ವಿದ್ಯುತ್ ಪೂರೈಕೆಯಲ್ಲಿ ತಾಂತ್ರಿಕ ದೋಷ- ಯಶವಂತಪುರ TO ಮಾದಾವರ ನಡುವಿನ 10 ಸ್ಟೇಷನ್‌ಗಳಲ್ಲಿ ಮೆಟ್ರೋ ಸೇವೆ ಸ್ಥಗಿತ

ವಿದ್ಯುತ್ ಪೂರೈಕೆಯಲ್ಲಿ ತಾಂತ್ರಿಕ ದೋಷ-  ಯಶವಂತಪುರ TO ಮಾದಾವರ ನಡುವಿನ 10 ಸ್ಟೇಷನ್‌ಗಳಲ್ಲಿ ಮೆಟ್ರೋ ಸೇವೆ ಸ್ಥಗಿತ

ಬೆಂಗಳೂರಿನ ನಮ್ಮ ಮೆಟ್ರೋ  ಹಸಿರು ಮಾರ್ಗದಲ್ಲಿ ಇಂದು ಬೆಳಿಗ್ಗೆ ವಿದ್ಯುತ್ ಪೂರೈಕೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೆಟ್ರೋ ರೈಲು ಸಂಚಾರದಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ಬೆಳಿಗ್ಗೆ 8 ಗಂಟೆಯ ಸುಮಾರಿಗೆ ಎದುರಾದ ಈ ವಿದ್ಯುತ್ ಸಮಸ್ಯೆಯಿಂದಾಗಿ ಪ್ರಯಾಣಿಕರು ತೀವ್ರ ಪರದಾಟ ನಡೆಸುವಂತಾಗಿತ್ತು. ಇದೀಗ 8.45ಕ್ಕೆ ಸಂಚಾರ ಆರಂಭವಾಗಿದೆ.

ದಕ್ಷಿಣದಲ್ಲಿ ಸಿಲ್ಕ್ ಇನ್‌ಸ್ಟಿಟ್ಯೂಟ್ ಅನ್ನು ಉತ್ತರದಲ್ಲಿ ಮಾದವರಕ್ಕೆ ಸಂಪರ್ಕಿಸುವ ಹಸಿರು ಮಾರ್ಗವು ನಮ್ಮ ಮೆಟ್ರೋದ ಅತ್ಯಂತ ಜನನಿಬಿಡ ಕಾರಿಡಾರ್‌ಗಳಲ್ಲಿ ಒಂದಾಗಿದೆ ಮತ್ತು ಪ್ರತಿದಿನ ಸಾವಿರಾರು ಪ್ರಯಾಣಿಕರನ್ನು ಸಾಗಿಸುತ್ತದೆ.

ಇದನ್ನೂ ಓದಿ:  ಸೊರಗಿದ ಭಾರತಕ್ಕೀಗ ZIM ಟಾಸ್ಕ್ – ಗೆಲುವಿನ ಟಾನಿಕ್ ಕೊಡ್ತಾರಾ ಲಕ್ಷ್ಮಣ್?

ಒಟ್ಟು 33.46 ಕಿ.ಮೀ. ಉದ್ದ ಹಾಗೂ 32 ನಿಲ್ದಾಣಗಳನ್ನು ಹೊಂದಿರುವ ಹಸಿರು ಮಾರ್ಗವು ನಗರದ ಉತ್ತರ ಮತ್ತು ದಕ್ಷಿಣ ಭಾಗಗಳನ್ನು ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿದೆ. ಬೆಳಗಿನ ಪೀಕ್ ಅವರ್‌ನಲ್ಲೇ   ಈ ತಾಂತ್ರಿಕ ದೋಷ ಎದುರಾಗಿದ್ದರಿಂದ ಕಚೇರಿಗಳು, ಕಾಲೇಜುಗಳು ಹಾಗೂ ಆಸ್ಪತ್ರೆಗಳಿಗೆ ತೆರಳುತ್ತಿದ್ದ ಸಾವಿರಾರು ಪ್ರಯಾಣಿಕರು ಯಶವಂತಪುರ ಹಾಗೂ ಇತರ ನಿಲ್ದಾಣಗಳಲ್ಲಿ ಸಿಲುಕಿಕೊಂಡು ಪರದಾಡುವಂತಾಗಿತ್ತು. ಇದೀಗ ಮೆಟ್ರೋ ಸಂಚಾರ ಸಹಜ ಸ್ಥಿತಿಗೆ ಮರಳಿದೆ.

ವ್ಯವಸ್ಥೆಯಲ್ಲಿ ಉಂಟಾದ ಹಠಾತ್ ಅನಾನುಕೂಲತೆಗೆ ಪ್ರಯಾಣಿಕರಲ್ಲಿ ವಿಷಾದಿಸುತ್ತೇವೆ. ಸಮಸ್ಯೆ ಬಗೆಹರಿದು ಸೇವೆ ಪುನರಾರಂಭಗೊಂಡ ತಕ್ಷಣವೇ ಮುಂದಿನ ಅಧಿಕೃತ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿತ್ತು. ಆ ನಂತರ ಸಹಜ ಸ್ಥಿತಿಯತ್ತ ಮೆಟ್ರೋ ಸೇವೆ ಆರಂಭ ಆಯಿತು.

Kishor KV

Leave a Reply

Your email address will not be published. Required fields are marked *