ಕುಲದೀಪ್ ಯಾದವ್ ಕರಿಯರ್ END? – ಗಿಲ್- ಗಂಭೀರ್ ಹಠಕ್ಕೆ ಸ್ಪಿನ್ನರ್ ಬಲಿ!
ಮ್ಯಾಚ್ ವಿನ್ನರ್ಗೆ ಇದೆಂಥಾ ಅನ್ಯಾಯ?

ಟೀಂ ಇಂಡಿಯಾದಲ್ಲಿ ಕೆಲವರಿಗೆ ಚಿನ್ನದಂತ ಅವಕಾಶ ಸಿಕ್ಕಿದ್ರೆ, ಇನ್ನೂ ಕೆಲವರು ಒಂದೇ ಒಂದು ಅವಕಾಶಕ್ಕಾಗಿ ಕಾಯುತ್ತಿದ್ದಾರೆ . ಪ್ಲೇಯಿಂಗ್ 11 ನಲ್ಲಿ ಎಷ್ಟೇ ಕಸರತ್ತು ಮಾಡಿದ್ರೂ ಒಂದ ಚಾನ್ಸ್ ಸಿಗುತ್ತಿಲ್ಲ. ಅದ್ರಲ್ಲೂ ಕುಲದೀಪ್ ಯಾದವ್ ಟೀಂ ಇಂಡಿಯಾದ ಬಾಗಿಲು ಕಂಪ್ಲೀಟ್ ಬಂದ್ ಆಗಿದೆ. ನಾನ್ ಹೇಳಿದ್ದೇ ನಡೆಯಬೇಕು ಅನ್ನೋ ಗಂಭೀರ್ ಅವರ ಹಠ ಮತ್ತು ಆಲ್ ರೌಂಡರ್ ವ್ಯಾಮೋಹಕ್ಕೆ ಕುಲದೀಪ್ ಯಾದವ್ ಕರಿಯರ್ ಎಂಡ್ ಆಗೋ ಹಂತಕ್ಕೆ ಬಂದು ನಿಂತಿದೆ.
ಕುಲ್ದೀಪ್ ಯಾದವ್.. ಬೌಲಿಂಗ್ನಲ್ಲಿ ಭಾರತದ ಬ್ರಹ್ಮಾಸ್ತ್ರ. ಬೌಲಿಂಗ್ನಲ್ಲಿ ಬಿಗ್ ಬ್ರೇಕ್ ಥ್ರ್ಯೂಗಳನ್ನೇ ತಂದುಕೊಟ್ಟವರು. ಸ್ಪಿನ್ನರ್ ಆಗಿ ಟೀಂ ಇಂಡಿಯಾಗೆ ದೊಡ್ಡ ದೊಡ್ಡ ಗೆಲುವು ತಂದು ಕೊಟ್ಟಿದ್ದಾರೆ. ಆದ್ರೆ ಈಗ ಟೀಂ ಇಂಡಿಯಾದ ಗೇಟ್ ಕುಲದೀಪ್ ಯಾದವ್ಗೆ ಕಂಪ್ಲೀಂಟ್ ಕ್ಲೋಸ್ ಆಗಿದೆ. ಈ ಸ್ಪಿನ್ನರ್ಗೆ ಚಾನ್ಸ್ ಸಿಗದೇ ಇರುವುದ್ದಕ್ಕೆ ಕಾರಣ ಆಲ್ರೌಂಡರ್.. ಆಲ್ರೌಂಡರ್ ಏನ್ ಮಾಡಿದ್ರು ಅಂತ ಕೇಳಿದ್ರೆ ಅದ್ದಕ್ಕೆ ಉತ್ತರ ಗೌತಮ್ ಗಂಭೀರ್.. ಹೌದು ಈ ಗೌತಮ್ ಗಂಭೀರ್ಗೆ ಅದೇನ್ ಆಗಿದ್ಯೋ ಗೊತ್ತಿಲ್ಲ. ಟೀಂ ಇಂಡಿಯಾದಲ್ಲಿ ಆಲ್ರೌಂಡರ್ ಇರಬೇಕು ಅಂತ ಬೌಲರ್ಗಳ ಭವಿಷ್ಯದ ಜೊತೆ ಚೆಲ್ಲಾಟ ಆಡ್ತಿದ್ದಾರೆ.
ಮುಖ್ಯ ಕೋಚ್ ಗೌತಮ್ ಗಂಭೀರ್ ನೇತೃತ್ವದ ಭಾರತ ತಂಡವು ನಿರಂತರವಾಗಿ ಬ್ಯಾಟಿಂಗ್ಗೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದೆ. ಬೌಲಿಂಗ್ ದಾಳಿಯ ಗುಣಮಟ್ಟವನ್ನು ಬಲಿಗೊಟ್ಟಾದರೂ ಆಲ್ರೌಂಡರ್ಗಳನ್ನೇ ಆಯ್ಕೆ ಮಾಡಿಕೊಳ್ಳುವುದು ಎಲ್ಲಾ ಮಾದರಿಯ ಕ್ರಿಕೆಟ್ನಲ್ಲೂ ರಿಪೀಟ್ ಆಗ್ತಿದೆ. ಅದರಲ್ಲೂ ಕುಲದೀಪ್ ಯಾದವ್ರನ್ನ ಪದೇ ಪದೇ ಕಡೆಗಣನೆ ಮಾಡ್ತಿರೋದು ಮ್ಯಾನೇಜ್ಮೆಂಟ್ ವಿರುದ್ಧ ಆಕ್ರೋಶಕ್ಕೆ ಕಾರಣವಾಗುತ್ತಿದೆ. ತಮ್ಮ ಸ್ಪಿನ್ನಿಂದ ವಿಶ್ವಾದ್ಯಂತ ಬ್ಯಾಟ್ಸ್ಮನ್ಗಳನ್ನು ಕಾಡಿದ್ದ ಕುಲದೀಪ್ ಯಾದವ್ಗೆ ಅಪ್ಘಾನ್ ಸರಣಿ ನಂತ್ರ ಒಂದೇ ಒಂದು ಅವಕಾಶ ಸಿಗಲಿಲ್ಲ. ಗಾಯದ ಕಾರಣದಿಂದಾಗಿ ಲಾರ್ಡ್ಸ್ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಿಂದ ಜಸ್ಪ್ರೀತ್ ಬುಮ್ರಾ ಹೊರಗುಳಿದಿದ್ದರು. ಇದರ ಹೊರತಾಗಿಯೂ, ನಾಯಕ ಶುಭ್ಮನ್ ಗಿಲ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಕುಲದೀಪ್ ಅವರನ್ನು ಪ್ಲೇಯಿಂಗ್ ಇಲೆವೆನ್ನಲ್ಲಿ ಚಾನ್ಸ್ ನೀಡ್ತಾರೆ ಅಂತ ಕಾದಿದ್ರು. ಆದ್ರೆ ಅಲ್ಲೂ ಚಾನ್ಸ್ ನೀಡಿಲ್ಲ.
ಹಾಗೇ ಭಾರತ 0-4 ಅಂತರದಿಂದ ಸೋತ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ತಡಕಾಡಿದ್ದರಿಂದ, ಕುಲದೀಪ್ ಯಾದವ್ ಕೊನೆಯ ಪಂದ್ಯದಲ್ಲಿ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆಯಲಿದ್ದಾರೆ ಎಂದು ಹಲವರು ನಿರೀಕ್ಷಿಸಿದ್ದರು. ಆದ್ರೆ ಆಗಲಿಲ್ಲ..ಟೀಂ ಇಂಡಿಯಾದಲ್ಲಿ ಆಲ್ರೌಂಡರ್ ಬೇಕು ಅನ್ನೋ ಕೆಟ್ಟ ಪದ್ಧತಿಯಿಂದ ಕಲದೀಪ್ ಯಾದವ್ರಂತಹ ಕರಿಯರ್ ನಾಶವಾಗ್ತಿದೆ. ಇನ್ನೂಕುಲದೀಪ್ ಯಾದವ್ ಅವರು ಕ್ರಿಕೆಟ್ನಲ್ಲಿ ಮಾಡಿದ ಸಾಧನೆಯನ್ನ ನೋಡೋದಾದ್ರೆ.
ಕುಲದೀಪ್ ಯಾದವ್ ದಾಖಲೆ
ಏಕದಿನ ಪಂದ್ಯಗಳು: 121 ಪಂದ್ಯಗಳಿಂದ 194 ವಿಕೆಟ್
ಟೆಸ್ಟ್ ಪಂದ್ಯಗಳು: 18 ಪಂದ್ಯಗಳಿಂದ 79 ವಿಕೆಟ್
ಟಿ20I: 54 ಪಂದ್ಯಗಳಿಂದ 95 ವಿಕೆಟ್
ಐಪಿಎಲ್: 110 ಪಂದ್ಯಗಳಿಂದ 112 ವಿಕೆಟ್
ಕುಲದೀಪ್ ಯಾದವ್ರನ್ನ ಸತತವಾಗಿ ಬೆಂಚ್ ಕಾಯುವಂತೆ ಮಾಡುತ್ತಿರುವುದು ಅವರ ವೃತ್ತಿಜೀವನದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಭಾರತದ ಮಾಜಿ ಬ್ಯಾಟ್ಸ್ಮನ್ ಮೊಹಮ್ಮದ್ ಕೈಫ್ ಕೂಡ ಇದರ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಕುಲದೀಪ್ ಯಾದವ್ ಅಂತರರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳುವ ಪರಿಸ್ಥಿತಿ ಉದ್ಭವಿಸಿದೆ. ಬುಮ್ರಾ ತಂಡದಲ್ಲಿ ಇರಲಿಲ್ಲ, ವಾಷಿಂಗ್ಟನ್ ಸುಂದರ್ ಮತ್ತು ವರುಣ್ ಚಕ್ರವರ್ತಿ ಸಹ ಇರಲಿಲ್ಲ. ಆದರೂ, ಕುಲದೀಪ್ಗೆ ಆಡುವ ಹನ್ನೊಂದರಲ್ಲಿ ಸ್ಥಾನ ಸಿಕ್ಕಿಲ್ಲ. ಲಾರ್ಡ್ಸ್ನಲ್ಲಿ ಭಾರತದ ಬೌಲಿಂಗ್ ದಾಳಿಯಲ್ಲಿ ಸ್ಪಿನ್ ಕೊರತೆ ಎದ್ದು ಕಾಣುತಿತ್ತು ಎಡಗೈ ಸ್ಪಿನ್ನರ್ ಇದ್ದಿದ್ದರೆ ಪ್ರಯೋಜನವಾಗುತ್ತಿತ್ತು. ನೆನಪಿಡಿ, ಅವರು 118 ಏಕದಿನ ಪಂದ್ಯಗಳಲ್ಲಿ 194 ವಿಕೆಟ್ಗಳನ್ನು ಪಡೆದಿದ್ದಾರೆ. ಈ ಅತ್ಯುತ್ತಮ ಅಂಕಿಅಂಶಗಳು ಹೊರತಾಗಿಯೂ ಅವರಿಗೆ ಅವಕಾಶ ಸಿಗುತ್ತಿಲ್ಲ” ಎಂದು ಕೈಫ್ ಆಕ್ರೋಶ ಹೊರಹಾಕಿದ್ದಾರೆ.
ಕುಲದೀಪ್ ಯಾದವ್ ಕೊನೆಯ ಏಕದಿನ ಪಂದ್ಯ ಅಫ್ಘಾನಿಸ್ತಾನ ವಿರುದ್ಧವಾಗಿತ್ತು. ಅಲ್ಲಿ ಅವರು 10 ಓವರ್ಗಳ ಅವಧಿಯಲ್ಲಿ 42 ರನ್ಗಳಿಗೆ ವಿಕೆಟ್ ಪಡೆಯಲಿಲ್ಲ. ಈ ಒಂದೇ ಒಂದು ಪಂದ್ಯದಲ್ಲಿ ವಿಕೆಟ್ ತೆೆಗೆದಿಲ್ಲ ಅಂತ ಉಳಿದ ಪಂದ್ಯಕ್ಕೂ ಹೊರಗೆ ಕುರಿಸೂವುದು ನಿಜಕ್ಕೂ ದುರಂತ.

ನೋಡಿರಿ

