ಬೆಳಗ್ಗೆ ಎದ್ದವರೇ ಪತ್ನಿ ಸಮಾಧಿ ಬಳಿ ಬಂದರು- ಚೆನ್ನಮ್ಮನ ನೆನೆದು ಕಣ್ಣೀರಿಟ್ಟ ದೇವೇಗೌಡರು

ಬೆಳಗ್ಗೆ ಎದ್ದವರೇ ಪತ್ನಿ ಸಮಾಧಿ ಬಳಿ ಬಂದರು- ಚೆನ್ನಮ್ಮನ ನೆನೆದು ಕಣ್ಣೀರಿಟ್ಟ ದೇವೇಗೌಡರು

72 ವರ್ಷಗಳ ಸುದೀರ್ಘ ದಾಂಪತ್ಯ, ಆಸ್ಪತ್ರೆಯಲ್ಲಿ ಪತ್ನಿಗೆ ಊಟ ಮಾಡಿಸಿದಾಗಲು ನನ್ನ ಜೊತೆ ಇರಬೇಕೋ ಬೇಡವೋ ಎಂದು ಪುಟ್ಟ ಮಕ್ಕಳಂತೆ ಗದರಿಸಿದ ಪರಿ. ಪತ್ನಿ ಇನ್ನೂ ನನ್ನ ಜೊತೆ ಇರಬೇಕಿತ್ತು ಅನ್ನೋ ಆಸೆ. ಈ ಇಳಿವಯಸ್ಸಿನಲ್ಲಿ ಪತ್ನಿವಿಯೋಗ ನಿಜಕ್ಕೂ ಕಷ್ಟವೇ. ಇದೀಗ ಹೆಚ್.ಡಿ ದೇವೇಗೌಡರ ಪರಿಸ್ಥಿತಿ ನಿಜಕ್ಕೂ ಮನಕಲಕುವಂತಿದೆ. ಪತ್ನಿಯಿಲ್ಲದೇ ದೇವೇಗೌಡರೀಗ ಒಂಟಿ. ಸೋಮವಾರವಷ್ಟೇ ಚೆನ್ನಮ್ಮರ ಅಂತ್ಯಕ್ರಿಯೆ ನಡೆಸಿದ ದೊಡ್ಡಗೌಡರು, ಮಂಗಳವಾರದ ಬೆಳಗ್ಗೆ ಎದ್ದೇಳುತ್ತಿದ್ದಂತೆ ಸೀದಾ ಬಂದಿದ್ದು ಪತ್ನಿಯ ಸಮಾಧಿ ಸ್ಥಳಕ್ಕೆ.

ಇದನ್ನೂ ಓದಿ:ಮುದ್ದಿನ ಪತ್ನಿಗೆ ದೇವೇಗೌಡರಿಂದ ಭಾವುಕ ವಿದಾಯ! – ಪ್ರೀತಿಯ ಅಮ್ಮನಿಗೆ ಮಕ್ಕಳ ಕೊನೆಯ ಮುತ್ತು!

ದೊಡ್ಮನೆಗೆ ದೊಡ್ಡ ಆಸ್ತಿ ಚೆನ್ನಮ್ಮ. ಆದರೆ, ದೇವೇಗೌಡರ ಬದುಕೇ ಚೆನ್ನಮ್ಮನಾಗಿದ್ದರು ಎಂಥದ್ದೇ ಪರಿಸ್ಥಿತಿ ಬಂದರೂ ಪಕ್ಕದಲ್ಲಿ ಚೆನ್ನಮ್ಮ ಇದ್ದರೆ ದೇವೇಗೌಡರು ನಿರಾಳ. ಇದೀಗ ಪಕ್ಕದಲ್ಲಿ ಪತ್ನಿಯಿಲ್ಲ. ದುಃಖಕ್ಕೆ ಕೊನೆಯಿಲ್ಲ ಎಂಬಂತಾಗಿದೆ ದೇವೇಗೌಡರ ಪರಿಸ್ಥಿತಿ.  ಪತ್ನಿ ಅಗಲಿಕೆಯಿಂದ ಒಂಟಿಯಾದ ದೇವೇಗೌಡರು ಬೆಳಗ್ಗೆಯೇ ಪತ್ನಿ ಸಮಾಧಿ ಸ್ಥಳಕ್ಕೆ ಬಂದಿದ್ದಾರೆ.

ಚೆನ್ನಮ್ಮನವರು ಚಿರನಿದ್ರೆಗೆ ಜಾರಿದ ಸಮಾಧಿ ಬಳಿ ಬಂದು ನಿಂತ ದೇವೇಗೌಡ್ರು ಮಗುವಂತೆ ಕಣ್ಣೀರು ಹಾಕುತ್ತಿರುವ ದೃಶ್ಯ ಮನಕಲಕುವಂತಿದೆ. ಇದೇ ವೇಳೆ ತಂದೆ ಜೊತೆ ಬಂದ ಹೆಣ್ಣು ಮಕ್ಕಳು ಸಮಾಧಾನ ಮಾಡಿದ್ದಾರೆ. ಮಕ್ಕಳ ಥರ ಅಳುತ್ತಾ ಕೂತಿದ್ದೀರಲ್ಲಾ‌ ಎಂದು ಮಗಳು ಶೈಲಜಾ ಧೈರ್ಯ ಹೇಳಿದ್ದು, ತಂದೆಯ ಕಣ್ಣೀರು ಒರೆಸಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು ಪತ್ನಿ ಅಂತ್ಯಕ್ರಿಯೆ ಬಳಿಕ ಹುಟ್ಟೂರು ಹರದನಹಳ್ಳಿಯಲ್ಲೇ ಉಳಿದುಕೊಂಡಿದ್ದರು. ಬೆಳಗ್ಗೆಯೇ ಪತ್ನಿ ಸಮಾಧಿಗೆ ಭೇಟಿ ನೀಡಿದ ದೇವೇಗೌಡ್ರು, ಸಮಾಧಿ ಮುಂದೆ ಕೂತು ಕಣ್ಣೀರು ಹಾಕಿದ್ದಾರೆ. ಸಮಾಧಿ ಎದುರು ಬಂದು ನಿಂತ ದೇವೇಗೌಡರು, ಸಮಾಧಿ ಮೇಲೆ ಸದಾ ನಂದಾದೀಪ ಉರಿಯಬೇಕು ಎಂದು ಸೂಚನೆ ನೀಡಿದ್ದಾರೆ. ಹನ್ನೊಂದು ದಿನವೂ ವಿಷ್ಣು ಸಹಸ್ರ ನಾಮ ಪಠಿಸಬೇಕು ಹಾಗೇ,  ನಂದಾದೀಪ ಆರಬಾರದು, ಹಾಗೇ ನೋಡಿಕೊಳ್ಳುವಂತೆ ದೇವೇಗೌಡರು ಅರ್ಚಕರಿಗೆ ಸೂಚನೆ ನೀಡಿದ್ದಾರೆ.

ಚೆನ್ನಮ್ಮ ಅವರ ಸಮಾಧಿ ಸ್ಥಳಕ್ಕೆ ದೇವೇಗೌಡರ ಕುಟುಂಬಸ್ಥರು ಕೂಡ ಆಗಮಿಸಿದ್ದರು. ದೇವೇಗೌಡರ ಜೊತೆ ಮಗ ರೇವಣ್ಣ, ಸೊಸೆ ಭವಾನಿ ರೇವಣ್ಣ, ಹೆಣ್ಣು ಮಕ್ಕಳಾದ ಅನುಸೂಯ ಹಾಗೂ ಶೈಲಜ ಕೂಡ ಆಗಮಿಸಿದ್ದರು.

Sulekha

Leave a Reply

Your email address will not be published. Required fields are marked *