ಮೋದಿ ವಿಡಿಯೋ ಡಿಲೀಟ್ ಮಾಡಿದ ಫೇಸ್‌ಬುಕ್ – ಮೆಟಾ ಅಧಿಕಾರಿಗಳಿಗೆ ಸಮನ್ಸ್ ಜಾರಿ

ಮೋದಿ ವಿಡಿಯೋ ಡಿಲೀಟ್ ಮಾಡಿದ ಫೇಸ್‌ಬುಕ್ – ಮೆಟಾ ಅಧಿಕಾರಿಗಳಿಗೆ ಸಮನ್ಸ್ ಜಾರಿ

ಮೋದಿ ವಿಡಿಯೋ ಡಿಲೀಟ್ ಮಾಡಿ ಫೇಸ್‌ಬುಕ್ ಇಕ್ಕಟ್ಟಿಗೆ ಸಿಲುಕಿಕೊಂಡಿದೆ. ದೇಶದಲ್ಲಿ ನೀಟ್  ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲು ಕೇಂದ್ರ ಸರ್ಕಾರ ತಂದಿರುವ ಕಠಿಣ ಕಾನೂನು ಮತ್ತು ಕೈಗೊಂಡಿರುವ ಕ್ರಮಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದ ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ಭಾರತದಲ್ಲಿ ವೀಕ್ಷಿಸದಂತೆ ಫೇಸ್‌ಬುಕ್ ತಡೆಹಿಡಿದಿತ್ತು. ಆದ್ರೆ ಈಗ ಅದ್ದಕ್ಕೆ ಪೇಸ್‌ಬುಕ್ ಕ್ಷಮೆ ಕೇಳಿದೆ.

ವಿಡಿಯೋ ಡಿಲೀಟ್ ಮಾಡಿದ್ದಕ್ಕೆ ಮೆಟಾ ಸಂಸ್ಥೆಯು ಕೇಂದ್ರ ಸರ್ಕಾರಕ್ಕೆ ಕ್ಷಮೆಯಾಚಿಸಿದೆ. ತಾಂತ್ರಿಕ ದೋಷದಿಂದಾಗಿ ವೀಡಿಯೊವನ್ನು ತಪ್ಪಾಗಿ ತೆಗೆದುಹಾಕಲಾಗಿತ್ತು. ತಕ್ಷಣವೇ ದೋಷವನ್ನು ಸರಿಪಡಿಸಿ ವೀಡಿಯೊವನ್ನು ಮತ್ತೆ ಮರುಸ್ಥಾಪಿಸಲಾಗಿದೆ ಎಂದು ಮೆಟಾ ವಕ್ತಾರರು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಕಾಮನ್ ವೆಲ್ತ್‌ನಲ್ಲಿ ಒಂದೇ ದಿನ ಭಾರತಕ್ಕೆ 6 ಪದಕ – ಛಲ ಬಿಡದೆ ಪದಕ ಗೆದ್ದ ಕನ್ನಡತಿ

ವಿದೇಶಿ ಸಾಮಾಜಿಕ ಜಾಲತಾಣ ವೇದಿಕೆಯೊಂದು ಭಾರತದ ಪ್ರಧಾನಿಯವರ ಪೋಸ್ಟ್ ನಿರ್ಬಂಧಿಸಿರುವುದನ್ನು ಕೇಂದ್ರ ಸರ್ಕಾರ ತೀವ್ರವಾಗಿ ಪರಿಗಣಿಸಿದೆ. ಮೆಟಾ ನೀಡಿರುವ ವಿವರಣೆಯನ್ನು ಪರಿಶೀಲಿಸುತ್ತಿದ್ದು, ಶೀಘ್ರದಲ್ಲೇ ಮೆಟಾ ಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸಮನ್ಸ್ ಜಾರಿಗೊಳಿಸುವ ಸಾಧ್ಯತೆಯಿದೆ.

ಜುಲೈ 23 ರಂದು ಅಪ್‌ಲೋಡ್ ಮಾಡಲಾಗಿದ್ದ ಈ ವೀಡಿಯೊದಲ್ಲಿ, ಜಿರಳೆ ಜನತಾ ಪಕ್ಷ ಆಯೋಜಿಸಿದ್ದ ವಿದ್ಯಾರ್ಥಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಜೆನ್​ ಝಿ ಯುವಜನತೆಗೆ ನೀಡಿದ ಮೊದಲ ಸಂದೇಶವಿತ್ತು. ಇದರಲ್ಲಿ ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲು ಕಠಿಣ ಕಾನೂನು ತರುವುದಾಗಿ ಅವರು ಘೋಷಿಸಿದ್ದರು. ವೀಡಿಯೊವನ್ನು ತಡೆಹಿಡಿಯುವ ಮೊದಲು ಅದು ಈಗಾಗಲೇ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿ ಭಾರಿ ಸದ್ದು ಮಾಡಿತ್ತು. ಮೆಟಾ ನಿರ್ಬಂಧವನ್ನು ತೆರವುಗೊಳಿಸಿದ ನಂತರ ಕ್ಲಿಪ್ ಮತ್ತೆ ಸಾರ್ವಜನಿಕರಿಗೆ ಲಭ್ಯವಾಗಿದೆ.

Kishor KV

Leave a Reply

Your email address will not be published. Required fields are marked *