ಕಾಮನ್ ವೆಲ್ತ್‌ನಲ್ಲಿ ಒಂದೇ ದಿನ ಭಾರತಕ್ಕೆ 6 ಪದಕ – ಛಲ ಬಿಡದೆ ಪದಕ ಗೆದ್ದ ಕನ್ನಡತಿ

ಕಾಮನ್ ವೆಲ್ತ್‌ನಲ್ಲಿ ಒಂದೇ ದಿನ ಭಾರತಕ್ಕೆ  6 ಪದಕ – ಛಲ ಬಿಡದೆ ಪದಕ ಗೆದ್ದ ಕನ್ನಡತಿ

ಕಾಮನ್ವೆಲ್ತ್ ಗೇಮ್ಸ್ 2026 ರಲ್ಲಿ ಭಾರತ ತನ್ನ ಖದರ್ ತೋರಿಸುತ್ತಿದೆ. ಭಾರತ ನಿನ್ನೆ ( ಸೋಮವಾರ ) ಒಂದೇ ದಿನ ಒಂದಲ್ಲ ಎರಡಲ್ಲ ಒಟ್ಟು ಆರು ಪದಕಗಳನ್ನು ಗೆದ್ದಿದೆ. ಹಾಗಿದ್ರೆ ಯಾರೆಲ್ಲಾ ಪದಕ ಗೆದ್ದಿದ್ದಾರೆ ಅನ್ನೋದ್ದನ್ನ ನೋಡೋಣ.

ಇದನ್ನೂ ಓದಿ:  ಭಾರತಕ್ಕೆ ಮತ್ತೊಂದು ಬೆಳ್ಳಿ ಪದಕ – ವೇಟ್‌ಲಿಫ್ಟರ್ ವಲ್ಲೂರಿ ಅಜಯ ಬಾಬು ಅದ್ಭುತ ಸಾಧನೆ

ಶರ್ಮಿಳಾ ಧನ್ಮರ್ –  ಚಿನ್ನ

ಮಹಿಳೆಯರ F57 ಶಾಟ್‌ಪುಟ್‌ ಸ್ಪರ್ಧೆಯಲ್ಲಿ ಶರ್ಮಿಳಾ ಧನ್ಮರ್ ಅವರು 9.81 ಮೀಟರ್ ಎಸೆತದೊಂದಿಗೆ ಚಿನ್ನದ ಪದಕ  ಗೆದ್ದಿದ್ದಾರೆ. ಕಾಮನ್ವೆಲ್ತ್ ಗೇಮ್ಸ್ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ  ಈ ಮೂಲಕ ಭಾರತ ಅನುಭವಿಸುತ್ತಿದ್ದ 20 ವರ್ಷಗಳ ಪದಕದ ಕಾಯುವಿಕೆಗೆ ಅಂತ್ಯ ಹಾಡಿದರು.

ಶಿಲ್ಪಾ ಶೈಲಾ – ಕಂಚಿನ ಪದಕ

ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕಿನ ಕಂಚುಗಾರ ಕೊಪ್ಪಲಿನ ಶೈಲ-ಶಾಂತಾ ಎಂಬ ರೈತ ದಂಪತಿಯ ಪುತ್ರಿ ಶಿಲ್ಪಾ ಶೈಲಾ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಮಿಂಚಿದ್ದಾರೆ. ಶಿಲ್ಪಾ ಅವರು ಒಂದು ವರ್ಷದ ಹಿಂದೆಯಷ್ಟೆ ಶಾಟ್‌ಪುಟ್‌ ಅಭ್ಯಾಸ ಆರಂಭಿಸಿದ್ದರು. ಕಾಮನ್‌ವೆಲ್ತ್‌ ಕ್ರೀಡಾಕೂಡದಲ್ಲಿ ಮೊದಲ ಬಾರಿ ಪಾಲ್ಗೋಂಡು ಕಂಚಿನ ಪದಕ್ಕೆ ಗೆದಿದ್ದಾರೆ.

ಶಿಲ್ಪಾಗೆ ನಾಲ್ಕನೇ ವಯಸ್ಸಿನಲ್ಲಿ ಅಪಘಾತ  ಸಂಭವಿಸಿತ್ತು ಕಾಲು ಕಳೆದುಕೊಂಡು ಛಲ ಬಿಡದೆ ಪದವಿ ಮುಗಿಸಿ ಮೈಸೂರಿನ ಶಿಕ್ಷಕಿಯಾಗಿ ಕೆಲಸ ಆರಂಭಿಸಿದರು 2019ರಲ್ಲಿ 29 ವಯಸ್ಸಿನಲ್ಲಿ ಕ್ರೀಡೆಯತ್ತ ಮುಖಮಾಡಿದರು. ಆರಂಭದಲ್ಲಿ ಸಿಟಿಂಗ್‌ ವಾಲಿಬಾಲ್ ನಲ್ಲಿ ಅಭ್ಯಸಿಸಿ ಕೋಚ್ ರಾಘವೇಂದ್ರ ಸಲಹೆಯಂತೆ ನಂತರ ಅಥ್ಲೆಟಿಕ್ಸ್ ನತ್ತ ಮುಖ ಮಾಡಿದರು. ಸದ್ಯ ಶಿಕ್ಷಕ ವೃತ್ತಿ ತೊರೆದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಎಸ್‌.ಡಿ ಕ್ರೀಡಾಂಗಣದಲ್ಲಿ ಎಸ್‌.ಡಿ ಈಶನ್‌ ಅವರಿಂದ ಶಾಟ್‌ಪುಟ್‌ ತರಭೇತಿ ಪಡೆದು  ಸ್ಕಾಟ್ಲಂಟ್‌ನ ಗ್ಲಾಸ್ಕೋದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಕ್ರೀಡಾಕೂಡದಲ್ಲಿ ಮೈಸೂರಿನ ಬೆಡಗಿ ಉತ್ತಮ ಪ್ರದರ್ಶನ ನೀಡಿ ಕಂಚಿನ ಪದಕಕ್ಕೆ ಮುತ್ತಿಟ್ಟು ಕರ್ನಾಟಕದ ಪತಾಕೆಯನ್ನ ಹಾರಿಸಿದ್ದಾರೆ.

ಸರ್ವೇಶ್ ಕುಶಾರೆ – ಬೆಳ್ಳಿ ಪದಕ

ಪುರುಷರ ಹೈಜಂಪ್‌ನಲ್ಲಿ ಸರ್ವೇಶ್ ಕುಶಾರೆ ಅವರು ಬೆಳ್ಳಿ ಪದಕ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಎನಿಸಿಕೊಂಡರು. ರಾಷ್ಟ್ರೀಯ ದಾಖಲೆ ಹೊಂದಿರುವ ಅವರು 2.25 ಮೀಟರ್ ಎತ್ತರ ಜಿಗಿದರು. ಜಮೈಕಾದ ರೊಮೈನ್ ಬೆಕ್ಕೋರ್ಡ್ ಅವರೊಂದಿಗೆ ಸಮಬಲ ಸಾಧಿಸಿದರೂ, ಕೌಂಟ್‌ಬ್ಯಾಕ್ ನಿಯಮದ ಆಧಾರದಲ್ಲಿ ಕೂದಲೆಳೆಯ ಅಂತರದಲ್ಲಿ ಚಿನ್ನದ ಪದಕವನ್ನು ಕಳೆದುಕೊಂಡರು.

ವಲ್ಲೂರಿ ಅಜಯ್ ಬಾಬು – ಬೆಳ್ಳಿ ಪದಕ 

ರೋಚಕ ಸ್ಪರ್ಧೆಯಲ್ಲಿ ಮಲೇಷ್ಯಾದ ಎರಿ ಹಿದಾಯತ್ ಮುಹಮ್ಮದ್ ಅವರಿಗಿಂತ ಕೇವಲ ಒಂದು ಕಿಲೋಗ್ರಾಂ ಹಿನ್ನಡೆ ಅನುಭವಿಸಿದ ವಲ್ಲೂರಿ ಅಜಯ್ ಬಾಬು, ಪುರುಷರ 79 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದರು.

ಜ್ಞಾನೇಶ್ವರಿ ಯಾದವ್‌ – ಬೆಳ್ಳಿ ಪದಕ

ಜ್ಞಾನೇಶ್ವರಿ ಯಾದವ್‌ ಅವರು ಮಹಿಳೆಯರ 53 ಕೆಜಿ ವಿಭಾಗದಲ್ಲಿ ತಮ್ಮ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನದೊಂದಿಗೆ ಬೆಳ್ಳಿ ಪದಕವನ್ನು ಗೆದ್ದರು.

ಬಿಂದ್ಯಾರಾಣಿ ದೇವಿ – ಕಂಚಿನ ಪದಕ

ಬಿಂದ್ಯಾರಾಣಿ ದೇವಿ 58 ಕೆಜಿ ವಿಭಾಗದಲ್ಲಿ ಕಂಚಿನ ಪದಕವನ್ನು ಸೇರಿಸುವ ಮೂಲಕ ಭಾರತದ ವೇಟ್‌ಲಿಫ್ಟಿಂಗ್‌ ಪದಕಗಳ ಸಂಖ್ಯೆಯನ್ನು ಆರಕ್ಕೆ ಏರಿಸಿದರು.

ಭಾರತ ಈವರೆಗೆ 2 ಚಿನ್ನ, 5 ಬೆಳ್ಳಿ ಮತ್ತು 3 ಕಂಚಿನ ಪದಕಗಳೊಂದಿಗೆ ಒಟ್ಟು 10 ಪದಕಗಳನ್ನು ಗೆದ್ದು 8ನೇ ಸ್ಥಾನದಲ್ಲಿದೆ.

Kishor KV

Leave a Reply

Your email address will not be published. Required fields are marked *