ಬ್ರ್ಯಾಂಡ್ ವ್ಯಾಲ್ಯೂನಲ್ಲೂ RCBಯೇ ಬಾಸ್ – ಧೋನಿ ಇಲ್ಲದೆ ಜಾರಿ ಬಿತ್ತು CSK
IPLನಲ್ಲಿ ಹೇಗಿದೆ 10 ತಂಡಗಳ ಹವಾ?

RCB ಹವಾ ಅಂದ್ರೇನೇ ಹಾಗೇ.. ಮ್ಯಾಚ್ಗಳೇ ಇರ್ಲಿ, ಫ್ಯಾನ್ಸ್ ಕ್ರೇಜೇ ಇರ್ಲಿ, ಯಾರದ್ದೇ ಮೈದಾನ ಆಗಿದ್ರೂ ಅಲ್ಲಿ ರೆಡ್ ಆರ್ಮಿಯದ್ದೇ ಅಬ್ಬರ. ಆನ್ಫೀಲ್ಡ್, ಆಫ್ ದಿ ಫೀಲ್ಡ್ನಲ್ಲಿ ಬೆಂಗಳೂರು ಟೀಂ ಅಂದ್ರೆ ಅಭಿಮಾನಿಗಳಿಗೆ ಹಬ್ಬ. ಅದ್ರಲ್ಲೂ ಈಗ ಬ್ಯಾಕ್ ಟು ಬ್ಯಾಕ್ ಕಪ್ ಗೆದ್ಮೇಲೆ ಕೇಳ್ಬೇಕಾ.. ಬ್ರ್ಯಾಂಡ್ ವ್ಯಾಲ್ಯೂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದೆ. ಐದು ಬಾರಿಯ ಚಾಂಪಿಯನ್ ತಂಡಗಳನ್ನೂ ಹಿಂದಿಕ್ಕಿ ನಂಬರ್ 1 ಪಟ್ಟಕ್ಕೇರಿದೆ.
ಇದನ್ನೂ ಓದಿ : ₹20 ಕೋಟಿಗೆ CSKಗೆ ಹಾರ್ದಿಕ್ ಪಾಂಡ್ಯ – ಮುಂಬೈಗೆ ದುಬೆ, ಬ್ರೆವಿಸ್ ಟ್ರೇಡ್?
ಫ್ರಾಂಚೈಸಿ ಲೀಗ್ಗಳ ಪೈಕಿ ಜಗತ್ತಿನಲ್ಲೇ ಶ್ರೀಮಂತ ಲೀಗ್ ಅಂದ್ರೆ ಅದು ಐಪಿಎಲ್.. ಪ್ರತೀ ಆವೃತ್ತಿಯಲ್ಲೂ ಹಣದ ಹೊಳೆಯೇ ಹರಿಯುತ್ತೆ. ವರ್ಷದಿಂದ ವರ್ಷಕ್ಕೆ ಈ ಲೀಗ್ ವ್ಯಾಲ್ಯೂ ಹೆಚ್ಚಾಗ್ತಾನೇ ಹೋಗ್ತಿದೆ. ಇದೀಗ ಜಾಗತಿಕ ಹೂಡಿಕೆ ಬ್ಯಾಂಕ್ ‘ಹೌಲಿಹಾನ್ ಲೋಕಿ’ ರಿಲೀಸ್ ಮಾಡಿರೋ 2026ರ ಐಪಿಎಲ್ ಬ್ರ್ಯಾಂಡ್ ಮೌಲ್ಯಮಾಪನ ರಿಪೋರ್ಟ್ಸ್ ಪ್ರಕಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ರ್ಯಾಂಡ್ ವ್ಯಾಲ್ಯೂ 312 ಮಿಲಿಯನ್ ಅಮೆರಿಕನ್ ಡಾಲರ್ ತಲುಪಿದೆ. ಅಂದ್ರೆ ಇಂಡಿಯನ್ ಕರೆನ್ಸಿ ಪ್ರಕಾರ ಹೇಳೋದಾದ್ರೆ ಸುಮಾರು ₹2,600 ಕೋಟಿಗೂ ಹೆಚ್ಚು ರೀಚ್ ಆಗಿದೆ. ಇಂಟ್ರೆಸ್ಟಿಂಗ್ ಅಂದ್ರೆ ಐಪಿಎಲ್ ಇತಿಹಾಸದಲ್ಲೇ 300 ಮಿಲಿಯನ್ ಡಾಲರ್ ಗಡಿ ದಾಟಿದ ಮೊದಲ ಕ್ರಿಕೆಟ್ ಫ್ರಾಂಚೈಸಿ ಎಂಬ ಐತಿಹಾಸಿಕ ಹೆಗ್ಗಳಿಕೆಗೂ ಆರ್‌ಸಿಬಿ ಪಾತ್ರವಾಗಿದೆ. ಕಳೆದ ವರ್ಷಕ್ಕೆ ಕಂಪೇರ್ ಮಾಡಿದ್ರೆ ತಂಡದ ಬ್ರ್ಯಾಂಡ್ ಮೌಲ್ಯದಲ್ಲಿ ಶೇಕಡಾ 16ರಷ್ಟು ಬೆಳವಣಿಗೆಯಾಗಿದೆ. ಇನ್ನು ಐಪಿಎಲ್ನ ಒಟ್ಟಾರೆ ಬ್ಯುಸಿನೆಸ್ ವ್ಯಾಲ್ಯೂ ಶೇ. 11.4 ರಷ್ಟು ಏರಿಕೆಯಾಗಿದ್ದು, 20.6 ಬಿಲಿಯನ್ ಡಾಲರ್ ತಲುಪಿದೆ. ಇದರಲ್ಲಿ ಆರ್‌ಸಿಬಿ ಬ್ರ್ಯಾಂಡ್ ವ್ಯಾಲ್ಯೂ ಹಾಗೇ ಬ್ಯುಸಿನೆಸ್ ವ್ಯಾಲ್ಯೂ ಎರಡ್ರಲ್ಲೂ ಬೆಂಗಳೂರು ತಂಡವೇ ನಂಬರ್ 1ನಲ್ಲಿದೆ.
ಬ್ಯಾಕ್ ಟು ಬ್ಯಾಕ್ ಕಪ್ ಗೆದ್ದದ್ದೇ ಆರ್ ಸಿಬಿಗೆ ಲಾಟರಿ!
ಅಷ್ಟಕ್ಕೂ ಇಲ್ಲಿ ಬೆಂಗಳೂರು ತಂಡದ ವ್ಯಾಲ್ಯೂ ರೈಸ್ ಆಗೋದ್ರ ಹಿಂದೆ ಒಂದಷ್ಟು ರೀಸನ್ಸ್ ಕೂಡ ಇದೆ. ಆರ್‌ಸಿಬಿ ತಂಡವು ಬ್ಯಾಕ್-ಟು-ಬ್ಯಾಕ್ ಟೈಟಲ್ ವಿನ್ ಆಗೋ ಮೂಲಕ ಇತ್ತೀಚೆಗೆ ಐಪಿಎಲ್ನ ಮೋಸ್ಟ್ ಸಕ್ಸಸ್ಫುಲ್ ಟೀಂ ಹಾಗೂ ಡೇಂಜರಸ್ ಟೀಮ್ ಆಗಿ ಪ್ರಾಬಲ್ಯ ಸಾಧಿಸಿದೆ. ಹಾಗೇ ಈ ವರ್ಷದ ಆರಂಭದಲ್ಲಿ ಮಾಲೀಕತ್ವ ಕೂಡ ಬದಲಾವಣೆ ಆಗಿತ್ತು. ಆದಿತ್ಯ ಬಿರ್ಲಾ ಗ್ರೂಪ್, ಟೈಮ್ಸ್ ಗ್ರೂಪ್, ಬೋಲ್ಟ್ ವೆಂಚರ್ಸ್ ಮತ್ತು ಬ್ಲ್ಯಾಕ್‌ಸ್ಟೋನ್ ಒಳಗೊಂಡ ಒಕ್ಕೂಟವು ದಾಖಲೆಯ 1.78 ಬಿಲಿಯನ್ ಡಾಲರ್ ಮೊತ್ತಕ್ಕೆ ಆರ್‌ಸಿಬಿ ತಂಡವನ್ನು ಖರೀದಿ ಮಾಡಿವೆ ಇದು ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಒಪ್ಪಂದ. ಇದೆಲ್ಲದ್ರ ಜೊತೆಗೆ ಸೋಶಿಯಲ್ ಮೀಡಿಯಾ ಹಾಗೇ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಆರ್‌ಸಿಬಿಗೆ ಇರೋ ಫ್ಯಾನ್ ಬೇಸ್ ಕೂಡ ಬ್ರ್ಯಾಂಡ್ ಮೌಲ್ಯ ಹೆಚ್ಚಾಗೋಕೆ ಕಾರಣವಾಗಿದೆ. ಹೀಗಾಗಿ ಬೆಂಗಳೂರು ಟೀಂ ಈಗ ನಡೆದಿದ್ದೇ ದಾರಿಯಾಗಿದೆ.
ಆರ್ ಸಿಬಿಯೇ ಕಿಂಗ್!
ತಂಡ ಬ್ರಾಂಡ್ ಮೌಲ್ಯ
- ಬೆಂಗಳೂರು 312 ಮಿಲಿಯನ್ ಡಾಲರ್
- ಮುಂಬೈ 264 ಮಿಲಿಯನ್ ಡಾಲರ್
- ಕೋಲ್ಕತ್ತಾ 245 ಮಿಲಿಯನ್ ಡಾಲರ್
- ಚೆನ್ನೈ 244 ಮಿಲಿಯನ್ ಡಾಲರ್
- ಹೈದರಾಬಾದ್ 168 ಮಿಲಿಯನ್ ಡಾಲರ್
- ರಾಜಸ್ಥಾನ್ 161 ಮಿಲಿಯನ್ ಡಾಲರ್
- ಪಂಜಾಬ್ 158 ಮಿಲಿಯನ್ ಡಾಲರ್
- ಗುಜರಾತ್ 157 ಮಿಲಿಯನ್ ಡಾಲರ್
- ಡೆಲ್ಲಿ 156 ಮಿಲಿಯನ್ ಡಾಲರ್
- ಲಕ್ನೋ 122 ಮಿಲಿಯನ್ ಡಾಲರ್

ನೋಡಿರಿ

