ಕ್ಯಾಚ್ ಹಿಡಿಯಲ್ಲ, ಫೀಲ್ಡಿಂಗ್ ಮಾಡಲ್ಲ- IPL ಚಾಳಿ T20Iಗೂ ಬಂತಾ?

ಕ್ಯಾಚ್ ಹಿಡಿಯಲ್ಲ, ಫೀಲ್ಡಿಂಗ್ ಮಾಡಲ್ಲ- IPL ಚಾಳಿ T20Iಗೂ ಬಂತಾ?

ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಜಿಂಬಾಬ್ವೆ ವಿರುದ್ಧ 3ಕ್ಕೆ 3 ಪಂದ್ಯ ಗೆದ್ದು ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಸರಣಿ ಗೆದ್ದೆ ಗೆಲ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿತ್ತು. ಯಾಕಂದ್ರೆ ಜಿಂಬಾಬ್ವೆ ಒಂದು ಡಮ್ಮಿ ಟೀಂ. ಹೀಗಾಗಿ ಈ ಸರಣಿ ಗೆಲ್ತಾರೆ ಅನ್ನೋದು ಗೊತ್ತಿರೋ ವಿಷ್ಯ. ಆದ್ರೆ ಈ ಪಂದ್ಯದಲ್ಲೂ ಟೀಂ ಇಂಡಿಯಾ ಕಳಪೆ ಪ್ರದರ್ಶನ ತೋರಿಸಿದ್ದು, ಕಂಗಣ್ಣಿಗೆ ಗುರಿಯಾಗಿದೆ. ಯಂಗ್ ಪ್ಲೇಯರ್ಸ್‌ ಬೇಕಾಬಿಟ್ಟಿ ಕಳಪೆ ಪೀಲ್ಡಿಂಗ್, 5-6 ಕ್ಯಾಚ್ ಬಿಟ್ಟಿರುವುದು ಈಗ ಸಾಕಷ್ಟು ಚರ್ಚೆ ಆಗ್ತಿದೆ.

ಇದನ್ನೂ ಓದಿ: ವೈಭವ್ ಆಡಿದ್ರೆ ಸಾಕಾ? -ಅಭಿ ಸಿಡಿಯೋದು ಯಾವಾಗ?-ಸರಣಿ ಗೆದ್ರೂ ಭಾರತಕ್ಕೆ ನೆಮ್ಮದಿಯಿಲ್ಲ

ಇಂಗ್ಲೆಂಡ್ ಮತ್ತು ಐರ್ಲ್ಯಾಂಡ್ ವಿರುದ್ಧ ಸೋತ ಟೀಂ ಇಂಡಿಯಾ ಜಿಂಬಾಬ್ವೆ ವಿರುದ್ಧ ಗೆದ್ದಿದೆ. ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ ಭಾರತದ ಯುವ ಆಟಗಾರರು ನಿರೀಕ್ಷೆಗೂ ಮೀರಿ ಪ್ರದರ್ಶನ ನೀಡಿದರು. ಹಲವು ಹಿರಿಯ ಆಟಗಾರರ ಅನುಪಸ್ಥಿತಿಯ ನಡುವೆಯೂ ಯಂಗ್ ಟೀಂ ಇಂಡಿಯಾ ಬ್ಯಾಟಿಂಗ್, ಬೌಲಿಂಗ್ ಉತ್ತಮವಾಗಿ ಆಡಿ ತಂಡ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ. ಆದ್ರೆ ಪೀಲ್ಡಿಂಗ್‌ನಲ್ಲಿ ಬಿಟ್ಟು.

ಕೋಚ್‌ ವಿವಿ ಲಕ್ಷ್ಮಣ್‌ ಬಗ್ಗೆ ಭಾರಿ ಮೆಚ್ಚುಗೆ

ಸಾಕಷ್ಟು ಜನ ಈ ಸರಣಿಗೆ ಕೋಚ್ ಆಗಿದ್ದ ವಿವಿ ಲಕ್ಷ್ಮಣ್‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ಸರಣಿಯಲ್ಲಿ ವಿ.ವಿ.ಎಸ್. ಲಕ್ಷ್ಮಣ್ ಅವರ ಮಾರ್ಗದರ್ಶನ ಪ್ರಮುಖ ಪಾತ್ರ ವಹಿಸಿದೆ.  ಯುವ ಆಟಗಾರರಿಗೆ ಆತ್ಮವಿಶ್ವಾಸ ತುಂಬುವುದು, ಅವರಿಗೆ ಸ್ವತಂತ್ರವಾಗಿ ಆಡಲು ಅವಕಾಶ ನೀಡುವುದು ಮತ್ತು ಒತ್ತಡದ ಸಂದರ್ಭದಲ್ಲೂ ಶಾಂತವಾಗಿ ನಿರ್ಧಾರ ಕೈಗೊಳ್ಳಲು ನೆರವಾಗುವ ಮೂಲಕ ಲಕ್ಷ್ಮಣ್ ಅವರ  ಕೋಚಿಂಗ್ ಸ್ಟೈಲ್ ಎಲ್ಲರಿಗೂ ಇಷ್ಟ ಆಗಿದೆ.

ಫೀಲ್ಡಿಂಗ್‌ನಲ್ಲಿ ಟೀಂ ಇಂಡಿಯಾ ಕಳಪೆ ಪ್ರದರ್ಶನ

 ಈ ಪಂದ್ಯದಲ್ಲಿ ನಾವು ಗಮನಿಸಬೇಕಾಗಿದ್ದು, ಟೀಂ ಇಂಡಿಯಾ ತಂಡದ ಕಳಪೆ ಪ್ರದರ್ಶನ.  ಐಪಿಎಲ್‌ನಲ್ಲಿ ಕಳಪೆ ಪೀಲ್ಡಿಂಗ್ ಮಾಡಿದಂತೆ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲೂ ಮುಂದುವರಿಸಿದ್ದಾರೆ. ಈಗ ಇರೋ ಟಿ20 ಟೀಂನಲ್ಲಿ ಇರೋದೆಲ್ಲಾ ಯಂಗ್ ಪ್ಲೇಯರ್ಸ್‌.. ಯಾರು ಕೂಡ ಏಜ್ ಆದವರು ಇಲ್ಲ. ಜಿಂಕೆಯಂತೆ ಹಾರಿ ಕ್ಯಾಚ್‌ಗಳನ್ನ ಹಿಡಿಯುವವರೇ ಇರುವವರು. ಆದ್ರೆ ನಾವು ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾದ ಮೈನೇಸ್ ಅಂತ ಎದ್ದು ಕಂಡಿದ್ದು. ಕಳಪೇ ಪೀಲ್ಡಿಂಗ್‌ ಮತ್ತು ಕ್ಯಾಚ್ ಡ್ರಾಪ್. 3ನೇ ಪಂದ್ಯದಲ್ಲಿ ಏನಿಲ್ಲ ಅಂದ್ರೂ 6 ಕ್ಯಾಚ್‌ ಡ್ರಾಪ್ ಮಾಡಿದೆ ಟೀಂ ಇಂಡಿಯಾ. ಹಾಗೇ ಪೀಲ್ಡಿಂಗ್ ಕೂಡ ಬೇಕಾಬಿಟ್ಟಿಯಾಗಿ ಮಾಡಿದ್ದಾರೆ. ಜಿಂಬಾಬ್ವೆ ಒಂದು ಡಮ್ಮಿ ಟೀಂ ಸೋ ಅದರ ವಿರುದ್ಧ ಕ್ಯಾಚ್ ಡ್ರಾಪ್ ಮಾಡಿದ್ರೂ ಟೀಂ ಇಂಡಿಯಾ ಗೆಲ್ತು. ಮುಂದಿನ ದಿನಗಳಲ್ಲಿ ಸ್ಟ್ರಾಂಗ್ ಟೀಂ ಅಂದ್ರೆ.. ಟಾಪ್‌ 5ನಲ್ಲಿರೋ ಟೀಂ ಮುಂದೆ ಇದೇ ತರ ಕಳಪೆ ಪೀಲ್ಡಿಂಗ್ ಮಾಡಿದ್ರೆ ಟೀಂ ಮತ್ತೆ ಸೋಲು ಮುಂದುವರಿಸಬೇಕಾಗುತ್ತೆ. ಇಂಗ್ಲೆಂಡ್, ಆಸೀಸ್‌ ಪ್ಲೇಯರ್ಸ್‌ಗೆ ಒಂದು ಜೀವದಾನ ಸಿಕ್ಕಿದ್ರೆ ಸಾಕು, ಆಮೇಲೆ ಅವರು ಹೊಡಿಬಡಿ ಆಟ ಆಡಿ ಸ್ಕೋರ್‌ ಹೆಚ್ಚಿಗೆ ಮಾಡಿಕೊಳ್ತಾರೆ. ಅವರ ಮುಂದೆ ಒಂದು ಕ್ಯಾಚ್‌ ಡ್ರಾಪ್ ಮಾಡಿದ್ರೂ ಕೂಡ ಟೀಂಗೆ ಹೊಡೆತ. ಬೆಸ್ಟ್ ಟೀಂ ಮೇಲೆ ಆಡುವಾಗ ಅದು ತಂಡಕ್ಕೆ ಮೈನೇಸ್ ಆಗುತ್ತೆ.

ಕ್ಯಾಚ್ ಡ್ರಾಪ್ ಬಗ್ಗೆ ಶ್ರೇಯಸ್ ಮಾತು

ಇನ್ನೂ ಶ್ರೇಯಸ್ ಅಯ್ಯರ್ ಕ್ಯಾಚ್ ಡ್ರಾಪ್‌ ಬಗ್ಗೆ ಮಾತನಾಡಿದ್ದಾರೆ.  ನಾವು ಕೈ ಬಿಟ್ಟ ಕ್ಯಾಚ್‌ಗಳನ್ನ ಹೊರತುಪಡಿಸಿ ಸರಣಿಯಾದ್ಯಾಂತ ನಾವು ದೋಷರಹಿತವಾಗಿದ್ದೇವೆ ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ. ಈ ಮಾತಿನ ಅರ್ಥ ನಾವು ಬೌಲಿಂಗ್, ಬ್ಯಾಟಿಂಗ್‌ನಲ್ಲಿ ಚೆನ್ನಾಗಿ ಆಡುತ್ತಿದ್ದೇವೆ. ಆದ್ರೆ ಕ್ಯಾಚ್ ಮಾತ್ರ ಡ್ರಾಪ್ ಮಾಡುತ್ತಿದ್ದೇವೆ ಅಂತ ಹೇಳಿದ್ದಾರೆ.

ಕೊಹ್ಲಿ ನಾಯಕತ್ವದಲ್ಲಿ, ಧೋನಿ ನಾಯಕತ್ವದಲ್ಲಿ, ರೋಹಿತ್ ಶರ್ಮಾ ನಾಯಕತ್ವದಲ್ಲಿ ಆಗಲಿ ಇಷ್ಟರ ಮಟ್ಟಿಗೆ ಕಳಫೆ ಪೀಲ್ಡಿಂಗ್ ಯಾರು ಕೂಡ ಮಾಡ್ತಾ ಇರಲಿಲ್ಲ. ಒಂದು ಪಂದ್ಯದಲ್ಲಿ ಒಂದು ಕ್ಯಾಚ್ ಬಿಡುತ್ತಿದ್ದರು, ಆದ್ರೆ ಇಗಿನ ತರ ಒಂದು ಪಂದ್ಯದಲ್ಲಿ5-6 ಕ್ಯಾಚ್ ಡ್ರಾಪ್ ಆಗ್ತಿರಲಿಲ್ಲ. ಹೀಗಾಗಿ ಟೀಂ ಇಂಡಿಯಾ ಯಂಗ್ ಪ್ಲೇಯರ್ಸ್ ತಮ್ಮ ಪೀಲ್ಡಿಂಗ್‌ನತ್ತ ಹೆಚ್ಚು ಗಮನ ಕೊಡಬೇಕಿದೆ. ಇಲ್ಲವಾದ್ರೆ ಸ್ಟ್ರಾಂಗ್ ಟೀಂ ಮುಂದೆ ಟೀಂ ಇಂಡಿಯಾ ಕ್ಯಾಚ್ ಡ್ರಾಪ್‌ ಮತ್ತು ಪೀಲ್ಡಿಂಗ್ ಮೂಲಕ ಸೋಲು ಅನುಭವಿಸಬೇಕಾಗುತ್ತೆ.

Kishor KV

Leave a Reply

Your email address will not be published. Required fields are marked *