ಟೆಸ್ಟ್ ತಂಡಕ್ಕೆ KL ಉಪನಾಯಕ- ಜಡ್ಡು ಕಂಬ್ಯಾಕ್, ರಾಣಾ OUT
ಲಂಕಾ ದಹನಕ್ಕೆ ಭಾರತ ರೆಡಿ

ಟೆಸ್ಟ್ ತಂಡಕ್ಕೆ KL ಉಪನಾಯಕ- ಜಡ್ಡು ಕಂಬ್ಯಾಕ್, ರಾಣಾ OUTಲಂಕಾ ದಹನಕ್ಕೆ ಭಾರತ ರೆಡಿ

ಬರೋಬ್ಬರಿ 9 ವರ್ಷದ ನಂತ್ರ ಟೀಮ್ ಇಂಡಿಯಾ ಲಂಕಾದಲ್ಲಿ ರೆಡ್ ಬಾಲ್ ಕ್ರಿಕೆಟ್ ಆಡಲು ಸಜ್ಜಾಗುತ್ತಿದ್ದು, ಲಂಕಾ ದಹನಕ್ಕೆ ಬಲಿಷ್ಠ ಟೀಂ ಅನೌನ್ಸ್ ಆಗಿದೆ. ರಾಣಾ, ರೆಡ್ಡಿ, ಸುಂದರ್ ಟೀಂ ನಿಂದ ಔಟ್ ಆದ್ರೆ, ರವೀಂದ್ರ ಜಡೇಜಾ ಕಂಬ್ಯಾಕ್ ಮಾಡಿದ್ದಾರೆ.

ಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ ಆಗಿದೆ.   ಆಗಸ್ಟ್ 15 ರಿಂದ 27 ರವರೆಗೆ ಗಾಲೆ ಮತ್ತು ಕೊಲಂಬೊದಲ್ಲಿ ಪಂದ್ಯಗಳು ನಡೆಯಲಿದ್ದು, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್  ಪಾಯಿಂಟ್ಸ್ ಪಟ್ಟಿಯಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಭಾರತಕ್ಕೆ ಈ ಸರಣಿಯು ಅತ್ಯಂತ ಪ್ರಮುಖವಾಗಿದೆ. ಈ ದೃಷ್ಟಿಯಿಂದ ಬಲಿಷ್ಠ ಪಡೆಯನ್ನ ಟೀಂ ಇಂಡಿಯಾ ಕಟ್ಟಿದೆ.

 ಹರ್ಷಿತ್ ರಾಣಾ ಆಡಲ್ಲ ಲಂಕಾ ಟೆಸ್ಟ್‌

ಇಂಗ್ಲೆಂಡ್ ಪ್ರವಾಸದ ವೇಳೆ ಗಂಭೀರವಾದ ಸ್ನಾಯು ಸೆಳೆತಕ್ಕೆ ಒಳಗಾಗಿರುವ ಹರ್ಷಿತ್ ರಾಣಾ, ಶ್ರೀಲಂಕಾ ವಿರುದ್ಧದ ಸಂಪೂರ್ಣ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ.

ನಿತೀಶ್ ಕುಮಾರ್ ರೆಡ್ಡಿಗೆ ಗಾಯದ ಸಮಸ್ಯೆ  

ಯುವ ಆಲ್​ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಕೂಡ ಹ್ಯಾಮ್​ಸ್ಟ್ರಿಂಗ್ ಗಾಯದ ಸಮಸ್ಯೆಯಿಂದ ಸಂಪೂರ್ಣವಾಗಿ ಗುಣಮುಖರಾಗದ ಕಾರಣ ಆಯ್ಕೆಗೆ ಲಭ್ಯರಿಲ್ಲ ಎಂದು ಬಿಸಿಸಿಐ ಮೂಲಗಳು ಖಚಿತಪಡಿಸಿವೆ.

ಮೊದಲ ಪಂದ್ಯಕ್ಕಿಲ್ಲ ವಾಷಿಂಗ್ಟನ್ ಸುಂದರ್ 

 ಇಂಗ್ಲೆಂಡ್ ಪ್ರವಾಸದಲ್ಲಿ ಕಾಲಿನ ಗಾಯಕ್ಕೆ ಒಳಗಾಗಿದ್ದ ಸುಂದರ್, ಆಗಸ್ಟ್ 15 ರಂದು ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದಿಂದ ಅಧಿಕೃತವಾಗಿ ಹೊರಬಿದ್ದಿದ್ದಾರೆ. ಎರಡನೇ ಟೆಸ್ಟ್‌ಗೆ ಅವರು ಮರಳುತ್ತಾರೆಯೇ ಎಂಬುದು ಅವರ ಆರೋಗ್ಯದ ಮೇಲೆ ನಿರ್ಧರಿತವಾಗಲಿದೆ.

ಬುಮ್ರಾಗೆ ಸಿಗುತ್ತಾ ಫಿಟ್‌ನೆಸ್‌ ಸರ್ಟಿಫಿಕೇಟ್?

ಇನ್ನು ಬುಮ್ರಾ ಅವರು ಜುಲೈ 30ರವರೆಗೆ ವಿಶ್ರಾಂತಿ ಪಡೆಯಲಿದ್ದು, ನಂತರ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಫಿಟ್‌ನೆಸ್ ಪರೀಕ್ಷೆಗೆ ಹಾಜರಾಗಲಿದ್ದಾರೆ.  ಇಲ್ಲಿ ಫಿಟ್‌ನೆಸ್ ಸರ್ಟಿಫಿಕೇಟ್ ಸಿಕ್ಕರೇ ಪ್ಲೇಯಿಂಗ್ 11ನಲ್ಲಿ ಬುಮ್ರಾ ಆಡಲಿದ್ದಾರೆ.

ಲಂಕಾ ಸರಣಿಗೆ ಟೀಂ ಇಂಡಿಯಾ ಪ್ರಕಟ 

ಶುಭಮನ್ ಗಿಲ್ . ನಾಯಕ

ಕೆ.ಎಲ್ ರಾಹುಲ್, ಉಪನಾಯಕ

ಸಾಯಿ ಸುದರ್ಶನ್

ಜಸ್ಪ್ರೀತ್ ಬುಮ್ರಾ

ರವೀಂದ್ರ ಜಡೇಜಾ

ಕುಲದೀಪ್ ಯಾದವ್

ಮಾನವ್ ಸುತಾರ್

ರಿಷಭ್ ಪಂತ್

ಮೊಹಮ್ಮದ್ ಸಿರಾಜ್

ಪ್ರಸಿದ್ಧ್ ಕೃಷ್ಣ

ಗುರ್ನೂರ್ ಬ್ರಾರ್

ದೇವದತ್ ಪಡಿಕ್ಕಲ್

ಯಶಸ್ವಿ ಜೈಸ್ವಾಲ್

ಧ್ರುವ್ ಜುರೆಲ್

ಸರನ್ಶ್ ಜೈನ್

ತಂಡವನ್ನು ಶುಭಮನ್ ಗಿಲ್ ಮುನ್ನಡೆಸಲಿದ್ದು, ಕನ್ನಡಿಗ ಕೆ.ಎಲ್ ರಾಹುಲ್ ಉಪನಾಯಕನಾಗಿ ಮುಂದುವರೆದಿದ್ದಾರೆ. ಪ್ರಮುಖ ಆಟಗಾರರಾದ ಸಾಯಿ ಸುದರ್ಶನ್ ಮತ್ತು ಜಸ್ಪ್ರೀತ್  ಇಬ್ಬರೂ ಆಟಗಾರರನ್ನು ತಂಡದಲ್ಲಿ ಆಯ್ಕೆ ಮಾಡಲಾಗಿದೆ, ಆದರೆ ಯಾರು ಆಡ್ತಾರೆ ಅನ್ನೋದು BCCI ಸೆಂಟರ್ ಆಫ್ ಎಕ್ಸಲೆನ್ಸ್  ನಿಂದ ಫಿಟ್‌ನೆಸ್ ಕ್ಲಿಯರೆನ್ಸ್‌ಗೆ ಒಳಪಟ್ಟಿರುತ್ತದೆ. ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ ತಂಡಕ್ಕೆ ಮರಳಿದ್ದಾರೆ.   ಸ್ಪಿನ್-ಬೌಲಿಂಗ್ ಆಯ್ಕೆಗಳಾಗಿ ರವೀಂದ್ರ ಜಡೇಜಾ, ಕುಲದೀಪ್ ಯಾದವ್ ಮತ್ತು ಮಾನವ್ ಸುತಾರ್ ಕಾಣಿಸಿಕೊಂಡಿದ್ದಾರೆ.  ತಂಡದಲ್ಲಿ ರಿಷಭ್ ಪಂತ್  ವಿಕೆಟ್ ಕೀಪರ್‌ ಆಗಿ ಆಯ್ಕೆ ಆಗಿದ್ದಾರೆ. ವೇಗಿ ಗಳಾಗಿ ದಾಳಿಯಲ್ಲಿ ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ  ಇದ್ದಾರೆ. ಭಾರತ ಪರ ಚೊಚ್ಚಲ ಪ್ರವೇಶದಿಂದಲೂ ಉತ್ತಮ ಪ್ರದರ್ಶನ ನೀಡುತ್ತಿರುವ ಗುರ್ನೂರ್ ಬ್ರಾರ್ ಮತ್ತೊಮ್ಮೆ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹಾಗೇ ದೇವದತ್ ಪಡಿಕ್ಕಲ್ , ಯಶಸ್ವಿ ಜೈಸ್ವಾಲ್ ಧ್ರುವ್ ಜುರೆಲ್, ಸರನ್ಶ್ ಜೈನ್ ಒಳಗಂಡ ತಂಡವನ್ನ ಪ್ರಕಟ ಮಾಡಲಾಗಿದೆ.

Kishor KV

Leave a Reply

Your email address will not be published. Required fields are marked *