ನಿನ್ನ ಓಡಿ ಹೋಗೋಕೆ ಬಿಡ್ತೀನಾ? – ಓಡುತ್ತಿದ್ದ ಕಂದಮ್ಮನ ಬಾಲ ಹಿಡಿದು ಎಳೆದು ನಿಲ್ಲಿಸಿದ ತಾಯಾನೆ!

ನಿನ್ನ ಓಡಿ ಹೋಗೋಕೆ ಬಿಡ್ತೀನಾ? – ಓಡುತ್ತಿದ್ದ ಕಂದಮ್ಮನ ಬಾಲ ಹಿಡಿದು ಎಳೆದು ನಿಲ್ಲಿಸಿದ ತಾಯಾನೆ!

ಆನೆ ಮರಿಗಳ ಆಟ, ತುಂಟಾಟ ನೋವುದೇ ಚೆಂದ. ಒಂದು ಕಡೆ ಸುಮ್ಮನೆ ನಿಲ್ಲ. ಅಲ್ಲಿಂದ ಇಲ್ಲಿಗೆ.. ಇಲ್ಲಿಂದ ಅಲ್ಲಿಗೆ ಅಂತ ಓಡುತ್ತಿರುತ್ತವೆ. ಇದೀಗ ಇಲ್ಲೊಂದು ಆನೆಮರಿ ಓಡಲು ಯತ್ನಿಸುತ್ತಿದ್ದಂತೆ ತಾಯಾನೆ ಬಾಲ ಹಿಡಿದುಕೊಂಡಿದೆ. ಈ ಮುದ್ದಾದ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ: ಜಯಂತ್ ಕೈಗೆ ತಾಳಿ ಬಿಚ್ಚಿಕೊಟ್ಟ ಚಿನ್ನುಮರಿ – ಜಾನು ಜಯಂತ್ ಸಂಬಂಧಕ್ಕೆ ಫುಲ್‌ಸ್ಟಾಪ್

ಮನುಷ್ಯರು ಮಾತ್ರವಲ್ಲ ಪ್ರಾಣಿಗಳು ಕೂಡ ತಮ್ಮ ಕಂದಮ್ಮಗಳ ಮೇಲೆ ಕಾಳಜಿ ವಹಿಸುವ ವಿಡಿಯೋ ಆಗಾಗ ವೈರಲ್‌ ಆಗುತ್ತಿರುತ್ತವೆ. ಇದೀಗ ಅಂತಹದ್ದೇ ಹೃದಯ ಸ್ಪರ್ಶಿ ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಸೆಟ್‌ ಮಾಡಿದೆ. ಮರಿಯಾನೆ ಓಡಲು ಶುರು ಮಾಡಿದ್ದು, ಇದೇ ವೇಳೆ ತಾಯಾನೆಯೊಂದು ತನ್ನ ಕಂದಮ್ಮನ ಬಾಲ ಹಿಡಿದು ಓಡದಂತೆ ತಡೆದು ನಿಲ್ಲಿಸಿದೆ. ಈ ಹೃದಯ ಸ್ಪರ್ಶಿ ವಿಡಿಯೋ ಸದ್ಯ ನೆಟ್ಟಿಗರ ಹೃದಯ ಗೆದ್ದಿದೆ.

ಗ್ಲೋಬಲ್ ನೇಚರ್ ರಿಸರ್ವ್ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಮರಿಯಾನೆಯೊಂದು ಒಂದೇ ಸಮನೆ ಓಡಲು ಶುರು ಮಾಡಿದೆ. ಇದನ್ನು ನೋಡಿದ ತಾಯಾನೆ ಮರಿಯಾನೆಯ ಬಾಲ ಹಿಡಿದು ಓಡಿ ಹೋಗದಂತೆ ತಡೆದು ನಿಲ್ಲಿಸಿರುವುದನ್ನು ನೀವಿಲ್ಲಿ ನೋಡಬಹುದು.

ಈ ವಿಡಿಯೋ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ತಾಯಿ ಪ್ರೀತಿಗೆ ಸರಿಸಾಟಿ ಇಲ್ಲ ಎಂದಿದ್ದಾರೆ. ಇನ್ನೊಬ್ಬರು, ಕ್ಯೂಟ್ ಎಂದರೆ, ಮತ್ತೊಬ್ಬರು, ಮರಿಯಾನೆಗಳು ಏನು ಮಾಡಿದ್ರೂ ಚಂದನೇ ಎಂದು ಕಾಮೆಂಟ್ ಮಾಡಿದ್ದಾರೆ.

Shwetha M

Leave a Reply

Your email address will not be published. Required fields are marked *