ಕಾಮನ್‌ವೆಲ್ತ್‌ ಗೇಮ್ಸ್‌ಗೆ ಭಾರತದ ಕ್ರೀಡಾಪಟುಗಳ ರೆಡಿ – ಮೊದಲ ದಿನವೇ ಪದಕ ಗ್ಯಾರಂಟಿನಾ?

ಕಾಮನ್‌ವೆಲ್ತ್‌ ಗೇಮ್ಸ್‌ಗೆ ಭಾರತದ ಕ್ರೀಡಾಪಟುಗಳ ರೆಡಿ – ಮೊದಲ ದಿನವೇ ಪದಕ ಗ್ಯಾರಂಟಿನಾ?

ಜಗತ್ತಿನ ಪ್ರತಿಷ್ಠಿತ ಕ್ರೀಡಾಕೂಟಗಳಲ್ಲಿ ಒಂದಾದ ಕಾಮನ್‌ವೆಲ್ತ್ ಗೇಮ್ಸ್ 2026 ಇಂದಿನಿಂದ (ಜುಲೈ 23) ಶುರುವಾಗಲಿದೆ. ರಾತ್ರಿ 10:30ಕ್ಕೆ ಅದ್ಧೂರಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಭಾರತದ ಧ್ವಜಧಾರಿಯಾಗಿ ಮೀರಾಬಾಯಿ ಚಾನು ಕಾಣಿಸಿಕೊಳ್ಳಲ್ಲಿದ್ದಾರೆ. ವಿಶ್ವದ ದಿಗ್ಗಜ ಅಥ್ಲೀಟ್‌ಗಳು ಪದಕಕ್ಕಾಗಿ ಸೆಣಸಾಡಲಿದ್ದಾರೆ.

ಇದನ್ನೂ ಓದಿ:ಭಾರತ ಅಂದ್ರೆ ZIMಗೂ ಭಯವಿಲ್ಲ – ಸರಣಿಗೂ ಮೊದ್ಲೇ ಸಿಕಂದರ್ ವಾರ್ನಿಂಗ್

ಕಾಮನ್‌ವೆಲ್ತ್‌ ಗೇಮ್ಸ್‌ ಸ್ಕಾಟ್ಲೆಂಡ್‌ನ ಅತಿ ದೊಡ್ಡ ನಗರವಾಗಿರುವ ಗ್ಲಾಸ್ಗೋದಲ್ಲಿ ಗುರುವಾರದಿಂದ (ಜುಲೈ 23) ಆರಂಭಗೊಳ್ಳಲಿದೆ.  11 ದಿನಗಳ ಕ್ರೀಡಾಕೂಟದಲ್ಲಿ ಭಾರತ ಸೇರಿದಂತೆ ವಿಶ್ವದೆಲ್ಲೆಡೆಯ 74 ದೇಶಗಳ 3,000ಕ್ಕೂ ಅಧಿಕ ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಒಲಿಂಪಿಕ್ಸ್‌ನಂತೆ ಕಾಮನ್‌ವೆಲ್ತ್‌ ಗೇಮ್ಸ್‌ ಕೂಡಾ ಪ್ರತಿ 4 ವರ್ಷಗಳಿಗೊಮ್ಮೆ ನಡೆಯುತ್ತವೆ. 2022ರ ಗೇಮ್ಸ್‌ಗೆ ಬರ್ಮಿಂಗ್‌ಹ್ಯಾಮ್‌ ಆತಿಥ್ಯ ವಹಿಸಿತ್ತು. ಆದರೆ ಈ ಬಾರಿ ಕ್ರೀಡಾಕೂಟದಲ್ಲಿ ಹೆಚ್ಚೇನೂ ಗೇಮ್ಸ್‌ಗಳಿಲ್ಲ. ವೆಚ್ಚ ಕಡಿತ ಕಾರಣಕ್ಕೆ ಹಲವು ಪ್ರಮುಖ ಕ್ರೀಡೆಗಳನ್ನು ಕೈ ಬಿಡಲಾಗಿದೆ. ಉಳಿದಂತೆ ಅಥ್ಲೆಟಿಕ್ಸ್‌, ವೇಟ್‌ಲಿಫ್ಟಿಂಗ್‌, ಈಜು, ಸೈಕ್ಲಿಂಗ್‌, ಬಾಸ್ಕೆಟ್‌ಬಾಲ್‌ ಸೇರಿದಂತೆ 10 ಕ್ರೀಡೆಗಳಿವೆ. ಈ ಪೈಕಿ ಪ್ಯಾರಾ ಕ್ರೀಡಾಪಟುಗಳ 6 ಕ್ರೀಡೆಗಳೂ ಇವೆ.

ಭಾರತದ ಪಾಲಿಗೆ ಪದಕ ತಂದುಕೊಡುತ್ತಿದ್ದ ಪ್ರಮುಖ ಕ್ರೀಡೆಗಳಾದ ಕುಸ್ತಿ, ಬ್ಯಾಡ್ಮಿಂಟನ್, ಹಾಕಿ, ಕ್ರಿಕೆಟ್, ಶೂಟಿಂಗ್ ಮತ್ತು ಟೇಬಲ್ ಟೆನಿಸ್‌ಗಳನ್ನು ಈ ಬಾರಿ ಕೈಬಿಡಲಾಗಿದೆ.,

ಸ್ಕಾಟ್ಲೆಂಡ್‌ನ ಒಟ್ಟು 7 ಕ್ರೀಡಾಂಗಣಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಆಗಸ್ಟ್ 2ರಂದು ಸಮಾರೋಪ ಸಮಾರಂಭ ನಡೆಯಲಿದೆ. ಅದರಲ್ಲಿ 2030ರ ಆತಿಥ್ಯ ಹಕ್ಕು ಹೊಂದಿರುವ ಭಾರತಕ್ಕೆ ಧ್ವಜ ಹಸ್ತಾಂತರ ನಡೆಯಲಿದೆ. ಸ್ಕಾಟ್ಲೆಂಡ್‌ನಲ್ಲಿ 4ನೇ ಬಾರಿ ಕಾಮನ್‌ವೆಲ್ತ್‌ ಗೇಮ್ಸ್‌ ಆಯೋಜನೆಗೊಳ್ಳಲಿದೆ. ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಬ್ರಿಟೀಷರ ಆಳ್ವಿಕೆಗೆ ಒಳಪಟ್ಟ ದೇಶಗಳೆಲ್ಲಾ ಒಟ್ಟಿಗೆ ಪಾಲ್ಗೊಳ್ಳಲಿದೆ. 70ಕ್ಕೂ ಹೆಚ್ಚು ದೇಶಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತವೆ. ಮೊದಲ ದಿನವೇ ಭಾರತ ತಂಡ ಲಾನ್ ಬೌಲ್ಸ್ ಸ್ಪರ್ಧೆಯಲ್ಲಿ ಕಣಕ್ಕಿಳಿಯಲಿದೆ

Sulekha