ಫ್ರೆಂಡ್ಲಿ ದ್ರಾವಿಡ್.. ಕೋಪಿಷ್ಠ ಗಂಭೀರ್ – RO-KO ಮೆಚ್ಚಿದ ಗುರುವಿನ ಗುಣವೇನು?
ಟೀಂ ಇಂಡಿಯಾ ಬೆಸ್ಟ್ ಕೋಚ್ ಯಾರು?

ಫ್ರೆಂಡ್ಲಿ ದ್ರಾವಿಡ್.. ಕೋಪಿಷ್ಠ ಗಂಭೀರ್ – RO-KO ಮೆಚ್ಚಿದ ಗುರುವಿನ ಗುಣವೇನು?ಟೀಂ ಇಂಡಿಯಾ ಬೆಸ್ಟ್ ಕೋಚ್ ಯಾರು?

ಟೀಂ ಇಂಡಿಯಾದಲ್ಲಿ ಹೆಡ್​ಕೋಚ್ ಆಗಿ ಅತೀ ಹೆಚ್ಚು ಟೀಕೆಗಳನ್ನ ಎದುರಿಸಿದವರು ಗ್ರೆಗ್ ಚಾಪೆಲ್. 2005 ಮೇ ತಿಂಗಳಿಂದ 2007ರ ಏಪ್ರಿಲ್​ವರೆಗೆ ಹೆಡ್ ಕೋಚ್ ಸೇವೆ ಸಲ್ಲಿಸಿದರು. ಆದ್ರೆ ಇವ್ರ ಪೀರಿಯಡ್​ನ ಆ ಎರಡು ವರ್ಷಗಳಿದ್ಯಲ್ಲ. ಅದು ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕಾಂಟ್ರವರ್ಸಿಯಲ್ ಪಿರಿಯಡ್ ಆಗಿದೆ. ಈ ಗ್ರೆಗ್ ಚಾಪೆಲ್​ರನ್ನ ಬಿಟ್ರೆ ಭಾರತದಲ್ಲಿ ಅತೀ ಹೆಚ್ಚು ಟೀಕೆಗಳನ್ನ ಎದುರಿಸ್ತಿರೋ ಕೋಚ್ ಅಂದ್ರೆ ಅದು ಗೌತಮ್ ಗಂಭೀರ್. ಈಗ್ಲೂ ಕೂಡ ಅವ್ರ ನಿರ್ಧಾರಗಳಿಗೆ ಸಾಕಷ್ಟು ವಿರೋಧಗಳಿವೆ. ಆದ್ರೆ ಗಂಭೀರ್​ಗೂ ಮೊದಲಿದ್ದ ರಾಹುಲ್ ದ್ರಾವಿಡ್ ವಿಚಾರದಲ್ಲಿ ಈ ಭಾವನೆ ಇಲ್ಲ.

ಇದನ್ನೂ ಓದಿ : ಸೂರ್ಯವಂಶಿ Vs ಮುಝರಬಾನಿ – ZIMಯಲ್ಲೂ ಬ್ಯಾಟಿಂಗ್ ವೈಭವ್ ಸಾಧ್ಯನಾ?

ಭಾರತ ಕ್ರಿಕೆಟ್ ತಂಡದ ಪಾಲಿಗೆ ರಾಹುಲ್ ದ್ರಾವಿಡ್ ಮತ್ತು ಗೌತಮ್ ಗಂಭೀರ್​ ಸ್ಟಾರ್ ಬ್ಯಾಟರ್​​ಗಳು. ಟೆಸ್ಟ್ ಕ್ರಿಕೆಟ್​ನಲ್ಲಿ ಟೀಂ ಇಂಡಿಯಾಗೆ ಮಹಾಗೋಡೆಯಂತೆ ನಿಂತು ದಿ ವಾಲ್ ಅಂತಾನೇ ಖ್ಯಾತಿ ಪಡೆದವ್ರು ದ್ರಾವಿಡ್. ಹಾಗೇ ಗಂಭೀರ್ ವಿಶ್ವಕಪ್​ಗಳ ಗೆಲುವಿನ ಹೀರೋ. ಟೆಸ್ಟ್ ಫಾರ್ಮೆಟ್​ನಲ್ಲಿ ಸಚಿನ್ ತೆಂಡೂಲ್ಕರ್ ನಂತರ ಅತೀ ಹೆಚ್ಚು ರನ್ಸ್ ಗಳಿಸಿದ ಪ್ಲೇಯರ್ ದ್ರಾವಿಡ್. ಟೆಸ್ಟ್ ಇತಿಹಾಸದಲ್ಲೇ ಅತ್ಯಧಿಕ ಎಸೆತಗಳನ್ನು ಅಂದ್ರೆ 31,258 ಎಸೆತಗಳನ್ನ ಎದುರಿಸಿದ ವಿಶ್ವದ ಏಕೈಕ ಬ್ಯಾಟರ್. ಹಾಗೇ ಐದು ಡಬಲ್ ಸೆಂಚುರಿಗಳೂ ಇವ್ರ ಹೆಸ್ರಲ್ಲಿವೆ. ಇನ್ನು ಗಂಭೀರ್ 2007ರ ಟಿ-20 ವಿಶ್ವಕಪ್ ಫೈನಲ್‌ನಲ್ಲಿ 75 ರನ್ ಹಾಗೂ 2011ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ 97 ರನ್ ಗಳಿಸಿ ಭಾರತ ವಿಶ್ವಚಾಂಪಿಯನ್ ಆಗುವಲ್ಲಿ ಇವ್ರ ಕೊಡುಗೆ ತುಂಬಾನೇ ದೊಡ್ಡದು. ಟೆಸ್ಟ್ ಕ್ರಿಕೆಟ್‌ನಲ್ಲಿ ಸತತ 5 ಪಂದ್ಯಗಳಲ್ಲಿ ಶತಕ ಬಾರಿಸಿದ ಅಪರೂಪದ ದಾಖಲೆ ಗಂಭೀರ್ ಹೆಸರಲ್ಲಿದೆ. ಸೋ ಬ್ಯಾಟರ್​ಗಳಾಗಿ ಇಬ್ರೂ ಕೂಡ ಲೆಜೆಂಡರಿ ಪ್ಲೇಯರ್​ಗಳೇ.. ಗೆಲುವಿನ ಹೀರೋಗಳೇ.. ಆದ್ರೆ ಟೀಂ ಇಂಡಿಯಾ ಹೆಡ್​ಕೋಚ್​ಗಳಾಗಿ ಇಬ್ಬರದ್ದೂ ವಿಭಿನ್ನ ಹಾದಿ.. ಬೇರೆ ಬೇರೆ ನಿರ್ಧಾರಗಳು.. ದ್ರಾವಿಡ್​ ಕೋಚ್ ಅವಧಿಯನ್ನ ಗ್ರೇಟ್ ಅನ್ನೋ ಅಭಿಮಾನಿಗಳಿಗೆ ಗಂಭೀರ್ ಕೋಚಿಂಗ್ ಬಗ್ಗೆ ಅಸಮಾಧಾನವಿದೆ.

ದ್ರಾವಿಡ್ ಯಾಕೆ ಗ್ರೇಟ್?

ರಾಹುಲ್ ದ್ರಾವಿಡ್ ಅವಧಿಯಲ್ಲಿ ಟೀಂ ಇಂಡಿಯಾ ಯಶಸ್ವೀ ತಂಡ

2021ರ ನವೆಂಬರ್ ನಿಂದ 2024ರ ಜೂನ್ ವರೆಗೆ ಕೋಚ್ ಹುದ್ದೆ

2024ರ ಟಿ20 ವಿಶ್ವಕಪ್ ಗೆಲುವು, 2023ರ ಏಕದಿನ ವಿಶ್ವಕಪ್ ಫೈನಲ್

2023ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ಫೈನಲ್ ತಲುಪಿದ್ದ ಇಂಡಿಯಾ

ತಂಡದಲ್ಲಿ ಆಟಗಾರರಿಗೆ ಸ್ಥಾನದ ಭದ್ರತೆ & ಡ್ರೆಸ್ಸಿಂಗ್ ರೂಮ್ ಕೂಲ್

ಸ್ಟಾರ್ ಆಟಗಾರರಿಗೆ ಮಣೆ, ಹೊಸಬರಿಗೆ ಸ್ಫೂರ್ತಿ ಅನ್ನೋ ಮನೋಭಾವ

ಟೆಸ್ಟ್ : 24 ಪಂದ್ಯ.. 14 ಗೆಲುವು, 7 ಸೋಲು, 3 ಡ್ರಾ ಗೆಲುವಿನ ಶೇ: 58.33%

ಏಕದಿನ ಮಾದರಿ 56 ಪಂದ್ಯಗಳು, 41 ಗೆಲುವು, 15 ಸೋಲು.. ಗೆಲುವಿನ ಶೇ:73.2%

ಟಿ20ಐ ಮಾದರಿ 69 ಪಂದ್ಯಗಳು, 48 ಗೆಲುವು & 21 ಸೋಲು.. ಗೆಲುವಿನ ಶೇ: 58.3%

ಹೀಗೆ ರಾಹುಲ್ ದ್ರಾವಿಡ್ ಮೂರೂ ಮಾದರಿಯಲ್ಲೂ ವಿನ್ನಿಂಗ್ ಪರ್ಸೆಂಟೇಜ್ ಚೆನ್ನಾಗಿದೆ. ಟೀಂ ಇಂಡಿಯಾ ಪ್ಲೇಯರ್​ಗಳ ಜೊತೆಯೂ ತುಂಬಾನೇ ಫ್ರೆಂಡ್ಲಿಯಾಗಿದ್ರು. ಯಾವ ಪ್ಲೇಯರ್ಸ್ ಕೂಡ ಅವ್ರ ವಿರುದ್ಧ ಓಪನ್ ಸ್ಟೇಟ್​ಮೆಂಟ್ಸ್ ಕೊಟ್ಟಿದ್ದೇ ಇಲ್ಲ. ಹಾಗೇ ಅಭಿಮಾನಿಗಳು, ಮಾಜಿ ಕ್ರಿಕೆಟಿಗರು ರೊಚ್ಚಿಗೇಳುವಂತ ಪ್ರಸಂಗಗಳೂ ನಡೆದಿರಲಿಲ್ಲ. ಆದ್ರೆ ಗೌತಮ್ ಗಂಭೀರ್ ಕೋಚ್ ಆದ್ಮೇಲೆ ಅವ್ರ ಮೇಲೆ ಪಾಸಿಟಿವ್​ಗಿಂತ ನೆಗೆಟಿವಿಟಿನೇ ಜಾಸ್ತಿ ಇದೆ.

ಗಂಭೀರ್ ಅಂದ್ರೆ ವಿರೋಧ ಯಾಕೆ?

ಹೆಡ್ ಕೋಚ್ ಆಗಿ ಅಗ್ರೆಸ್ಸಿವ್ ಮತ್ತು ಡೋಂಟ್ ಕೇರ್ ವರ್ತನೆ

ಕೋಚಿಂಗ್ ಶೈಲಿ ಅಗ್ರೆಸ್ಸಿವ್ ಮತ್ತು ಪದೇಪದೆ ರಿಸ್ಕ್ ತೆಗೆದುಕೊಳ್ಳೋ ನಿರ್ಧಾರ

ಆಲ್ ರೌಂಡರ್ಸ್ ಗೆ ಆದ್ಯತೆ.. ಬ್ಯಾಟರ್ಸ್ ಕೈಯಿಂದಲೂ ಬೌಲಿಂಗ್ ಪ್ರಯೋಗ

ಸ್ಟಾರ್ ಕಲ್ಚರ್ ಬಿಟ್ಟು ಯಂಗ್ ಪ್ಲೇಯರ್ ಗಳಿಗೆ ಹೆಚ್ಚಿನ ಅವಕಾಶ

19 ಟೆಸ್ಟ್ ಪಂದ್ಯ, 7 ಗೆಲುವು, 10 ಸೋಲು, 2 ಡ್ರಾ.. ಗೆಲುವಿನ ಶೇ: 36.8%

14 ಏಕದಿನ ಪಂದ್ಯಗಳಲ್ಲಿ 9 ರಲ್ಲಿ ಗೆಲುವು, 5 ಸೋಲು.. ಗೆಲುವಿನ ಶೇ:64.2%

22 ಟಿ-20ಐ ಪಂದ್ಯ, 20 ಗೆಲುವು, 2 ಸೋಲು.. ಗೆಲುವಿನ ಶೇ: 90.9%

ಗೌತಮ್ ಗಂಭೀರ್ ಅಂಡರ್​ನಲ್ಲಿ ಟೀಂ ಇಂಡಿಯಾ ಸಾಕಷ್ಟು ಅವಮಾನಕರ ಸೋಲುಗಳನ್ನ ಕಂಡಿದೆ. ದಶಕಗಳ ನೋ ಲಾಸ್ ಜರ್ನಿಯೂ ಅಂತ್ಯವಾಗಿದೆ. ಅವ್ರ ನಿರ್ಧಾರಗಳೇ ಎಲ್ಲರ ಸಿಟ್ಟಿಗೂ ಕಾರಣ ಆಗ್ತಿವೆ.

Shantha Kumari

Leave a Reply

Your email address will not be published. Required fields are marked *