ಟಾಸ್ ಸೋತ ಶ್ರೇಯಸ್ ಅಯ್ಯರ್ – ಬೌಲಿಂಗ್ ಆಯ್ಕೆ ಮಾಡಿಕೊಂಡ ಜಿಂಬಾಬ್ವೆ

ಟಾಸ್ ಸೋತ ಶ್ರೇಯಸ್  ಅಯ್ಯರ್  – ಬೌಲಿಂಗ್ ಆಯ್ಕೆ ಮಾಡಿಕೊಂಡ ಜಿಂಬಾಬ್ವೆ

ಹರಾರೆ ಸ್ಪೋರ್ಡ್ಸ್‌ ಕ್ಲಬ್‌ನಲ್ಲಿ  ನಡೆಯುತ್ತಿರುವ ಎರಡನೇ ಪಂದ್ಯದಲ್ಲಿ ಭಾರತ  ಜಿಂಬಾಬ್ವೆ ವಿರುದ್ಧ ಟಾಸ್ ಸೋತಿದ್ದಾರೆ.   ಈ ಪಂದ್ಯದಲ್ಲಿ ಟಾಸ್‌ ಗೆದ್ದ ಜಿಂಬಾಬ್ವೆ ತಂಡದ ನಾಯಕ ಸಿಕಂದರ್‌ ರಾಝಾ ಅವರು ಮೊದಲು ಬೌಲಿಂಗ್‌ ಆರಿಸಿಕೊಂಡಿದ್ದಾರೆ. ಆ ಮೂಲಕ ಎದುರಾಳಿ ಶ್ರೇಯಸ್‌ ಅಯ್ಯರ್‌ ನಾಯಕತ್ವದ ಭಾರತ ತಂಡವನ್ನು ಮೊದಲ ಬ್ಯಾಟಿಂಗ್‌ಗೆ ಆಹ್ವಾನಿಸಿದ್ದಾರೆ. ಆ ಮೂಲಕ ಪ್ರವಾಸಿಗರನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಲು ಆತಿಥೇಯರು ಯೋಜನೆಯನ್ನು ಹಾಕಿಕೊಂಡಿದ್ದಾರೆ.

ಇದನ್ನೂ ಓದಿ: 20 ಬಾಲ್ ಮೇಲೆ ಆಡಲ್ಲ ಸೂರ್ಯವಂಶಿ – ಶ್ರೇಯಸ್ ಮಾತು ಕೇಳಲ್ವಾ ವೈಭವ್?

ಇನ್ನೂ ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನವು ಆರಂಭದಲ್ಲಿ ವೇಗದ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡುತ್ತದೆ. ಇಲ್ಲಿನ ಚಳಿಗಾಲದ ವಾತಾವರಣವು ಪವರ್‌ಪ್ಲೇ ಅವಧಿಯಲ್ಲಿ ಚೆಂಡು ಸ್ವಿಂಗ್ ಆಗಲು ಸಹಾಯ ಮಾಡುತ್ತದೆ. ಹಾಗಾಗಿ, ಆರಂಭಿಕ ಓವರ್‌ಗಳಲ್ಲಿ ಬ್ಯಾಟರ್‌ಗಳು ಎಚ್ಚರಿಕೆಯಿಂದ ಆಡುವುದು ಅನಿವಾರ್ಯ. ಒಮ್ಮೆ ಚೆಂಡು ಹಳೆಯದಾದ ಮೇಲೆ ರನ್ ಗಳಿಸುವುದು ಸುಲಭ. ಹಾಗೇ  ಪಿಚ್‌ನಲ್ಲಿರುವ ತೇವಾಂಶವು ಇರುವುದ್ದರಿಂದ ಆರಂಭಿಕ ಬ್ಯಾಟರ್‌ಗಳಿಗೆ ಸವಾಲಾಗಲಿದೆ. ಈ ಮೈದಾನದಲ್ಲಿ ಇತ್ತೀಚೆಗೆ ಚೇಸಿಂಗ್ ಮಾಡಿದ ತಂಡಗಳೇ ಹೆಚ್ಚು ಯಶಸ್ಸು ಕಂಡಿವೆ. . ಹೀಗಾಗಿ ಟಾಸ್ ಗೆದ್ದ ತಂಡವು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುತ್ತೆ. ಅದ್ದರಂತೆ ಟಾಸ್ ಗೆದ್ದ ಜಿಂಬಾಬ್ವೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಇನ್ನೂ ಕ್ಯಾಪ್ಟನ್ ಆದ ನಂತ್ರ ಸತತ 8 ಪಂದ್ಯದಲ್ಲಿ ಟಾಸ್ ಗೆದ್ದ ಶ್ರೇಯಸ್ 9ನೇ ಪಂದ್ಯದಲ್ಲಿ ಟಾಸ್ ಸೋತಿದ್ದಾರೆ.

Kishor KV