ಸುಖ , ಸಂತೋಷಕ್ಕಾಗಿ ಆಷಾಢ ಬುಧವಾರದಂದು ಈ ಕೆಲಸಗಳನ್ನ ಮಾಡಿ

ಸುಖ , ಸಂತೋಷಕ್ಕಾಗಿ ಆಷಾಢ ಬುಧವಾರದಂದು ಈ ಕೆಲಸಗಳನ್ನ ಮಾಡಿ

ಹಿಂದೂ ಧರ್ಮದಲ್ಲಿ ವಾರದ ಪ್ರತಿಯೊಂದು ದಿನವೂ ಒಂದೊಂದು ದೇವರಿಗೆ ಸಮರ್ಪಿತವಾಗಿದೆ. ಅದರಂತೆ ಬುಧವಾರವನ್ನು ಗಣೇಶನ ಆರಾಧನೆಗೆ ಅತ್ಯಂತ ಮಂಗಳಕರ. ಈಗ ಪವಿತ್ರ ಆಷಾಢ ಮಾಸ ನಡೆಯುತ್ತಿದ್ದು, ಈ ಮಾಸದಲ್ಲಿ ಶಿವ ಮತ್ತು ಗಣೇಶನ ಆರಾಧನೆಗೆ ವಿಶೇಷ ಮಹತ್ವವಿದೆ ಎಂದು ಪುರಾಣಗಳು ಹಾಗೂ ಧಾರ್ಮಿಕ ನಂಬಿಕೆಗಳು ತಿಳಿಸುತ್ತವೆ.

ಆಷಾಢ ಮಾಸದ ಬುಧವಾರದಂದು ಭಕ್ತಿಯಿಂದ ಗಣೇಶ ಮತ್ತು ಶಿವನನ್ನು ಪೂಜಿಸಿ, ಕೆಲವು ವಿಶೇಷ ಮಂತ್ರಗಳನ್ನು ಜಪಿಸಿ ಹಾಗೂ ಸರಳ ಧಾರ್ಮಿಕ ಆಚರಣೆಗಳನ್ನು ಪಾಲಿಸಿದರೆ ಜೀವನದಲ್ಲಿರುವ ವಿಘ್ನಗಳು ದೂರಾಗಿ, ಕುಟುಂಬದಲ್ಲಿ ಸುಖ-ಶಾಂತಿ ನೆಲೆಸುತ್ತದೆ, ಆರ್ಥಿಕ ಪ್ರಗತಿ ಉಂಟಾಗುತ್ತದೆ ಮತ್ತು ಮನೋಕಾಮನೆಗಳು ಈಡೇರುತ್ತವೆ ಎಂದು ನಂಬಲಾಗಿದೆ.

  • ಆಷಾಢ ಬುಧವಾರ ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ, ಶಿವಲಿಂಗಕ್ಕೆ ಗಂಗಾಜಲ ಹಾಗೂ ಶಮಿ ಎಲೆಗಳಿಂದ ಅಭಿಷೇಕ ಮಾಡಿ. ನಂತರ ಕೆಳಗಿನ ಮಂತ್ರವನ್ನು 21 ಬಾರಿ ಭಕ್ತಿಯಿಂದ ಜಪಿಸಿ.
  • ಮಂತ್ರ: “ಓಂ ಪೂರ್ವಕಪಿಮುಖಾಯ ಪಚ್ಚಮುಖ ಹನುಮತೇ ಟಂ ಟಂ ಟಂ ಟಂ ಟಂ ಸಕಲ ಶತ್ರು ಸಂಹಾರಣಾಯ ಸ್ವಾಹಾ॥”
  • ಧಾರ್ಮಿಕ ನಂಬಿಕೆಯ ಪ್ರಕಾರ, ಈ ಮಂತ್ರ ಜಪಿಸುವುದರಿಂದ ಶತ್ರುಗಳ ಕಾಟ ಕಡಿಮೆಯಾಗುತ್ತದೆ ಹಾಗೂ ಆತ್ಮವಿಶ್ವಾಸ ಮತ್ತು ಧೈರ್ಯ ಹೆಚ್ಚುತ್ತದೆ.
  • ಬುಧವಾರವು ಬುಧ ಗ್ರಹದ ದಿನವೂ ಆಗಿರುವುದರಿಂದ ಹಸಿರು ಬಣ್ಣಕ್ಕೆ ವಿಶೇಷ ಮಹತ್ವವಿದೆ. ಈ ದಿನ ಹಸುವಿಗೆ ಹಸಿರು ಹುಲ್ಲು ಅಥವಾ ಹಸಿರು ತರಕಾರಿಗಳನ್ನು ದಾನ ಮಾಡಿದರೆ ಬುಧ ಗ್ರಹದ ಅನುಗ್ರಹ ದೊರೆತು ಶಿಕ್ಷಣ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಪ್ರಗತಿ ಕಂಡುಬರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.

Kishor KV

Leave a Reply

Your email address will not be published. Required fields are marked *