ಜಯಂತ್ ಕೈಗೆ ತಾಳಿ ಬಿಚ್ಚಿಕೊಟ್ಟ ಚಿನ್ನುಮರಿ – ಜಾನು ಜಯಂತ್ ಸಂಬಂಧಕ್ಕೆ ಫುಲ್‌ಸ್ಟಾಪ್

ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ತಿದೆ. ಜಯಂತ್ ಜಾನು ಒಂದಾದರು ಎಂಬಷ್ಟರಲ್ಲಿ ಸೈಕೋ ಗಂಡನ ವಿರುದ್ಧ ಸೇಡು ತೀರಿಸಿಕೊಳ್ಳುವ ಕಥೆ ಶುರುವಾಗಿತ್ತು. ಜಯಂತ್‌ಗೆ ತನ್ನ ತಪ್ಪು ಅರಿವಾಗುತ್ತದೆ, ಚಿನ್ನುಮರಿ ಎಲ್ಲವನ್ನೂ ಸರಿ ಮಾಡುತ್ತಾಳೆ ಎಂಬಷ್ಟರಲ್ಲಿ ಕಥೆ ಫುಲ್ ಉಲ್ಟಾ ಆಗಿದೆ. ಜಯಂತ್ ಜಾನು ಸಂಬಂಧಕ್ಕೆ ಫುಲ್‌ಸ್ಟಾಪ್ ಬಿದ್ದಿದೆ.
ಇದನ್ನೂ ಓದಿ:ಟಾಕ್ಸಿಕ್ ಸಿನಿಮಾದ ಮತ್ತೊಂದು ಸಾಂಗ್ ರಿಲೀಸ್ – ನಾಯಕಿಯರ ಜೊತೆ ಯಶ್ ರೋಮ್ಯಾನ್ಸ್
ಜೀ ಕನ್ನಡದ ಜನಪ್ರಿಯ ಧಾರಾವಾಹಿ ಲಕ್ಷ್ಮೀ ನಿವಾಸ ರೋಚಕ ತಿರುವು ಪಡೆದುಕೊಂಡಿದೆ. ಸೈಕೋ ಗಂಡನ ಕಾಟಕ್ಕೆ ಕೊನೆಗೂ ಬ್ರೇಕ್ ಹಾಕಿದ್ದಾಳೆ ಚಿನ್ನುಮರಿ. ಜಯಂತ್ ಪೊಸೆಸಿವ್ ಪ್ರೀತಿಗೆ ಇಷ್ಟುದಿನ ಜಾನುಗೆ ಉಸಿರುಗಟ್ಟುವಂತಿತ್ತು. ಇದೀಗ ಜಾನು ಫ್ರೀ ಬರ್ಡ್. ಜಯಂತ್ ಜೊತೆ ಇನ್ನು ಮುಂದೆ ಬದುಕಲು ಸಾಧ್ಯವೇ ಇಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾಳೆ ಜಾಹ್ನವಿ.
ಇದೀಗ ಸೀರಿಯಲ್ ತಂಡ ಹೊಸ ಪ್ರೋಮೋ ರಿಲೀಸ್ ಮಾಡಿದ್ದು, ಇದನ್ನು ನೋಡಿ ಫ್ಯಾನ್ಸ್ ಶಾಕ್ ಆಗಿದ್ದಾರೆ. ಜಯಂತ್ ಹಾಗೂ ಜಾಹ್ನವಿ ಜೋಡಿ ಬೇರೆಯಾಗುತ್ತಿದ್ದಾರೆ. ಜಯಂತ್ ಕಟ್ಟಿದ ತಾಳಿಯನ್ನೇ ಬಿಚ್ಚಿಕೊಟ್ಟಿದ್ದಾಳೆ ಜಾನು. ಜೀ ಕನ್ನಡ ವಾಹಿನಿ ಈ ಪ್ರೋಮೋ ಬಿಡುಗಡೆ ಮಾಡಿದ್ದು, ಅದಕ್ಕೆ ಕ್ಯಾಪ್ಶನ್ ನೀಡಿದೆ. ಕರುನಾಡು ಮೆಚ್ಚಿದ ಜೋಡಿಯ ಬದುಕಲ್ಲಿ ಬಿರುಗಾಳಿ. ಕೈ ಹಿಡಿದವನ ಕೈಗೇ ತಾಳಿ ಕೊಟ್ಟು ಹೊರಟ್ಲು ಚಿನ್ನುಮರಿ. ಮುರಿದು ಬಿತ್ತಾ ಏಳು ಜನ್ಮಗಳ ಜಯಂತ್- ಜಾಹ್ನವಿಯ ಬಂಧ? ಅಂತ್ಯವಾಯ್ತಾ ಒಲವ ಸಾಕ್ಷಾತ್ಕಾರ ಎಂದು ಬರೆಯಲಾಗಿದೆ.
ಜಯಂತ್‌ಗೆ ಚಿನ್ನುಮರಿಯೆಂದರೆ ಜೀವ. ಆದರೆ, ಅದೊಂಥರಾ ಉಸಿರುಗಟ್ಟಿಸುವ ಪ್ರೀತಿ. ಸೈಕೋ ಗಂಡನ ಕಾಟಕ್ಕೆ ಜಾನು ಮಾನಸಿಕ ಯಾತನೆ ಅನುಭವಿಸುತ್ತಿದ್ದಳು. ಕೊನೆಗೊಂದು ದಿನ ಜಾನು ಜಯಂತ್‌ನಿಂದ ದೂರಾಗಿದ್ದಳು. ಮರಳಿ ಬಂದರೂ ಕೂಡಾ ಜಯಂತ್ ಮನೆಗೆ ಕಾಲಿಟ್ಟಿರಲಿಲ್ಲ. ಸೈಕೋ ಗಂಡನ ಕಾಟದಿಂದ ಅಷ್ಟೊಂದು ರೋಸಿಹೋಗಿದ್ದಳು. ಚಿನ್ನುಮರಿಗಾಗಿ ಜಯಂತ್ ಹುಡುಕಾಟ ನಡೆಸಿದ್ದ. ಕೊನೆಗೂ ಜಯಂತ್ ಕೈಗೆ ಚಿನ್ನುಮರಿ ಸಿಕ್ಕಿದ್ದಳು. ಜಯಂತ್‌ಗೆ ಬುದ್ಧಿ ಕಲಿಸಲು ಜಾಹ್ನವಿ ಹಠ ತೊಟ್ಟಳು. ಸೈಕೋ ಗಂಡನ ವಿರುದ್ಧ ಸೇಡು ತೀರಿಸಿಕೊಳ್ಳಲು ಮತ್ತೆ ಗಂಡನ ಮನೆಗೆ ಕಾಲಿಟ್ಟಿದ್ದಳು. ಗಂಡ ಕೊಟ್ಟ ನೋವನ್ನೇ ಆತನಿಗೂ ಆಗುವಂತೆ ಮಾಡಿದ್ದಳು. ಇದೀಗ ಕೊನೆಗೂ ಜಾನು ಜಯಂತ್‌ನಿಂದ ದೂರಾವಾಗುವ ಸಮಯ ಹತ್ತಿರಬಂದಿದೆ.
ಜಾಹ್ನವಿ ಹೆತ್ತವರ ಮುಂದೆಯೇ ತನ್ನ ಕೊರಳಲ್ಲಿದ್ದ ತಾಳಿಯನ್ನು ಬಿಚ್ಚಿದ್ದಾಳೆ. ಜಯಂತ್ ಕೈಗೆ ಕೊಟ್ಟಿದ್ದಾಳೆ. ಜಾನು ರೆಬೆಲ್ ಆಗಿರುವುದು ನೋಡಿ ಜಯಂತ್ ಕುಸಿದುಹೋಗಿದ್ದಾನೆ. ಹೆತ್ತವರು ಶಾಕ್ ಆಗಿದ್ದಾರೆ. ಮುಂದೆ ಜಯಂತ್ ಪರಿಸ್ಥಿತಿಯೇನು?, ಜಾನು ಭವಿಷ್ಯದ ಕಥೆಯೇನು ಅನ್ನೋ ಕುತೂಹಲ ಗರಿಗೆದರಿದೆ.

ನೋಡಿರಿ

