ಬೀಗ ಒಡೆದಿಲ್ಲ, ಶೆಟರ್ ತೆಗೆದಿಲ್ಲ – ಜ್ಯುವೆಲ್ಲರಿ ಶಾಪ್‌ನಲ್ಲಿ 10 ಲಕ್ಷ ಮೌಲ್ಯದ ಜ್ಯುವೆಲ್ಲರಿ ಕದಿದ್ದು ಯಾರು ಗೊತ್ತಾ?

ಜ್ಯುವೆಲ್ಲರಿ ಶಾಪ್‌ನ ಬೀಗ ಮುರಿದಿರಲಿಲ್ಲ. ಕಳ್ಳ ಕೂಡ ಬಂದಿರಲ್ಲಿ. ಆದ್ರೆ ಇದ್ದಕ್ಕಿದ್ದಂತೆ 10 ಲಕ್ಷದ ಚಿನ್ನ ಅಬೇಸ್ ಆಗಿತ್ತು. ಹೇಗಾಯ್ತು ಅಂತ ನೋಡಿದಾಗ ಮಾಲೀಕ ಶಾಕ್ ಆಗಿದ್ದ. ಸಿಸಿ ಕ್ಯಾಮರಾದಲ್ಲಿ ಅಸಲಿ ಕಳ್ಳ ಸಿಕ್ಕಿ ಬಿದಿದ್ದ.
ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಜ್ಯುವೆಲರಿ ಅಂಗಡಿಯೊಂದರಲ್ಲಿ ಲಕ್ಷಾಂತರ ರೂ. ಮೌಲ್ಯದ ವಜ್ರ ಖಚಿತ ಚಿನ್ನಾಭರಣಗಳು ಮಾಯವಾಗಿ, ಮಾಲೀಕರು ಮತ್ತು ಸಿಬ್ಬಂದಿ ಕಂಗಾಲಾದ ಘಟನೆ ತುಮಕೂರಿನಲ್ಲಿ ನಡೆದಿದೆ. ಆದರೆ, ಇದರ ಹಿಂದೆ ಯಾವುದೇ ಮಾನವ ಕಳ್ಳನ ಕೈವಾಡವಿಲ್ಲ, ಬದಲಿಗೆ ಕಳ್ಳತನ ಮಾಡಿದ್ದು ಒಂಟಿ ಸಲಗದಂತಹ ಪುಟ್ಟ ಇಲಿ ಎಂಬುದು ಸಿಸಿಟಿವಿ ದೃಶ್ಯಗಳಿಂದ ಬಹಿರಂಗಗೊಂಡಿದೆ.
ಇದನ್ನೂ ಓದಿ: ರಾಮಾಯಣದಲ್ಲಿ ರಾವಣನದ್ದೇ ಅಬ್ಬರ – ರಾಕಿಂಗ್ ಸ್ಟಾರ್ ಯಶ್ ರೌದ್ರಾವತಾರ
ಅಂದಹಾಗೇ ತುಮಕೂ ರು ನಗರದ ಕಾಲ್‌ಟೆಕ್ಸ್ ವೃತ್ತದ ಬಳಿ ಇರುವ ‘ವಿಶ್ವಾಸ್ ಜ್ಯುವೆಲರಿ ಶಾಪ್ʼ ನಲ್ಲಿ ಈ ವಿಚಿತ್ರ ಘಟನೆ ಜರುಗಿದೆ. ಬೆಳಗ್ಗೆ ಬಂದು ಅಂಗಡಿ ತೆರೆದ ಸಿಬ್ಬಂದಿಗೆ ದೊಡ್ಡ ಆಘಾತ ಕಾದಿತ್ತು. ಅಂಗಡಿಯಲ್ಲಿದ್ದ 50 ಗ್ರಾಂ ಗೂ ಅಧಿಕ ತೂಕದ, ಅಂದರೆ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ವಜ್ರ ಖಚಿತ ಸರಗಳು ಹಾಗೂ ಉಂಗುರಗಳು ನಾಪತ್ತೆಯಾಗಿದ್ದವು.
ಅಂಗಡಿಯ ಷಟರ್ ಮುರಿದಿರಲಿಲ್ಲ ಮತ್ತು ಒಳಗೆ ಯಾರೂ ಅಕ್ರಮವಾಗಿ ಪ್ರವೇಶಿಸಿದ ಸುಳಿವೂ ಇರಲಿಲ್ಲ. ಪೊಲೀಸರಿಗೆ ದೂರು ನೀಡುವ ಮುನ್ನ ಮಾಲೀಕರು ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ, ಅಲ್ಲಿ ಕಳ್ಳನ ಬದಲು ಇಲಿಯೊಂದರ ಚೇಷ್ಟೆ ಕಂಡು ದಂಗಾಗಿದ್ದಾರೆ. ಅಂಗಡಿಯಲ್ಲಿ ಒಂದಲ್ಲ, ಎರಡಲ್ಲ, ಬರೊಬ್ಬರಿ 10 ಉಂಗುರಗಳು ಮತ್ತು 3 ಸರಗಳನ್ನು ಇಲಿ ಎತ್ತಿಕೊಂಡು ಹೋಗಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.

ನೋಡಿರಿ

