ಸೀನ ರಶ್ಮಿ ಸಂಸಾರ ಇನ್ಮುಂದೆ ಆನಂದ ಸಾಗರ – ಸೀನನ ಮೇಲೆ ವೀಕ್ಷಕರಿಗೆ ಸಂಶಯ..!

ಸೀನ ರಶ್ಮಿ ಸಂಸಾರ ಇನ್ಮುಂದೆ ಆನಂದ ಸಾಗರ – ಸೀನನ ಮೇಲೆ ವೀಕ್ಷಕರಿಗೆ ಸಂಶಯ..!

ಅಣ್ಣಯ್ಯ ಧಾರಾವಾಹಿಯಲ್ಲಿ ಸೀನ ಇಷ್ಟು ಬೇಗ ಬದಲಾಗಿದ್ದು ಯಾಕೋ ವೀಕ್ಷಕರಿಗೆ ಇದು ನಿಜನಾ, ಸುಳ್ಳಾ ಅಂತಾ ನಂಬೋಕೆ ಆಗ್ತಿಲ್ಲ. ರಶ್ಮಿನಾ ಹೆಂಡ್ತಿ ಎಂದು ಒಪ್ಪಿಕೊಂಡಿದ್ದೇ ವೀಕ್ಷಕರಿಗೆ ಖುಷಿಯಾದರೂ ಕೂಡಾ, ಯಾಕೋ ಸೀನ ಓವರ್ ಆಕ್ಟಿಂಗ್ ಮಾಡ್ತಾ ಇದ್ದಾನೆ. ಏನೋ ಮಸಲತ್ತು ಇದೆ ಎಂಬ ಸಂಶಯ ಮೂಡಿದೆ.

ಇದನ್ನೂ ಓದಿ:ರಾಮಾಯಣದಲ್ಲಿ ರಾವಣನದ್ದೇ ಅಬ್ಬರ – ರಾಕಿಂಗ್ ಸ್ಟಾರ್ ಯಶ್ ರೌದ್ರಾವತಾರ

ಅಣ್ಣಯ್ಯ ಸೀರಿಯಲ್‌ನಲ್ಲಿ ಪಿಂಕಿ ಓಡಿಹೋಗಿದ್ದು ನಿಜ. ಹಾಗಂತಾ ಸೀನ ಸಡನ್ ಆಗಿ ಚೇಂಜ್ ಆಗಿದ್ದು ಮಾತ್ರ ವೀಕ್ಷಕರ ಅನುಮಾನಕ್ಕೆ ಕಾರಣವಾಗಿದೆ. ಗುಂಡಮ್ಮನ ಮದುವೆಯಾದರೂ ಕೂಡಾ ಸೀನ ಪಿಂಕಿ ಹಿಂದೆ ಸುತ್ತುತ್ತಿದ್ದ. ಇನ್ನೇನು ಪಿಂಕಿನ ಮದುವೆಯಾಗಬೇಕು ಎಂದವನಿಗೆ ಪಿಂಕಿಯೇ ಕೈ ಕೊಟ್ಟು ಓಡಿಹೋಗಿದ್ದಳು. ಇದೀಗ ಸೀನ ಹಳೇ ಹೆಂಡ್ತಿ ಪಾದವೇ ಗತಿ ಎಂದು ವಾಪಸ್ ಬಂದಿದ್ದಾನೆ. ರಶ್ಮಿಯನ್ನು ಹೆಂಡ್ತಿ ಎಂದು ಮನಸಾರೆ ಒಪ್ಪಿಕೊಂಡಿದ್ದೂ ಆಗಿದೆ. ಆದರೆ, ಇದು ಸೀನ ಮಾಡುತ್ತಿರುವ ನಾಟಕ. ಆಸ್ತಿ ಹೊಡೆಯೋ ಸಂಚು ಎನ್ನುವ ಅನುಮಾನ ವೀಕ್ಷಕರಿಗೆ ಶುರುವಾಗಿದೆ.

ರಶ್ಮಿ ಒಳಗೆ ಬರುವಾಗ, ತನ್ನ ಕೈಯನ್ನು ನೆಲದ ಮೇಲೆ ಇಡುವ ಸೀನಾ, ನಿನ್ನ ಕಾಲು ನೆಲ ಸೋಕದಂತೆ ನಾನು ಇನ್ನು ನಿನ್ನನ್ನು ಕಾಪಾಡುತ್ತೇನೆ ಎನ್ನುತ್ತಾನೆ. ಇದನ್ನು ನೋಡಿ ಶಿವು ಸೇರಿ ಮನೆಮಂದಿ ಸಂಭ್ರಮಪಟ್ಟಿದ್ದಾರೆ. ಮೊದಲು ಇದೆಲ್ಲಾ ಕನಸು ಎಂದು ಭಾವಿಸಲಾಗಿತ್ತು. ಈಗ ನೋಡಿದರೆ ನಡೆಯುತ್ತಿರುವುದು ಕನಸಲ್ಲ. ಆದರೆ, ಸೀನಾ ಬದಲಾಗಿರೋದನ್ನು ನಂಬಲಾಗುತ್ತಿಲ್ಲ. ಗುಂಡಮ್ಮನ ನೋಡಿದರೆ ಸಿಡಿದೇಳುವ ಸೀನ ಇಷ್ಟು ಬೇಗ ಲವ್‌ಟ್ರ್ಯಾಕ್ ಗೆ ಬಂದಿದ್ದು ಸಂಶಯಕ್ಕೆ ಕಾರಣವಾಗಿದೆ.

ಕಟ್ ಕೊಂಡೋಳು ಕೊನೆ ತನಕ ಇಟ್ಕೊಂಡೋಳು ಇರೋತನ. ಏನೇ ಕಷ್ಟ ಇದ್ರೂ ಕಟ್ಕೊಂಡೋಳು ಕೈ ಬಿಡಲ್ಲ. ಇಟ್ಕೊಂಡೋಳು ಅರ್ಧ ದಾರಿಲಿ ಬಿಟ್ಟು ಹೋಗೋದೇ. ಇನ್ನಾದರೂ ಸೀನನ ಸಂಸಾರ ಆನಂದ ಸಾಗರವಾಗಿರಲಿ ಎಂದು ವೀಕ್ಷಕರು ಹಾರೈಸಿದ್ದಾರೆ. ಆದರೆ, ಸೀನ ಇಷ್ಟು ಬೇಗ ಪಿಂಕಿನ ಮರೆತು ಗುಂಡಮ್ಮಳ ಜೊತೆ ಹಾಯಾಗಿರುತ್ತಾನಾ, ರಶ್ಮಿಯ ಪುಸಲಾಯಿಸಿ ಆಸ್ತಿ ಪಡೆದುಕೊಳ್ಳುವ ಸಂಚು ನಡೆಸ್ತಾನಾ ಅನ್ನೋ ಕುತೂಹಲ ವೀಕ್ಷಕರದ್ದು.

Sulekha

Leave a Reply

Your email address will not be published. Required fields are marked *