ಸ್ಪೇನ್ ಫಿಫಾ ವಿಶ್ವಕಪ್ ಚಾಂಪಿಯನ್ – ಇತಿಹಾಸ ಬರೆದ ಸ್ಪೇನ್, ಮೆಸ್ಸಿ ಕಣ್ಣೀರ ವಿದಾಯ

ಸ್ಪೇನ್ ಫಿಫಾ ವಿಶ್ವಕಪ್ ಚಾಂಪಿಯನ್ – ಇತಿಹಾಸ ಬರೆದ ಸ್ಪೇನ್, ಮೆಸ್ಸಿ ಕಣ್ಣೀರ ವಿದಾಯ

ಫಿಫಾ ವಿಶ್ವಕಪ್ ಚಾಂಪಿಯನ್ ಆಗಿ ಸ್ಪೇನ್ ಹೊರಹೊಮ್ಮಿದೆ. ಈ ಮೂಲಕ ಫುಟ್‌ಬಾಲ್ ಲೋಕದಲ್ಲಿ ಹೊಸ ಚರಿತ್ರೆ ಸೃಷ್ಟಿಸಿದೆ ಸ್ಪೇನ್. ಆದರೆ, ಅರ್ಜೆಂಟೀನಾ ತಂಡ ಸೋತಿರುವುದು ಕೋಟಿ ಕೋಟಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.

ಇದನ್ನೂ ಓದಿ:RCB ಮೆಂಟರ್ ಮೇಲೆ CSK ಕಣ್ಣು – ಚೆನ್ನೈ ಕೋಚ್ ಆಗ್ತಾರಾ DK ಬಾಸ್?

16 ವರ್ಷಗಳ ಕಾಯುವಿಕೆ.. ಚಾಂಪಿಯನ್ ಪಟ್ಟದ ಕನಸು.. ಶಿಸ್ತಿನ ಆಟ, ಕೊನೆಗೂ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಚರಿತ್ರೆ ಬರೆದಿದೆ ಸ್ಪೇನ್. ವಿಶ್ವ ಚಾಂಪಿಯನ್​ ಪಟ್ಟದೊಂದಿಗೆ ಸ್ಪೇನ್ ಇತಿಹಾಸ ಬರೆದಿದೆ. ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆದ 2026ರ ಫಿಫಾ ವಿಶ್ವಕಪ್‌ನ ಫೈನಲ್‌ನಲ್ಲಿ ಅರ್ಜೆಂಟೀನಾ ವಿರುದ್ಧ ಸ್ಪೇನ್ ಗೆದ್ದು ಬೀಗಿದೆ.

ಸ್ಪೇನ್ ತಂಡ ಅರ್ಜೆಂಟೀನಾವನ್ನು 1-0 ಗೋಲುಗಳ ಅಂತರದಿಂದ ಸೋಲಿಸಿದೆ. ಈ ಪಂದ್ಯದಲ್ಲಿ ನಿಗದಿತ 90 ನಿಮಿಷಗಳಲ್ಲಿ ಉಭಯ ತಂಡಗಳು ಯಾವುದೇ ಗೋಲು ಬಾರಿಸಿರಲಿಲ್ಲ. ಆ ಬಳಿಕ ನಡೆದ ಹೆಚ್ಚುವರಿ ನಿಮಿಷದಲ್ಲಿ ಪಂದ್ಯ ಫಲಿತಾಂಶ ನಿರ್ಧಾರವಾಯಿತು. ಪಂದ್ಯದ 106ನೇ ನಿಮಿಷದಲ್ಲಿ ಸ್ಪೇನ್‌ನ ಬದಲಿ ಆಟಗಾರನಾಗಿ ಬಂದ ಫೆರಾನ್ ಟೊರೆಸ್, ನಿಕೋ ವಿಲಿಯಮ್ಸ್ ನೀಡಿದ ಪಾಸ್ ಅನ್ನು ಅದ್ಭುತ ಗೋಲಾಗಿ ಪರಿವರ್ತಿಸಿದರು. ಹೆಚ್ಚುವರಿ ಸಮಯದ ಆರಂಭದಲ್ಲೇ (93ನೇ ನಿಮಿಷ) ಅರ್ಜೆಂಟೀನಾದ ಮಿಡ್‌ಫೀಲ್ಡರ್ ಎಂಜೊ ಫೆರ್ನಾಂಡಿಸ್ ಎರಡನೇ ಹಳದಿ ಕಾರ್ಡ್ ಪಡೆದು ಮೈದಾನದಿಂದ ಹೊರನಡೆದರು. ಇದರಿಂದಾಗಿ ಅರ್ಜೆಂಟೀನಾ ಹೆಚ್ಚುವರಿ ನಿಮಿಷದಲ್ಲಿ ಕೇವಲ 10 ಆಟಗಾರರೊಂದಿಗೆ ಆಡುವಂತಾಯಿತು.

ಇನ್ನು ವಿಶೇಷವೆಂದರೆ, ಇಡೀ ಪಂದ್ಯದಲ್ಲಿ ಸ್ಪೇನ್ ಅರ್ಜೆಂಟೀನಾ ತಂಡದ ವಿರುದ್ಧ ಪಾರಮ್ಯ ಮೆರೆದಿತ್ತು. ಅದು ಕೂಡಾ ಸ್ಪೇನ್ 65% ರಷ್ಟು ಚೆಂಡನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡಿತ್ತು. ಅರ್ಜೆಂಟೀನಾಗೆ ಒಂದೇ ಒಂದು ಶಾಟ್ ಅನ್ನೂ ಗೋಲಾಗಿ ಪರಿವರ್ತಿಸಲು ಸಾಧ್ಯವೇ ಆಗಿರಲಿಲ್ಲ. ಕೊನೆಗೂ ಅರ್ಜೆಂಟೀನಾ ತಂಡವು ಸ್ಪೇನ್ ಮುಂದೆ ಶರಣಾಗಲೇಬೇಕಾಯಿತು. ಅದರಂತೆ ಫೆರಾನ್ ಟೊರೆಸ್ ಬಾರಿಸಿದ ಐತಿಹಾಸಿಕ ಗೋಲಿನೊಂದಿಗೆ ಸ್ಪೇನ್ ತಂಡವು ಎರಡನೇ ಬಾರಿಗೆ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಫೈನಲ್‌ನಲ್ಲಿ ಅರ್ಜೆಂಟೀನಾ ಪರ ಗೋಲು ಗಳಿಸಲು ಸಾಧ್ಯವಾಗದೆ ಲಿಯೋನೆಲ್ ಮೆಸ್ಸಿ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತರು. ಜೊತೆಗೆ ಗೆಲುವಿನೊಂದಿಗೆ, ಅದರಲ್ಲೂ ಚಾಂಪಿಯನ್ ಪಟ್ಟದೊಂದಿಗೆ ವಿದಾಯ ಹೇಳಲು ಕಾಯುತ್ತಿದ್ದ ಮೆಸ್ಸಿ, ಕೊನೆಗೂ ಸೋಲಿನೊಂದಿಗೆ ಕಣ್ಣೀರ ವಿದಾಯ ಹೇಳಿದರು.

Sulekha

Leave a Reply

Your email address will not be published. Required fields are marked *