ಶಿವು ಈಗ ಮಾರಿಗುಡಿ ಜನನಾಯಕ– ಕುತಂತ್ರಿ ಮಾವನಿಗೆ ಸೋಲು

ಶಿವು ಈಗ ಮಾರಿಗುಡಿ ಜನನಾಯಕ– ಕುತಂತ್ರಿ ಮಾವನಿಗೆ ಸೋಲು

ಅಣ್ಣಯ್ಯ ಸೀರಿಯಲ್‌ನಲ್ಲಿ ಮಾರಿಗುಡಿ ಶಿವು ಚುನಾವಣೆಯಲ್ಲಿ ಗೆದ್ದಾಗಿದೆ. ಕುತಂತ್ರಿ ಮಾವನಿಗೆ ಸೋಲಾಗಿದೆ. ಈ ಮೂಲಕ ಅಣ್ಣಯ್ಯ ಧಾರಾವಾಹಿ ಮತ್ತೊಂದು ಮಹಾ ತಿರುವು ಪಡೆದುಕೊಂಡಿದೆ.

ಇದನ್ನೂ ಓದಿ:ಮದುವೆ ದಿನವೇ ಕೈಕೊಟ್ಟು ಓಡಿ ಹೋದ ಪಿಂಕಿ – ಗುಂಡಮ್ಮನ ಹತ್ರ ಓಡಿಬರ್ತಾನಾ ಜಿಮ್ ಸೀನ?

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಸೀರಿಯಲ್ ವೀಕ್ಷಕರಿಗೆ ಇಷ್ಟವಾಗುತ್ತಿದೆ. ಅದರಲ್ಲೂ ಮಾರಿಗುಡಿ ಶಿವು ಮತ್ತು ಆತನ ತಂಗಿಯರಿಗೆ ಒಳ್ಳೆಯದಾಗುತ್ತಿರುವ ರೀತಿ ವೀಕ್ಷಕರ ಮನಗೆದ್ದಿದೆ. ಸೋಲು ಮೆಟ್ಟಿನಿಂತು ಗೆಲ್ಲುವುದು ಹೇಗೆ ಎಂಬ ಪಾಠ ಕಲಿಸುತ್ತಿರುವ ಪಾರು ಕೂಡಾ ಇಷ್ಟವಾಗುತ್ತಿದ್ದಾಳೆ. ಇದೀಗ ಚುನಾವಣೆಯಲ್ಲಿ ಶಿವು ಗೆದ್ದಾಗಿದೆ. ಮಾರಿಗುಡಿಗೆ ಶಿವುನೇ ಇನ್ಮುಂದೆ ಜನನಾಯಕ.

ಅಳಿಯ ಶಿವುನ ಕಂಡರೆ ಮಾವ ವೀರಭದ್ರನಿಗೆ ಆಗಲ್ಲ. ಎದುರಲ್ಲಿ ಶಿವುನ ಹೊಗಳಿ, ಬೆನ್ನಹಿಂದೆ ಧ್ರೋಹ ಬಗೆಯುತ್ತಿದ್ದ ವೀರಭದ್ರನ ಅಹಂಗೆ ಸರಿಯಾದ ಹೊಡೆತ ಬಿದ್ದಿದೆ. ಶಿವು ಯಾವತ್ತಿದ್ದರೂ ನನ್ನ ಕಾಲಕೆಳಗೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ ವೀರಭದ್ರ ಸೋತಾಗಿದೆ. ಚುನಾವಣೆಯಲ್ಲಿ ಅಳಿಯ ಶಿವು ಗೆದ್ದು ಬೀಗಿದ್ದಾನೆ. ಇನ್ನು ಮುಂದೆ ಶಿವುನೇ ಜನನಾಯಕ ಎಂದು ಪಾರು ಹೇಳಿದ್ದಾಳೆ. ವೀರಭದ್ರ ಮನೆಯಲ್ಲೂ ದುರಂಹಕಾರ ಮೆರೆಯುತ್ತಿದ್ದ. ಇಬ್ಬರೂ ಪತ್ನಿಯರಿಗೂ ಇನ್ನಿಲ್ಲದ ಟಾರ್ಚರ್ ಕೊಡುತ್ತಿದ್ದ. ಈಗ ಸೊಸೆ ರತ್ನಂಗೂ ಕಿರಿಕಿರಿ ಮಾಡುತ್ತಿದ್ದ. ಅದರಲ್ಲೂ ಅಳಿಯ ಶಿವು ಅಂದರೆ ವೀರಭದ್ರನಿಗೆ ಕಾಲ ಕಸ. ಆದರೆ, ಮಗಳು ಪಾರು ಇಂಥಾ ಅನ್ಯಾಯದ ವಿರುದ್ಧ ಸೆಟೆದು ನಿಂತಿದ್ದಳು. ಅಪ್ಪನ ತಂತ್ರಕ್ಕೆ ಪ್ರತಿತಂತ್ರ ಹೂಡಿದ ಪಾರು ಒಂದೊಂದೇ ಗೆಲುವು ಕಾಣುತ್ತಿದ್ದಾಳೆ. ಮಗಳ ದಿಟ್ಟತನದ ಮುಂದೆ ವೀರಭದ್ರ ಸೋತು ಸುಣ್ಣವಾಗಿದ್ದಾನೆ.

ಮಾರಿಗುಡಿಯಲ್ಲಿ ನಡೆದ ಚುನಾವಣೆಯಲ್ಲಿ ಗೆಲ್ಲಲು ವೀರಭದ್ರ ಏನೇನೋ ಕಸರತ್ತು ಮಾಡಿದ್ದ, ಅಷ್ಟೇ ಅಲ್ಲ ಶಿವು ಚುನಾವಣೆಗೆ ನಿಲ್ಲದಂತೆ ತಡೆಯಲು  ಕುತಂತ್ರ ನಡೆಸಿದ್ದ. ಆದರೆ ಪಾರು ಇದಕ್ಕೆಲ್ಲಾ ಬ್ರೇಕ್ ಹಾಕಿ ಚುನಾವಣೆಯಲ್ಲಿ ಶಿವು ಗೆಲ್ಲುವಂತೆ ಮಾಡಿದ್ದಾಳೆ. ಮಾರಿಗುಡಿಗೆ ಈಗ ನಿಜವಾದ ಜನನಾಯಕ ಸಿಕ್ಕಿದ್ದಾನೆ. ಶಿವಣ್ಣನ ಈ ಗೆಲುವು ಧಾರಾವಾಹಿ ವೀಕ್ಷಕರಿಗೂ ಇಷ್ಟವಾಗಿದೆ. ವೀರಭದ್ರನ ನಿಜ ಮುಖ ಇನ್ನೂ ಕೂಡ ಶಿವುಗೆ ಗೊತ್ತಾಗಿಲ್ಲ. ಇನ್ನು ಮುಂದೆ ಮಾವ ಅಳಿಯನ ಮುಖಾಮುಖಿ ಹೇಗಿರುತ್ತೆ ಎಂಬ ಕುತೂಹಲವೂ ಹೆಚ್ಚಾಗಿದೆ.

Sulekha

Leave a Reply

Your email address will not be published. Required fields are marked *