ಟಾಕ್ಸಿಕ್ ಸಿನಿಮಾದ ಮತ್ತೊಂದು ಸಾಂಗ್ ರಿಲೀಸ್ – ನಾಯಕಿಯರ ಜೊತೆ ಯಶ್ ರೋಮ್ಯಾನ್ಸ್

ಟಾಕ್ಸಿಕ್ ಸಿನಿಮಾದ ಮತ್ತೊಂದು ಸಾಂಗ್ ರಿಲೀಸ್ – ನಾಯಕಿಯರ ಜೊತೆ ಯಶ್ ರೋಮ್ಯಾನ್ಸ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈಗಾಗಲೇ ತಬಾಹಿ ಗುಂಗಲ್ಲಿ ಇರುವ ಫ್ಯಾನ್ಸ್ ಇನ್ಮುಂದೆ ಮನಮೋಹಕ ಸಾಂಗ್ ನಲ್ಲಿ ತಲ್ಲೀನರಾಗಲಿದ್ದಾರೆ. ಯಾಕೆಂದರೆ, ಟಾಕ್ಸಿಕ್ ಸಿನಿಮಾದ ಮತ್ತೊಂದು ಸಾಂಗ್ ರಿಲೀಸ್ ಆಗಲಿದೆ.

ಇದನ್ನೂ ಓದಿ:ಪ್ರಜ್ವಲ್ ಇಲ್ಲದೇ ಪ್ರಚಾರ ಮಾಡಿದ್ರಾ ಕರಾವಳಿ ಸಿನಿಮಾ ತಂಡ? – ವಿವಾದಕ್ಕೆ ರಾಜ್ ಬಿ ಶೆಟ್ಟಿ ಕ್ಷಮೆ ಕೇಳಿದ್ದೇಕೆ?

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಚಿತ್ರದ ಎರಡನೇ ಹಾಡು ಮನಮೋಹಕ ರಿಲೀಸ್ ಆಗಿದೆ. ಈ ರೋಮ್ಯಾಂಟಿಕ್ ಹಾಡಿಗೆ ಪ್ರಮೋದ್ ಮರವಂತೆ ಅವರ ಸಾಹಿತ್ಯವಿದೆ. ಹಾಗೂ ಸಿದ್ದಾರ್ಥ್ ಬಸ್ರೂರ್ ಧ್ವನಿಯಲ್ಲಿ ಈ ಮಧುರ ಪ್ರಣಯಗೀತೆ ಮೂಡಿಬಂದಿದೆ. ತಬಾಹಿ ಹಾಡಿನಲ್ಲಿ ಕಿಯಾರಾ ಜೊತೆ ರೋಮ್ಯಾನ್ಸ್ ಮಾಡಿದ್ದ ಯಶ್ ಇದೀಗ ಮನಮೋಹಕ ಹಾಡಿನಲ್ಲಿ ತಾರಾ ಸುತಾರಿಯಾ ಜೊತೆ ರೋಮ್ಯಾನ್ಸ್ ಮಾಡಿದ್ದಾರೆ. ಮನಮೋಹಕ ಹಾಡು ಮೆಲೋಡಿಯಾಗಿದೆ.

ಜುಲೈ 21 (ಮಂಗಳವಾರ) ಬೆಳಿಗ್ಗೆ 11.33ಕ್ಕೆಈ ಮನಮೋಹಕ ಸಾಂಗ್ ರಿಲೀಸ್ ಆಗಿದೆ. ಈ ಹಾಡಿನಲ್ಲಿ ಯಶ್ ಮೂವರು ನಾಯಕಿಯರ ಜೊತೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ತಾರಾ ಸುತಾರಿಯಾ ಜೊತೆ ಇಂಟಿಮೇಟ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ ನಟ ಯಶ್. ಅಲ್ಲದೇ, ಕಿಯಾರಾ ಅಡ್ವಾಣಿ, ನಯನತಾರಾ ಜೊತೆಯೂ ರೋಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಟಾಕ್ಸಿಕ್ ಚಿತ್ರದಲ್ಲಿ ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಈಗಾಗಲೇ ಕುತೂಹಲ ಮೂಡಿಸಿದೆ. ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ನಯನತಾರಾ ಮತ್ತು ರುಕ್ಮಿಣಿ ವಸಂತ್ ಸೇರಿದಂತೆ ನಾಯಕಿಯರ ದಂಡೇ ಇದೆ. ಯಶ್ ಯಾರ ಜೊತೆ ಫೈಟ್ ಮಾಡುತ್ತಾರೆ, ಯಾರ ಜೊತೆ ರೊಮ್ಯಾನ್ಸ್ ಮಾಡುತ್ತಾರೆ ಎಂಬ ಕುತೂಹಲ ಕೆರಳಿಸಿದೆ.

Sulekha

Leave a Reply

Your email address will not be published. Required fields are marked *