2 ತಿಂಗಳು RO-KO ದರ್ಶನವಿಲ್ಲ – ಡಿಸೆಂಬರ್ ಡೆಡ್ ಲೈನ್ ನೀಡಿದ್ಯಾ BCCI?
ಜೋಡೆತ್ತು ಇಲ್ಲದೆ ವಿಶ್ವಕಪ್ ಗೆಲ್ತಾರಾ?

ಟೀಂ ಇಂಡಿಯಾದಲ್ಲಿ ಟೆಸ್ಟ್ ಮತ್ತು ಟಿ-20ಐ ಪಂದ್ಯಗಳಿಗಿಂತ ಏಕದಿನ ಪಂದ್ಯಗಳ ಮೇಲೆಯೇ ಕ್ರೇಜ್ ಜಾಸ್ತಿ. ಯಾಕಂದ್ರೆ ಅಲ್ಲಿ ಲೆಜೆಂಡರಿ ಪೇರ್ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇದ್ದಾರೆ. ಅವ್ರಿಬ್ರೂ ಮೈದಾನದಲ್ಲಿ ಆಡೋದನ್ನ ನೋಡೋದೇ ಕಣ್ಣಿಗೆ ಹಬ್ಬ. ಈಗ ಇಂಗ್ಲೆಂಡ್ ಸರಣಿ ಮುಗಿಸಿರೋ ಈ ಜೋಡಿ ನೆಕ್ಸ್ಟ್ ಯಾವಾಗ ಮೈದಾನಕ್ಕೆ ಇಳಿಯೋದು ಅಂತಾ ಫ್ಯಾನ್ಸ್ ಕ್ಯೂರಿಯಸ್ ಆಗಿದ್ದಾರೆ. ಬಟ್ ಇನ್ನು ಎರಡು ತಿಂಗಳು ಈ ಜೋಡಿಯನ್ನ ನೋಡೋಕೆ ಆಗಲ್ಲ.
ಇದನ್ನೂ ಓದಿ : ಸೂರ್ಯವಂಶಿ Vs ಮುಝರಬಾನಿ – ZIMಯಲ್ಲೂ ಬ್ಯಾಟಿಂಗ್ ವೈಭವ್ ಸಾಧ್ಯನಾ?
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಭಾರತದ ಪರ ಏಕದಿನ ಪಂದ್ಯಗಳನ್ನ ಮಾತ್ರ ಆಡ್ತಿದ್ದಾರೆ. ಇತ್ತೀಚೆಗಷ್ಟೇ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯನ್ನ ಸೋತಿರೋ ಭಾರತದ ನೆಕ್ಸ್ಟ್ ಒಡಿಐ ಶೆಡ್ಯೂಲ್ ಇರೋದು ಸೆಪ್ಟೆಂಬರ್‌ನಲ್ಲಿ. ಭಾರತ ತಂಡ ನೆಕ್ಸ್ಟ್ ಸೆಪ್ಟೆಂಬರ್‌ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ತನ್ನ ತವರಿನಲ್ಲಿ ಎದುರಿಸಲಿದೆ. ಸೆಪ್ಟೆಂಬರ್ 27 ರಂದು ಪ್ರಾರಂಭವಾಗಿ ಅಕ್ಟೋಬರ್ 3 ರವರೆಗೆ ನಡೆಯಲಿದ್ದು, ಒಟ್ಟು ಮೂರು ಏಕದಿನ ಪಂದ್ಯಗಳು ನಡೆಯಲಿವೆ. ಸೆಪ್ಟೆಂಬರ್ 27ಕ್ಕೆ ಮೊದಲ ಪಂದ್ಯ ತಿರುವನಂತಪುರಂನಲ್ಲಿ ನಡೆದ್ರೆ ಎರಡನೇ ಏಕದಿನ ಪಂದ್ಯ ಸೆಪ್ಟೆಂಬರ್ 30ರಂದು ಗುವಾಹಟಿಯಲ್ಲಿ ನಡೆಯಲಿದೆ. ಸರಣಿಯ ಕೊನೇ ಪಂದ್ಯ ಅಕ್ಟೋಬರ್ 3ಕ್ಕೆ ನ್ಯೂ ಚೆಂಡೀಗಢದಲ್ಲಿ ನಡೆಯಲಿದೆ. ವೆಸ್ಟ್ ಇಂಡೀಸ್ ತಂಡದ ವಿರುದ್ಧದ ಏಕದಿನ ಸರಣಿ ಮುಗಿದ ಬಳಿಕ ಟೀಂ ಇಂಡಿಯಾ ನವೆಂಬರ್‌ನಲ್ಲಿ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ. ಅಲ್ಲಿ ಟೀಂ ಇಂಡಿಯಾ ಕಿವೀಸ್ ವಿರುದ್ಧ ಐದು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. 2027 ರ ಐಸಿಸಿ ವಿಶ್ವಕಪ್‌ಗೆ ಮುಂಚಿತವಾಗಿ ಈ ಸರಣಿ ರೋಹಿತ್ ಮತ್ತು ವಿರಾಟ್ ಕೊಹ್ಲಿಗೆ ನಿರ್ಣಾಯಕವಾಗಿರುತ್ತದೆ. ನಂತರ, ಡಿಸೆಂಬರ್‌ನಲ್ಲಿ, ಭಾರತ ಮತ್ತೊಮ್ಮೆ ಶ್ರೀಲಂಕಾವನ್ನು ತವರು ಸರಣಿಯಲ್ಲಿ ಆತಿಥ್ಯ ವಹಿಸಲಿದೆ. ಈ ಅವಧಿಯಲ್ಲಿ, ಎರಡೂ ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿವೆ. ಸೋ ಈ ವರ್ಷ ಏಕದಿನ ಮಾದರಿಯಲ್ಲಿ ಭಾರತಕ್ಕೆ ಇನ್ನೂ ಮೂರು ಸರಣಿಗಳಿವೆ.
ರೋ-ಕೊ ದಾಖಲೆಗಳು!
ವಿವರಗಳು ರೋಹಿತ್ ಶರ್ಮಾ ವಿರಾಟ್ ಕೊಹ್ಲಿ
ಒಟ್ಟು ಪಂದ್ಯಗಳು 288 314
ಒಟ್ಟು ರನ್‌ಗಳು 11,895 14,867
ಬ್ಯಾಟಿಂಗ್ ಸರಾಸರಿ 48.58 58.53
ಶತಕಗಳು 33 54
ಅರ್ಧಶತಕಗಳು 62 78
ಗರಿಷ್ಠ ಸ್ಕೋರ್ 264 183
ವಿಶ್ವದಾಖಲೆ 3 ದ್ವಿ ಶತಕ 54 ಶತಕ
ಹೀಗೆ ರೋಹಿತ್ ಮತ್ತು ಕೊಹ್ಲಿ ಏಕದಿನ ಮಾದರಿಯಲ್ಲಿ ಸಾಲು ಸಾಲು ದಾಖಲೆಗಳನ್ನ ಸೃಷ್ಟಿಸಿದ್ದಾರೆ. ಹಾಗೇ ಏಕದಿನ ಮಾದರಿಯಲ್ಲಿ ಇದುವರೆಗೆ 21 ಬಾರಿ ಶತಕದ ಜೊತೆಯಾಟ ಪ್ರದರ್ಶಿಸಿದ್ದಾರೆ, ಇದು ವಿಶ್ವ ಕ್ರಿಕೆಟ್‌ನಲ್ಲೇ 2ನೇ ಅತ್ಯುನ್ನತ ಸಾಧನೆಯಾಗಿದೆ. 2027ರ ಏಕದಿನ ವಿಶ್ವಕಪ್ ಗೆಲ್ಲಲೇಬೇಕು ಅಂತಾ ಪಣ ತೊಟ್ಟು ತಂಡದಲ್ಲಿ ಕಂಟಿನ್ಯೂ ಆಗ್ತಿದ್ದಾರೆ.

ನೋಡಿರಿ

