ಸಸ್ಯಕಾಶಿಯಲ್ಲಿ ಗಂಗರ ಕಾಲದ ವೈಭವ – ಲಾಲ್‌ಭಾಗ್ ಫ್ಲವರ್ ಶೋನಲ್ಲಿ ಪಶ್ವಿಮ ಗಂಗರ ಇತಿಹಾಸ ಅನಾವರಣ

ಸಸ್ಯಕಾಶಿಯಲ್ಲಿ ಗಂಗರ ಕಾಲದ ವೈಭವ – ಲಾಲ್‌ಭಾಗ್ ಫ್ಲವರ್ ಶೋನಲ್ಲಿ ಪಶ್ವಿಮ ಗಂಗರ ಇತಿಹಾಸ ಅನಾವರಣ

ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ಪ್ರಯುಕ್ತ ಬೆಂಗಳೂರಿನ ಲಾಲ್‍ಬಾಗ್‍ನಲ್ಲಿ 220ನೇ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ಈ ಫ್ಲವರ್ ಶೋ ಕೇವಲ ಹೂವುಗಳ ಹಬ್ಬವಷ್ಟೇ ಅಲ್ಲ, ಕರ್ನಾಟಕದ ಇತಿಹಾಸವನ್ನು ಜನತೆಗೆ ಸಾರುವ ಪ್ರಯತ್ನವೂ ಹೌದು. ಈ ಬಾರಿ ಹೂವಿನಲ್ಲೇ ಪಶ್ಚಿಮ ಗಂಗರ ಇತಿಹಾಸವನ್ನು ಅನಾವರಣ ಮಾಡಲಾಗುತ್ತಿದೆ.

ಇದನ್ನೂ ಓದಿ:ನೀಟ್ ಪರೀಕ್ಷೆ ಅಕ್ರಮದ ಬಗ್ಗೆ ಮೌನ ಮುರಿದ ಮೋದಿ – ಅತ್ಯಂತ ಕಠಿಣ ಶಿಕ್ಷೆಯ ಎಚ್ಚರಿಕೆ

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಫ್ಲವರ್ ಶೋ ನೋಡುವುದೇ ಕಣ್ಣಿಗೆ ಹಬ್ಬ. ಈ ಬಾರಿ ಫ್ಲವರ್ ಶೋ ಆಗಸ್ಟ್ 6 ರಿಂದ 17ರವರೆಗೆ ನಡೆಯಲಿದೆ. ಈ ಬಾರಿ ಫ್ಲವರ್ ಶೋನಲ್ಲಿ ಗಂಗರ ಕಾಲದ ವೈಭವವನ್ನು ಕಣ್ತುಂಬಿಕೊಳ್ಳಬಹುದು. ಕಿ.ಶ. 350 ರಿಂದ 1004 ರವರೆಗೆ ಆಡಳಿತ ನಡೆಸಿದ ಪ್ರಮುಖ ರಾಜವಂಶವೆಂದರೆ ಪಶ್ಚಿಮ ಗಂಗರ ಆಡಳಿತ. ಇದೀಗ ಸಸ್ಯಕಾಶಿಯಲ್ಲಿ ಗಂಗರ ಆಡಳಿತದ ವೈಭವ. ವಾಸ್ತುಶಿಲ್ಪ, ಶಿಕ್ಷಣ ಮತ್ತು ಸಂಸ್ಕೃತಿಯ ಅನಾವರಣ ಹೂಗಳಿಂದ ತುಂಬಲಿದೆ. ಲಾಲ್‍ಬಾಗ್‍ನ ಗಾಜಿನ ಮನೆಯ ಮುಂದೆ ಬೆಂಗಳೂರಿನ ಬೇಗೂರಿನಲ್ಲಿರುವ 1300 ವರ್ಷಗಳಷ್ಟು ಹಳೆಯದಾದ ನಾಗನಾಥೇಶ್ವರ ದೇವಸ್ಥಾನದ ಪ್ರತಿಕೃತಿಯನ್ನು ನಿರ್ಮಿಸಲಾಗುತ್ತಿದೆ. ಐತಿಹಾಸಿಕ ಪ್ರತಿಕೃತಿಗಳು ನಂದಿ ಬೆಟ್ಟದ ಯೋಗ ನಂದೀಶ್ವರ ದೇವಸ್ಥಾನ, ಗೊಮ್ಮಟೇಶ್ವರ ಪ್ರತಿಮೆಯ ಅರ್ಧಭಾಗದ ಮಾದರಿಗಳನ್ನು ಕಾಣಬಹುದು.

ಕರ್ನಾಟಕದ ಇತಿಹಾಸದಲ್ಲಿ ಪ್ರಸಿದ್ಧರಾದ ತಲಕಾಡಿನ ಗಂಗರು ಅಥವಾ ಪಶ್ಚಿಮ ಗಂಗ ರಾಜವಂಶವನ್ನು ಕ್ರಿ.ಶ. ೩೫೦ರ ಸುಮಾರಿಗೆ ಕೊಂಗುಣಿವರ್ಮ ಮಾಧವ (ದಡಿಗ) ಎಂಬುವವರು ಸ್ಥಾಪಿಸಿದರು. ತಲಕಾಡಿನ ಗಂಗರು. ಕರ್ನಾಟಕದ ಅಭಿವೃದ್ಧಿಗೆ, ವಿಶೇಷವಾಗಿ ದಕ್ಷಿಣ ಕರ್ನಾಟಕದಲ್ಲಿ ಭದ್ರ ಬುನಾದಿ ಹಾಕಿದವರಲ್ಲಿ ಗಂಗ ರಾಜರು ಪ್ರಮುಖರು. ಕ್ರಿ.ಶ. 325ರಿಂದ 999ರವರೆಗೆ ಅಂದರೆ ಸುಮಾರು 675 ವರ್ಷಗಳ ಕಾಲ ಗಂಗರ ಆಡಳಿತವಿತ್ತು. ಇದೀಗ ಈ ಬಾರಿ ಲಾಲ್‌ಬಾಗ್‌ನ ಫ್ಲವರ್ ಶೋನಲ್ಲಿ ಗಂಗ ರಾಜವಂಶದ ಸ್ಥಾಪಕ ದಡಿಗ ಅಥವಾ ಕೊಂಗುಣಿವರ್ಮ, ಶ್ರೀಪುರುಷ, ರಾಜಮಲ್ಲ, ಮಾರಸಿಂಹ ಮುಂತಾದ ಪ್ರಮುಖ ರಾಜರುಗಳ ಪ್ರತಿಮೆಗಳು ಹಾಗೂ ಗಂಗರ ಕಾಲದ ಶಾಸನಗಳು ಮತ್ತು ವೀರಗಲ್ಲುಗಳ ಮಾದರಿಗಳು ಹೂವಿನಿಂದಲೇ ಅನಾವರಣಗೊಳ್ಳಲಿದ್ದು, ಗಂಗರ ಇತಿಹಾಸವನ್ನು ಕಣ್ತುಂಬಿಕೊಳ್ಳಬಹುದು.

Sulekha

Leave a Reply

Your email address will not be published. Required fields are marked *