ZIM ಚೆಂಡಾಡ್ತಾರಾ ಅಭಿ-ವೈಭವ್ – ಗಂಭೀರ್ ಕಣ್ಣಿಗೆ ಭುವಿ ಕಾಣಲಿಲ್ವಾ?
ಪ್ಲೇಯಿಂಗ್ 11ನಲ್ಲಿ ಬೌಲರ್ಸ್ ಟೆನ್ಷನ್

ಬ್ಯಾಕ್ ಟು ಬ್ಯಾಕ್ ಸರಣಿಗಳಲ್ಲಿ ಸೋತು ಸೊರಗಿರುವ ಭಾರತ ನಾಳೆಯಿಂದ ಜಿಂಬಾಬ್ವೆ ವಿರುದ್ಧ ಟಿ-20ಐ ಸರಣಿ ಆಡಲಿದೆ. ಮೂರು ಪಂದ್ಯಗಳೂ ಕೂಡ ಹರಾರೆಯ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆಯಲಿವೆ. ನಾಲ್ಕು ದಿನಗಳಲ್ಲೇ ಮುಗಿಯಲಿರೋ ಈ ಸರಣಿ ಭಾರತಕ್ಕೆ ಶತಾಯ ಗತಾಯ ಗೆಲ್ಲಲೇಬೇಕಾದ ಸರಣಿ. ಆದ್ರೆ ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಮಾಡಿರೋ ಎಡವಟ್ಟಿಗೆ ಇಲ್ಲೂ ಸೋಲಿನ ಭಯ ಕಾಡ್ತಿದೆ.
ಇದನ್ನೂ ಓದಿ : ಸೊರಗಿದ ಭಾರತಕ್ಕೀಗ ZIM ಟಾಸ್ಕ್ – ಗೆಲುವಿನ ಟಾನಿಕ್ ಕೊಡ್ತಾರಾ ಲಕ್ಷ್ಮಣ್?
ನಾಲ್ಕು ತಿಂಗಳ ಹಿಂದಷ್ಟೇ ಟಿ-20 ವಿಶ್ವಕಪ್ ಚಾಂಪಿಯನ್ ಆಗಿದ್ದ ಭಾರತ ಈಗ ಸೋತು ಸೋತು ಸುಣ್ಣವಾಗಿದೆ. ಶ್ರೇಯಸ್ ಅಯ್ಯರ್ ಕ್ಯಾಪ್ಟನ್ ಆದ್ಮೇಲೆ ಒಂದೇ ಒಂದು ಪಂದ್ಯವನ್ನೂ ಗೆಲ್ಲೋಕೆ ಆಗಿಲ್ಲ. ಐಸಿಸಿ ಟಿ-20ಐ ರ್ಯಾಂಕಿಂಗ್ನಲ್ಲಿ 2022ರ ಫೆಬ್ರವರಿಯಿಂದ ಹಿಡ್ದು 2026ರ ಜುಲೈ 11ರವರೆಗೆ ಅಂದ್ರೆ 4 ವರ್ಷ ನಾಲ್ಕು ತಿಂಗಳು ಅಥವಾ ಸತತ 52 ತಿಂಗಳುಗಳ ಕಾಲ ನಂಬರ್ 1ನಲ್ಲೇ ಸ್ಥಾನದಲ್ಲೇ ಇದ್ದ ಭಾರತ ಈಗ ನಂಬರ್ 2 ನಲ್ಲಿದೆ. ಭಾರತವನ್ನ ಕ್ಲೀನ್ ಸ್ವೀಪ್ ಮಾಡಿದ್ದ ಇಂಗ್ಲೆಂಡ್ ಈಗ ನಂಬರ್ 1ಪಟ್ಟಕ್ಕೇರಿದೆ. ಮತ್ತೆ ಟಿ-20ಐನ ಗತವೈಭವ ಶುರು ಆಗ್ಬೇಕು ಅಂದ್ರೆ ಈ ಸರಣಿ ಭಾರತಕ್ಕೆ ಮಾಡು ಇಲ್ಲವೇ ಮಡಿ ಸರಣಿ ಆಗಲಿದೆ. ಹೀಗಾಗಿ ಜಿಂಬಾಬ್ವೆ ವಿರುದ್ಧ ಬಲಿಷ್ಠ ಪ್ಲೇಯಿಂಗ್ 11ನೇ ಅಖಾಡಕ್ಕಿಳಿಸಬೇಕಿತ್ತು. ಆದ್ರೆ ಬಿಸಿಸಿಐ ಆಯ್ಕೆ ಸಮಿತಿ ಮತ್ತು ಹೆಡ್ ಕೋಚ್ ಗೌತಮ್ ಗಂಭೀರ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೋ ಥರದಲ್ಲಿ ಟೀಂ ಸೆಲೆಕ್ಷನ್ ಮಾಡಿದ್ದಾರೆ. ಅದ್ರಲ್ಲೂ ಬೌಲಿಂಗ್ ಯುನಿಟ್ ಅಂತೂ ಕಂಪ್ಲೀಟ್ ವೀಕ್ ಆಗಿ ಕಾಣ್ತಿದೆ.
ಅನುಭವಿಗಳಿಗೆ ಅವಕಾಶವಿಲ್ಲ.. ಹೊಸಬರಿಗೆ ರೆಡ್ ಕಾರ್ಪೆಟ್!
ಹಳೇ ಬೇರು ಹೊಸ ಚಿಗುರು ಅನ್ನೋ ಹಾಗೇ ಸೀನಿಯರ್ಸ್ ಮತ್ತು ಜೂನಿಯರ್ಸ್ ಕಾಂಬಿನೇಷನ್ ಇದ್ದಾಗಷ್ಟೇ ಅದು ಪರ್ಫೆಕ್ಟ್ ಟೀಂ ಆಗೋದು. ಆದ್ರೆ ಜಿಂಬಾಬ್ವೆ ಪ್ರವಾಸಕ್ಕೆ ಟೀಂ ಇಂಡಿಯಾ ಸೆಲೆಕ್ಷನ್ನಲ್ಲಿ ಟೀಂ ಮ್ಯಾನೇಜ್ಮೆಂಟ್ ಅದ್ಯಾವ ಅಜೆಂಡಾ ಇಟ್ಕೊಂಡು ಟೀಂ ಫೈನಲ್ ಮಾಡಿದ್ರೋ ಗೊತ್ತಿಲ್ಲ. ಅದ್ರಲ್ಲೂ ಬೌಲಿಂಗ್ ವಿಭಾಗ ಅಂತೂ ತೀರಾ ಡಮ್ಮಿ ಅನ್ನಿಸ್ತಿದೆ. ಬ್ಯಾಟರ್ಗಳ ಎದೆಯಲ್ಲಿ ನಡುಕ ಹುಟ್ಟಿಸೋ ಒಬ್ಬೇ ಒಬ್ಬ ಸ್ಟ್ರಾಂಗ್ ಬೌಲರ್ ಇಲ್ಲ. ಅದೂ ಕೂಡ ಅನುಭವಿ ಆಟಗಾರರನ್ನೆಲ್ಲಾ ಕೈಬಿಟ್ಟು ಹೊಸಬರಿಗೆ ರೆಡ್ ಕಾರ್ಪೆಟ್ ಹಾಸಿದ್ದಾರೆ. ರವಿ ಬಿಷ್ಣೋಯ್, ಮಯಾಂಕ್ ಯಾದವ್, ಯಶ್ ಠಾಕೂರ್, ಅಶೋಕ್ ಶರ್ಮಾ ಹಾಗೇ ಪ್ರಿನ್ಸ್ ಯಾದವ್ಗೆ ಮಣೆ ಹಾಕಿದ್ದಾರೆ. ಆಲೌಂಡರ್ಸ್ ಕೋಟಾದಲ್ಲಿ ಶಿವಂ ದುಬೆ, ಅಭಿಷೇಕ್ ಶರ್ಮಾ, ಸೂರ್ಯಾಂಶ್ ಶೆಡ್ಗೆ ಮತ್ತು ಹರ್ಷ್ ದುಬೆ ಇದ್ದಾರೆ. ಅಭಿಷೇಕ್ರಿಂದ ಅಂತೂ ಬೌಲಿಂಗ್ ಮಾಡ್ಸಲ್ಲ. ಉಳಿದಂತೆ ಇಷ್ಟು ಬೌಲರ್ಗಳ ಪೈಕಿ ಎದುರಾಳಿ ತಂಡವನ್ನ ಪ್ರೆಶರ್ನಲ್ಲಿಡೋ ಯಾವ ಬೌಲರ್ ಕಾಣಿಸ್ತಾರೆ ಹೇಳಿ. ಆಲ್ರೆಡಿ ಐರ್ಲೆಂಡ್ ಮತ್ತು ಇಂಗ್ಲೆಂಡ್ನಲ್ಲಿ ಭಾರತದ ಸರಣಿ ಸೋಲಿಗೆ ವೀಕ್ ಬೌಲಿಂಗ್ ಕೂಡ ಕಾರಣವೇ. ಹೀಗಿದ್ರೂ ಜಿಂಬಾಬ್ವೆ ಸರಣಿಗೂ ಅದಕ್ಕಿಂತ ವೀಕ್ ಅನ್ನೋ ಟೀಂ ಜೊತೆ ಹೋಗಿದ್ದಾರೆ. ಒಂದೇ ಮ್ಯಾಚಲ್ಲಿ ನಾಲ್ವರಿಗೆ ಟೀಂ ಇಂಡಿಯಾ ಪರ ಆಡಲು ಮೇಡನ್ ಕಾಲ್ ಸಿಕ್ಕಿದೆ. ಪ್ರಭ್ ಸಿಮ್ರಾನ್ ಸಿಂಗ್, ಅಶೋಕ್ ಶರ್ಮಾ, ಯಶ್ ಠಾಕೂರ್ ಹಾಗೇ ಹರ್ಷ್ ದುಬೆ ಮೊದಲ ಬಾರಿಗೆ ಟೀಂ ಇಂಡಿಯಾಗೆ ಸೆಲೆಕ್ಟ್ ಆಗಿದ್ದಾರೆ. ಇವ್ರನ್ನೆಲ್ಲಾ ಒಟ್ಟಿಗೆ ಒಂದೇ ಸರಣಿಗೆ ಸೆಲೆಕ್ಟ್ ಮಾಡೋ ಅಗತ್ಯ ಇರ್ಲಿಲ್ಲ. ಹಾಗೆ ಬೇಕು ಅಂದಿದ್ರೆ ಬೌಲಿಂಗ್ ಸ್ಕ್ವಾಡ್ ಲೀಡ್ ಮಾಡೋಕೆ ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್ರನ್ನ ಸೆಲೆಕ್ಟ್ ಮಾಡ್ಬೋದಿತ್ತು.
ಭುವನೇಶ್ವರ್ ಕುಮಾರ್ ಸಾಮರ್ಥ್ಯ ಗಂಭೀರ್ ಕಣ್ಣಿಗೆ ಕಾಣಲ್ವಾ?
ಅಷ್ಟಕ್ಕೂ ಇಲ್ಲಿ ಭಾರತದ ಸೋಲಿಗೆ ಕಾರಣವೇ ಅನುಭವಿಗಳ ಸೈಡ್ಲೈನ್. ಈಗ ಭುವನೇಶ್ವರ್ ಕುಮಾರ್ರನ್ನೇ ತಗೊಳ್ಳಿ. ಐಪಿಎಲ್ನಲ್ಲಿ ಆರ್ಸಿಬಿ ಬ್ಯಾಕ್ ಟು ಬ್ಯಾಕ್ ಚಾಂಪಿಯನ್ ಆಗೋಕೆ ಭುವಿ ಬೌಲಿಂಗ್ ಕೂಡ ಮೇನ್ ರೀಸನ್. 2025ರಲ್ಲಿ 17 ವಿಕೆಟ್ ತೆಗೆದಿದ್ದ ಭುವಿ 2026ರಲ್ಲಿ 28 ವಿಕೆಟ್ಸ್ ಬೇಟೆಯಾಡಿದ್ರು. ಎರಡು ಸೀಸನ್ಗಳಲ್ಲಿ 45 ವಿಕೆಟ್ಸ್ ಬಂದಿದೆ. ಭಾರತದ ಪರ 229 ಪಂದ್ಯಗಳಲ್ಲಿ 294 ವಿಕೆಟ್ಸ್ ತೆಗೆದಿದ್ದಾರೆ. ಟೆಸ್ಟ್ನಲ್ಲಿ 63, ಒಡಿಐನಲ್ಲಿ 141 ಹಾಗೇ ಟಿ-20ಐನಲ್ಲಿ 90 ವಿಕೆಟ್ಸ್ ಇದೆ. ಌಂಡ್ ಎಕಾನಮಿ ಕೇವಲ 6.96. ಅಂದ್ರೆ ಆಲ್ಮೊಸ್ಟ್ ಬಾಲ್ ಎ ರನ್ ಅನ್ನೋ ಥರದಲ್ಲಿ ಬ್ಯಾಟರ್ಗಳಿಗೆ ಕಾಟ ಕೊಟ್ಟಿದ್ದಾರೆ. ಹೀಗಿದ್ರೂ ಭುವಿಗೆ ಟೀಂ ಇಂಡಿಯಾದಲ್ಲಿ ಚಾನ್ಸ್ ಇಲ್ಲ. ಭಾರತದ ಪರ ಕೊನೇ ಬಾರಿಗೆ 2022ರ ನವೆಂಬರ್ನಲ್ಲಿ ಟಿ-20ಐ ಪಂದ್ಯ ಆಡಿದ್ದು. ಅದಾದ್ಮೇಲೆ ತಂಡದಿಂದ ಹೊರಗಿಟ್ಟಿದ್ದಾರೆ. ಹಾಗಂತ ಭುವಿ ನಿವೃತ್ತಿ ತಗೊಂಡಿಲ್ಲ. ಬಿಸಿಸಿಐ ಬಿಗ್ ಬಾಸ್ಗಳೇ ಅವ್ರ ಟ್ಯಾಲೆಂಟ್ನ ಇಗ್ನೋರ್ ಮಾಡಿದ್ದಾರೆ. ಈಗ ಸಾಲು ಸಾಲು ಸರಣಿಗಳನ್ನ ಸೋಲ್ತಿದ್ರೂ ಡೋಂಟ್ಕೇರ್ ಌಟಿಟ್ಯೂಡ್ನಲ್ಲಿ ಟೀಂ ಸೆಲೆಕ್ಟ್ ಮಾಡ್ತಿದ್ದಾರೆ.
ಭಾರತದ ಸಂಭಾವ್ಯ ಪ್ಲೇಯಿಂಗ್ 11
ಅಭಿಷೇಕ್ ಶರ್ಮಾ
ವೈಭವ್ ಸೂರ್ಯವಂಶಿ
ಇಶಾನ್ ಕಿಶನ್
ಶ್ರೇಯಸ್ ಅಯ್ಯರ್
ತಿಲಕ್ ವರ್ಮಾ
ಶಿವಂ ದುಬೆ
ರಿಂಕು ಸಿಂಗ್
ಹರ್ಷ್ ದುಬೆ
ಮಯಾಂಕ್ ಯಾದವ್
ಪ್ರಿನ್ಸ್ ಯಾದವ್
ವರುಣ್ ಚಕ್ರವರ್ತಿ
ಇಲ್ಲಿ ಇಡೀ ಪ್ಲೇಯಿಂಗ್ 11 ಅನಾಲಿಸಿಸ್ ಮಾಡಿದ್ರೆ ಟಿ-20ಐನಲ್ಲಿ ವರುಣ್ ಚಕ್ರವರ್ತಿ ಮಾತ್ರವೇ ಬೌಲಿಂಗ್ನಲ್ಲಿ ಸ್ವಲ್ಪ ಹೋಪ್ಸ್ ಕೊಡ್ತಾರೆ ಅನ್ನೋದನ್ನ ಬಿಟ್ರೆ ಉಳಿದವ್ರೆಲ್ಲಾ ಜಸ್ಟ್ ಸಪೋರ್ಟಿಂಗ್ ಕ್ಯಾರೆಕ್ಟರ್ಸ್ ಥರನೇ ಇದ್ದಾರೆ. ಕಳೆದ ಸರಣಿಗಳಲ್ಲಿದ್ದ ಅರ್ಶದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ ಕೂಡ ಈಗ ತಂಡದಲ್ಲಿಲ್ಲ. ಒಟ್ನಲ್ಲಿ ಎಕ್ಸ್ಪೆರಿಮೆಂಟ್ಸ್ ಮಾಡೋದ್ರಲ್ಲಿ ಸೈಟಿಂಸ್ಟ್ಗಳನ್ನೇ ಮೀರಿಸೋ ರೇಂಜ್ಗೆ ಗೌತಮ್ ಗಂಭೀರ್ ಮತ್ತು ಟೀಂ ಪ್ರಯೋಗ ಮಾಡ್ತಾನೇ ಇದ್ದಾರೆ. ಪದೇಪದೆ ಫೇಲ್ಯೂರ್ ಆದ್ರೂ ತಮ್ಮ ಮೊಂಟಾಟ ಮಾತ್ರ ಬಿಡ್ತಿಲ್ಲ. ಆದ್ರೆ ಆಯಕಟ್ಟಿನ ಜಾಗದಲ್ಲಿ ಕುಳಿತವರ ಚೆಲ್ಲಾಟಕ್ಕೆ ಟೀಂ ಇಂಡಿಯಾ ಸಫರ್ ಆಗ್ತಿದೆ ಅಷ್ಟೇ.

ನೋಡಿರಿ

