ಮೈಸೂರು ಸೂ*ಸೈಡ್ ಕೇಸ್ಗೆ ಟ್ವಿಸ್ಟ್ – ಡೆ*ತ್ನೋಟ್ನಲ್ಲಿ ಸಾವಿನ ಸತ್ಯ ರಿವೀಲ್

ಮೈಸೂರಿನ ಹುಣಸೂರಿನಲ್ಲಿ ನಡೆದ ಕೊಲೆ ಮತ್ತು ಆತ್ಮಹತ್ಯೆಗೆ ಕಾರಣವೇನು ಅನ್ನೋದು ನಿಗೂಢವಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ. ಈಗ ಇದೀಗ ಹರೀಶ್ ಬರೆದ ಮತ್ತೊಂದು ಡೆತ್ನೋಟ್ ಪತ್ತೆಯಾಗಿದೆ. ಮೂರು ದಿನಗಳ ಹಿಂದೆ ಪ್ರವಾಸದ ನೆಪವೊಡ್ಡಿ ತಾಯಿಯನ್ನ ತವರಿಗೆ ಕಳಿಸಿದ್ದ ಹರೀಶ್. ಟ್ರಿಪ್ ಮುಗಿಸಿ ವಾಪಸ್ ಬಂದವನೇ ರಾತ್ರಿ ಮೊಬೈಲ್ ನಲ್ಲಿ ಸ್ನೇಹಿತರ ಜೊತೆಗೂ ಲವಲವಿಕೆಯಿಂದ ಮಾತನಾಡಿದ್ದಾನೆ. ಆದ್ರೆ, ರಾತ್ರಿ ಅದೇನಾಯ್ತೋ, ಏನೋ ತನ್ನ ಪತ್ನಿ ಹಾಗು ಮಕ್ಕಳ ಬಾಯಿ, ಮೂಗಿಗೆ ಪ್ಲಾಸ್ಟರ್ ಸುತ್ತಿ, ಉಸಿರುಗಟ್ಟಿಸಿ ಕೊಂದಿದ್ದಾನೆ . ಸ್ನೇಹಿತರಿಗೂ ಈ ವಿಷ್ಯ ಕೇಳಿ ಶಾಕ್ ಆಗಿದ್ದಾರೆ.
ಡೇತ್ನೋಟ್ನಲ್ಲಿ ಏನಿದೆ?
ಹರೀಶ್ ಬರೆದಿರೋ ಡೆತ್ನೋಟ್ ಪತ್ತೆಯಾಗಿದೆ. ಮೂರು ಪುಟಗಳ ಡೆತ್ ನೋಟ್ ಬರೆದು, ಅದರಲ್ಲಿ ಯಾರಿಗೆ ಏನು ಸೇರಬೇಕು? ಆಸ್ತಿ ಪತ್ರಗಳು ಎಲ್ಲಿವೆ? ಎಲ್ಲಾ ಮಾಹಿತಿ ಬರೆದು ತಾನೂ ಕೂಡ ಮೂರನೇ ಮಹಡಿಗೆ ತೆರಳಿ ನೇಣಿಗೆ ಕೊರಳೊಡ್ಡಿದ್ದಾನೆ.
ಜೀವನದಲ್ಲಿ ವಿಫಲನಾಗಿದ್ದೇನೆ ಹೀಗಾಗಿ ಈ ಕೆಲಸ ಮಾಡುತ್ತಿದ್ದೇನೆ ಎಂದು ಮೃತ ಹರೀಶ್ ಡೆತ್ ನೋಟ್ನಲ್ಲಿ ಉಲ್ಲೇಖ ಮಾಡಿದ್ದಾರೆ. ಮತ್ತೊಂದು ಡೆತ್ ನೋಟ್ ನಲ್ಲಿ ನಾನಿಲ್ಲದೆ ನನ್ನ ಹೆಂಡತಿ ಮಕ್ಕಳು ಕಷ್ಟ ಪಡಬಾರದು ಹೀಗಾಗಿ ಈ ತರ ಮಾಡಿದ್ದೇನೆ ಎಂದು ಬರೆದುಕೊಂಡಿದ್ದಾನೆ.
ಸ್ಮೇಹಿತೆಗೆ ಕರೆ ಮಾಡಿ ಮನೆಯಲ್ಲಿ ಯಾರೂ ಕಾಲ್ ರಿಸೀವ್ ಮಾಡ್ತಿಲ್ಲ. ಚೆಕ್ ಮಾಡಿ ಎಂದು ತಿಳಿಸಿದ್ದಾರೆ. ಈ ವೇಳೆ ಮನೆಗೆ ಬಂದು ನೋಡಿದಾಗಲೇ ಬೆಚ್ಚಿ ಬೀಳುವ ದೃಶ್ಯ ಅಕ್ಕಪಕ್ಕದವರಿಗೆ ಕಂಡಿದೆ. ಪೈನಾನ್ಸ್ ವ್ಯವಹಾರ ನಡೆಸ್ತಿದ್ದ ಕಾರಣಕ್ಕೆ ಹಣಕಾಸಿನ ಕಿರುಕುಳ ಆಗಿರಬಹುದು. ಹಣದ ಸಮಸ್ಯೆ ಎದುರಾಗಿರಬಹುದು ಅಂತ ಸ್ನೇಹಿತರು, ಬಂಧುಗಳು ಅನುಮಾನ ವ್ಯಕ್ತಪಡಿಸ್ತಾರೆ.

ನೋಡಿರಿ

