ತಮಿಳುನಾಡಿಗೆ 3.500 ಕ್ಯೂಸೆಕ್ ನೀರು ಬಿಡಲು ಆದೇಶ- ಆಗಸ್ಟ್ 13ರಂದು ಅಖಂಡ ಕರ್ನಾಟಕ ಬಂದ್

ತಮಿಳುನಾಡಿಗೆ 3.500 ಕ್ಯೂಸೆಕ್ ನೀರು ಬಿಡಲು ಆದೇಶ-   ಆಗಸ್ಟ್ 13ರಂದು ಅಖಂಡ ಕರ್ನಾಟಕ ಬಂದ್

ಕಾವೇರಿ ನದಿ ನೀರು ವಿವಾದ ಕರ್ನಾಟಕದಲ್ಲಿ ದೊಡ್ಡ ಕಿಚ್ಚು ಹೊತ್ತಿಸಿದೆ.  ಕರ್ನಾಟಕ ಬರಗಾಲ ಪರಿಸ್ಥಿತಿ ಎದುರಿಸುತ್ತಿರುವ ಬೆನ್ನಲ್ಲೇ ಕಾವೇರಿ ನೀರು ತಮಿಳುನಾಡಿಗೆ ಹರಿಸುವ CWRC ಆದೇಶ ವಿರುದ್ಧ ಕನ್ನಡ ಪರ ಸಂಘಟನೆಗಳು ಹೋರಾಟ ತೀವ್ರಗೊಳಿಸಿದೆ. ಬಂದ್ ಬೇಕು ಬೇಡ ನಡುವೆ ಸಭೆ ಸೇರಿದ ಕನ್ನಡ ಪರ ಸಂಘಟನೆಗಳು ಆಗಸ್ಟ್ 13ಕ್ಕೆ ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿದೆ. ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಸಭೆ ಸೇರಿದ ಕನ್ನಡ ಪರ ಸಂಘಟನೆಗಳು ಮಹತ್ವದ ನಿರ್ಧಾರ ಘೋಷಿಸಿದೆ.

ಇದನ್ನೂ ಓದಿ: ಕುಂದಾಪುರದಲ್ಲಿ ನಡೆದ ಕೊಲೆಯ ಕಾರಣ ರಿವೀಲ್ – ಸಿಗಡಿ ವಿಚಾರಕ್ಕೆ ನಡೀತಾ ಫೈ*ರಿಂಗ್?

ಕರ್ನಾಟಕದಲ್ಲಿಯೇ ನೀರಿಲ್ಲದಿರುವಾಗ ನೆರೆ ರಾಜ್ಯ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶಿಸಿರುವ CWMA ನಿರ್ಧಾರ ಖಂಡಿಸಿ ಕನ್ನಡಪರ ಸಂಘಟನೆಗಳು ಆಗಸ್ಟ್ 13ರ ಗುರುವಾರ ಅಖಂಡ ಕರ್ನಾಟಕ ಬಂದ್​​ಗೆ ಕರೆ ನೀಡಿವೆ. ಈ ಬಗ್ಗೆ ಕನ್ನಡ ಪರ ಸಂಘಟನೆಗಳ ಜೊತೆ ಚರ್ಚೆ ನಂತರ ಕನ್ನಡ ಪರ ಹೋರಾಟಗಾರ ವಾಟಾಳ್​ ನಾಗರಾಜ್ ಅಧಿಕೃತ ಘೋಷಣೆ ಮಾಡಿದ್ದಾರೆ. ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಕರ್ನಾಟಕ ಬಂದ್​​ಗೆ ತೀರ್ಮಾನಿಸಲಾಗಿದೆ.

ರಾಜ್ಯ ಸರ್ಕಾರಿ ನೌಕರರ ಸಂಘ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಲಾರಿ ಮಾಲೀಕರು ಮತ್ತು ಚಾಲಕರ ಸಂಘ ಆಟೋ ಚಾಲಕರ ಸಂಘಟನೆ ಓಲಾ & ಉಬರ್ ಸಂಘಟನೆ ಕಾರ್ಮಿಕರ ಸಂಘಟನೆಗಳು ಬೀದಿ ಬದಿ ವ್ಯಾಪಾರಿಗಳು  ಹೋರಾಟ ನಡೆಸಲಿದ್ದಾರೆ.

Kishor KV

Leave a Reply

Your email address will not be published. Required fields are marked *