ಮದುವೆ ದಿನವೇ ಕೈಕೊಟ್ಟು ಓಡಿ ಹೋದ ಪಿಂಕಿ – ಗುಂಡಮ್ಮನ ಹತ್ರ ಓಡಿಬರ್ತಾನಾ ಜಿಮ್ ಸೀನ?

ಮದುವೆ ದಿನವೇ ಕೈಕೊಟ್ಟು ಓಡಿ ಹೋದ ಪಿಂಕಿ – ಗುಂಡಮ್ಮನ ಹತ್ರ ಓಡಿಬರ್ತಾನಾ ಜಿಮ್ ಸೀನ?

ಅಣ್ಣಯ್ಯ ಸೀರಿಯಲ್‌ನಲ್ಲಿ ಒಂದೆಡೆ ಚುನಾವಣೆ ಭರಾಟೆ ಜೋರಾಗಿದೆ. ಮತ್ತೊಂದೆಡೆ ಜಿಮ್ ಸೀನ ತನ್ನ ಬೇಬಿ ಪಿಂಕಿ ಜೊತೆ ಮದುವೆ ತಯಾರಿಯ ಸಂಭ್ರಮದಲ್ಲಿದ್ದಾನೆ. ಇದೀಗ ಸೀರಿಯಲ್‌ನಲ್ಲಿ ಮಹಾ ತಿರುವು ಎದುರಾಗಿದೆ.

ಇದನ್ನೂ ಓದಿ:ಮಿಸ್ಟರ್ ಬೀಸ್ಟ್ ಮದುವೆ ನಡೆದಿದ್ದು ಎಲ್ಲಿ ಗೊತ್ತಾ? – ಗೆಳತಿ ಜೊತೆ ವಿವಾಹವಾದ ವಿಶ್ವದ ಶ್ರೀಮಂತ ಯೂಟ್ಯೂಬರ್

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಸೀರಿಯಲ್ ರೋಚಕ ಘಟ್ಟ ತಲುಪಿದೆ. ಶಿವು ತನ್ನ ಮಾವನ ಎದುರು ಎಲೆಕ್ಷನ್ ಗೆ ನಿಂತಾಗಿದೆ. ಇನ್ನೇನು ಮತದಾನವೂ ನಡೆಯಲಿದೆ. ಮಾವನ ವಿರುದ್ಧ ಮತ ಚಲಾಯಿಸಲು ಶಿವು ರೆಡಿಯಿಲ್ಲ. ಪಾರು ಶಿವುಗೆ ಎಷ್ಟೇ ಹೇಳಿದರೂ ಶಿವು ಮಾವನ ವಿರುದ್ಧ ಮತ ಚಲಾಯಿಸಲು ರೆಡಿಯಿಲ್ಲ. ಕೊನೆಗೂ ತನ್ನ ಮಾವನಿಗೆ ವೋಟ್ ಹಾಕುತ್ತಾನೆ ಶಿವು. ಮಾರಿಗುಡಿ ಶಿವು ಎಲೆಕ್ಷನ್‌ನಲ್ಲಿ ಗೆಲ್ಲೋದು ನಿಶ್ಚಿತ ಎಂದು ಹೇಳಲಾಗುತ್ತಿದೆ. ಸೀರಿಯಲ್ ವೀಕ್ಷಕರು ಶಿವು ಗೆಲ್ಲೋದನ್ನು ನೋಡಲು ಕಾಯುತ್ತಿದ್ದರೆ ಮತ್ತೊಂದು ಮಹಾತಿರುವು ಕಾದಿದೆ. ಅದುವೇ ಜಿಮ್ ಸೀನ ಪಿಂಕಿಯ ಮದುವೆ ಪ್ರಸಂಗ.

ಇತ್ತ ಮಗನ ಮದುವೆ ಎಂದು ಲೀಲಾ ಸಂಭ್ರಮಿಸುತ್ತಿದ್ದಾಳೆ. ಗುಂಡಮ್ಮ ರಶ್ಮಿಯನ್ನು ಮನೆಯಿಂದ ಹೊರಹಾಕಲು ಲೀಲಾ ಒಳಗೊಳಗೆ ಪ್ಲ್ಯಾನ್ ಮಾಡುತ್ತಿದ್ದಾಳೆ. ಪಿಂಕಿಯೇ ನನ್ನ ಸೊಸೆ ಎಂದು ಲೀಲಾ ಲೆಕ್ಕ ಹಾಕುತ್ತಿದ್ದಾಳೆ. ಇದರ ಮಧ್ಯೆ ಲೀಲಾಳ ಸಂಭ್ರಮಕ್ಕೆ ಮಾವ ಸೊಸೆ ಇಬ್ಬರು ತಣ್ಣೀರು ಎರಚಿದ್ದಾರೆ. ನಡೆಯದಿರುವ ಮದುವೆಗೆ ಯಾಕೆ ಹೋಗ್ತೀರಾ ಎಂದು ರಶ್ಮಿ ಅತ್ತೆಗೆ ಪ್ರಶ್ನೆ ಕೇಳಿಯೂ ಆಗಿದೆ. ಇನ್ನೇನು ಸೀನ ಪಿಂಕಿ ಮದುವೆಯಾಗುತ್ತೆ. ಗುಂಡಮ್ಮನ ಸ್ಥಿತಿ ಹೇಗಿರುತ್ತೆ. ಸೊಸೆ ರಶ್ಮಿಗಾಗಿ ಮಾವ ಮಾದಪ್ಪ ಏನ್ ಮಾಡುತ್ತಾರೆ ಎಂಬ ಪ್ರಶ್ನೆಗಳು ವೀಕ್ಷಕರನ್ನು ಕಾಡುತ್ತಿದ್ದವು. ಇದೀಗ ಹೊಸ ಪ್ರೋಮೋ ರಿಲೀಸ್ ಆಗಿದ್ದು, ಪಿಂಕಿ ಓಡಿಹೋಗಿದ್ದಾಳೆ. ಮದುವೆ ದಿನವೇ ಸೀನನಿಗೆ ಕೈಕೊಟ್ಟು ಪಿಂಕಿ ಓಡಿಹೋಗಿದ್ದಾಳೆ. ಜಿಮ್ ಸೀನ ಪಿಂಕಿ ಬರೆದ ಪತ್ರ ಓದಿ ಶಾಕ್ ಆಗಿದ್ದಾನೆ.

ಸೀನ ಮದುವೆಗೆ ರೆಡಿಯಾಗಿ ಬೇಬಿ ಯಾಕೆ ಬಂದಿಲ್ಲ ಎಂದು ರೂಮ್ ಒಳಗೆ ಬರುತ್ತಾನೆ. ಪುರೋಹಿತರು ಕಾಯುತ್ತಿದ್ದಾರೆ ಬೇಬಿ ರೆಡಿಯಾಗಿಲ್ಲವೇ ಎಂದು ಖುಷಿ ಖುಷಿಯಾಗಿ ಬಾಸಿಂಗ ಕಟ್ಟಿಕೊಂಡು ಬಂದಿರುತ್ತಾನೆ. ಆದರೆ, ಬೆಡ್‌ಮೇಲೆ ಒಂದು ಪತ್ರ ಇರುತ್ತದೆ. ಇದನ್ನು ಪಿಂಕಿ ಬರೆದಿಟ್ಟಿದ್ದಾಳೆ. ಯಾವಾಗ ನಿಮ್ಮಪ್ಪ ಆಸ್ತಿನ ರಶ್ಮಿ ಹೆಸರಿಗೆ ಬರೆದಿಟ್ರೋ ಆಗಲೇ ನನ್ನ ಮೂಡ್ ಆಫ್ ಆಯ್ತು. ಈಗ ನಾನು ತಮಿಳುನಾಡಿನ ಎಂಎಲ್‌ಎ ಜೊತೆ ಮದುವೆಯಾಗಲು ಹೋಗ್ತಾಇದ್ದೀನಿ. ಸಾರಿ ಸೀನು ಬೇಬಿ ಎಂದು ಪತ್ರ ಬರೆದಿಟ್ಟಿದ್ದಾಳೆ. ಇದನ್ನು ಓದುತ್ತಿದ್ದಂತೆ ಸೀನ ಶಾಕ್ ಆಗಿದ್ದಾನೆ.

ಮತ್ತೊಂದೆಡೆ ಗುಂಡಮ್ಮ ಗಂಡನ ಮನೆಯಿಂದ ಹೊರಹೋಗಲು ರೆಡಿಯಾಗಿರುತ್ತಾಳೆ. ಆಗ ಮಾವ ಮಾದಪ್ಪಣ್ಣ ಓಡೋಡಿ ಬಂದು, ರಶ್ಮಿ ನಿಮ್ಮಣ್ಣನೇ ಫೋನ್ ಮಾಡಿದ್ದಾನೆ ಎಂದು ಕರೆಯುತ್ತಾರೆ. ಆಗ ಅಣ್ಣ ಮತ್ತು ಅತ್ತಿಗೆಯರೆಲ್ಲಾ ಸೇರಿ, ಪಿಂಕಿ ಓಡ್ ಹೋಗಿಬಿಟ್ಟವಳೇ ಎಂದು ಖುಷಿಯಲ್ಲೇ ಹೇಳುತ್ತಾರೆ.

ಅಂತೂ ಪಿಂಕಿ ಸೀನನ ಪ್ರಣಯ ಪ್ರಸಂಗಕ್ಕೆ ಬ್ರೇಕ್ ಬಿದ್ದಿದೆ. ಸೀನನಿಗೆ ಗುಂಡಮ್ಮನೇ ಗತಿ. ಮಾದಪ್ಪಣ್ಣನ ಕನಸು ಈಡೇರಲಿದೆ. ಲೀಲಾ ಈಗ ಸೊಸೆ ಗುಂಡಮ್ಮನ ಹೇಗೆ ಎದುರಿಸ್ತಾಳೆ ಎಂಬ ಕುತೂಹಲ ಗರಿಗೆದರಿದೆ.

Sulekha

Leave a Reply

Your email address will not be published. Required fields are marked *