದು.

ಬೌಲಿಂಗ್ ಭರವಸೆ ಭುವಿ!

ಆರ್ ಸಿಬಿ ಸತತ ಟ್ರೋಫಿಗಳನ್ನ ಗೆಲ್ಲುವಲ್ಲಿ ಪ್ರಮುಖ ಪಾತ್ರ, 45 ವಿಕೆಟ್ಸ್

2026ರಲ್ಲಿ ಪವರ್ ಪ್ಲೇನಲ್ಲೇ 17 ವಿಕೆಟ್.. ಶಮಿ ದಾಖಲೆ ಬ್ರೇಕ್

ಸ್ವಿಂಗ್ ಬೌಲಿಂಗ್ ಸ್ಕಿಲ್ ಇರೋದ್ರಿಂದ ಬ್ಯಾಟರ್ ಗಳ ಮೇಲೆ ಪ್ರೆಶರ್

ಪವರ್ ಪ್ಲೇ ಮತ್ತು ಡೆತ್ ಓವರ್ ಗಳಲ್ಲಿ ರನ್ಸ್ ಕಂಟ್ರೋಲ್ ಜೊತೆ ವಿಕೆಟ್ಸ್

ಕ್ರೂಶಿಯಲ್ ಟೈಮಲ್ಲಿ ರನ್ಸ್ ಬೇಕು ಅಂದ್ರೂ ಭುವಿ ಬ್ಯಾಟಿಂಗ್ ಮಾಡ್ತಾರೆ

ಬುಮ್ರಾಗೆ ಇಂಜುರಿಯಾದ್ರೆ ಪೇಸ್ ಬೌಲಿಂಗ್ ಲೀಡ್ ಮಾಡಲು ಸಮರ್ಥ

ಅತ್ಯುತ್ತಮ ಫಿಟ್ ನೆಸ್ ಹಾಗೂ ಅದ್ಭುತ ಫಾರ್ಮ್ ನಲ್ಲಿರುವ ಭುವಿ

ವಿದೇಶಿ ಪಿಚ್ ಗಳಲ್ಲಿ ಸಾಕಷ್ಟು ಎಕ್ಸ್ ಪೀರಿಯನ್ಸ್ ಇರೋದ್ರಿಂದ ಪ್ಲಸ್

ಈ ಎಲ್ಲಾ ಕಾರಣಗಳಿಂದ ಭುವನೇಶ್ವರ್ ಕುಮಾರ್ ಭಾರತದ ಪರ ಆಡೋದ್ರಿಂದ ತಂಡಕ್ಕೆ ಹೆಚ್ಚಿನ ಲಾಭ ಇದೆ. ಅಷ್ಟಕ್ಕೂ ಇಲ್ಲಿ ಬಿಸಿಸಿಐ ಕೊಡ್ತಾ ಇರುವಂಥ ರೀಸನ್ ಭುವಿಗೆ 36 ವರ್ಷ ವಯಸ್ಸು.. ನೆಕ್ಸ್​ಟ್ 37 ಆಗುತ್ತೆ ಅಂತಾ. ಆದ್ರೆ ತಂಡದಲ್ಲಿ ರೋಹಿತ್ ಮತ್ತು ಕೊಹ್ಲಿ ಇದ್ದಾರೆ. ಇಬ್ರಿಬ್ರೂ ಭುವಿಗಿಂತ ಜಾಸ್ತಿ ಸೀನಿಯರ್ಸ್. ಆದ್ರೆ ಅವ್ರಲ್ಲಿ ಇರೋ ಸಾಮರ್ಥ್ಯದಿಂದಲೇ ತಂಡದಲ್ಲಿ ಕಂಟಿನ್ಯೂ ಆಗಿದ್ದಾರೆ. ಹೀಗಾಗಿ ಭುವಿಗೆ ಅವಕಾಶ ಯಾಕಿಲ್ಲ. ಅದೂ ಅಲ್ದೇ ಭುವಿ ಕೂಡ ನಾನು ಈಗಲೇ ನಿವೃತ್ತಿ ಘೋಷಣೆ ಮಾಡಲ್ಲ ಅಂದಿದ್ದಾರೆ. ಫಿಟ್‌ನೆಸ್ ಇರುವವರೆಗೆ ಆಟ ಮುಂದುವರಿಸುವುದಾಗಿ ಹೇಳಿದ್ದಾರೆ.  ಆದ್ರೆ ಬಿಸಿಸಿಐನ ಸೆಲೆಕ್ಟರ್‌ಗಳು ಯುವ ಆಟಗಾರರ ಕಡೆ ಮುಖ ಮಾಡಿದರೆ ಅದು ಅವ್ರೇ ಮಾಡಿಕೊಳ್ಳುವ ನಷ್ಟ ಅಷ್ಟೇ. ಇನ್ನು ಭುವನೇಶ್ವರ್ ಕುಮಾರ್ ಭಾರತ ತಂಡದ ಪರ ಕೊನೆಯದಾಗಿ 2022ರ ನವೆಂಬರ್​ನಲ್ಲಿ ಆಡಿದ್ದೇ ಕೊನೆ. ಆಮೇಲೆ ಮತ್ತೆ ಅವಕಾಶ ಸಿಕ್ಕಿಲ್ಲ. ಆದ್ರೆ ಅವ್ರಲ್ಲಿರೋ ಸ್ಕಿಲ್, ಫಾರ್ಮ್ ನೋಡಿದ್ರೆ ಅವಕಾಶ ಕೊಡ್ಲೇಬೇಕು ಅನ್ನೋ ಥರ ಮಾಡಿದ್ದಾರೆ. ಬಟ್ ಹೆಡ್ ಕೋಚ್ ಗೌತಮ್ ಗಂಭೀರ್ ಸ್ಟಾರ್ ಕಲ್ಚರ್ ಬಿಡ್ತೀನಿ, ಹೊಸಬರಿಗೆ ಚಾನ್ಸ್ ಕೊಡ್ತೀನಿ ಅಂತಾ ಟೀಂ ಹಳ್ಳ ಹಿಡಿಸ್ತಿದ್ದಾರೆ ಅಷ್ಟೇ.

Shantha Kumari

Leave a Reply

Your email address will not be published. Required fields are marked *