ZIMಗೆ ಸೂರ್ಯವಂಶಿಯದ್ದೇ ಟೆನ್ಷನ್ – MASTER MIND ಲಕ್ಷ್ಮಣ್ ಗೆದ್ದಿದ್ದೇಗೆ?
2ನೇ ಪಂದ್ಯಕ್ಕೆ ಪ್ಲೇಯಿಂಗ್ 11 ಹೇಗಿದೆ?

ಟಿ-20ವಿಶ್ವಕಪ್ ಗೆದ್ದು ಸತತ 7 ಪಂದ್ಯಗಳಲ್ಲಿ ಸೋತು ಸೊರಗಿದ್ದ ಭಾರತ ಕೊನೆಗೂ ಜಿಂಬಾಬ್ವೆಯಲ್ಲಿ ಗೆಲ್ಲೋ ಮೂಲಕ ಸೋಲಿನ ಸರಣಿಗೆ ಬ್ರೇಕ್ ಬಿದ್ದಿದೆ. ಜಿಂಬಾಬ್ವೆ ವೀಕ್ ಟೀಂ ಅದಕ್ಕೆ ಗೆದ್ರೂ ಅಂತಾ ಕೆಲವ್ರು ಗೇಲಿ ಮಾಡಿದ್ರೂ ಈ ವಿಕ್ಟರಿ ಒಂದು ಪಾಸಿಟಿವ್ ವೈಬ್ಸ್ ಅಂತೂ ಕೊಟ್ಟಿರುತ್ತೆ. ನೆಕ್ಸ್ಟ್ ಪಂದ್ಯಗಳಿಗೆ ಕಾನ್ಫಿಡೆನ್ಸ್ ಬೂಸ್ಟ್ ಮಾಡುತ್ತೆ. ಆದ್ರೆ ಈ ಮ್ಯಾಚ್ ಆದ್ಮೇಲೆ ಜಿಂಬಾಬ್ವೆಗೆ ವೈಭವ್ ಸೂರ್ಯವಂಶಿ ಬಗ್ಗೆ ಟೆನ್ಷನ್ ಸ್ಟಾರ್ಟ್ ಆಗಿದೆ.
ಇದನ್ನೂ ಓದಿ : RCB ಆಟಗಾರರಿಗೆ BCCI ಅನ್ಯಾಯ!- ತುಳಿದ ಗಂಭೀರ್ಗೆ ಕುಲದೀಪ್ ಡಿಚ್ಚಿ
ಭಾರತ ಮತ್ತು ಜಿಂಬಾಬ್ವೆ ನಡುವಿನ ಮೊದಲ ಟಿ-20ಐ ಮ್ಯಾಚಲ್ಲಿ ಭಾರತ ಆಲ್ರೌಂಡ್ ಪ್ರದರ್ಶನ ನೀಡಿ ಗೆದ್ದು ಬೀಗಿದೆ. ಈಸಿ ಟಾರ್ಗೆಟ್, ವೈಭವ್ ಸೂರ್ಯವಂಶಿ ಹೊಡಿಬಡಿ ಆಟಕ್ಕೆ ಒನ್ ಸೈಡೆಡ್ ವಿಕ್ಟರಿನೇ ಆಯ್ತು. ಈ ಗೆಲುವು ಸಿಕ್ಮೇಲೆ ಟೀಂ ಇಂಡಿಯಾ ಫ್ಯಾನ್ಸ್ ಸ್ವಲ್ಪ ರಿಲ್ಯಾಕ್ಸ್ ಆಗ್ತಾರೆ. ಇಂಟ್ರೆಸ್ಟಿಂಗ್ ಅಂದ್ರೆ ಈ ಪಂದ್ಯದಲ್ಲಿ ಗೌತಮ್ ಗಂಭೀರ್ ಇಲ್ಲದ್ದಕ್ಕೇ ಗೆದ್ದಿದ್ದು ಅಂತಾ ಕೆಲ ಅಭಿಮಾನಿಗಳು ಹೊಸ ವರಸೆ ಶುರು ಮಾಡಿದ್ದಾರೆ.
ಭಾರತದ ಸೋಲುಗಳಿಗೆಲ್ಲಾ ಗೌತಮ್ ಗಂಭೀರ್ ಕಾರಣನಾ?
ಹೆಡ್ ಕೋಚ್ ಗೌತಮ್ ಗಂಭೀರ್ ಅವ್ರ ಆಬ್ಸೆನ್ಸ್ನಲ್ಲಿ ಹಂಗಾಮಿ ಕೋಚ್ ವಿವಿಎಸ್ ಲಕ್ಷ್ಮಣ್ ಅವ್ರ ಅಡಿಯಲ್ಲಿ ಭಾರತ ಜಿಂಬಾಬ್ವೆ ವಿರುದ್ಧ ಸರಣಿ ಆಡ್ತಿದೆ. ಮೊದಲ ಪಂದ್ಯ ಗೆದ್ದ ಮೇಲೆ ಕೆಲ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಗಂಭೀರ್ ಇಲ್ಲದ್ದಕ್ಕೇ ಭಾರತ ವಿನ್ ಆಗಿದೆ ಅಂತೆಲ್ಲಾ ಪೋಸ್ಟ್ಗಳನ್ನ ಹಾಕ್ತಿದ್ದಾರೆ. ಹಾಗೇ ವಿವಿಎಸ್ ಲಕ್ಷ್ಮಣ್ ಅಂಡರ್ನಲ್ಲಿ ಭಾರತೀಯ ಆಟಗಾರರು ಫ್ರೀಯಾಗಿ ಪರ್ಫಾಮ್ ಮಾಡ್ತಿರೋದ್ರಿಂದಲೇ ಗೆದ್ದಿದ್ದು ಅಂದಿದ್ದಾರೆ. ಒಂದ್ಕಡೆ ವಿವಿಎಸ್ ಲಕ್ಷ್ಮಣ್ ಎರಡನೇ ಗೆಲುವಿನ ಟಾರ್ಗೆಟ್ನಲ್ಲಿದ್ರೆ ಅತ್ತ ಜಿಂಬಾಬ್ವೆ ಆಟಗಾರರಿಗೆ ವೈಭವ್ ಸೂರ್ಯವಂಶಿ ಬಗ್ಗೆ ಸ್ವಲ್ಪ ಟೆನ್ಷನ್ ಇದೆ.
ಸೂರ್ಯವಂಶಿ ವಿಕೆಟ್ ಟಾರ್ಗೆಟ್ ಮಾಡಿದ ಜಿಂಬಾಬ್ವೆ!
ಇಂಗ್ಲೆಂಡ್ ಪ್ರವಾಸದಲ್ಲಿ ವೈಭವ್ ಡೆಬ್ಯೂ ಮಾಡಿದ್ರೂ ಕೂಡ ಮೂರು ಪಂದ್ಯಗಳಲ್ಲೂ 15 ರನ್ಗಳ ಒಳಗೇ ಔಟ್ ಆಗಿದ್ರು. ಬಟ್ ಜಿಂಬಾಬ್ವೆಯಲ್ಲಿ 18 ಬಾಲಲ್ಲೇ ಅರ್ಧಶತಕ ಬಾರಿಸಿದ್ದಾರೆ. ಇದಕ್ಕೂ ಹಿಂದೆ ಅಂಡರ್ 19 ವಿಶ್ವಕಪ್ನಲ್ಲೂ ಇದೇ ಜಿಂಬಾಬ್ವೆ ವಿರುದ್ಧ 24 ಬಾಲಲ್ಲೇ ಅರ್ಧಶತಕ ಬಾರಿಸಿದ್ರು. ಹೀಗಾಗಿ ಆದಷ್ಟು ಬೇಗ ವೈಭವ್ ವಿಕೆಟ್ ತೆಗೆಯೋಕೆ ಗ್ರೌಂಡ್ ವರ್ಕ್ ಮಾಡ್ತಿದ್ದಾರೆ. ಸೂರ್ಯವಂಶಿ ವೀಕ್ನೆಸ್ ಏನೆಲ್ಲಾ ಅನ್ನೋದನ್ನ ಅನಲಿಸಿಸ್ ಮಾಡ್ತಿದ್ದಾರೆ. ಬಟ್ ಭಾರತ ಮಾತ್ರ ಫಸ್ಟ್ ಮ್ಯಾಚ್ ಗೆದ್ದಿರೋದ್ರಿಂದ ಎರಡನೇ ಪಂದ್ಯವನ್ನೂ ಗೆಲ್ಲೋ ಕಾನ್ಫಿಡೆಂಟ್ನಲ್ಲಿದ್ದಾರೆ.
2ನೇ ಪಂದ್ಯಕ್ಕೆ ಭಾರತ ತಂಡ!
ವೈಭವ್ ಸೂರ್ಯವಂಶಿ
ಅಭಿಷೇಕ್ ಶರ್ಮಾ
ಇಶಾನ್ ಕಿಶನ್
ಶ್ರೇಯಸ್ ಅಯ್ಯರ್
ತಿಲಕ್ ವರ್ಮಾ
ರಿಂಕು ಸಿಂಗ್
ಶಿವಂ ದುಬೆ
ರವಿ ಬಿಷ್ಣೋಯ್
ಪ್ರಿನ್ಸ್ ಯಾದವ್
ಅಶೋಕ್ ಶರ್ಮಾ
ಮಯಾಂಕ್ ಯಾದವ್
ಟೀಂ ಇಂಡಿಯಾ ಪ್ಲೇಯಿಂಗ್ 11ನಲ್ಲಿ ಯಾವುದೇ ಚೇಂಜಸ್ ಇರಲ್ಲ. ಒಂದು ವೇಳೆ ಪ್ರಾಕ್ಟೀಸ್ ಟೈಮಲ್ಲಿ ಯಾರಾದ್ರೂ ಇಂಜುರಿಯಾದ್ರೆ ಲಾಸ್ಟ್ ಮೂಮೆಂಟ್ ಚೇಂಜಸ್ ಮಾಡ್ಬೋದು. ಒಟ್ನಲ್ಲಿ ಭಾರತದ ಎದುರು ಜಿಂಬಾಬ್ವೆ ವೀಕ್ ಟೀಂ ಅನ್ಸಿದ್ರೂ ಗೆದ್ದಿರೋದ್ರಿಂದ ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂ ಪ್ರೆಶರ್ ಕಡಿಮೆ ಮಾಡಿರುತ್ತೆ. ಹಾಗೇ ಮುಂದಿನ ಪಂದ್ಯಗಳಿಗೂ ಅದೇ ಕಾನ್ಫಿಡೆನ್ಸ್ ಇರುತ್ತೆ.

ನೋಡಿರಿ

