ಸಿಡಿಯದೆ ಸಪ್ಪೆಯಾದ ತಿಲಕ್ ವರ್ಮಾ – ZIMಯಲ್ಲಾದ್ರೂ ಜವಾಬ್ದಾರಿ ತಗೊಳ್ತಾರಾ?
BCCI ವೈಸ್ ಕ್ಯಾಪ್ಟನ್ಸಿ ನೀಡಿದ್ದೇ ತಪ್ಪಾ?

ಭಾರತ ಟಿ-20ಐ ತಂಡದಲ್ಲಿ ಈಗ ಸಾಕಷ್ಟು ಸಮಸ್ಯೆಗಳಿವೆ. ಬ್ಯಾಟಿಂಗ್, ಬೌಲಿಂಗ್, ಆಲ್ರೌಂಡರ್ಸ್, ಫೀಲ್ಡಿಂಗ್ ಹೀಗೆ ಎಲ್ಲದ್ರಲ್ಲೂ ವೀಕ್ನೆಸ್ ಇದೆ. ಆಟಗಾರರಲ್ಲಿ ಕನ್ಸಿಸ್ಟೆನ್ಸಿ ಪರ್ಫಾಮೆನ್ಸ್ ಕೂಡ ಕಾಣ್ತಿಲ್ಲ. ಅದ್ರಲ್ಲೂ ವೈಸ್ ಕ್ಯಾಪ್ಟನ್ ತಿಲಕ್ ವರ್ಮಾ ಅಂತೂ ತಂಡಕ್ಕೆ ಭಾರವಾಗಿದ್ದಾರೆ. ಜಿಂಬಾಬ್ವೆ ಸರಣಿಯಲ್ಲಿ ತಿಲಕ್ ಮೇಲೆ ತುಂಬಾ ಪ್ರೆಶರ್ ಇದೆ. ಒಂದ್ವೇಳೆ ಇಲ್ಲೂ ಜಬಾವ್ದಾರಿ ತೆಗೆದುಕೊಳ್ಳದೇ ಇದ್ರೆ ಬಿಸಿಸಿಐ ಬೇರೆಯದ್ದೇ ಯೋಚನೆ ಮಾಡ್ಬೇಕಾಗುತ್ತೆ.
ಇದನ್ನೂ ಓದಿ : ಕಾಮನ್ವೆಲ್ತ್ ಗೇಮ್ಸ್ಗೆ ಭಾರತದ ಕ್ರೀಡಾಪಟುಗಳ ರೆಡಿ – ಮೊದಲ ದಿನವೇ ಪದಕ ಗ್ಯಾರಂಟಿನಾ?
ಶ್ರೇಯಸ್ ಅಯ್ಯರ್ ಕ್ಯಾಪ್ಟನ್ಸಿಯಲ್ಲಿ ಮೊದಲ ಗೆಲುವಿನ ನಿರೀಕ್ಷೆಯಲ್ಲಿರೋ ಭಾರತ ಹರಾರೆಯ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಮೊದಲ ಪಂದ್ಯ ಆಡಲಿದೆ. ಈ ಪಂದ್ಯದಲ್ಲಿ ತಿಲಕ್ ವರ್ಮಾ ಮೇಲೆ ಸಾಕಷ್ಟು ನಿರೀಕ್ಷೆಗಳನ್ನ ಇಟ್ಟುಕೊಳ್ಳಲಾಗಿದೆ. ಯಾಕಂದ್ರೆ ಅವ್ರಿಗೆ ವೈಸ್ ಕ್ಯಾಪ್ಟನ್ಸಿ ಸಿಕ್ಕ ಮೇಲೆ ಅವ್ರ ಕಡೆಯಿಂದ ಮ್ಯಾಚ್ ವಿನ್ನಿಂಗ್ ರನ್ಸ್ ಬಂದಿಲ್ಲ. ಕ್ರೂಶಿಯಲ್ ಟೈಮಲ್ಲೇ ಕೈಕೊಡ್ತಿದ್ದಾರೆ. ಈಗ ಜಿಂಬಾಬ್ವೆಯಲ್ಲೂ ತಿಲಕ್ ಪ್ರದರ್ಶನದ ಮೇಲೆ ಬಿಸಿಸಿಐ ಕಣ್ಣಿಟ್ಟಿದೆ.
ನಿರೀಕ್ಷೆ ಹುಸಿ ಮಾಡಿದ ತಿಲಕ್!
ಸಂಜು & ಕಿಶನ್ ಬಿಟ್ಟು ತಿಲಕ್ ಗೆ ವೈಸ್ ಕ್ಯಾಪ್ಟನ್ಸಿ ನೀಡಿರುವ ಬಿಸಿಸಿಐ
ಮಧ್ಯಮ ಕ್ರಮಾಂಕದಲ್ಲಿ ಮೇನ್ ಬ್ಯಾಟರ್ ಆಗಿ ಉತ್ತಮ ಪ್ರದರ್ಶನ ನಿರೀಕ್ಷೆ
ಭವಿಷ್ಯದ ಭರವಸೆಯ ಆಟಗಾರನಾಗಿ ಬೆಳೆಸಲು ಪದೇಪದೆ ಚಾನ್ಸ್
ಭಾರತದ ಪರ ಹಲವು ದಿನಗಳಿಂದ ಮ್ಯಾಚ್ ವಿನ್ನಿಂಗ್ಸ್ ರನ್ಸ್ ಬಂದಿಲ್ಲ
ಟಿ-20ಐ ಫಾರ್ಮೆಟ್ ಗೆ ತಕ್ಕಂತೆ ಅಗ್ರೆಸ್ಸಿವ್ ಬ್ಯಾಟಿಂಗ್ ಇಂಟೆಂಟ್ ಇಲ್ಲ
ತಿಲಕ್ ಮೇಲೆ ಬೆಟ್ಟದಷ್ಟು ಭರವಸೆ ಇಟ್ಟುಕೊಂಡು ವೈಸ್ ಕ್ಯಾಪ್ಟನ್ ಆಗಿ ಮಾಡಿದ್ರೂ ತಿಲಕ್ ಕಡೆಯಿಂದ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ಬರ್ತಿಲ್ಲ. ಪ್ಳೇಯಿಂಗ್ 11ಗೆ ಕಂಟಿನ್ಯೂಯಸ್ ಆಗಿ ಸೆಲೆಕ್ಟ್ ಆಗ್ತಿದ್ರೂ ಯಾವುದೇ ಇಂಪ್ಯಾಕ್ಟ್ ಇಲ್ಲ. ಹೀಗಾಗಿ ತಿಲಕ್ ಬದಲಿಗೆ ರಜತ್ ಪಾಟಿದಾರ್ರನ್ನ ತಂಡಕ್ಕೆ ಸೆಲೆಕ್ಟ್ ಮಾಡಿ ಅನ್ನೋ ಒತ್ತಾಯ ಜಾಸ್ತಿಯಾಗ್ತಿದೆ. ಆದ್ರೆ ಬಿಸಿಸಿಐ ಮಾತ್ರ ಜಾಣಕುರುಡುತನ ಪ್ರದರ್ಶನ ಮಾಡ್ತಿದೆ. ಇನ್ನು ಟೀಂ ಇಂಡಿಯಾ ಪರ ತಿಲಕ್ ಪ್ರದರ್ಶನ ನೋಡೋದಾದ್ರೆ ಇಲ್ಲಿಯವರೆಗೆ 56 ಟಿ20 ಪಂದ್ಯಗಳಿಂದ 42.37 ಸರಾಸರಿಯಲ್ಲಿ 1,568 ರನ್ ಗಳಿಸಿದ್ದಾರೆ. 143.85 ಸ್ಟ್ರೈಕ್ ರೇಟ್ ಇದ್ದು ಎರಡು ಶತಕಗಳು ಮತ್ತು ಎಂಟು ಅರ್ಧಶತಕಗಳು ಸೇರಿವೆ. 23 ವಿದೇಶ ಪಂದ್ಯಗಳಲ್ಲಿ 38.8 ಸರಾಸರಿಯಲ್ಲಿ 661 ರನ್ ಗಳಿಸಿದ್ದಾರೆ . ಎರಡೂ ಶತಕಗಳು ವಿದೇಶದಲ್ಲಿ ಬಂದಿವೆ. ತವರಿನಲ್ಲಿ 21 ಪಂದ್ಯಗಳಿಂದ 41.28 ಸರಾಸರಿಯಲ್ಲಿ 578 ರನ್ ಗಳಿಸಿದ್ದಾರೆ. ತವರಿನಲ್ಲಿ ಅವರ ಸ್ಟ್ರೈಕ್ ರೇಟ್ 140.63 ಇದೆ. ಇನ್ನು 2026ರ ಟಿ-20 ವಿಶ್ವಕಪ್ ಆದ್ಮೇಲೆ ಭಾರತದ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳಲ್ಲಿ ಒಟ್ಟು ಏಳು ಟಿ20 ಪಂದ್ಯಗಳಿಂದ 29.66 ಸರಾಸರಿಯಲ್ಲಿ ಕೇವಲ 178 ರನ್ ಗಳಿಸಿದರು. ಈ ವೇಳೆ ಅವ್ರ ಸ್ಟ್ರೈಕ್ ರೇಟ್ 131.85 ಕ್ಕೆ ಇಳಿದಿತ್ತು. 2 ಅರ್ಧಶತಕಗಳು ಇದ್ರೂ ಕೂಡ ಮ್ಯಾಚ್ ಗೆಲ್ಲಿಸೋ ಥರದಲ್ಲಿ ರನ್ಸ್ ಬಂದಿಲ್ಲ. ಇದೇ ಕಾರಣಕ್ಕೆ ತಿಲಕ್ ವಿಚಾರದಲ್ಲಿ ಬಿಸಿಸಿಐ ಫೇವರಿಸಂ ಮಾಡ್ತಿದೆ ಅಂತಾ ಮಾಜಿ ಕ್ರಿಕೆಟಿಗರು ಆಕ್ರೋಶ ಹೊರಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಕೂಡ ತಿಲಕ್ ಬಗ್ಗೆ ಟೀಕೆಗಳು ವ್ಯಕ್ತವಾಗ್ತಿವೆ. ಈ ಬಗ್ಗೆ ರಿಯಾಕ್ಟ್ ಮಾಡಿರೋ ತಿಲಕ್, ನಾನು ಪರಿಸ್ಥಿತಿಗೆ ತಕ್ಕಂತೆ ಆಡುತ್ತೇನೆ. ಬೇರೆ ಬೇರೆ ಸ್ಲಾಟ್ಗಳಲ್ಲಿ ಬ್ಯಾಟಿಂಗ್ ಮಾಡ್ಬೇಕು. ಟಾಪ್ ಆರ್ಡರ್ ವಿಕೆಟ್ ಬಿದ್ದಾಗ ತಂಡಕ್ಕೆ ಏನು ಬೇಕೋ ಅದನ್ನು ನಾನು ಮಾಡುತ್ತೇನೆ. ಸಿಚುಯೇಷನ್ ನೋಡಿ ಬ್ಯಾಟಿಂಗ್ ಮಾಡೋದ್ರಿಂದ ಸ್ಟ್ರೈಕ್ರೇಟ್ ಕೂಡ ವೇರಿಯೇಶನ್ ಆಗುತ್ತೆ ಅನ್ನೋ ಮೂಲಕ ತಮ್ಮ ಪ್ರದರ್ಶನದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಒಟ್ನಲ್ಲಿ ತಿಲಕ್ ವರ್ಮಾ ಭಾರತದ ಭವಿಷ್ಯದ ಕ್ಯಾಪ್ಟನ್ ಅನ್ನೋ ಥರದಲ್ಲೇ ಬಿಸಿಸಿಐ ರೆಡಿ ಮಾಡೋಕೆ ನೋಡ್ತಿದೆ. ಆದ್ರೆ ತಿಲಕ್ ಕಡೆಯಿಂದ ಗ್ರೇಟ್ ಅನ್ನೋ ಇನ್ನಿಂಗ್ಸ್ ಬರ್ಲಿಲ್ಲ. ಅದ್ರಲ್ಲೂ ವೈಸ್ ಕ್ಯಾಪ್ಟನ್ಸಿ ಸಿಕ್ಕ ಮೇಲಂತೂ ತೀರಾ ಸಪ್ಪೆ ಅನ್ನಿಸ್ತಿದ್ದಾರೆ. ಒಂದ್ವೇಳೆ ತಿಲಕ್ ಇದೇ ಥರ ಟುಕ್ ಟುಕ್ ಅಂತಾ ಬ್ಯಾಟ್ ಬೀಸ್ತಿದ್ರೆ ಬಿಸಿಸಿಐ ಕಠಿಣ ನಿರ್ಧಾರಗಳನ್ನ ಕೈಗೊಳ್ಬೇಕಾಗುತ್ತೆ ಅಷ್ಟೇ.

ನೋಡಿರಿ

