ಟಿ20Iನಿಂದ ಅಭಿಷೇಕ್‌ಗೆ ಕೋಕ್? ರೋಹಿತ್ ಜೊತೆ ವೈಭವ್ ಓಪನರ್?
ಭಾರತಕ್ಕೆ ಹೊಸ ಆಲ್ರೌಂಡರ್ ಎಂಟ್ರಿ

ಟಿ20Iನಿಂದ ಅಭಿಷೇಕ್‌ಗೆ ಕೋಕ್? ರೋಹಿತ್ ಜೊತೆ ವೈಭವ್ ಓಪನರ್?ಭಾರತಕ್ಕೆ ಹೊಸ ಆಲ್ರೌಂಡರ್ ಎಂಟ್ರಿ

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು

ಶ್ರೀಲಂಕಾ ವಿರುದ್ಧದ ಎರಡು ಟೆಸ್ಟ್ ಸರಣಿಗೆ  ಬಿಸಿಸಿಐ 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿದೆ. ದೇಶೀಯ ಕ್ರಿಕೆಟ್‌ನಲ್ಲಿ ವರ್ಷಗಳ ಸ್ಥಿರ ಪ್ರದರ್ಶನದ ನಂತರ 33 ವರ್ಷದ ಸರನ್ಶ್ ಜೈನ್ ಮೊದಲ ಬಾರಿಗೆ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಸ್ನಾಯು ಸೆಳೆತದ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ವಾಷಿಂಗ್ಟನ್ ಸುಂದರ್ ಬದಲಿಗೆ ಜೈನ್ ಅವಕಾಶ ಪಡೆದಿದ್ದಾರೆ.

ಲಂಕಾ ಎದುರಿನ ಟೆಸ್ಟ್ ಸರಣಿಗೆ ಪ್ರಕಟವಾದ 15 ಆಟಗಾರರ ಭಾರತ ತಂಡದಲ್ಲಿ ಮೂವರು ಕನ್ನಡಿಗರು ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕರ್ನಾಟಕ ಮೂಲದ ಕೆ ಎಲ್ ರಾಹುಲ್, ಪ್ರಸಿದ್ದ್ ಕೃಷ್ಣ ಹಾಗೂ ದೇವದತ್ ಪಡಿಕ್ಕಲ್ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇದಷ್ಟೇ ಅಲ್ಲದೇ ಇದೀಗ ಈ ಮೂವರೂ ಆಟಗಾರರು ಆಡುವ ಹನ್ನೊಂದರ ಬಳಗದಲ್ಲೂ ಸ್ಥಾನ ಪಡೆಯುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ : ಲಂಕೆ ಗೆದ್ರಷ್ಟೇ WTC ಫೈನಲ್ – ಗಿಲ್ ಮುಂದೆ 9 ಪಂದ್ಯಗಳ ಟಾಸ್ಕ್!

ಕಳಪೆ ಫಾರ್ಮ್‌ನಲ್ಲಿರುವ ಅಭಿಷೇಕ್ ಶರ್ಮಾರನ್ನ ಟೀಂ ಇಂಡಿಯಾದಿಂದ ಕೋಕ್ ನೀಡಬೇಕೆಂದು ಭಾರತದ ಮಾಜಿ ಮುಖ್ಯ ಆಯ್ಕೆಗಾರ   ಕೃಷ್ಣಮಾಚಾರಿ  ಹೇಳಿದ್ದಾರೆ. ಅಭಿಷೇಕ್ ಶರ್ಮಾ ಅವರ ಆಟವನ್ನು ಎದುರಾಳಿ ತಂಡಗಳು ಈಗಾಗಲೇ ಅರ್ಥ ಮಾಡಿಕೊಂಡಿವೆ. ವಿಶ್ವಕಪ್‌ ಟೂರ್ನಿಯಿಂದಲೇ ಅವರ ವಿರುದ್ಧ ಸ್ಪಷ್ಟ ಯೋಜನೆ ರೂಪಿಸುತ್ತಿವೆ. ಈಗ ಅವರ ಬಗ್ಗೆ ಕಠಿಣ ನಿರ್ಧಾರ ತೆಗೆದುಕೊಳ್ಳುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ರೋಹಿತ್ ಶರ್ಮಾ ಜೊತೆ 15 ವರ್ಷದ ವೈಭವ್ ಸೂರ್ಯವಂಶಿ ಓಪನಿಂಗ್ ಮಾಡಲಿ ಎಂದು ಬಿಸಿಸಿಐ ಆಯ್ಕೆ ಸಮಿತಿಗೆ ಸಲಹೆ ನೀಡಲಾಗಿದೆ.  ವೈಭವ್ ಸೂರ್ಯವಂಶಿ ಅವರನ್ನು ತಕ್ಷಣವೇ ಭಾರತದ ಏಕದಿನ   ತಂಡಕ್ಕೆ ಆಯ್ಕೆ ಮಾಡಬೇಕು ಎಂದು ಮಾಜಿ ವಿಕೆಟ್ ಕೀಪರ್ ಫಾರೂಕ್ ಇಂಜಿನಿಯರ್ ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರಿಗೆ ಮನವಿ ಮಾಡಿದ್ದಾರೆ. 2027ರ ಏಕದಿನ ವಿಶ್ವಕಪ್ ದೃಷ್ಟಿಯಿಂದ ರೋಹಿತ್ ಶರ್ಮಾ ಅವರೊಂದಿಗೆ 15 ವರ್ಷದ ವೈಭವ್ ಸೂರ್ಯವಂಶಿ ಅವರನ್ನು ಓಪನರ್ ಆಗಿ ಕಣಕ್ಕಿಳಿಸಬೇಕು ಎಂದಿದ್ದಾರೆ.

ಕ್ರಿಕೆಟ್ ಆಟವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಜನಪ್ರಿಯಗೊಳಿಸಲು ಐಸಿಸಿ ಈಗ ಫಿಫಾ ವಿಶ್ವಕಪ್ ಮಾದರಿಯ ದೊಡ್ಡ ಹೆಜ್ಜೆಯನ್ನಿಟ್ಟಿದೆ.  ಪುರುಷರ ಟಿ20 ವಿಶ್ವಕಪ್ ಪಂದ್ಯಾವಳಿಯನ್ನು 24 ತಂಡಗಳಿಗೆ ವಿಸ್ತರಿಸಲು ಗಂಭೀರ ಚಿಂತನೆ ನಡೆಸುತ್ತಿದೆ. ಹಾಗೇ 2024ರ ನಂತ್ರ ಬರೋಬ್ಬರಿ 32 ತಂಡಗಳ ಬೃಹತ್ ಟೂರ್ನಿಯನ್ನಾಗಿ ಮಾಡುವ ದೀರ್ಘಾವಧಿ ಯೋಜನೆಯನ್ನು ಹೊಂದಿದೆ.

2027ರ ಏಕದಿನ ವಿಶ್ವಕಪ್ ಆಡುವ ಗುರಿ ಹೊಂದಿರುವ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ಮಾಜಿ ಕ್ರಿಕೆಟಿಗ ದೀಪ್‌ದಾಸ್ ಗುಪ್ತಾ ಎಚ್ಚರಿಕೆ ನೀಡಿದ್ದಾರೆ. ಸರಣಿಯ ಆರಂಭದಿಂದಲೇ ಉತ್ತಮ ಪ್ರದರ್ಶನ ನೀಡಬೇಕು, ಲಯ ಕಂಡುಕೊಳ್ಳಲು ಒಂದೆರಡು ಪಂದ್ಯಗಳನ್ನು ವ್ಯರ್ಥ ಮಾಡುವಂತಿಲ್ಲ. ಎಲ್ಲರಿಂದಲೂ ಉತ್ತಮ ಪ್ರದರ್ಶನ ಮೂಡಿಬರುವಂತಹ ವಾತಾವರಣವನ್ನು ಸೃಷ್ಟಿಸಬೇಕು ಎಂದು ದೀಪ್‌ದಾಸ್ ಗುಪ್ತಾ ಹೇಳಿದ್ದಾರೆ.

ಸುಮಾರು ಒಂದು ವರ್ಷದ ನಂತರ ಬಿಸಿಸಿಐ-ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಸಂಬಂಧಗಳು ಸುಧಾರಿಸಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದಿಂದ ಉಂಟಾಗಿದ್ದ ಬಿಕ್ಕಟ್ಟು ಶಮನಗೊಂಡಿದ್ದು, ಸೆಪ್ಟೆಂಬರ್‌ನಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳುವ ಸಾಧ್ಯತೆಯಿದೆ. ಭಾರತ ಸರ್ಕಾರದಿಂದ ಹಸಿರು ನಿಶಾನೆ ಸಿಕ್ಕರೆ, ಮೂರು ಟಿ20 ಹಾಗೂ ಮೂರು ಏಕದಿನ ಪಂದ್ಯಗಳ ಸರಣಿ ನಡೆಯಲಿದೆ.

ಬಾಲಿವುಡ್ ನಟಿ ಮೃಣಾಲ್ ಠಾಕೂರ್  ಯಶಸ್ವಿ ಜೈಸ್ವಾಲ್  ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಅನ್ನೋ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಿದೆ. ಮೃಣಾಲ್ ಮುಂಬೈನ ಅತ್ಯಂತ ಪ್ರಸಿದ್ಧ ಕೆಫೆಯಲ್ಲಿ ಕಾಣಿಸಿಕೊಂಡ ಸ್ವಲ್ಪ ಸಮಯದ ನಂತರ ಯಶಸ್ವಿ ಜೈಸ್ವಾಲ್ ಅದೇ ಕೆಫೆಯಿಂದ ಹೊರಬರುತ್ತಿರುವುದು ಕಂಡುಬಂದಿತು. ಒಂದೇ ಕೆಫೆಯೊಂದರಲ್ಲಿ ಕಾಣಿಸಿಕೊಂಡ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ  ವೈರಲ್ ಆಗುತ್ತಿದ್ದು, ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳನ್ನು ಹುಟ್ಟುಹಾಕಿದೆ.

ಭಾರತದ ವೇಗಿ ಅರ್ಶದೀಪ್ ಸಿಂಗ್ ಇದೀಗ ಬಾಲಿವುಡ್ ನಟಿ ಸಮ್ರೀನ್ ಕೌರ್ ಜೊತೆಗಿನ ಚಿತ್ರಗಳನ್ನು  ಹಂಚಿಕೊಳ್ಳುವ ಮೂಲಕ ತಮ್ಮ ಫ್ಯಾನ್ಸ್‌ಗೆ ಶಾಕ್ ಕೊಟ್ಟಿದ್ದಾರೆ. ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅರ್ಶದೀಪ್ ಅವರು ಸಮ್ರೀನ್ ಜೊತೆಗಿನ ಫೋಟೊಗಳನ್ನು ಪೋಸ್ಟ್ ಮಾಡಿ, ‘ನನ್ನ ವ್ಯಕ್ತಿ’ ಎಂಬ ಶೀರ್ಷಿಕೆಯೊಂದಿಗೆ ಹೃದಯದ ಎಮೋಜಿಯನ್ನು ಹಾಕಿದ್ದಾರೆ. ಇಬ್ಬರೂ ಅಧಿಕೃತವಾಗಿ ಏನನ್ನೂ ಹೇಳದಿದ್ದರೂ, ಅವರ ಕೆಮಿಸ್ಟ್ರಿ ಮತ್ತೊಮ್ಮೆ ಅಭಿಮಾನಿಗಳಲ್ಲಿ ಅನುಮಾನ ಹುಟ್ಟಿಸಿದೆ.

ಪಾಕಿಸ್ತಾನ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ನ ವೇಗಿ ಜಸ್ಟಿನ್ ಗ್ರೇವ್ಸ್ ಐತಿಹಾಸಿಕ ಬೌಲಿಂಗ್ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಪಂದ್ಯದಲ್ಲಿ ಮೂರನೇ ದಿನ ಪಾಕಿಸ್ತಾನದ ಮೊದಲ ಇನಿಂಗ್ಸ್‌ಗೆ ಭಾರೀ ಹೊಡೆತ ನೀಡಿದ್ದಾರೆ. ಗ್ರೇವ್ಸ್ ತಮ್ಮ ಸ್ಪೆಲ್‌ನ ಕೊನೆಯ ಐದು ಓವರ್‌ಗಳಲ್ಲಿ ಒಂದೇ ಒಂದು ರನ್ ನೀಡದೆ ಐದು ಮೇಡನ್ ಓವರ್‌ಗಳೊಂದಿಗೆ ಸತತ ಐದು ವಿಕೆಟ್ ಕಬಳಿಸಿ ಅಪರೂಪದ ಸಾಧನೆ ಮಾಡಿದ್ದಾರೆ.

Kishor KV

Leave a Reply

Your email address will not be published. Required fields are marked *