ರೋಹಿತ್ ನಿವೃತ್ತಿಗೆ BCCI ಶಾಕ್ – RRಗಿಂತ ಸಂಜುಗೆ CSK ಬೆಸ್ಟ್

ರೋಹಿತ್ ನಿವೃತ್ತಿಗೆ BCCI ಶಾಕ್  – RRಗಿಂತ ಸಂಜುಗೆ CSK ಬೆಸ್ಟ್

ತನ್ನ ನಾಯಕತ್ವದಲ್ಲಿ ಇಂಗ್ಲೆಂಡ್ ಹಾಗೂ ಐರ್ಲ್ಯಾಂಡ್ ಐಟಿ20 ಸರಣಿ ಸೋತಿರೋ ಶ್ರೇಯಸ್ ಅಯ್ಯರ್ ಇಂದು ಜಿಂಬಾಂಬೆ ವಿರುದ್ಧ ಗೆದ್ದು ಸರಣಿ ಕೈ ವಶ ಮಾಡಿಕೊಳ್ಳಲು ಕಣಕ್ಕಿಳಿದಿದ್ದಾರೆ. ಜಿಂಬಾಂಬೆ ವಿರುದ್ಧ ಇಂದಿನ ಪಂದ್ಯ ಗೆದ್ರೆ ಶ್ರೇಯಸ್ ಅಯ್ಯರ್‌ನಲ್ಲಿ ಗೆದ್ದ ಮೊದಲ ಸರಣಿ ಆಗಲಿದೆ. ಒಂದು ವೇಳೆ ಇಂದಿನ ಪಂದ್ಯದಲ್ಲಿ ಸೋತ್ರೆ ನಾಳೆ ಪಂದ್ಯ ಗೆಲ್ಲಲೇ ಬೇಕಿದೆೆ.

ರೋಹಿತ್ ಶರ್ಮಾ ನಿವೃತ್ತಿ ಬಗ್ಗೆ ಹುಟ್ಟಿಕೊಳ್ಳುತ್ತಿರೋ ಊಹಾಪೋಹಗಳ ನಡುವೆ ಬಿಸಿಸಿಐ ಸ್ಪಷ್ಟನೆ ನೀಡಿದೆ. ರೋಹಿತ್ ಶರ್ಮಾ ಏಕದಿನ ಪಂದ್ಯಕ್ಕೆ ನಿವೃತ್ತಿ ಹೊಂದಲ್ಲ ಅಂತ ಬಿಸಿಸಿಐ ಹೇಳಿದೆ. ರೋಹಿತ್ ಶರ್ಮಾ ನಮ್ಮ ತಂಡದ ಭಾಗವಾಗಿದ್ದಾರೆ ಮತ್ತು ಆಟವನ್ನು ಮುಂದುವರಿಸುತ್ತಿದ್ದಾರೆ ಎಂದು ಬಿಸಿಸಿಐ ಉಪಧ್ಯಾಕ್ಷ ರಾಜೀವ್ ಶುಕ್ಲಾ ಹೇಳಿದ್ದಾರೆ

ಜಿಂಬಾಂಬೆ ವಿರುದ್ಧ ವೈಭವ್ ಬ್ಯಾಟಿಂಗ್ ನೋಡಿದ ಮಾಜಿ ಕ್ರಿಕೆಟಿಗ  ಕೆ.ಶ್ರೀಕಾಂತ್, ಗೌತಮ್ ಗಂಭೀರ್ ವಿರುದ್ಧ ಕಿಡಿಕಾರಿದ್ದಾರೆ. ವೈಭವ್ ಆಡಿದ ಒಂದು ಶಾಟ್ ಕೂಡ ಅಡ್ಡಬ್ಯಾಟ್‌ನಿಂದ ಬಂದಿರಲಿಲ್ಲ. ಇಂತಹ ವಿಶೇಷ ಆಟಗಾರನನ್ನು ಕೇವಲ ಮೂರು ಪಂದ್ಯಗಳ ವೈಫಲ್ಯದ ನಂತರ ಕೈಬಿಟ್ಟ ಗೌತಮ್ ಗಂಭೀರ್ ನಿರ್ಧಾರ ಮೂರ್ಖತನದ್ದು. ಒಬ್ಬ ಯುವ ಆಟಗಾರನ ಆತ್ಮವಿಶ್ವಾಸವನ್ನು ಕುಗ್ಗಿಸುವುದು ಎಷ್ಟು ಸರಿ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 20 ಬಾಲ್ ಮೇಲೆ ಆಡಲ್ಲ ಸೂರ್ಯವಂಶಿ – ಶ್ರೇಯಸ್ ಮಾತು ಕೇಳಲ್ವಾ ವೈಭವ್?

ಸಂಜು ಸ್ಯಾಮ್ಸನ್ ಐಪಿಎಲ್ 2026ಕ್ಕೆ RR ಬಿಟ್ಟು CSK ಸೇರಿದ್ದು, ಇದ್ದಕ್ಕೆ ಈಗ ಸಂಜು ಪ್ರತಿಕ್ರಿಯೆ ನೀಡಿದ್ದಾರೆ.  ರಾಜಸ್ಥಾನ್ ರಾಯಲ್ಸ್ ತಂಡವನ್ನು ಬಿಡುವುದು ದೊಡ್ಡ ಅಪಾಯ ಎನಿಸಿತ್ತು. ಒಮ್ಮೆ ತಂಡಕ್ಕೆ ಹೇಳಿದ ಮೇಲೆ ಹಿಂದಕ್ಕೆ ಹೋಗುವುದು ಸಾಧ್ಯವಿಲ್ಲ. 2025 ರಲ್ಲಿ ರಾಜಸ್ಥಾನ್ ತಂಡದೊಂದಿಗೆ ನನ್ನ ಪ್ರಯಾಣವನ್ನು ಮುಗಿಸಲು ನಿರ್ಧರಿಸಿದೆ. ಈ ಬಗ್ಗೆ ನನ್ನ ಕುಟುಂಬ, ವಿಶೇಷವಾಗಿ ಹೆಂಡತಿಯೊಂದಿಗೆ ಮೂರು ವಾರ ಚರ್ಚಿಸಿದೆ. ಕೊನೆಗೆ ಇದು ಸರಿಯಾದ ನಿರ್ಧಾರ ಎನಿಸಿತು ಎಂದು ಹೇಳಿದ್ದಾರೆ.

ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಮಾರಾಟದ ಪಾಲು ಹಂಚಿಕೆಯಲ್ಲಿ ವಂಚನೆ ನಡೆದಿದೆ ಎಂದು ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಗಂಭೀರ ಆರೋಪ ಮಾಡಿದ್ದಾರೆ. ಇಷ್ಟೇ ಅಲ್ಲ ಕೋರ್ಟ್ ಮೆಟ್ಟಿಲೇರಿದ್ದಾರೆ. ಬರೋಬ್ಬರಿ 15,600 ಕೋಟಿ ರೂಪಾಯಿಗೆ ತಂಡ ಮಾರಾಟವಾಗಿತ್ತು. ಆದರೆ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ತಮಗಿದ್ದ ಶೇ 11.7 ರಷ್ಟು ಷೇರುಗಳಿಗೆ ಸರಿಯಾದ ಮೌಲ್ಯ ನೀಡದೆ ವಂಚನೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ ಪ್ರತಿಷ್ಠಿತ 2026ರ ಏಷ್ಯನ್ ಗೇಮ್ಸ್‌ನ ಕ್ರಿಕೆಟ್ ಪಂದ್ಯಾವಳಿಯ ಅಧಿಕೃತ ಡ್ರಾ ಮತ್ತು ವೇಳಾಪಟ್ಟಿ ಪ್ರಕಟವಾಗಿದೆ. ಅಗ್ರ ಶ್ರೇಯಾಂಕದ ಬಲದೊಂದಿಗೆ ಭಾರತದ ಪುರುಷರ ಮತ್ತು ಮಹಿಳಾ ಕ್ರಿಕೆಟ್ ತಂಡಗಳು ನೇರವಾಗಿ ಕ್ವಾರ್ಟರ್‌ಫೈನಲ್ ಹಂತಕ್ಕೆ ಪ್ರವೇಶ ಪಡೆದಿವೆ

ಟೀಮ್ ಇಂಡಿಯಾದಲ್ಲಿ ಅವಕಾಶ ವಂಚಿತರಾದ ಕುಲ್ದೀಪ್ ಯಾದವ್, ಕೌಂಟಿ ಕ್ರಿಕೆಟ್‌ನಲ್ಲಿ ಯಾರ್ಕ್‌ಷೈರ್ ಪರ ಗ್ಲಾಮೋರ್ಗನ್ ವಿರುದ್ಧ 2 ವಿಕೆಟ್ ಪಡೆದು ಮಿಂಚಿದ್ದಾರೆ. ಕೇವಲ 39 ರನ್ ನೀಡಿ ಪ್ರಮುಖ ವಿಕೆಟ್ ಕಬಳಿಸಿದ ಕುಲ್ದೀಪ್, ತಮ್ಮ ಫಾರ್ಮ್ ಸಾಬೀತುಪಡಿಸಿದ್ದಾರೆ. ಈ ಪ್ರದರ್ಶನದಿಂದಾಗಿ ಮುಂದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಅವರ ಆಸೆ ಹೆಚ್ಚಿದೆ.

ದಿ ಹಂಡ್ರೆಡ್ ಲೀಗ್ ಮಹಿಳಾ ಟೂರ್ನಿಯ ಮೂರನೇ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ತಂಡ ಗೆಲುವಿನ ಖಾತೆ ತೆರೆದಿದೆ. ಲಂಡನ್ ಸ್ಪಿರಿಟ್ ತಂಡವು 91 ಎಸೆತಗಳಲ್ಲಿ ಕೇವಲ 80 ರನ್​ಗಳಿಸಿ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಸ್ಮೃತಿ ಮಂದಾನ ಆಡುತ್ತಿರೋ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ಕೇವಲ 59 ಎಸೆತಗಳಲ್ಲಿ 86 ರನ್ ಬಾರಿಸಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ನನ್ನ ಅಪ್ಪನನ್ನ ಉಳಿಸಿ ಎಂದು ಪಾಕ್ ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಕಿರಿಯ ಪುತ್ರ ಖಾಸಿಮ್ ಖಾನ್  ಪೋಸ್ಟ್ ಹಾಕಿಕೊಂಡಿದ್ದಾರೆ. ನನ್ನ ತಂದೆ ಇಮ್ರಾನ್ ಖಾನ್ ಜೈಲಿಗೆ ತಳ್ಳಲ್ಪಟ್ಟು ಬರೋಬ್ಬರಿ 1100 ದಿನಗಳಾಗಿವೆ. ಕಳೆದ ಹಲವು ತಿಂಗಳುಗಳಿಂದ ಅವರನ್ನು ಭೇಟಿಯಾಗಲು ನಮಗೆ ಅಥವಾ ಕುಟುಂಬಕ್ಕೆ ಯಾವುದೇ ರೀತಿಯ ಅನುಮತಿಯನ್ನೂ ನೀಡುತ್ತಿಲ್ಲ. ಅವರ ಆರೋಗ್ಯದ ಸ್ಥಿತಿ ಹೇಗಿದೆ ಎನ್ನುವುದೂ ನಮಗೆ ತಿಳಿಯುತ್ತಿಲ್ಲ. ಅವರ ಬಲಗಣ್ಣಿನ ದೃಷ್ಟಿ ಶೇ. 85 ರಷ್ಟು ಕ್ಷೀಣಿಸಿದೆ, ಅವರಿಗೆ ಸೂಕ್ತ ಚಿಕಿತ್ಸೆ ಬೇಕಿದೆ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.

ಬೆನ್ ಸ್ಟೋಕ್ಸ್ ವಿದಾಯ ಮತ್ತು ಮೆಕಲಮ್ ನಿರ್ಗಮನದ ನಂತರ ಇಂಗ್ಲೆಂಡ್ ಟೆಸ್ಟ್ ತಂಡ ಹೊಸ ನಾಯಕನ ಹುಡುಕಾಟದಲ್ಲಿದೆ. ಮಾಜಿ ನಾಯಕ ಜೋ ರೂಟ್ ಮತ್ತೆ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆಯಿದೆ. ಹ್ಯಾರಿ ಬ್ರೂಕ್ ಹೆಸರೂ ಕೇಳಿಬಂದಿತ್ತು, ಆದರೆ ಅವರು ಸೀಮಿತ ಓವರ್‌ಗಳ ನಾಯಕರಾಗಿ ಮುಂದುವರೆಯಲಿದ್ದಾರೆ. ರೂಟ್ ಹಿಂದಿನ ನಾಯಕತ್ವದ ದಾಖಲೆ ಉತ್ತಮವಾಗಿದ್ದು, ಇಸಿಬಿ ಮತ್ತೊಮ್ಮೆ ಅವರತ್ತ ಒಲವು ತೋರಿದೆ.

Kishor KV

Leave a Reply

Your email address will not be published. Required fields are marked *