ಸೊರಗಿದ ಭಾರತಕ್ಕೀಗ ZIM ಟಾಸ್ಕ್ – ಗೆಲುವಿನ ಟಾನಿಕ್ ಕೊಡ್ತಾರಾ ಲಕ್ಷ್ಮಣ್?
ಅನುಭವಿಗಳಿಲ್ಲದ ತಂಡಕ್ಕೆ ದಕ್ಕುತ್ತಾ ಜಯ?

ಸೊರಗಿದ ಭಾರತಕ್ಕೀಗ ZIM ಟಾಸ್ಕ್ – ಗೆಲುವಿನ ಟಾನಿಕ್ ಕೊಡ್ತಾರಾ ಲಕ್ಷ್ಮಣ್?ಅನುಭವಿಗಳಿಲ್ಲದ ತಂಡಕ್ಕೆ ದಕ್ಕುತ್ತಾ ಜಯ?

ಐರ್ಲೆಂಡ್ ವಿರುದ್ಧ ಕ್ಲೀನ್ ಸ್ವೀಪ್.. ಇಂಗ್ಲೆಂಡ್ ವಿರುದ್ಧ ಟಿ-20ಐನಲ್ಲಿ ವೈಟ್ ವಾಷ್.. ಏಕದಿನ ಮಾದರಿಯಲ್ಲೂ ಸೋಲು.. ಕಳೆದು ಒಂದು ತಿಂಗಳ ಅಂತರದಲ್ಲೇ ಭಾರತ ಮೂರ್ಮೂರು ಸರಣಿಗಳನ್ನ ಸೋತಿದೆ. ಎಲ್ಲವೂ ಕೂಡ ಐತಿಹಾಸಿಕ ಸೋಲುಗಳೇ.. ಟೀಂ ಇಂಡಿಯಾ ಪಾಲಿನ ಕರಾಳ ನೆನಪುಗಳೇ.. ಈಗ ಇದೇ ಭಾರತ ತಂಡ ಜಿಂಬಾಬ್ವೆಗೆ ಹಾರಿದೆ. ಜುಲೈ 23ರಿಂದ 3 ಪಂದ್ಯಗಳ ಟಿ-20ಐ ಸರಣಿ ನಡೆಯಲಿದೆ.

ಇದನ್ನೂ ಓದಿ : ಶತಕದಲ್ಲೇ ಗೆದ್ದ HITಮ್ಯಾನ್ – LORD’S ಅಬ್ಬರ ಬಾಯಿ ಮುಚ್ಚಿಸಿತಾ?

ಟೀಂ ಇಂಡಿಯಾ ಈಗ ಬ್ಯಾಕ್ ಟು ಬ್ಯಾಕ್ ಶೆಡ್ಯೂಲ್​ಗಳಲ್ಲಿ ಬ್ಯುಸಿಯಾಗಿದೆ. ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಮುಗ್ದು ನಾಲ್ಕೇ ದಿನಗಳಲ್ಲಿ ಟಿ-20ಐ ಸರಣಿ ಸ್ಟಾರ್ಟ್ ಆಗಲಿದೆ. ಜಿಂಬಾಬ್ವೆಯಲ್ಲಿ ಮೂರು ಪಂದ್ಯಗಳ ಟಿ-20ಐ ಸರಣಿ ನಡೆಯಲಿದ್ದು ಮೊದಲ ಪಂದ್ಯ ಗುರುವಾರ ನಡೆದ್ರೆ ಎರಡನೇ ಪಂದ್ಯ ಶನಿವಾರ ಹಾಗೇ ಕೊನೇ ಪಂದ್ಯ ಭಾನುವಾರ ನಡೆಯಲಿದೆ. ಆಲ್ರೆಡಿ ಭಾರತದ ಆಟಗಾರರು ಜಿಂಬಾಬ್ವೆ ತಲುಪಿದ್ದು ಸರಣಿ ಗೆಲುವಿನ ಪ್ಲ್ಯಾನ್ ಸಿದ್ಧವಾಗ್ತಿದೆ. ಜಿಂಬಾಬ್ವೆ ಏನೋ ಈಸಿ ಟಾರ್ಗೆಟ್ ಅನ್ನಿಸಿದ್ರೂ ಸಿಚುಯೇಷನ್ ಮೊದಲಿನ ಥರ ಇಲ್ಲ. ಭಾರತದ ರೀಸೆಂಟ್ ಪರ್ಫಾಮೆನ್ಸ್ ನೋಡ್ತಿದ್ರೆ ಈ ಸರಣಿಯೂ ಚಾಲೆಂಜಿಂಗ್ ಆಗಿಯೇ ಇದೆ. ಇಂಟ್ರೆಸ್ಟಿಂಗ್ ಅಂದ್ರೆ ಈ ಸರಣಿಗೆ ಪ್ರತ್ಯೇಕ ಹೆಡ್ ಕೋಚ್ ನೇಮಿಸದೆ, ಸಹಾಯಕ ಸಿಬ್ಬಂದಿಯೊಂದಿಗೆ ನಿರ್ವಹಿಸಲು ಬಿಸಿಸಿಐ ನಿರ್ಧರಿಸಿದೆ. ಆದ್ದರಿಂದ ವಿವಿಎಸ್ ಲಕ್ಷ್ಮಣ್ ಅವರು ಹಂಗಾಮಿ ಹೆಡ್ ಕೋಚ್ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಭಾರತದ ಮಾಜಿ ಕ್ರಿಕೆಟಿಗ ರಿಷಿಕೇಶ್ ಕಾನಿಟ್ಕರ್ ವಿವಿಎಸ್ ಲಕ್ಷ್ಮಣ್ ಅವರೊಂದಿಗೆ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಮಾಜಿ ಸ್ಪಿನ್ನರ್ ಸುನಿಲ್ ಜೋಶಿ ಬೌಲಿಂಗ್ ಕೋಚ್ ಆಗಿರುತ್ತಾರೆ. ಹಾಗಂತ ವಿವಿಎಸ್​ ಲಕ್ಷ್ಮಣ್​ಗೆ ಇದು ಮೊದಲ ಸರಣಿಯೇನಲ್ಲ. ರಾಹುಲ್ ದ್ರಾವಿಡ್ ಹೆಡ್ ಕೋಚ್ ಆಗಿದ್ದಾಗಲೂ ಕೆಲವು ಸರಣಿಗಳಲ್ಲಿ ಈ ಜವಾಬ್ದಾರಿ ನೋಡಿಕೊಂಡಿದ್ದರು. ಆದ್ರೆ ಈ ಸಲ ತಂಡ ಬೇರೆಯದ್ದೇ ರೀತಿ ಇರೋದ್ರಿಂದ ಲಕ್ಷ್ಮಣ್​ಗೂ ಸವಾಲಾಗಬಹುದು.

ಜಿಂಬಾಬ್ವೆ ಸರಣಿಯಲ್ಲಿ ಯುವಪಡೆಯ ದಂಡು!

ಜಿಂಬಾಬ್ವೆ ಸರಣಿಗೆ ಅನೌನ್ಸ್ ಆಗಿರೋ ಭಾರತ ತಂಡದಲ್ಲಿ ಮೇಜರ್ ಬದಲಾವಣೆಗಳೇ ಆಗಿವೆ. ಸೀನಿಯರ್ ಸಂಜು ಸ್ಯಾಮ್ಸನ್ ಸೇರಿದಂತೆ ಕೆಲ ಅನುಭವಿಗಳನ್ನ ತಂಡದಿಂದ ಹೊರಗಿಡಲಾಗಿದೆ. ಹಾಗೇ ಯಂಗ್​ಸ್ಟರ್ಸ್​ಗೆ ಹೆಚ್ಚಿನ ಅವಕಾಶ ನೀಡಲಾಗಿದೆ. ಗಾಯದ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ತಂಡದಿಂದ ಹೊರಗಿದ್ದ ವೇಗದ ಬೌಲರ್ ಮಯಾಂಕ್ ಯಾದವ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಮಯಾಂಕ್ ಕೊನೆಯ ಬಾರಿಗೆ ಭಾರತದ ಪರ ಆಡಿದ್ದು ಅಕ್ಟೋಬರ್ 2024 ರಲ್ಲಿ. ಮತ್ತೊಂದ್ಕಡೆ ರಿಂಕು ಸಿಂಗ್ ಕೂಡ ತಂಡಕ್ಕೆ ಮರಳಿದ್ದಾರೆ. ರಿಂಕು ಕೊನೆಯ ಬಾರಿಗೆ ಈ ವರ್ಷದ ಫೆಬ್ರವರಿಯಲ್ಲಿ ಮೆನ್ ಇನ್ ಬ್ಲೂ ಪರ ಆಡಿದ್ದರು. ನಂತರ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಿಂದ ಇವರನ್ನು ಕೈಬಿಡಲಾಗಿತ್ತು. ಇನ್ನು ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಪ್ರಭ್ಸಿಮ್ರಾನ್ ಸಿಂಗ್ ಜೊತೆಗೆ, ವೇಗದ ಬೌಲರ್‌ಗಳಾದ ಯಶ್ ಠಾಕೂರ್ ಮತ್ತು ಅಶೋಕ್ ಶರ್ಮಾ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಯಶ್ ಮತ್ತು ಪ್ರಭ್ಸಿಮ್ರಾನ್ ಐಪಿಎಲ್​ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ್ದಾರೆ. ಅಶೋಕ್ ಶರ್ಮಾ ಗುಜರಾತ್ ಟೈಟಾನ್ಸ್ ತಂಡದ ಭಾಗವಾಗಿದ್ದಾರೆ.

ಕ್ಯಾಪ್ಟನ್ ಆದ್ಮೇಲೆ ಮೊದಲ ಗೆಲುವಿನ ಹುಡುಕಾಟದಲ್ಲಿರೋ ಶ್ರೇಯಸ್!

ಇನ್ನು ಜಿಂಬಾಬ್ವೆ ಪ್ರವಾಸ ಭಾರತೀಯರ ಪಾಲಿಗೂ ತುಂಬಾನೇ ಸ್ಪೆಷಲ್. ಈ ಸರಣಿಯಲ್ಲೂ 15 ವರ್ಷದ ಸೂರ್ಯವಂಶಿ ಇದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲಿ ಸೂರ್ಯವಂಶಿ ಸದ್ದು ಮಾಡಿಲ್ಲ. ಸೋ ಜಿಂಬಾಬ್ವೆಯಲ್ಲಿ ತಮ್ಮ ಖದರ್ ತೋರಿಸೋ ನಿರೀಕ್ಷೆ ಇದೆ. ಹಾಗೇ ಶ್ರೇಯಸ್ ಅಯ್ಯರ್ ನಾಯಕನಾಗಿ ಇನ್ನೂ ಮೊದಲ ಗೆಲುವಿಗಾಗಿ ಕಾಯುತ್ತಿದ್ದಾರೆ. ಇದುವರೆಗೆ ಅವರು 7 ಪಂದ್ಯಗಳನ್ನು ಆಡಿದ್ದಾರೆ. ಒಂದು ಪಂದ್ಯ ಮಳೆಯಿಂದ ರದ್ದಾಗಿದ್ರೆ ಉಳಿದ 6 ಪಂದ್ಯಗಳಲ್ಲೂ ಸೋತಿದ್ದಾರೆ. ಹೀಗಾಗಿ ಜಿಂಬಾಬ್ವೆ ಟಿ20 ಸರಣಿಯಲ್ಲಿ ಅಯ್ಯರ್ ಗೆಲುವಿನ ಹುಡುಕಾಟದಲ್ಲಿದ್ದಾರೆ. ಇನ್ನು ಭಾರತ ಮತ್ತು ಜಿಂಬಾಬ್ವೆ ನಡುವಿನ ಮೂರೂ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 4.30ಕ್ಕೆ ಸ್ಟಾರ್ಟ್ ಆಗಲಿವೆ. ಹಾಗೇ ಹರಾರೆ ಸ್ಪೋರ್ಟ್ ಕ್ಲಬ್ ಮೈದಾನದಲ್ಲೇ ನಡೆಯಲಿದೆ. ಒಟ್ನಲ್ಲಿ ಕಳೆದ ಒಂದು ತಿಂಗಳಲ್ಲಿ ಮೂರು ಸರಣಿಗಳಿಂದ ಭಾರತಕ್ಕೆ ದೊಡ್ಡ ಮಟ್ಟದಲ್ಲೇ ಡ್ಯಾಮೇಜ್​ ಆಗಿದೆ. ಅಟ್​ಲೀಸ್ಟ್ ಜಿಂಬಾಬ್ವೆ ವಿರುದ್ಧನಾದ್ರೂ ಗೆದ್ದು ಮತ್ತೆ ಹಳೇ ಟ್ರ್ಯಾಕ್​ಗೆ ಬರಬೇಕು.

Shantha Kumari

Leave a Reply

Your email address will not be published. Required fields are marked *