ಮೈಸೂರಿನಲ್ಲಿ ಪತ್ನಿ, ಇಬ್ಬರು ಮಕ್ಕಳನ್ನು ಹ*ತ್ಯೆಗೈದು ಪತಿ ನೇ*ಣಿಗೆ ಶ*ರಣು

 ಮೈಸೂರಿನಲ್ಲಿ ಪತ್ನಿ, ಇಬ್ಬರು ಮಕ್ಕಳನ್ನು ಹ*ತ್ಯೆಗೈದು ಪತಿ ನೇ*ಣಿಗೆ ಶ*ರಣು

ಪತ್ನಿ, ಇಬ್ಬರು ಮಕ್ಕಳನ್ನು  ಹತ್ಯೆಗೈದು ಪತಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ  ಮೈಸೂರು ಜಿಲ್ಲೆ ಹುಣಸೂರು ಪಟ್ಟಣದ ನ್ಯೂ ಮಾರುತಿ ಬಡಾವಣೆಯಲ್ಲಿ ನಡೆದಿದೆ. ಹರೀಶ್ (40), ಅವರ ಪತ್ನಿ ನಿಶ್ಚಿತಾ ಹಾಗೂ ಅವರ ಇಬ್ಬರು ಮಕ್ಕಳಲ್ಲಿ ನೆಕ್ಸಾ (7) ಮತ್ತು ಪ್ರಥಮ ತರಗತಿಯಲ್ಲಿ ಓದುತ್ತಿದ್ದ ರಕ್ಷಾ ಮೃತಪಟ್ಟವರು ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಘಟನಾ ಸ್ಥಳದಲ್ಲಿ ಡೆತ್‌ ನೋಟ್ ಪತ್ತೆಯಾಗಿದ್ದು,ಪೊಲೀಸರು ಅದನ್ನು ವಶಪಡಿಸಿಕೊಂಡು  ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಶಿವಾಜಿನಗರದಲ್ಲಿ GBA ಅಧಿಕಾರಿಗಳ ಮೇಲೆ ಮಾರಾಣಾಂತಿಕ ಹಲ್ಲೆ- 7 ಜನ ಅರೆಸ್ಟ್, ಕೃಷ್ಣಭೈರೇಗೌಡ ಆಕ್ರೋಶ

ಮೃತರ ಬಾಯಿಗೆ ಹಾಗೂ ಮೂಗಿಗೆ ಪ್ಲಾಸ್ಟರ್ ಹಾಕಲಾಗಿದ್ದು, ಹೆಂಡತಿ,‌ ಮಕ್ಕಳನ್ನ‌ ಪ್ಲಾಸ್ಟಿಕ್ ಕವರ್ ಸುತ್ತಿ ಹತ್ಯೆ ಮಾಡಿ ಬಳಿಕ ಹರೀಶ್ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.  ಹರೀಶ್ ಅವರ ತಂದೆ ಕೋಡಿ ಸತ್ಯನಾರಾಯಣ್ ಅವರು ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಹುಣಸೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

Kishor KV

Leave a Reply

Your email address will not be published. Required fields are marked *