4-3=1.. ಗಿಲ್ ಗೆ ಸಿಗ್ತಿಲ್ಲ ಗೆಲುವು – ODIಗೂ ಕುತ್ತು ತಂದ ಗಂಭೀರ್
ವಿಶ್ವಕಪ್ ಟಾರ್ಗೆಟ್ ಮಿಸ್ ಆಗುತ್ತಾ?

4-3=1.. ಗಿಲ್ ಗೆ ಸಿಗ್ತಿಲ್ಲ ಗೆಲುವು – ODIಗೂ ಕುತ್ತು ತಂದ ಗಂಭೀರ್ವಿಶ್ವಕಪ್ ಟಾರ್ಗೆಟ್ ಮಿಸ್ ಆಗುತ್ತಾ?

ಟೀಂ ಇಂಡಿಯಾಗೆ ಸದ್ಯಕ್ಕಿರೋ ಪರಮಗುರಿಯೇ 2027ರ ಏಕದಿನ ವಿಶ್ವಕಪ್ ಗೆಲ್ಲೋದು. ಮುಂದಿನ ವರ್ಷಾಂತ್ಯದಲ್ಲಿ ನಡೆಯಲಿರೋ ಐಸಿಸಿ ಟೂರ್ನಮೆಂಟ್​ಗಾಗಿ ಟೀಂ ಫಾರ್ಮೇಷನ್ ಕೂಡ ಜೋರಾಗಿದೆ. ಆದ್ರೆ ಅಂದುಕೊಂಡಂತ ರಿಸಲ್ಟ್ ಬರ್ತಿಲ್ಲ ಅಷ್ಟೇ. ಅದೆಲ್ಲಕ್ಕಿಂತ ಮುಖ್ಯವಾಗಿ ಶುಭ್​ಮನ್ ಗಿಲ್ ಮತ್ತು ಹೆಡ್ ಕೋಚ್ ಗೌತಮ್ ಗಂಭೀರ್ ಕಾಂಬಿನೇಷನ್ ವರ್ಕ್ ಆಗ್ತಿಲ್ಲ. ಇದೇ ಫೇಲ್ಯೂರ್ ಈಗ ವಿಶ್ವಕಪ್ ಜರ್ನಿ ಬಗ್ಗೆಯೂ ಆತಂಕ ಮೂಡಿಸಿದೆ.

ಇದನ್ನೂ ಓದಿ : ಸೊರಗಿದ ಭಾರತಕ್ಕೀಗ ZIM ಟಾಸ್ಕ್ – ಗೆಲುವಿನ ಟಾನಿಕ್ ಕೊಡ್ತಾರಾ ಲಕ್ಷ್ಮಣ್?

2023ರ ಏಕದಿನ ವಿಶ್ವಕಪ್​ನಲ್ಲಿ ರೋಹಿತ್ ಶರ್ಮಾ ಕ್ಯಾಪ್ಟನ್ಸಿಯಲ್ಲಿ ಭಾರತ ಫೈನಲ್ ಪ್ರಬೇಶಿ ಟ್ರೋಫಿ ಜಸ್ಟ್ ಮಿಸ್ ಆಗಿತ್ತು. ಈಗ 2027ಕ್ಕೆ ಟ್ರೋಫಿ ಗೆಲ್ಲಲೇಬೇಕು ಅಂತಾ ಭಾರತ ತಂಡ ಪಣ ತೊಟ್ಟಿದೆ. ಶುಭ್​ಮನ್ ಗಿಲ್ ಕ್ಯಾಪ್ಟನ್ಸಿಯಲ್ಲಿ ಟೀಂ ಕೂಡ ಸಿದ್ಧವಾಗ್ತಿದೆ. ಆದ್ರೆ ಗಿಲ್ & ಗಂಭೀರ್ ಜೋಡಿ ಮೋಡಿ ಮಾಡ್ತಿಲ್ಲ.

ಶುಭ್ ಮನ್ ಗಿಲ್ ಕ್ಯಾಪ್ಟನ್ಸಿಯಲ್ಲಿ ಸದ್ದು ಮಾಡ್ತಿಲ್ಲ ಟೀಂ!

2025ರಲ್ಲಿ ರೋಹಿತ್ ಕ್ಯಾಪ್ಟನ್ಸಿಯಲ್ಲಿ ಭಾರತ ಚಾಂಪಿಯನ್ಸ್ ಟ್ರೋಫಿಯಲ್ಲಿ ಚಾಂಪಿಯನ್ ಆಗಿತ್ತು. ಇದಾದ ಬಳಿಕ ಶುಭಮನ್​ಗಿಲ್​ಗೆ ಏಕದಿನ ಮಾದರಿ ನಾಯಕತ್ವ ನೀಡಲಾಯ್ತು. ಆದ್ರೆ ಭಾರತ ತಂಡ ದ್ವಿಪಕ್ಷೀಯ ಸರಣಿಗಳಲ್ಲಿ ಸದ್ದು ಮಾಡ್ತಿಲ್ಲ. ಯಾಕಂದ್ರೆ ಗಿಲ್ ಮತ್ತು ಗಂಭೀರ್ ಸಾರಥ್ಯದಲ್ಲಿ ನಾಲ್ಕು ಏಕದಿನ ಸರಣಿಗಳನ್ನ ಆಡಿದ್ದು ಅದ್ರಲ್ಲಿ ಮೂರು ಸರಣಿಗಳನ್ನ ಸೋತಿದ್ದಾರೆ. ಗೆದ್ದಿರೋದು ಒಂದೇ ಒಂದು ಸರಣಿ ಅದು ಕೂಡ ಅಫ್ಘಾನಿಸ್ತಾನ ವಿರುದ್ಧ. ಗಿಲ್ ನಾಯಕತ್ವದಲ್ಲಿ ಒಟ್ಟು 12 ಏಕದಿನ ಪಂದ್ಯಗಳನ್ನ ಆಡಿದ್ದು ಇದ್ರಲ್ಲಿ 6 ಪಂದ್ಯ ಗೆದ್ರೆ 6 ಪಂದ್ಯಗಳನ್ನ ಭಾರತ ಸೋತಿದೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಹಾಗೇ ಇಂಗ್ಲೆಂಡ್ ವಿರುದ್ಧದ ಸರಣಿಗಳನ್ನ ಸೋತಿರೋ ಭಾರತ ಆಫ್ಘನ್ ವಿರುದ್ಧ ಮಾತ್ರವೇ ಗೆದ್ದಿರುವಂಥದ್ದು. ಇದೇ ಈಗ ವಿಶ್ವಕಪ್​ಗೂ ಮುನ್ನ ತಂಡದ ಭವಿಷ್ಯದ ಬಗ್ಗೆ ಆತಂಕ ಮೂಡಿಸಿದೆ. ರೋಹಿತ್ ಕ್ಯಾಪ್ಟನ್ಸಿಯಲ್ಲಿ ಅದ್ಭುತ ಪ್ರದರ್ಶನ ನೀಡ್ತಿದ್ದ ತಂಡ ಈಗ ಗಿಲ್ ಅಡಿಯಲ್ಲಿ ಯಾಕೆ ಫೇಲ್ಯೂರ್ ಆಗ್ತಿದೆ ಅನ್ನೋದಕ್ಕೆ ಒಂದಷ್ಟು ಕಾರಣಗಳೂ ಇದೆ.

ಭಾರತಕ್ಕೆ ಕಾಡ್ತಿರೋದೇನು?

ಮಧ್ಯಮ ಕ್ರಮಾಂಕದ ಬ್ಯಾಟರ್ ಗಳ ಕಡೆಯಿಂದ ಸಿಗದ ಸಪೋರ್ಟ್

ಗಿಲ್ ಗೆ ಬೌಲಿಂಗ್ ಬದಲಾವಣೆ ಮತ್ತು ಫೀಲ್ಡ್ ಸೆಟ್ಟಿಂಗ್ ನಲ್ಲಿ ಅನುಭವ ಕೊರತೆ

ಆಸ್ಟ್ರೇಲಿಯಾ, ಇಂಗ್ಲೆಂಡ್ ನಲ್ಲಿ ಸ್ವಿಂಗ್ ಬೌಲಿಂಗ್ ಎದುರಿಸುವಲ್ಲಿ ವೈಫಲ್ಯ

ಸ್ವದೇಶಿ ಪಿಚ್ ಗಳಲ್ಲಿ ಸ್ಪಿನ್ ಬೌಲರ್ ಗಳ ಎದುರಲ್ಲಿ ಕಳಪೆ ಪ್ರದರ್ಶನ

ತಂಡದ ಆಯ್ಕೆ ಮತ್ತು ಬ್ಯಾಟಿಂಗ್ ನಲ್ಲಿ ಗಂಭೀರ್ ಪದೇಪದೆ ಪ್ರಯೋಗ

ಹೀಗೆ ಗಂಭೀರ್ ಮಾರ್ಗದರ್ಶನ ಮತ್ತು ಗಿಲ್ ಅವ್ರ ಕ್ಯಾಪ್ಟನ್ಸಿಯಡಿಯಲ್ಲಿ ಭಾರತ ಏಕದಿನ ತಂಡ ಕೂಡ ವೀಕ್ ಆಗಿ ಕಾಣ್ತಿದೆ. ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬಳಿಕ ನಾಲ್ಕು ಸರಣಿಗಳಲ್ಲಿ 3 ಸರಣಿ ಸೋತಿದ್ದಾರೆ. ಮುಂದಿನ ವರ್ಷ ಏಷ್ಯಾಕಪ್ ಹಾಗೇ ಐಸಿಸಿ ವಿಶ್ವಕಪ್​ಗಳಂತ ಟೂರ್ನಿಗಳಿದ್ದು ಈಗಲೇ ಅಲರ್ಟ್ ಆಗ್ಬೇಕಿದೆ. ಇಲ್ಲದಿದ್ರೆ ಮತ್ತಷ್ಟು ಡ್ಯಾಮೇಜ್ ಆಗೋದ್ರಲ್ಲಿ ಅನುಮಾನವೇ ಇಲ್ಲ.

Shantha Kumari

Leave a Reply

Your email address will not be published. Required fields are marked *