ಹಳೇ ಬಟ್ಟೆ, ಒಡೆದ ಪಾತ್ರೆ ಸೇರಿ 5 ಈ ವಸ್ತುಗಳನ್ನ ಶುಕ್ರವಾರ ಮನೆಯಿಂದ ಹೊರ ಹಾಕಿ

ಹಳೇ ಬಟ್ಟೆ, ಒಡೆದ ಪಾತ್ರೆ ಸೇರಿ 5 ಈ ವಸ್ತುಗಳನ್ನ ಶುಕ್ರವಾರ ಮನೆಯಿಂದ ಹೊರ ಹಾಕಿ

ಮನೆಯಲ್ಲಿ ಲಕ್ಷ್ಮೀ ದೇವಿಯ ಅನುಗ್ರಹ ಸದಾ ನೆಲೆಸಿರುತ್ತದೆ ಎನ್ನಲಾಗುತ್ತದೆ. ಆದ್ದರಿಂದ ಶುಕ್ರವಾರ ಮನೆ ಸ್ವಚ್ಛಗೊಳಿಸುವಾಗ ಕೆಲವು ಅನಗತ್ಯ ಹಾಗೂ ಅಶುಭವೆಂದು ನಂಬಲಾಗುವ ವಸ್ತುಗಳನ್ನು ಹೊರಹಾಕುವುದು ಶುಭಕರವೆಂದು ಹೇಳಲಾಗುತ್ತದೆ. ಹಾಗಿದ್ರೆ ಯಾವೆಲ್ಲಾ ವಸ್ತುಗಳನ್ನ ಶುಕ್ರವಾರ ತೆಗೆದು ಹಾಕಬೇಕು ಅನ್ನೋದ್ದನ್ನ ನೋಡೋಣ ಬನ್ನಿ.

 ಹಳೆಯ ಬಟ್ಟೆಗಳು

ವರ್ಷಗಳ ಕಾಲ ಬಳಸದೆ ಸಂಗ್ರಹಿಸಿಟ್ಟಿರುವ ಅಥವಾ ಹರಿದುಹೋದ ಬಟ್ಟೆಗಳು ಮನೆಯಲ್ಲಿನ ಅಸ್ತವ್ಯಸ್ತತೆಯನ್ನು ಹೆಚ್ಚಿಸುತ್ತವೆ. ಉತ್ತಮ ಸ್ಥಿತಿಯಲ್ಲಿರುವ ಬಟ್ಟೆಗಳನ್ನು ಅಗತ್ಯವಿರುವವರಿಗೆ ದಾನ ಮಾಡುವುದು ಪುಣ್ಯದ ಕೆಲಸ ಎಂದು ಹೇಳಲಾಗಿದೆ.

ಇದನ್ನೂ ಓದಿ: ಸೋಮವಾರ ಶಿವ ಮಾತ್ರವಲ್ಲ, ಶಿವನ ಜೊತೆ ಈ ದೇವರಗಳನ್ನು ಪೂಜೆಸಿ

ಒಡೆದ ಪಾತ್ರೆಗಳು

ಅಡುಗೆಮನೆ ಮನೆಯ ಸಮೃದ್ಧಿಯ ಸಂಕೇತವಾಗಿದೆ. ಒಡೆದ ಅಥವಾ ಬಿರುಕು ಬಿಟ್ಟ ಪಾತ್ರೆಗಳಲ್ಲಿ ಆಹಾರ ಸೇವಿಸುವುದು ಅಥವಾ ಅವುಗಳನ್ನು ಮನೆಯಲ್ಲೇ ಇಟ್ಟುಕೊಳ್ಳುವುದು ಅಶುಭ ಎಂದು ಹಲವು ಸಂಪ್ರದಾಯಗಳು ಹೇಳುತ್ತವೆ.

ಒಣಗಿದ ಗಿಡಗಳು

ಮನೆಯಲ್ಲಿರುವ ಹಸಿರು ಗಿಡಗಳು ಸಂತೋಷ, ಆರೋಗ್ಯ ಮತ್ತು ಸಕಾರಾತ್ಮಕ ಶಕ್ತಿಯ ಸಂಕೇತವಾಗಿವೆ. ಆದರೆ ಗಿಡಗಳು ಸಂಪೂರ್ಣವಾಗಿ ಒಣಗಿ ಜೀವವಿಲ್ಲದಂತಾಗಿದ್ದರೆ, ಅವು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ ಎಂಬ ನಂಬಿಕೆ ಇದೆ. ಆದ್ದರಿಂದ ಇಂತಹ ಗಿಡಗಳನ್ನು ಶುಕ್ರವಾರ ತೆಗೆದುಹಾಕಿ, ಅವುಗಳ ಬದಲಿಗೆ ಹೊಸ ಹಸಿರು ಗಿಡಗಳನ್ನು ನೆಡುವುದು ಶುಭಕರವೆಂದು ಪರಿಗಣಿಸಲಾಗುತ್ತದೆ.

ಮುರಿದ ಬೀರು  

ಹಣ, ಆಭರಣ ಹಾಗೂ ಪ್ರಮುಖ ದಾಖಲೆಗಳನ್ನು ಇಡುವ ಬೀರು ಅಥವಾ ಕಪಾಟು ಮುರಿದಿದ್ದರೆ ಅಥವಾ ಹಾಳಾಗಿದ್ದರೆ ಅದನ್ನು ದುರಸ್ತಿ ಮಾಡುವುದು ಅಥವಾ ಬದಲಾಯಿಸುವುದು ಉತ್ತಮ ಎಂದು ವಾಸ್ತು ನಂಬಿಕೆ ಹೇಳುತ್ತದೆ. ಹಣವನ್ನು ಇಡುವ ಸ್ಥಳ ಸ್ವಚ್ಛ, ಸುರಕ್ಷಿತ ಮತ್ತು ಸುವ್ಯವಸ್ಥಿತವಾಗಿದ್ದರೆ ಆರ್ಥಿಕ ಸ್ಥಿರತೆ ಹೆಚ್ಚುತ್ತದೆ ಎಂಬ ನಂಬಿಕೆಯೂ ಇದೆ

Kishor KV

Leave a Reply

Your email address will not be published. Required fields are marked *