ಸಂಜುಗೆ ಮುಳ್ಳಾದ್ರಾ ಸೂರ್ಯವಂಶಿ? ಸ್ಯಾಮ್ಸನ್‌ಗಿಲ್ಲದ ನ್ಯಾಯ ಅಭಿಗ್ಯಾಕೆ?
ಟೀಂ INDಗೆ ಓಪನರ್ಸ್ ಚಾಲೆಂಜ್

ಸಂಜುಗೆ ಮುಳ್ಳಾದ್ರಾ ಸೂರ್ಯವಂಶಿ? ಸ್ಯಾಮ್ಸನ್‌ಗಿಲ್ಲದ ನ್ಯಾಯ ಅಭಿಗ್ಯಾಕೆ?ಟೀಂ INDಗೆ ಓಪನರ್ಸ್ ಚಾಲೆಂಜ್

ಟೀಂ ಇಂಡಿಯಾ ಟಿ20ಐ ಟೀಂಗೆ ಬಿಗ್ ಚಾಲೆಂಜ್ ಅಂದ್ರೆ ಓಪನರ್ಸ್‌ಗಳದ್ದು. ಯಾಕಂದ್ರೆ ಟಿ-20 ಕ್ರಿಕೆಟ್ ಫಾರ್ಮೆಟ್​ನಲ್ಲಿ ಬ್ಯಾಟರ್​ಗಳದ್ದೇ ಅಬ್ಬರ ಜೋರಾಗಿದೆ. ನನಗೂ ಚಾನ್ಸ್ ಕೂಡಿ ನನಗೂ ಚಾನ್ಸ್ ಕೊಡಿ ಅಂತ ಕೇಳುವವರೇ ಹೆಚ್ಚು. ವೈಭವ್ ಸೂರ್ಯವಂಶಿ ಟಿ20ಗೆ ಎಂಟ್ರಿಕೊಟ್ಟ ಮೇಲೆ ಯಾರಿಗೆ ಚಾನ್ಸ್ ಕೊಡಬೇಕು ಯಾರನ್ನ ಬಿಡಬೇಕು ಅನ್ನೋದು ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್‌ಗೆ ಗೊತ್ತಾಗುತ್ತಿಲ್ಲ.   ಸಂಜು ಸ್ಯಾಮ್ಸನ್ Vs ವೈಭವ್ ಸೂರ್ಯವಂಶಿ Vsಅಭಿಷೇಕ್ ಶರ್ಮಾ Vs ಇಶಾನ್ ಕಿಶನ್ ಎನ್ನುವಂತಾಗಿದೆ. ಅದರಲ್ಲೂ ಇಲ್ಲಿ ಟಿ20 ವಿಶ್ವಕಪ್ ಹೀರೋ ಸಂಜುಗೆ ಹೆಚ್ಚು ಅನ್ಯಾಯ ಆಗ್ತಿದೆ.

ಸಂಜುಗೆ ಮುಳ್ಳಾದ್ರಾ ಸೂರ್ಯವಂಶಿ?

ಹೌದು ಯಾವಾಗ ವೈಭವ್ ಸೂರ್ಯವಂಶಿ ಟಿ20ಗೆ ಎಂಟ್ರಯಾದ್ರೂ ಆಗಿಂದ ಸಂಜುಗೆ ಬ್ಯಾಡ್ ಲಕ್ ಶುರುವಾಯ್ತು. ವೈಭವ್ ಇಂಗ್ಲೆಂಡ್ ವಿರುದ್ಧ ಟಿ20ಗೆ ಪದಾರ್ಪಣೆ ಮಾಡಿದ್ರು. ಸಂಜು ಪ್ಲೇಸ್‌ಗೆ ವೈಭವ್‌ಗೆ ಚಾನ್ಸ್ ನೀಡಲಾಯ್ತು. ಆದ್ರೆ ವೈಭವ್‌ ಆಡಿಲ್ಲ ಅಂತ ಮತ್ತೆ ಸಂಜುಗೆ ಆ ಸ್ಥಾನ ನೀಡಲಾಯ್ತು. ಆದ್ರೆ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಕೊಟ್ಟ ಅವಕಾಶವನ್ನ ಬಳಸಿಕೊಂಡ ಸೂರ್ಯವಂಶಿ ತನ್ನ ಖದರ್ ತೋರಿಸಿದ್ದಾರೆ. ಎರಡು ಆಫ್ ಸೆಂಚುರಿ ಸಿಡಿಸಿದ್ದಾರೆ. ಸಂಜು ಇಂಗ್ಲೆಂಡ್ ವಿರುದ್ಧ, ಐರ್ಲ್ಯಾಂಡ್ ವಿರುದ್ಧ ಆಡಿಲ್ಲ ಅಂತ ಅವರನ್ನ ಕೈ ಬಿಡಲಾಗಿದೆ. ಹೀಗಾಗಿ ಸಂಜು ಇದು ದೊಡ್ಡ ಹಿನ್ನಡೆಯಾಗಿದೆ.

ಸೂರ್ಯವಂಶಿ ಜಿಂಬಾಬ್ವೆ ವಿರುದ್ಧ ಮೂರು ಪಂದ್ಯಗಳಲ್ಲಿ 50.33 ಸರಾಸರಿ ಮತ್ತು 196.10 ಸ್ಟ್ರೈಕ್-ರೇಟ್‌ನೊಂದಿಗೆ 151 ರನ್ ಗಳಿಸುವ ಮೂಲಕ ಸರಣಿಯನ್ನು ಅಗ್ರ ರನ್-ಗೆಟರ್ ಆಗಿದ್ದಾರೆ. ಈ ಮೂಲಕ ಸೂರ್ಯವಂಶಿ ನಾನು ಕೇವಲ ಐಪಿಎಲ್ ಮಾತ್ರವಲ್ಲ ಅಂತರರಾಷ್ಟ್ರೀಯ  T20I ತಂಡದಲ್ಲಿ ಆಡಬಲ್ಲೇ ಅಂತ ತಮ್ಮ ಸ್ಥಾನವನ್ನು ದೃಢಪಡಿಸಿಕೊಂಡಿದ್ದಾರೆ. ಸೂರ್ಯವಂಶಿ ಸ್ಥಾನ ಒಂದು ರೀತಿ ಭದ್ರವಾಗಿದೆ ಅಂತಲೇ ಹೇಳಬಹುದು.  ಹೀಗಾಗಿ ಸಂಜು ಸ್ಯಾಮ್ಸನ್  ಮತ್ತೆ ವೈಭವ್ ಸ್ಥಾನಕ್ಕೆ ಮರಳುವು ಕಷ್ಟಕರ. ಟಿ20 ವಿಶ್ವಕಪ್‌ನಲ್ಲಿ ಸತತ ಮೂರು ಅರ್ಧಶತಕ ಸಿಡಿಸಿ ಭಾರತದ ಗೆಲುವಿಗೆ ಕಾರಣರಾದ ಸಂಜು ಸ್ಯಾಮ್ಸನ್ ಅವರಿಗೆ ಸರಿಯಾದ ಅವಕಾಶ ಸಿಗದೇ ಇರುವುದು ಫ್ಯಾನ್ಸ್‌ ಬೇಸರಕ್ಕೂ ಕಾರಣವಾಗಿದೆ. ಸಂಜು ಅಥವಾ ವೈಭವ್ ಇಬ್ಬರಲ್ಲೇ ಅದಲು ಬದಲು ಮಾಡೋ ಬದಲು ಬೇರೆ ಆಟಗಾರರ ಪ್ಲೇಸ್‌ಗೆ ಸಂಜುಗೆ ಚಾನ್ಸ್ ನೀಡಬಹುದು ಅನ್ನೋ ಮಾತು ಕೇಳಿ ಬರ್ತಿದೆ.

ಸ್ಯಾಮನ್ಸ್‌ಗಿಲ್ಲದ ನ್ಯಾಯ ಅಭಿಗ್ಯಾಕೆ?

ಅಭಿಷೇಕ್ ಶರ್ಮಾ ಬದಲು ಸಂಜು ಸ್ಯಾಮ್ಸನ್ ಭಾರತ ತಂಡಕ್ಕೆ ವಾಪಸ್ಸು ಬರಬೇಕು ಅನ್ನೋ ಕೂಗು ಜೋರಾಗಿದೆ.  ಸೂರ್ಯವಂಶಿ ಒಂದು ಕಡೆ ಸಾಲಿಡ್ ಆಗಿ ಆಡ್ತಾ ಇದ್ದಾನೆ, ಆದ್ರೆ ಅಭಿ ವರ್ಲ್ಡ್ ಕಪ್ ನಿಂದಲೂ ಸರಿಯಾಗಿ ಆಡ್ತಾ ಇಲ್ಲಾ. ಬ್ಯಾಕ್ ಟೂ ಬ್ಯಾಕ್ ವೈಫಲ್ಯ ಅನುಭವಿಸುತ್ತಿರುವ ಅಭಿಗೆ ಸ್ವಲ್ಪ ಬ್ರೇಕ್ ಬೇಕು ಅನ್ಸುತ್ತೆ. ಭಾರತ ತಂಡದ ಅನುಭವಿಗಳಾದ ರೋಹಿತ್, ಕೊಹ್ಲಿ, ಜಡೇಜಾ ಅನುಪಸ್ಥಿತಿಯಲ್ಲಿ ವರ್ಲ್ಡ್ ಕಪ್ ಗೆಲ್ಲಲು ಗಮನಾರ್ಹ ಕೊಡುಗೆ ನೀಡಿದ ಸಂಜುಗೆ ಇನ್ನೊಂದು ಅವಕಾಶ ನೀಡಬೇಕು. ಅದು ಯಾಕೆ ಅನ್ನೋದ್ದನ್ನ  ಪಿನ್‌ಟೂ ಪಿನ್ ಹೇಳ್ತಾ ಹೋಗ್ತಿನಿ ನೋಡಿ.  .

ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಅವರು ಕೆಲ ಪಂದ್ಯಗಳಲ್ಲಿ ಆಡದಿದ್ದಕ್ಕೆ ಅವರನ್ನು ಹೊರಗಿಡಲಾಗಿದೆ. ಅದೇ ಅಭಿಷೇಕ್ ಶರ್ಮಾ ಅವರು ಆಡಲಿ, ಆಡದಿರಲಿ ಪ್ಲೇಯಿಂಗ್ ಇಲೆವೆನ್ ನಲ್ಲಿ ಇರುತ್ತಾರೆ. ಜಿಂಬಾಬ್ವೆ ವಿರುದ್ಧ ಕೂಡ ಅಭಿಷೇಕ್ ಕಳಪೆ ಪ್ರದರ್ಶನ ನೀಡಿದ್ದಾರೆ. 3 ಪಂದ್ಯದಿಂದ ಅಭಿ ಬ್ಯಾಟ್‌ನಿಂದ ಬಂದಿದ್ದು ಕೇವಲ 11 ರನ್‌. ಅಭಿಷೇಕ್ ಮೊದಲ ಪಂದ್ಯದಲ್ಲಿ 1 ರನ್‌ಗಳಿಸಿದ್ರೆ 2ನೇ ಪಂದ್ಯದಲ್ಲಿ 8 ರನ್‌ಗಳಿಸಿದ್ದಾರೆ. ಇನ್ನೂ 3ನೇ ಪಂದ್ಯದಲ್ಲೂ ಅಭಿಷೇಕ್ ಶರ್ಮಾ ಕೇವಲ 2 ರನ್‌ಗಳಿಗೆ ಔಟಾಗುವ ಮೂಲಕ ಮತ್ತೆ ನಿರಾಸೆ ಮೂಡಿಸಿದರು.  ವಿಶ್ವಕಪ್‌ಗಿಂತ ಮೊದಲು ಸಂಜು ಸ್ಯಾಮ್ಸನ್ ಐದು ಪಂದ್ಯಗಳಲ್ಲಿ ಸೂಕ್ತ ಪ್ರದರ್ಶನ ನೀಡಲಿಲ್ಲ ಎಂಬ ಕಾರಣಕ್ಕೆ ಪ್ಲೇಯಿಂಗ್‌ನಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದರು. ಆದರೆ, ನಂತರ ತಂಡವನ್ನು ಸೇರಿಕೊಂಡ ಅವರು ಅದೇ ಟೂರ್ನಿಯಲ್ಲಿ ‘ಪ್ಲೇಯರ್ ಆಫ್ ದಿ ಟೂರ್ನಮೆಂಟ್’ ಪ್ರಶಸ್ತಿ ಗೆದ್ದರು. ಇನ್ನೂ ವಿಶ್ವಕಪ್ ಟೂರ್ನಿಯಲ್ಲಿ ಅಭಿಷೇಕ್ ಶರ್ಮಾ ಆಡಿದ್ದು ಕಳಪೆ ಆಟ. ಯುಕೆ ಸರಣಿಯಲ್ಲಿ ಒಂದು ಅರ್ಧಶತಕವನ್ನು ಹೊರತುಪಡಿಸಿದರೆ ಅವರ ಬ್ಯಾಟ್‌ನಿಂದ ಯಾವುದೇ ದೊಡ್ಡ ರನ್ ಬಂದಿಲ್ಲ. 20 ಅಥವಾ 30 ರನ್‌ಗಳ ಕೊಡುಗೆಯೂ ಇಲ್ಲ. ಕಳೆದ ಎಂಟು ಪಂದ್ಯಗಳಲ್ಲಿ ಕೇವಲ ಒಂದು ಅರ್ಧಶತಕ ಬಂದಿದೆ. ಒಂದು ವೇಳೆ ವಿಶ್ವಕಪ್ ಪಂದ್ಯಗಳನ್ನೂ ಸೇರಿಸಿದರೆ, ಕಳೆದ 18 ಪಂದ್ಯಗಳಲ್ಲಿ ಅವರು ಬಾರಿಸಿದ್ದು ಕೇವಲ ಮೂರು ಅರ್ಧಶತಕಗಳನ್ನು ಮಾತ್ರ. ವಿಶ್ವಕಪ್‌ನಲ್ಲಿ ಸ್ಯಾಮ್ಸನ್ ಆಡಿದ್ದು ಕೇವಲ ಮೂರು ಪಂದ್ಯಗಳು, ಆ ಮೂರರಲ್ಲೂ ಅರ್ಧಶತಕ ಸಿಡಿಸಿದ್ದಾರೆ. ಆದರೆ, ಅಭಿಷೇಕ್ ಆಡಿದ ಐದು ಪಂದ್ಯಗಳಲ್ಲಿ ಗಳಿಸಿದ ಗರಿಷ್ಠ ರನ್ ಕೇವಲ 16. ಎಲ್ಲೋ ಒಂದ್ಕಡೆ ಸಂಜುಗೆ ಅನ್ಯಾಯಆಗ್ತಿದೆ. ಸಂಜು ಆಡಲ್ಲ ಅಂತ ಅವರನ್ನ ಕೈ ಬಿಡೋ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಅಭಷೇಕ್ ಶರ್ಮಾ ಆಡಿಲ್ಲ ಅಂದ್ರೂ ಅವರ ಮೇಲೆ ಯಾಕೆ ಇಷ್ಟು ಪ್ರೀತಿ ತೋರಿಸುತ್ತಿದೆ ಅನ್ನೋದೇ ಗೊತ್ತಾಗ್ತಿಲ್ಲ.

Full Gfx: WCಗೆ ಇಶಾನ್‌ಗಿಂತ ಸಂಜು ಬೆಸ್ಚ್

ಇನ್ನೂ ಇಶಾನ್ ಕಿಶನ್ ವಿಷ್ಯದಲ್ಲೂ ಅಷ್ಟೇ ಟೀಂ ಇಂಡಿಯಾ ಯಾಕ್ ಹೀಗೆ ಮಾಡುತ್ತೆ ಅಂತ ಗೊತ್ತಿಲ್ಲ. ಇಶಾನ್ ಕಿಶನ್ ವಿಕೆಟ್ ಕೀಪರ್ ಆಗಿ ಸಾಕಷ್ಟು ಮಿಸ್ ಫೀಲ್ಡಿಂಗ್ ಮಾಡುತ್ತಿದ್ದಾರೆ. ಜಿಂಬಾಬ್ವೆ ವಿರುದ್ಧ ಸಾಕಷ್ಟು ಮಿಸ್ ಪೀಲ್ಡಿಂಗ್ ಮಾಡಿದ್ದಾರೆ. ಹಾಗೇ ಈಸಿಯಾದ  ಕ್ಯಾಚ್ ಕೂಡ ಬಿಟ್ಟಿದ್ದಾರೆ. ಒಂದು ವೇಳೆ ಇಶಾನ್‌ಗೆ ರೆಸ್ಟ್ ಕೊಟ್ಟು ಸಂಜುಗೆ ಚಾನ್ಸ್‌ ನೀಡಿದ್ರೆ, ಟೀಂಗೆ ಲಾಭ. ಹೀಗಾಗಿ ಇಶಾನ್ ಕಿಶನ್ ಬದಲು ಸಂಜುಗೆ ಚಾನ್ಸ್ ಕೊಟ್ರೆ ಒಳ್ಳೆಯದ್ದು ಅನ್ನೋ ಮಾತು ಕೂಡ ಕೇಳಿ ಬರ್ತಿದೆ.

Full Gfx: ಟೀಂ INDಗೆ ಓಪನರ್ಸ್ ಚಾಲೆಂಜ್

ಹೀಗಾಗಿ ಟೀಂ ಇಂಡಿಯಾ ಓಪನರ್ಸ್‌ಗಳ ಚಾಲೆಂಜ್ ಎದುರಾಗಿದೆ. ಯಾರಿಗೆ ಚಾನ್ಸ್ ಕೊಡಬೇಕು ಯಾರನ್ನ ಕೈ ಬಿಡಬೇಕು ಗೊಂದಲವೇ ಹೆಚ್ಚು. ವೈಭವ್‌ನ ಬಿಟ್ಟು ಸಂಜುನ ಸೇರಿಸಿದ್ರೆ, ವೈಭವ್‌ಗೆ ಯಾಕೆ ಚಾನ್ಸ್ ಕೊಡಲ್ಲ ಅಂತಾರೆ. ಒಂದು ವೇಳೆ ವೈಭವ್‌ಗೆ ಕೊಟ್ರೆ ಸಂಜುಗೆ ಯಾಕೆ ಚಾನ್ಸ್ ಕೊಡಲ್ಲ ಅಂತಾರೆ. ಹೀಗಾಗಿ ವೈಭವ್ ಸೂರ್ಯವಂಶಿ, ಇಶಾನ್ ಕಿಶನ್, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್‌ರಲ್ಲಿ ಯಾರನ್ನ ಕೈ ಬಿಟ್ಟು ಯಾರನ್ನ ಸೇರಿಸುದು ಅನ್ನೋದೇ ದೊಡ್ಡ ರಗಳೆ. ಆದ್ರೆ ಸಾಕಷ್ಟು ಜನರಿಗೆ ಸಂಜುನ ಕೈ ಬಿಟ್ಟಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಅಭಿಷೇಕ್ ಶರ್ಮಾ ಅಥವಾ ಇಶಾನ್ ಇಬ್ಬರಲ್ಲಿ ಒಬ್ಬರಲ್ಲಿ ಕೈ ಬಿಟ್ಟು ಸಂಜುಗೆ ಚಾನ್ಸ್ ನೀಡಿದ್ರೆ, ಸಂಜು ಖಂಡಿತ ಕಂಬ್ಯಾಕ್ ಮಾಡೋ ನೀರಿಕ್ಷೆ ಇದೆ.

ಎಲ್ಲದ್ದಕ್ಕೂ ಆಲ್ ರೌಂಡರ್ಸ್ ಅಂತ ಸುಮ್ಮನೆ ಎಲ್ಲರ ಹಿಂದೆ ಹೋಗುವ ಬದಲು ಮಿಂಚಬಲ್ಲ ಬೌಲರ್ ಹಾಗೂ ಬ್ಯಾಟ್ಸಮನ್ ಗಳನ್ನು ಗುರುತಿಸಿ ಅವಕಾಶ ನೀಡಬೇಕು.

Kishor KV

Leave a Reply

Your email address will not be published. Required fields are marked *