ಭಾರತಕ್ಕೆ ಮೊದಲ ಚಿನ್ನ ತಂದ ಮೀರಾಬಾಯಿ ಚಾನು – ಪುರುಷರ ವೇಟ್‌ಲಿಪ್ಟಿಂಗ್‌ನಲ್ಲಿ ಭಾರತಕ್ಕೆ ಎರಡು ಬೆಳ್ಳಿ ಪದಕ

ಭಾರತಕ್ಕೆ ಮೊದಲ ಚಿನ್ನ ತಂದ ಮೀರಾಬಾಯಿ ಚಾನು – ಪುರುಷರ ವೇಟ್‌ಲಿಪ್ಟಿಂಗ್‌ನಲ್ಲಿ ಭಾರತಕ್ಕೆ ಎರಡು ಬೆಳ್ಳಿ ಪದಕ

ಗ್ಲಾಸ್ಗೋ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಬಾವುಟ ಹಾರಾಡಿದೆ. ಮಣಿಪುರದ ಹೆಮ್ಮೆಯ ಕ್ರೀಡಾಪಟು ಮೀರಾಬಾಯಿ ಚಾನು ಚಿನ್ನದ ಪದಕ ಗೆಲ್ಲುವ ಮೂಲಕ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ.

ಇದನ್ನೂ ಓದಿ:ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟ ಝಂಡು ಕುಮಾರ್ – ದೇಶಕ್ಕೆ ಕೀರ್ತಿ ತಂದವನ ಹಿಂದಿದೆ ನೋವಿನ ಕಥೆ

2026 ರ ಗ್ಲಾಸ್ಗೋ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಚಿನ್ನದ ಪದಕ ತಂದುಕೊಟ್ಟಿದ್ದಾರೆ ಸೈಖೋಮ್ ಮೀರಾಬಾಯಿ ಚಾನು. ಮಣಿಪುರದ ಈ ವೇಟ್‌ಲಿಪ್ಟಿಂಗ್ ರಾಣಿ ಮತ್ತೊಮ್ಮೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿಪತಾಕೆಯನ್ನು ಹಾರಿಸಿದರು. ಮಹಿಳೆಯರ 48 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿ ಮೀರಾಬಾಯಿಗೆ ಇದು ಸತತ ಮೂರನೇ ಚಿನ್ನದ ಪದಕವಾಗಿದೆ. ಈ ಹಿಂದೆ ಅವರು 2014 ರ ಗೋಲ್ಡ್ ಕೋಸ್ಟ್ ಮತ್ತು 2022 ರ ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿಯೂ ಭಾರತದ ಪರ ಚಿನ್ನದ ಪದಕಗಳನ್ನು ಗೆದ್ದಿದ್ದರು.

ಮಣಿಪುರದ ಇಂಫಾಲದವರಾದ ಸೈಖೋಮ್ ಮೀರಾಬಾಯಿ ಚಾನು ಭಾರತಕ್ಕೆ ಪದಕ ತರುವ ಫೆವರೇಟ್ ವೇಟ್‌ಲಿಫ್ಟರ್‌. 13 ವರ್ಷದವರಿದ್ದಾಗ ತರಬೇತಿ ಪ್ರಾರಂಭಿಸಿದ ಮೀರಾಬಾಯಿ ಚಾನು ಅವರ ಪ್ರಯಾಣ ಸುಲಭವಾಗಿರಲಿಲ್ಲ. ಆರಂಭಿಕ ದಿನಗಳಲ್ಲಿ, ಅವರ ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದಾಗಿ ಅವರಿಗೆ ಸರಿಯಾದ ತರಬೇತಿ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಯಾಕೆಂದರೆ ಮನೆಯಲ್ಲಿ ಕಡು ಬಡತನವಿತ್ತು. ಆರು ಮಂದಿ ಮಕ್ಕಳನ್ನು ಹೊಂದಿದ್ದ ಕುಟುಂಬದಲ್ಲಿ ಇವರೇ ಕಿರಿಯ ಮಗಳು. ಹೆತ್ತವರಿಗೆ ಹಾಗೂ ಸೋದರರಿಗೆ ಸಹಾಯವಾಗಲೆಂದು ಕಟ್ಟಿಗೆ ಹೋರುತ್ತಿದ್ದರು. ಸಣ್ಣ ವಯಸ್ಸಿನಲ್ಲಿ ಹೆಚ್ಚು ಭಾರದ ಕಟ್ಟಿಗೆ ಎತ್ತುತ್ತಿದ್ದ ಮೀರಾಬಾಯಿಯ ಸಾಮರ್ಥ್ಯವನ್ನು ಮೊದಲು ಗಮನಿಸಿದ್ದು ಹೆತ್ತವರು. ಆಗ ಕಟ್ಟಿಗೆ ಹೊರುತ್ತಿದ್ದ ಕೈಗಳು ಈಗ ವೈಟ್ ಲಿಪ್ಟಿಂಗ್ ಎತ್ತುವ ಮೂಲಕ ದೇಶಕ್ಕೆ ಸತತ ಮೂರನೇ ಬಾರಿ ಚಿನ್ನದ ಪದಕ ತಂದುಕೊಟ್ಟಿರುವುದು ನಿಜಕ್ಕೂ ಶ್ಲಾಘನೀಯ.

ಇನ್ನು ಚಿನ್ನ ಗೆದ್ದ ಮೀರಾಬಾಯಿ ಮೆಡಲ್ ಸೆಲೆಬ್ರೇಷನ್ ವೇಳೆ ಭಾವುಕರಾದರು. ದೇಶದ ಧ್ವಜ ಮೇಲೆ ಬರುತ್ತಾ ಇರುವಾಗಲೇ ಕಣ್ಣೀರು ಧಾರಾಕಾರ ಹರಿಯುತ್ತಿತ್ತು. ರಾಷ್ಟ್ರಗೀತೆ ಹಾಡುವಾಗಲಂತೂ ಮೀರಾಬಾಯಿ ಕಣ್ಣುಗಳು ತುಂಬಿಬಂದವು. ಈ ಭಾವುಕ ಕ್ಷಣಕ್ಕೆ ಇಡೀ ದೇಶವೇ ಹೆಮ್ಮೆ ಪಡುವಂತಾಯಿತು.

ಪುರುಷರ ವೇಟ್‌ಲಿಫ್ಟಿಂಗ್‌ನಲ್ಲೂ ಭಾರತಕ್ಕೆ ಎರಡು ಬೆಳ್ಳಿ ಪದಕಗಳು ಲಭಿಸಿವೆ. ಒಂದೇ ದಿನ 2 ಬೆಳ್ಳಿ ಪದಕಗಳನ್ನು ತಂದುಕೊಟ್ಟವರು ರಿಷಿಕಾಂತ ಸಿಂಗ್ ಹಾಗೂ ಮುತ್ತುಪಾಂಡಿ ರಾಜಾ. ಪುರುಷರ 60 ಕೆಜಿ ವಿಭಾಗದಲ್ಲಿ ಒಟ್ಟು 264 ಕೆಜಿ ಭಾರ ಎತ್ತುವ ಮೂಲಕ ಚೊಚ್ಚಲ ಕೂಟದಲ್ಲೇ ರಿಷಿಕಾಂತ ಸಿಂಗ್ ಬೆಳ್ಳಿ ಪದಕ ಗೆದ್ದಿದ್ದಾರೆ. ಅದರಲ್ಲೂ ಸ್ನ್ಯಾಚ್‌ನಲ್ಲಿ 121 ಕೆಜಿ ಎತ್ತುವ ಮೂಲಕ ರಿಷಿಕಾಂತ್ ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಪುರುಷರ 65 ಕೆಜಿ ವಿಭಾಗದಲ್ಲಿ ಒಟ್ಟು 286 ಕೆಜಿ ತೂಕವನ್ನು ಎತ್ತುವ ಮೂಲಕ ದ್ವಿತೀಯ ಸ್ಥಾನ ಗಳಿಸಿ ಮುತ್ತುಪಾಂಡಿ ರಾಜಾ ಭಾರತಕ್ಕೆ ಮತ್ತೊಂದು ಬೆಳ್ಳಿ ಪದಕ ಗೆದ್ದು ಕೊಟ್ಟಿದ್ದಾರೆ.

Sulekha

Leave a Reply

Your email address will not be published. Required fields are marked *