ವೈಭವ್ ಆಫ್ ಸೆಂಚರಿ, ಅಯ್ಯರ್ ಗೆಲುವಿನ ಖಾತೆ ಓಪನ್ – ZIM ವಿರುದ್ಧ ಗೆದ್ದ ಟೀಂ ಇಂಡಿಯಾ

ಟೀಂ ಇಂಡಿಯಾ ಆತಿಥೇಯ ಜಿಂಬಾಬ್ವೆ ತಂಡವನ್ನು 7 ವಿಕೆಟ್ಗಳಿಂದ ಮಣಿಸಿ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ. ಮೂಲಕ ಶ್ರೇಯಸ್ ಕ್ಯಾಪ್ಟನ್ ಆದ ಮೇಲೆ ಗೆಲುವಿನ ಖಾತೆ ತೆರೆದಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ 20 ಓವರ್ಗಳಲ್ಲಿ 7 ವಿಕೆಟ್ಗೆ 125 ರನ್ ಗಳಿಸಿತು. ತಂಡದ ಪರ ವೆಸ್ಲಿ ಮಾಧೇವೆರೆ 39 ಮತ್ತು ಮರುಮಾನಿ 27 ರನ್ಗಳ ಇನ್ನಿಂಗ್ಸ್ ಆಡಿದರು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 3 ವಿಕೆಟ್ಗಳನ್ನು ಕಳೆದುಕೊಂಡು 14ನೇ ಓವರ್ನಲ್ಲಿ ಗೆಲುವಿನ ದಡ ಮುಟ್ಟಿತು. ತಂಡದ ಪರ ವೈಭವ್ ಸೂರ್ಯವಂಶಿ ಕೇವಲ 18 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಬಾರಿಸಿದರು. ಈ ಗೆಲುವಿನೊಂದಿಗೆ ಶ್ರೇಯಸ್ ಅಯ್ಯರ್ ನಾಯಕನಾಗಿ ತಮ್ಮ ಗೆಲುವಿನ ಖಾತೆಯನ್ನು ತೆರೆದರು.
ಇದನ್ನೂ ಓದಿ: ಹಳೇ ಬಟ್ಟೆ, ಒಡೆದ ಪಾತ್ರೆ ಸೇರಿ 5 ಈ ವಸ್ತುಗಳನ್ನ ಶುಕ್ರವಾರ ಮನೆಯಿಂದ ಹೊರ ಹಾಕಿ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ಕಳಪೆ ಆರಂಭ ಪಡೆಯಿತು. ಸುಮಾರು ಎರಡೂವರೆ ವರ್ಷಗಳ ನಂತರ ಮೈದಾನಕ್ಕಿಳಿದ ಮಯಾಂಕ್ ಯಾದವ್ ಮೊದಲ ಎಸೆತದಲ್ಲೇ ವಿಕೆಟ್ ಪಡೆದರು. ಮೊದಲ ಎಸೆತವನ್ನೇ 149 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿ ಬ್ರಿಯಾನ್ ಬೆನೆಟ್ ವಿಕೆಟ್ ಪಡೆದರು. ಇದಾದ ಬಳಿಕವೂ ಜಿಂಬಾಬ್ವೆಯ ಪೆವಿಲಿಯನ್ ಪರೇಡ್ ನಿಲ್ಲಲಿಲ್ಲ. ಆದಾಗ್ಯೂ 7ನೇ ವಿಕೆಟ್ಗೆ ಜೊತೆಯಾದ ವೆಸ್ಲಿ ಮಾಧೇವೆರೆ 39 ಮತ್ತು ಮರುಮಾನಿ 27 ರನ್ಗಳ ಇನ್ನಿಂಗ್ಸ್ ಆಡಿದರು. ಇವರಿಬ್ಬರ ಆಟದಿಂದಾಗಿ ಜಿಂಬಾಬ್ವೆ 125 ರನ್ ಕಲೆಹಾಕಿತು.
ಇತ್ತ ಟೀಂ ಇಂಡಿಯಾ ಪರ ಬೌಲಿಂಗ್ನಲ್ಲಿ ಮಿಂಚಿದ ಮಯಾಂಕ್ ಯಾದವ್ 4 ಓವರ್ಗಳಲ್ಲಿ 18 ರನ್ ನೀಡಿ 2 ವಿಕೆಟ್ ಪಡೆದರು. ಪ್ರಿನ್ಸ್ ಯಾದವ್ ಕೂಡ 4 ಓವರ್ಗಳಲ್ಲಿ 19 ರನ್ ನೀಡಿ 2 ವಿಕೆಟ್ ಪಡೆದರು. ಟಿ20 ಕ್ರಿಕೆಟ್ನಲ್ಲಿ ಚೊಚ್ಚಲ ಪಂದ್ಯವನ್ನಾಡಿದ ಅಶೋಕ್ ಶರ್ಮಾ 4 ಓವರ್ಗಳಲ್ಲಿ 29 ರನ್ ನೀಡಿದರು. ಆದರೆ ಒಂದೇ ಒಂದು ವಿಕೆಟ್ ಪಡೆಯಲಿಲ್ಲ. ಶಿವಂ ದುಬೆ 4 ಓವರ್ಗಳಲ್ಲಿ ಬೌಲಿಂಗ್ ಮಾಡಿ 32 ರನ್ ನೀಡಿ 1 ವಿಕೆಟ್ ಪಡೆದರು. ಸ್ಪಿನ್ನರ್ ರವಿ ಬಿಷ್ಣೋಯ್ 4 ಓವರ್ಗಳಲ್ಲಿ 24 ರನ್ ನೀಡಿ 1 ವಿಕೆಟ್ ಪಡೆದರು.

ನೋಡಿರಿ

