ಬಿಗ್‌ಬಾಸ್ ಶೋ ಆರಂಭಕ್ಕೆ ಡೇಟ್ ಫಿಕ್ಸ್ – ಕಿಚ್ಚನ ಅಬ್ಬರಕ್ಕೆ ಶುರುವಾಯ್ತು ಕೌಂಟ್‌ಡೌನ್

ದೊಡ್ಮನೆ ಬೀಗ ತೆರೆಯಲು ಡೇಟ್ ಫಿಕ್ಸ್ ಆಗಿದೆ. ಬಿಗ್‌ಬಾಸ್ ಕನ್ನಡ ರಿಯಾಲಿಟಿ ಶೋ 13ನೇ ಸೀಸನ್‌ಗೆ ಮುಹೂರ್ತ ಫಿಕ್ಸ್ ಆಗಿದೆ. ಕಿಚ್ಚ ಸುದೀಪ್ ಖಡಕ್ ಲುಕ್, ಖಡಕ್ ಮಾತಿಗೆ ಕನ್ನಡ ವೀಕ್ಷಕರು ಕೂಡಾ ಕಾಯುತ್ತಿದ್ದಾರೆ.
ಇದನ್ನೂ ಓದಿ:ಟಾಕ್ಸಿಕ್ ಸಿನಿಮಾ ವಯಸ್ಕರಿಗೆ ಮಾತ್ರ ಯಾಕೆ? – ಮಕ್ಕಳನ್ನು ಕರೆತರಲೇಬೇಡಿ ಎಂದಿದ್ಯಾಕೆ ನಿರ್ಮಾಪಕರು
ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಇನ್ನೊಂದು ತಿಂಗಳಲ್ಲಿ ಶುರುವಾಗಲಿದೆ. ಬಿಗ್ ಬಾಸ್ ಕನ್ನಡ ಸೀಸನ್ 13 ಸೆಪ್ಟೆಂಬರ್ ಮೊದಲ ವಾರದಲ್ಲೇ ಆರಂಭವಾಗಲಿದೆ. ಸೆಪ್ಟೆಂಬರ್ 5ರಂದು ದೊಡ್ಮನೆಯ ಬಾಗಿಲು ತೆರೆಯಲಿದೆ. ಶಿಕ್ಷಕರ ದಿನಾಚರಣೆಯಂದೇ ಬಿಗ್‌ಬಾಸ್ ಅಭ್ಯರ್ಥಿಗಳಿಗೆ ಬದುಕಿನ ಪಾಠ ಕಲಿಸಲು ಕಿಚ್ಚ ಸುದೀಪ್ ರೆಡಿಯಾಗುತ್ತಿದ್ದಾರೆ. ಬಿಗ್‌ಬಾಸ್‌ನಲ್ಲಿ ಈ ಬಾರಿ ಕಾಮನ್ ಮ್ಯಾನ್ ಎಂಟ್ರಿ ಇರಲಿದೆ. ಈಗಾಗಲೇ ಸಾಮಾನ್ಯ ಜನರಿಗಾಗಿ ಆಡಿಷನ್ ಪ್ರಕ್ರಿಯೆ ನಡೆದಿದೆ. ಈ ಬಾರಿ ದೊಡ್ಮನೆಗೆ ಸಾಮಾನ್ಯ ಜನ ಸೆಲೆಬ್ರಿಟಿಗಳ ಜೊತೆ ಇರಲಿದ್ದಾರೆ. ಕಿಚ್ಚನ ಜೊತೆ ಕಾಮನ್‌ಮ್ಯಾನ್ ನಿಲ್ಲುವ ಕ್ಷಣ ಹೇಗಿರಲಿದೆ ಎಂಬ ಕುತೂಹಲ ಕೂಡಾ ವೀಕ್ಷಕರಲ್ಲಿದೆ.
ಮೊದಲ ಬಾರಿಗೆ ಕನ್ನಡದ ಜೊತೆಜೊತೆಗೇ ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಬಾಂಗ್ಲಾ ಭಾಷೆಗಳ ಬಿಗ್‌ಬಾಸ್ ಸೀಸನ್ ಕೂಡ ಏಕಕಾಲಕ್ಕೆ ಶುರುವಾಗಲಿವೆಯಂತೆ. ಪ್ರಾದೇಶಿಕ ಭಾಷೆಗಳ ನಡುವೆ ಈ ಬಾರಿ ಕಾಂಪಿಟೇಷನ್ ಹೇಗಿರಲಿದೆ ಎಂಬುದು ಕೂಡ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ. ಆದ್ದರಿಂದ ಈ ಬಾರಿಯ ಬಿಗ್ ಬಾಸ್ ರಿಯಾಲಿಟಿ ಶೋಗಳು ಎಂದಿನದಕ್ಕಿಂತ ಭಿನ್ನವಾಗಿ ಇರಲಿವೆ. ಈ ಬಾರಿ ಕೂಡಾ ರೀಲ್ಸ್ ಸ್ಟಾರ್‌ಗಳಿಗೆ ಅವಕಾಶ ಸಿಗಲಿದೆ. ಜೊತೆಗೆ ಕಲಾವಿದರಿಗೂ ದೊಡ್ಮನೆಗೆ ಬರಲು ಅವಕಾಶವಿದೆ. ಸೆಪ್ಟೆಂಬರ್ 5ಕ್ಕೆ ಬಿಗ್‌ಬಾಸ್ ಮನೆಯ ಬೀಗ ಓಪನ್ ಆಗಲಿದೆ. ಆದರೆ, ದೊಡ್ಮನೆಗೆ ಎಂಟ್ರಿ ಕೊಡೋದು ಯಾರು ಎಂಬ ಕುತೂಹಲಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ.

ನೋಡಿರಿ

