ಟೀಂ ಇಂಡಿಯಾಗೆ ರಹಾನೆ ಗುಡ್ ಬೈ – TESTನಲ್ಲಿ ಸೋಲನ್ನೇ ಕಾಣದ ಕ್ಯಾಪ್ಟನ್
ಅಜಿಂಕ್ಯ ನೆರಳಲ್ಲಿ ಕರುಣ್ ಕಣ್ಮರೆಯಾದ್ರಾ?

ಟೀಂ ಇಂಡಿಯಾಗೆ ರಹಾನೆ ಗುಡ್ ಬೈ – TESTನಲ್ಲಿ ಸೋಲನ್ನೇ ಕಾಣದ ಕ್ಯಾಪ್ಟನ್ಅಜಿಂಕ್ಯ ನೆರಳಲ್ಲಿ ಕರುಣ್ ಕಣ್ಮರೆಯಾದ್ರಾ?

ಬ್ಯಾಟ್ ಹಿಡಿದು ನಿಂತ್ರೆ ಭದ್ರಗೋಡೆ.. ಕ್ಯಾಪ್ಟನ್ಸಿ ಕೊಟ್ರೆ ಸೋಲರಿಯದ ಸರದಾರ.. ಸಂಕಷ್ಟದ ಸಮಯದಲ್ಲಿ ಆಪತ್ಬಾಂಧವ. ಕಿಚ್ಚಿನ ಕ್ಷಣಗಳಲ್ಲೂ ತಣ್ಣನೆಯ ತಂಗಾಳಿ. ಬೆಂಕಿಯುಗುಳೋರ ನಡುವೆ ರಣಬೇಟೆಗಾರನಾಗಿ ಭಾರತ ಕ್ರಿಕೆಟ್ ಲೋಕದಲ್ಲಿ ತನ್ನದೇ ಹೆಜ್ಜೆಗುರುತು ಮೂಡಿಸಿದ ಕೂಲ್ ಌಂಡ್ ಕಾಮ್ ಪ್ಲೇಯರ್ ಅಜಿಂಕ್ಯ ರಹಾನೆ. ತಮ್ಮ 15 ವರ್ಷಗಳ ಸುದೀರ್ಘ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಅತಿದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್ ಬೈ ಹೇಳಿದ್ದಾರೆ.

ಇದನ್ನೂ ಓದಿ : ಬ್ರ್ಯಾಂಡ್ ವ್ಯಾಲ್ಯೂನಲ್ಲೂ RCBಯೇ ಬಾಸ್ – ಧೋನಿ ಇಲ್ಲದೆ ಜಾರಿ ಬಿತ್ತು CSK

ಭಾರತೀಯ ಕ್ರಿಕೆಟ್​ನಲ್ಲಿ ಒನ್ ಆಫ್ ದಿ ಸ್ಟಾರ್ ಪ್ಲೇಯರ್ ಆಗಿದ್ದವ್ರು ಅಜಿಂಕ್ಯ ರಹಾನೆ. ಮಿಡಲ್ ಆರ್ಡರ್ ಬ್ಯಾಟರ್​ ಆಗಿ ಅತ್ಯುತ್ತಮ ಸಾಧನೆಗಳನ್ನ ಮಾಡಿದ್ದಾರೆ. ಅದ್ರಲ್ಲೂ  ವಿದೇಶಿ ಪಿಚ್‌ಗಳಲ್ಲಿ ಭಾರತದ ಪಾಲಿಗೆ ಹಲವು ಐತಿಹಾಸಿಕ ಗೆಲುವುಗಳ ಹೀರೋ ಕೂಡ. ತಮ್ಮ ಅಪ್ರತಿಮ ನಾಯಕತ್ವ ಮತ್ತು ಬ್ಯಾಟಿಂಗ್ ಮೂಲಕ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಮೈಲುಗಲ್ಲು ಸಾಧಿಸಿರೋ ಅಜಿಂಕ್ಯ ರಹಾನೆ ಇವತ್ತು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಅಧಿಕೃತವಾಗಿ ನಿವೃತ್ತಿ ಘೋಷಣೆ ಮಾಡಿದ್ದಾರೆ.

ಆಯ್ಕೆ ಸಮಿತಿ ಕಡೆಗಣನೆಗೆ ಬೇಸತ್ತು ನಿವೃತ್ತಿ ಘೋಷಣೆ!

ಭಾರತದ ಪರ ಸಾಕಷ್ಟು ಸರಣಿಗಳು, ಪಂದ್ಯಗಳನ್ನ ಹಂಗಾಮಿ ನಾಯಕನಾಗಿ ತಂಡವನ್ನ ಅತ್ಯುತ್ತಮವಾಗಿ ನಿಭಾಯಿಸಿದವ್ರು ಅಜಿಂಕ್ಯ ರಹಾನೆ. ರಹಾನೆ ಕ್ಯಾಪ್ಟನ್ಸಿಯಲ್ಲಿ 2020-21ರಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು ಗೆದ್ದು ಬೀಗಿತ್ತು. ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿಯಲ್ಲಿ ಸಾಕಷ್ಟು ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡಿದ್ದ ರಹಾನೆಗೆ ಇತ್ತೀಚಿನ ದಿನಗಳಲ್ಲಿ ಅವಕಾಶಗಳೇ ಇಲ್ಲದಾಗಿತ್ತು. ಇದೇ ಕಾರಣಕ್ಕೆ ವಿದಾಯದ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ರಹಾನೆ, ಕ್ಯಾಪ್ 278 ವಿದಾಯ ಹೇಳುತ್ತಿದೆ. ಇಷ್ಟು ವರ್ಷಗಳ ಕಾಲ ನೀಡಿದ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು. ಸದಾ ಕೃತಜ್ಞನಾಗಿರುತ್ತೇನೆ ಎಂದು ವಿಡಿಯೋ ಶೇರ್ ಮಾಡಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ.. ಟೀಂ ಇಂಡಿಯಾದಲ್ಲಿ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್ ರಂತಹ ದಿಗ್ಗಜರ ಯುಗಾಂತ್ಯದ ಬಳಿಕ ರಹಾನೆ ಭಾರತದ ಪಾಲಿಗೆ ನಂಬಿಕಸ್ಥ ಆಟಗಾರನಾಗಿದ್ರು.

ರಹಾನೆ ಕ್ರಿಕೆಟ್ ದಾರಿ!

2013ರಲ್ಲಿ ಭಾರತ ಟೆಸ್ಟ್‌ ತಂಡಕ್ಕೆ ಪಾದಾರ್ಪಣೆ, ಆಧಾರಸ್ತಂಭ

ಭಾರತ ಪರ 85 ಟೆಸ್ಟ್, 90 ಏಕದಿನ ಹಾಗೂ 20 ಟಿ20 ಪಂದ್ಯ

ಟೆಸ್ಟ್ ಫಾರ್ಮೆಟ್ ​ನಲ್ಲಿ 38.46ರ ಬ್ಯಾಟಿಂಗ್ ಸರಾಸರಿಯಲ್ಲಿ 5,077 ರನ್

2023ರಲ್ಲಿ ಕೊನೆಯ ಬಾರಿಗೆ ವೆಸ್ಟ್ ಇಂಡೀಸ್ ಎದುರು ಟೆಸ್ಟ್‌ ಪಂದ್ಯಗಳು

ಏಕದಿನ ಮಾದರಿಯಲ್ಲಿ 2018ರಲ್ಲಿ ಕೊನೆಯ ಬಾರಿಗೆ ಭಾರತದ ಪರ ಆಟ

ವೆಸ್ಟ್ ಇಂಡೀಸ್ ವಿರುದ್ದ 2016ರಲ್ಲಿ ಕೊನೆಯ ಬಾರಿಗೆ ಭಾರತದ ಪರ ಟಿ20 ಆಟ

2020-21ರ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಶತಕ ಸಿಡಿಸಿ ಸರಣಿ ಗೆಲುವು

ರಹಾನೆ ನಾಯಕತ್ವ ವಹಿಸಿದ ಯಾವುದೇ ಟೆಸ್ಟ್ ಪಂದ್ಯದಲ್ಲೂ ಭಾರತ ಸೋತಿಲ್ಲ

6 ಪಂದ್ಯಗಳ ಕ್ಯಾಪ್ಟನ್, 4ರಲ್ಲಿ ಗೆಲುವು, 2 ಪಂದ್ಯಗಳಲ್ಲಿ ಡ್ರಾ ಸಾಧಿಸಿದ ಭಾರತ

ಇಂಗ್ಲೆಂಡ್, ಸೌತ್ ಆಫ್ರಿಕಾ ಮತ್ತು ಆಸ್ಟ್ರೇಲಿಯಾದಂಥ ಕಠಿಣ ಪಿಚ್‌ ಗಳ ಸರದಾರ

2023ರ ಬಳಿಕ ಫಾರ್ಮ್ ಕಳ್ಕೊಂಡಿದ್ದ ರಹಾನೆಗೆ ಕಂ ಬ್ಯಾಕ್ ಅವಕಾಶಗಳೇ ಸಿಗ್ಲಿಲ್ಲ

ಚೆನ್ನಾಗಿ ಪರ್ಫಾಮ್ ಮಾಡಿದ್ರೂ ಕಡೆಗಣನೆ ಹಿನ್ನೆಲೆ ವಿದಾಯದ ನಿರ್ಧಾರ

ಅಜಿಂಕ್ಯ ರಹಾನೆ ವಿಚಾರದಲ್ಲಿ ಇನ್ನೊಂದು ಟ್ವಿಸ್ಟ್ ಇದೆ. ಅದೇನಂದ್ರೆ ರಹಾನೆಯ ನೆರಳಿನಲ್ಲಿ ಕನ್ನಡಿಗ ಕರುಣ್ ನಾಯರ್​ ಕೆರಿಯರ್​ ಕಗ್ಗಂಟಾಯ್ತಾ ಅನ್ನೋದು. ಯಾಕಂದ್ರೆ 2016ರಲ್ಲಿ ಇಂಗ್ಲೆಂಡ್ ವಿರುದ್ಧದ ಚೆನ್ನೈ ಟೆಸ್ಟ್ ಪಂದ್ಯದಲ್ಲಿ ಅಜೇಯ 303 ರನ್ ಗಳಿಸುವ ಮೂಲಕ ವೀರೇಂದ್ರ ಸೆಹ್ವಾಗ್ ನಂತರ ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ ಎರಡನೇ ಭಾರತೀಯ ಎಂಬ ದಾಖಲೆ ಬರೆದಿದ್ರು. ಆದ್ರೆ ಈ ಪಂದ್ಯದಲ್ಲಿ ಕರುಣ್​ಗೆ ಚಾನ್ಸ್ ಸಿಕ್ಕಿದ್ದೇ ರಹಾನೆ ಪ್ಲೇಸ್​ನಲ್ಲಿ. ಅಂದ್ರೆ ರಹಾನೆ ಇಂಜುರಿಯಿಂದಾಗಿ ಈ ಪಂದ್ಯದಿಂದ ಹೊರಗುಳಿಯಬೇಕಾಗುತ್ತೆ. ಕರುಣ್ ನಾಯರ್ ಬದಲಿ ಆಟಗಾರರಗಾಗಿ ಬಂದು ತ್ರಿಶತಕ ಹೊಡೆಯುತ್ತಾರೆ. ಆದ್ರೆ ರಹಾನೆ ರಿಕವರ್ ಆಗಿ ಬಂದ್ಮೇಲೆ ಕರುಣ್​ಗೆ ಜಾಸ್ತಿ ಅವಕಾಶಗಳು ಸಿಗಲೇ ಇಲ್ಲ. ಅವಕಾಶಗಳು ಸಿಕ್ಕಾಗ ಕರುಣ್​ಗೆ ಪರ್ಫಾಮ್​ ಮಾಡೋಕೆ ಆಗ್ಲಿಲ್ಲ. ಹೀಗಾಗಿ ರಹಾನೆ ನೆರಳಿನಲ್ಲಿ ಕರುಣ್ ಮಾಯವಾದ್ರಾ ಅನ್ನೋ ಪ್ರಶ್ನೆಗಳೂ ಇವೆ.

ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ರೂ ಕೂಡ ಐಪಿಎಲ್​ನಲ್ಲಿ ಇನ್ನೂ 2 ವರ್ಷಗಳ ಕಾಲ ಆಡೋ ಸಾಮರ್ಥ್ಯ ಅವ್ರಲ್ಲಿದೆ. ಇದುವೆರೆಗೆ ಐಪಿಎಲ್​ನಲ್ಲಿ ಕೆಕೆಆರ್, ಸಿಎಸ್​ಕೆ, ರಾಜಸ್ಥಾನ, ಪುಣೆ, ಡೆಲ್ಲಿ ಹಾಗೇ ಮುಂಬೈ ಇಂಡಿಯನ್ಸ್ ಪರ ಆಡಿದ್ದಾರೆ. ಪ್ರಸ್ತುತ ಕೆಕೆಆರ್ ಕ್ಯಾಪ್ಟನ್ ಆಗಿದ್ದಾರೆ. ಆದ್ರೆ ಮುಂದಿನ ಆವೃತ್ತಿಯಲ್ಲಿ ಕ್ಯಾಪ್ಟನ್ಸಿಯಿಂದ ಇಳಿದು ಬರೀ ಬ್ಯಾಟರ್ ಆಗಿ ಆಡಬಹುದು. ಒಟ್ನಲ್ಲಿ ಟೀಂ ಇಂಡಿಯಾಗೆ ಹಲವು ದಾಖಲೆಯ ಗೆಲುವುಗಳನ್ನ ತಂದುಕೊಟ್ಟಿರೋ ರಹಾನೆ ಯುಗಾಂತ್ಯವಾಗಿದ್ದು ಅಭಿಮಾನಿಗಳು ಅವ್ರ ಆಟವನ್ನ ಖಂಡಿತ ಮಿಸ್ ಮಾಡಿಕೊಳ್ತಾರೆ.

Shantha Kumari

Leave a Reply

Your email address will not be published. Required fields are marked *