ಅಡುಗೆಗೆ ಮಾತ್ರವಲ್ಲ.. ಬ್ಯೂಟಿ ಕೇರ್‌ಗೂ ಈ ತರಕಾರಿ ಬೆಸ್ಟ್! – ಆಲೂಗಡ್ಡೆಯಲ್ಲಿ ಅಡಗಿದೆ ಸೌಂದರ್ಯದ ಗುಟ್ಟು

ಮಾರುಕಟ್ಟೆಯಲ್ಲಿ ಲಭ್ಯವಿರುವ ಸೌಂದರ್ಯವರ್ಧಕ ಉತ್ಪನ್ನಗಳು ನಮ್ಮ ತ್ವಚೆಯ ಆರೋಗ್ಯಕ್ಕೆ ಸಹಾಯ ಮಾಡುತ್ತದೆ ಅಂತ ಅನೇಕ ಮಂದಿ ಭಾವಿಸಿದ್ದಾರೆ. ಆದರೆ ನಮ್ಮ ಅಡುಗೆಮನೆಯಲ್ಲಿರುವ ಕೆಲವು ಪದಾರ್ಥಗಳು ನೈಸರ್ಗಿಕವಾಗಿ ನಮ್ಮ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ ಎಂದು ಹಲವರಿಗೆ ತಿಳಿದಿಲ್ಲ. ಅಂದ್ಹಾಗೆ ಆರೋಗ್ಯದ ವಿಷಯದಲ್ಲಿ ತರಕಾರಿಗಳ ಪಾತ್ರ ಹೆಚ್ಚು ಮಹತ್ವದ್ದಾಗಿದೆ. ಅದ್ರಲ್ಲೂ ಆಲೂಗಡ್ಡೆಯೂ ಒಂದು.
ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿಂದ್ರೆ ಎಷ್ಟೊಂದು ಪ್ರಯೋಜನ! – ಹೃದಯದ ಆರೋಗ್ಯಕ್ಕೂ ಇದೇ ಬೆಸ್ಟ್!
ನಿಮ್ಮ ದೈನಂದಿನ ಕಾರ್ಯಚಟುವಟಿಕೆಗಳಿಗೆ ಮೂಲ ಇಂಧನ ಎಂದೇ ಪರಿಗಣಿತವಾಗಿರುವ ಹಣ್ಣು ಮತ್ತು ತರಕಾರಿಗಳು ನಮ್ಮ ದೇಹದಲ್ಲಿ ಕಮಾಲಿನ ಕಾರ್ಯಗಳನ್ನು ನಿರ್ವಹಿಸುತ್ತದೆ. ವೈದ್ಯರು ಕೂಡ ನಿಮ್ಮ ಆರೋಗ್ಯಕ್ಕಾಗಿ ಹಣ್ಣು ಹಂಪಲುಗಳನ್ನೇ ಪ್ರಧಾನವಾಗಿ ಶಿಫಾರಸು ಮಾಡುತ್ತಾರೆ. ಇನ್ನು ನಿಮ್ಮ ತ್ವಚೆಯ ಸೌಂದರ್ಯದ ವಿಷಯದಲ್ಲೂ ಬಹುಮುಖ್ಯ ಪಾತ್ರವಹಿಸುವ ಹಣ್ಣು ತರಕಾರಿಗಳನ್ನು ದಿನನಿತ್ಯದ ಜೀವನದಲ್ಲಿ ಬಳಸಿದಷ್ಟೂ ಅತ್ಯುತ್ತಮ. ಇನ್ನು ನೀವು ನಿರ್ದಿಷ್ಟ ತರಕಾರಿಗಳನ್ನು ಕೈಗೆತ್ತಿಕೊಳ್ಳುವಾಗಲೂ ಕೂಡ ಇವುಗಳ ಅಸಾಮಾನ್ಯವಾದ ಕೆಲಸಗಳ ಜಾದೂಗೆ ನಿಮಗೆ ಆಶ್ಚರ್ಯವಾಗಬಹುದು. ಹೌದು ಅಂತಹುದೇ ವಿಶಿಷ್ಟ ತರಕಾರಿಯಾದ ಆಲೂಗಡ್ಡೆಯ ವಿಶೇಷತೆಯನ್ನು ಇಂದಿನ ಲೇಖನದಲ್ಲಿ ನಾವು ತಿಳಿಸಲಿರುವೆವು.
ಕಪ್ಪು ಕಲೆಗಳಿಂದ ಮುಕ್ತಿ
ನಿಮ್ಮ ಕಣ್ಣಿನ ಕೆಳಗಡೆ ಇರುವಂತಹ ಕಪ್ಪು ಕಲೆಗಳನ್ನು ತೆಗೆದುಹಾಕಲು ಆಲೂಗಡ್ಡೆಯನ್ನು ಬಳಸಬಹುದು. ಹೌದು ಆಲೂಗಡ್ಡೆ ಜ್ಯೂಸ್‌ನ ಕೆಲವು ಹನಿಗಳನ್ನು ಕಲೆ ಇರುವಂತಹ ಜಾಗಕ್ಕೆ ಹಚ್ಚಿ, ನಿಧಾನವಾಗಿ ಮಸಾಜ್ ಮಾಡಿ.
ಸುಕ್ಕುಗಟ್ಟುವಿಕೆ ನಿವಾರಣೆ
ನಿಮ್ಮ ಮುಖದ ಮೇಲೆ ದಿನಾಲೂ ಬಟಾಟೆ ಜ್ಯೂಸ್‌ನ್ನು ಹಚ್ಚಿಕೊಂಡರೆ ನಿಮ್ಮ ಮುಖ ಸುಕ್ಕುಗಟ್ಟುವುದು ತಡೆಯಬಹುದು ಮತ್ತು ಪ್ರಸಕ್ತ ಇರುವ ಸುಕ್ಕನ್ನು ಕಡಿಮೆ ಮಾಡಿಕೊಳ್ಳಬಹುದು.
ಊದಿದ ಕಣ್ಣುಗಳ ಚಿಕಿತ್ಸೆಗೆ
ಊದಿದ ಕಣ್ಣುಗಳಿಗೆ ನೀವು ಚಿಕಿತ್ಸೆ ನೀಡಬೇಕೆಂದು ಬಯಸಿದರೆ ಆಗ ನೀವು ಆಲೂಗಡ್ಡೆ ಮತ್ತು ಸೌತೆಕಾಯಿಯ ಮಿಶ್ರಣವನ್ನು ಊದಿದ ಜಾಗಕ್ಕೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಬೇಕು.
ಗಾಢ ಕಲೆಗಳು
ಆಲೂಗಡ್ಡೆ ಜ್ಯೂಸ್ ಅನ್ನು ನೀವು ನಿಯಮಿತವಾಗಿ ಗಾಢ ಕಲೆಗಳು ಇರುವ ಜಾಗಕ್ಕೆ ಹಚ್ಚಿದರೆ ಅದರಿಂದ ಮುಕ್ತಿ ಪಡೆಯಬಹುದು.
ಆರೋಗ್ಯಕರ ಕೂದಲನ್ನು ಆನಂದಿಸಿ
ಆಲೂಗಡ್ಡೆಯನ್ನು ನೀವು ದಿನನಿತ್ಯ ನಿಮ್ಮ ಕೂದಲಿನ ಆರೈಕೆಯಲ್ಲಿ ಬಳಸಿಕೊಂಡರೆ ಕೂದಲು ಕಂದು ಬಣ್ಣಕ್ಕೆ ತಿರುಗುವುದು ತಪ್ಪುತ್ತದೆ. ಇದರಿಂದ ನಿಮ್ಮ ಕೂದಲು ಆರೋಗ್ಯವಾಗಿರುತ್ತದೆ.

ನೋಡಿರಿ

