ರಾಷ್ಟ್ರಪ್ರಶಸ್ತಿ ವಿಜೇತ ಗಾಯಕಿ ವಾಣಿ ಜಯರಾಮ್ ನಿಧನ – ಸಾವಿನ ಸುತ್ತ ಅನುಮಾನವೇಕೆ?  

ರಾಷ್ಟ್ರಪ್ರಶಸ್ತಿ ವಿಜೇತ ಗಾಯಕಿ ವಾಣಿ ಜಯರಾಮ್ ನಿಧನ – ಸಾವಿನ ಸುತ್ತ ಅನುಮಾನವೇಕೆ?  

ಖ್ಯಾತ ಹಿರಿಯ ಗಾಯಕಿ, ರಾಷ್ಟ್ರಪ್ರಶಸ್ತಿ ವಿಜೇತ ವಾಣಿ ಜಯರಾಮ್  ಚೆನ್ನೈನಲ್ಲಿರುವ ತಮ್ಮ ನಿವಾಸದಲ್ಲಿ ಇಂದು ಮೃತಪಟ್ಟಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು.

ವಾಣಿ ಜಯರಾಮ್ ಅವರು ಚೆನ್ನೈನ ನುಂಗಂಬಾಕ್ಕಂನಲ್ಲಿರುವ ತಮ್ಮ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರ ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ.

ಭಾರತ ಸರ್ಕಾರವು 2023ರ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ವಾಣಿ ಜಯರಾಮ್ ಅವರಿಗೂ ಘೋಷಣೆ ಮಾಡಿತ್ತು. ಇದೀಗ ಅವರ ಹಠಾತ್ ನಿಧನ ಸುದ್ದಿ ದೇಶಾದ್ಯಂತ ಆಘಾತವನ್ನು ಉಂಟು ಮಾಡಿದೆ. ತಮ್ಮ ಸಂಗೀತ ಲೋಕದಲ್ಲಿ 10,000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಕೀರ್ತಿ ಅವರಿಗೆ ಸಲ್ಲುತ್ತದೆ. ಆಕೆಯ ಸಾವಿನ ಬಗ್ಗೆ ಹಾಗೂ ಅಂತಿಮ ಸಂಸ್ಕಾರದ ಕುರಿತು ಯಾವುದೇ ಹೆಚ್ಚಿನ ಮಾಹಿತಿ ಬಂದಿಲ್ಲ. ಹಾಗೂ ಇವರ ಸಾವಿನ ಸುತ್ತ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಂದ ನಂತರವಷ್ಟೇ ಅವರ ಸಾವಿನ ನಿಗೂಢ ಬಹಿರಂಗವಾಗಲಿದೆ.

ಅವರ ಪತಿ ಜಯರಾಮ್ 2018ರಲ್ಲಿ ಸಾವನ್ನಪ್ಪಿದರು. ಕಲಿವಾಣಿಯಾಗಿ ಜನಿಸಿದ ವಾಣಿ ಜಯರಾಮ್ ಅವರ ಕುಟುಂಬವು ಕೂಡ ಸಂಗೀತ ಲೋಕಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದೆ. ಇವರ ತಂದೆ ದುರೈಸಾಮಿ ಅಯ್ಯಂಗಾರ್ ತಾಯಿ ಪದ್ಮಾವತಿ. ಅವರು 1971 ರಲ್ಲಿ ಹಿನ್ನೆಲೆ ಗಾಯಕಿಯಾಗಿ ಐದು ದಶಕಗಳ ಕಾಲ ಹಾಡಿದರು. 19 ಭಾಷೆಗಳಲ್ಲಿ ಹಾಡಿದ್ದಾರೆ ಮತ್ತು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು,  ರಾಜ್ಯ ಸರ್ಕಾರದ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

suddiyaana