ನವಿಡೀ ಇಯರ್ ಫೋನ್ ಬಳಸೋದು ಕಿವಿಗಷ್ಟೇ ಅಲ್ಲ, ಇಡೀ ಆರೋಗ್ಯಕ್ಕೇ ಕುತ್ತು!

ಇತ್ತೀಚಿನ ದಿನಗಳಲ್ಲಿ ವಾಕಿಂಗ್, ಬಸ್ಸು, ಆಟೋ, ಕ್ಯಾಬ್ ಎಲ್ಲೇ ಓಡಾಡ್ತಿದ್ರೂ ಕೈಯಲ್ಲೊಂದು ಫೋನ್, ಜೊತೆಗೆ ಇಯರ್ ಫೋನ್ ಇರ್ಲೇಬೇಕು. ಆದ್ರೆ ಹೆಚ್ಚು ಹೊತ್ತು ಇಯರ್ ಫೋನ್ ಬಳಸಿದ್ರೆ ಎಷ್ಟೆಲ್ಲಾ ಸಮಸ್ಯೆ ಆಗುತ್ತೆ ಗೊತ್ತಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಬಡವಾಯ್ತು ಭಾರತದ ಬ್ಯಾಟಿಂಗ್ – ವಿದೇಶಿ ಪಿಚ್ ಗಳಲ್ಲಿ ಖದರ್ ಕಳ್ಕೊಂಡ್ರಾ?
ಫೋನ್ನಲ್ಲಿ ಮಾತನಾಡಲು, ಹಾಡು ಕೇಳಲು ಮೂವಿ ನೋಡಲು ಅನೇಕರು ಕಿವಿಗೆ ಇಯರ್ ಪೋನ್ ಹಾಕ್ಕೊಂಡು ಇರ್ತಾರೆ. ಆದ್ರೆ ಕೆಲವರು ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಇಯರ್ ಫೋನ್ ಬಳಸುತ್ತಾರೆ. ಹೆಚ್ಚು ಹೊತ್ತು ಇಯರ್ ಪೋನ್ ಬಳಸಿದ್ರೆ ಕಿವುಡುತನ ಉಂಟಾಗೋ ಸಾಧ್ಯತೆ ಇರುತ್ತೆ. ಇಯರ್ ಫೋನ್ ಬಳಸಿದ್ರೆ ನಿಮ್ಮ ಕಿವಿಗೆ ಮಾತ್ರ ಸಮಸ್ಯೆ ಅಂತಾ ನೀವು ಭಾವಿಸಿದರೆ, ಅದು ತಪ್ಪು ಕಲ್ಪನೆ. ಇದು ಹೃದಯಕ್ಕೂ ತೊಂದರೆಯನ್ನುಂಟು ಮಾಡುತ್ತದೆ. ದಿನವಿಡೀ ಇಯರ್ ಫೋನ್ ಬಳಸುವುದರಿಂದ ಹೃದಯಾಘಾತ ಆಗೋ ಸಾಧ್ಯತೆ ಕೂಡ ಹೆಚ್ಚಿದೆ. ಅಷ್ಟೇ ಅಲ್ಲದೇ ಇಯರ್ ಪೋನ್ ಜಾಸ್ತಿ ಬಳಸಿದ್ರೆ ತೀವ್ರ ತಲೆನೋವು, ನಿದ್ರಾಹೀನತೆಗೆ ಕಾರಣವಾಗಬಹುದು. ಇಯರ್ ಬಡ್ಸ್ ಅನ್ನು ನೇರವಾಗಿ ಕಿವಿಯೊಳಗೆ ಹಾಕಿಕೊಳ್ಳುವುದರಿಂದ, ಗಾಳಿಯು ಕಿವಿಯೊಳಗೆ ಹೋಗದೇ ಬ್ಯಾಕ್ಟೀರಿಯಾಗಳು ಹೆಚ್ಚಾಗುತ್ತವೆ. ಇದರಿಂದಾಗಿ ಹಲವು ರೀತಿಯ ಸೋಂಕುಗಳು ಹರಡುವ ಸಾಧ್ಯತೆ ಇದೆ.
ಇನ್ನು ಯಾವತ್ತೂ ಕಿವಿಯ ಮೇಲಿರುವ ಹೆಡ್ಫೋನ್ಗಳನ್ನು ಬಳಸಿ. ಇನ್ಸರ್ಟ್ ಇಯರ್ ಫೋನ್ಗಳನ್ನು ಬಳಸುವುದನ್ನು ತಪ್ಪಿಸಿ. ವಿಶೇಷವಾಗಿ ಬಿಗಿಯಾಗಿ ಹೊಂದಿಕೊಳ್ಳುವ ಇಯರ್ ಫೋನ್ಗಳನ್ನು ಬಳಸಬೇಡಿ. ಕಿವಿಯ ಮೇಲೆ ಹೆಡ್ಫೋನ್ಗಳನ್ನು ಬಳಸುವುದರಿಂದ ಶ್ರವಣೇಂದ್ರಿಯವನ್ನು ನೇರವಾಗಿ ಸಂಪರ್ಕಿಸುವ ಧ್ವನಿಯ ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ. ಒಳಇಯರ್ ಬಡ್ಗಳನ್ನು ಬಳಸುವುದರಿಂದ 7-8 ಡೆಸಿಬಲ್ಗಳಷ್ಟು ಶಬ್ದ ಹೆಚ್ಚಾಗುತ್ತದೆ. ಇದಲ್ಲದೆ, ಕಿವಿಯ ಮೇಲಿರುವ ಹೆಡ್ಫೋನ್ಗಳು ಧ್ವನಿಯನ್ನು ಕಿವಿಯಾದ್ಯಂತ ಹೆಚ್ಚು ಸಮವಾಗಿ ಹರಡುತ್ತವೆ ಮತ್ತು ಕಡಿಮೆ ಹಾನಿಯನ್ನುಂಟುಮಾಡುತ್ತವೆ.

ನೋಡಿರಿ

