ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟ ಝಂಡು ಕುಮಾರ್ – ದೇಶಕ್ಕೆ ಕೀರ್ತಿ ತಂದವನ ಹಿಂದಿದೆ ನೋವಿನ ಕಥೆ
ಪ್ಯಾರಾ ಪವರ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತಕ್ಕೆ ಕಂಚಿನ ಪದಕ

ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟ ಝಂಡು ಕುಮಾರ್ – ದೇಶಕ್ಕೆ ಕೀರ್ತಿ ತಂದವನ ಹಿಂದಿದೆ ನೋವಿನ ಕಥೆಪ್ಯಾರಾ ಪವರ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತಕ್ಕೆ ಕಂಚಿನ ಪದಕ

ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಭಾರತ ಪದಕದ ಖಾತೆ ತೆರೆದಿದೆ. ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟಿದ್ದಾರೆ ಝಂಡು ಕುಮಾರ್. ಝಂಡು ಕುಮಾರ್ ಕಂಚಿನ ಪದಕ ಗೆಲ್ಲುತ್ತಿದ್ದಂತೆ, ಇಡೀ ದೇಶವೇ ಪ್ಯಾರಾ ಪವರ್‌ಲಿಫ್ಟಿಂಗ್ ಸ್ಪರ್ಧಿಯನ್ನು ಕೊಂಡಾಡಿದೆ.

ಇದನ್ನೂ ಓದಿ:ZIMಗೆ ಸೂರ್ಯವಂಶಿಯದ್ದೇ ಟೆನ್ಷನ್ – MASTER MIND ಲಕ್ಷ್ಮಣ್ ಗೆದ್ದಿದ್ದೇಗೆ?

ಗ್ಲ್ಯಾಸ್ಗೋ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಕಂಚಿನ ಪದಕ ತಂದುಕೊಡುವ ಮೂಲಕ ದೇಶಕ್ಕೆ ಹೆಮ್ಮೆ ತಂದಿದ್ದಾರೆ ಝುಂಡು ಕುಮಾರ್. ಪುರುಷರ ಹೆವಿವೇಯ್ಟ್ ಪ್ಯಾರಾ ಪವರ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತದ ಝಂಡು ಕುಮಾರ್ ಕಂಚಿನ ಪದಕ ಗೆದ್ದಿದ್ದಾರೆ. ಸ್ಪರ್ಧೆಯುದ್ದಕ್ಕೂ ಝಂಡು ಕುಮಾರ್ ಪ್ರದರ್ಶನ ಅಮೋಘವಾಗಿತ್ತು. ಝಂಡು ಕುಮಾರ್ ಅವರು ಯಶಸ್ವಿಯಾಗಿ 181 ಕೆಜಿ ಭಾರ ಎತ್ತುವ ಮೂಲಕ ಶುಭಾರಂಭ ಮಾಡಿದರು. ಕಠಿಣ ಸವಾಲನ್ನು ಮೀರಿ 190 ಕೆಜಿ ಭಾರವನ್ನು ಎತ್ತಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು. ಝಂಡು ಕುಮಾರ್ ಅವರು ಮೂರನೇ ಯತ್ನದಲ್ಲಿ 196 ಕೆಜಿ ಭಾರ ಎತ್ತಿ ಕಾಮನ್‌ವೆಲ್ತ್ ಗೇಮ್ಸ್ ದಾಖಲೆ ಬರೆಯಲು ಯತ್ನಿಸಿದರು. ಆದರೆ, ಅದು ನೋ ಲಿಫ್ಟ್ ಆಗಿತ್ತು. ಅಂತಿಮವಾಗಿ ಝಂಡು ಕುಮಾರ್ ಒಟ್ಟು 130.9 ಅಂಕಗಳನ್ನು ಪಡೆಯುವ ಮೂಲಕ ತೃತೀಯ ಸ್ಥಾನ ಗಳಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು.

ಬಿಹಾರ ರಾಜ್ಯದ ನಲಂದಾ ಜಿಲ್ಲೆಯ ಹರ್ನೌಟ್ ಎಂಬ ಗ್ರಾಮದಲ್ಲಿ ಜನಿಸಿದ ಝುಂಡು ಕುಮಾರ್ ಅವರು ಪೋಲಿಯೋ ಪೀಡಿತರಾಗಿದ್ದರು. ಆರ್ಥಿಕ ಸಂಕಷ್ಟದಿಂದಾಗಿ ಇವರು ಜೀವನದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಯಿತು. ಇವರ ತಂದೆ ತರಕಾರಿ ಮಾರಾಟ ಮಾಡಿ ಕುಟುಂಬವನ್ನು ಸಲಹುತ್ತಿದ್ದರು. ಹುಟ್ಟಿನಿಂದಲೇ ಪೋಲಿಯೋ ಪೀಡಿತರಾಗಿದ್ದ ಝಂಡುಕುಮಾರ್, ಆರ್ಥಿಕ ಹಾಗೂ ದೈಹಿಕ ಅಡೆತಡೆಗಳನ್ನು ಮೆಟ್ಟಿ ನಿಂತು ಕ್ರೀಡಾ ಜಗತ್ತಿಗೆ ಕಾಲಿಟ್ಟಿದ್ದರು. ಕುತೂಹಲಕಾರಿ ವಿಷಯವೆಂದರೆ, ಝುಂಡು ಅವರ ಕ್ರೀಡಾ ಜೀವನವು ‘ಪ್ಯಾರಾ ಪವರ್‌ಲಿಫ್ಟಿಂಗ್’ನೊಂದಿಗೆ ಆರಂಭವಾಗಲಿಲ್ಲ.  ಬದಲಾಗಿ, ಅವರು ‘ಶಾಟ್ ಪುಟ್’ ಮತ್ತು ‘ಡಿಸ್ಕಸ್ ಥ್ರೋ’ ಕ್ರೀಡೆಗಳೊಂದಿಗೆ ತಮ್ಮ ಕ್ರೀಡಾ ಪಯಣವನ್ನು ಪ್ರಾರಂಭಿಸಿದರು. 2017ರಲ್ಲಿ ಕ್ರೀಡಾ ಜೀವನಕ್ಕೆ ಕಾಲಿಟ್ಟಾಗ, ಅವರು ಈ ಕ್ರೀಡೆಗಳಲ್ಲಿ ‘F55’ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಅಷ್ಟೇ ಅಲ್ಲದೆ, ಇದೇ ಕ್ರೀಡೆಗಳಲ್ಲಿ ಜಿಲ್ಲಾ ಮತ್ತು ರಾಜ್ಯ ಮಟ್ಟದ ಪದಕಗಳನ್ನು ಸಹ ಗೆದ್ದುಕೊಂಡಿದ್ದರು. ನಂತರ ಪವರ್‌ಲಿಫ್ಟಿಂಗ್ ಕ್ರೀಡೆಯ ಬಗ್ಗೆ ಆಸಕ್ತಿ ಮೂಡಿಸಿತು. ಉನ್ನತ ಮಟ್ಟದ ಸ್ಪರ್ಧೆಗಳಿಗೆ ಅಗತ್ಯವಿರುವ ಪೌಷ್ಟಿಕ ಆಹಾರವನ್ನು ಪಡೆಯಲು ಕೈಯಲ್ಲಿ ದುಡ್ಡು ಸಾಕಾಗುತ್ತಿರಲಿಲ್ಲ. ಹೀಗಾಗಿ ಆರ್ಥಿಕ ಶಕ್ತಿಯಿಲ್ಲದಿದ್ದರಿಂದ, ಕುಮಾರ್ ತರಕಾರಿ ವ್ಯಾಪಾರ ನಡೆಸಿದರು. ಜೊತೆಗೆ ವೀಲ್‌ಚೇರ್ ಇಲ್ಲದಿದ್ದರೂ ಸುಮಾರು 20 ಕಿಲೋಮೀಟರ್‌ಗಳಷ್ಟು ದೂರದ ಸ್ಥಳೀಯ ಮಾರುಕಟ್ಟೆಗಳಿಗೆ ತರಕಾರಿ ವ್ಯಾಪಾರಕ್ಕೆ ಹೋಗುತ್ತಿದ್ದರು. ನಂತರ ಸ್ನೇಹಿತರಿಂದ ಹಣ ಸಾಲ ಪಡೆದು ಇ-ರಿಕ್ಷಾ ಖರೀದಿಸಿದರು. ಜೀವನಕ್ಕಾಗಿ ಇ-ರಿಕ್ಷಾ ಓಡಿಸಿಕೊಂಡಿರುವ ಝುಂಡು ಕುಮಾರ್, ಆಟೋ ಓಡಿಸುತ್ತಲೇ ಅಭ್ಯಾಸ ಮಾಡಿದ್ದರು. ಇದೀಗ ತಮ್ಮ ಪರಿಶ್ರಮದ ಮೂಲಕ ಭಾರತಕ್ಕೆ ಮೊದಲ ಪದಕ ಗೆಲ್ಲಿಸಿಕೊಟ್ಟಿದ್ದಾರೆ.

Sulekha

Leave a Reply

Your email address will not be published. Required fields are marked *