ಸೈಕಲ್ ರಿಕ್ಷಾ ಚಾಲಕನ ಜೊತೆ ಬೀದಿನಾಯಿ ಫ್ರೆಂಡ್‌ಶಿಪ್!‌ – ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡ್ ಆಯ್ತು ಕ್ಯೂಟ್‌ ವಿಡಿಯೋ!

ಸೈಕಲ್ ರಿಕ್ಷಾ ಚಾಲಕನ ಜೊತೆ ಬೀದಿನಾಯಿ ಫ್ರೆಂಡ್‌ಶಿಪ್!‌ – ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡ್ ಆಯ್ತು ಕ್ಯೂಟ್‌ ವಿಡಿಯೋ!

ನಾಯಿಗಳನ್ನು ಮನುಷ್ಯನ ಬೆಸ್ಟ್ ಫ್ರೆಂಡ್  ಎಂದು ಕರೆಯಲಾಗುತ್ತದೆ. ಇವು ನಮ್ಮ ಕುಟುಂಬದ ಸದಸ್ಯರಂತೆ ಬೆರೆತಿವೆ. ನಾಯಿಗಳು ತಮ್ಮ ಯಜಮಾನನಿಗೆ ಸಂಪೂರ್ಣ ನಿಷ್ಠೆಯನ್ನು ತೋರಿಸುತ್ತವೆ. ಇದೀಗ ಇಲ್ಲೊಂದು ಕಡೆ ಬೀದಿ ನಾಯಿ ಸೈಕಲ್ ರಿಕ್ಷಾ ಚಾಲಕನೊಬ್ಬನೊಂದಿಗೆ ಗೆಳೆತನ ಬೆಳೆಸಿದೆ. ಇದ್ರ ಫೋಟೋ, ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ: ವಾರಣಾಸಿ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಪೋಸ್ಟರ್ ರಿಲೀಸ್ – ನಟಿಯ ಜನ್ಮದಿನಕ್ಕೆ ರಾಜಮೌಳಿ ಉಡುಗೊರೆ

ಸಾಕ್ಷಿ ಎಂಬಂತೆ ಸೈಕಲ್ ರಿಕ್ಷಾ ಚಾಲಕನೊಬ್ಬ ತನ್ನ ಪ್ರೀತಿಯ ಬೀದಿ ನಾಯಿಯೊಂದಿಗೆ ಪ್ರಯಾಣ ಮಾಡುತ್ತಿರುವ ದೃಶ್ಯ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗ್ತಿದೆ. ದಿನ ನಿತ್ಯ ಶ್ರಮ ವಹಿಸಿ ದುಡಿಯುವ ಸೈಕಲ್ ರಿಕ್ಷಾ ಚಾಲಕನೊಬ್ಬ ತನ್ನ ಮುದ್ದಾದ ಬೀದಿ ನಾಯಿಯೊಂದಿಗೆ ಸವಾರಿ ಮಾಡುತ್ತಾನೆ. ಆತನ ಜೊತೆ ​ಮುಂಭಾಗದ ಸೀಟಿನಲ್ಲಿ ಆರಾಮವಾಗಿ ಕುಳಿತ ನಾಯಿ ಸುತ್ತಮುತ್ತ ನೋಡುತ್ತಾ ಎಂಜಾಯ್ ಮಾಡುತ್ತಿದೆ. ವೀಕ್ಷಕರು ಆ ವ್ಯಕ್ತಿ ಮತ್ತು ಅವನ ನಾಯಿ ಸ್ನೇಹಿತನ ನಡುವಿನ ಸುಂದರವಾದ ಬಾಂಧವ್ಯವನ್ನು ಕೊಂಡಾಡುತ್ತಿದ್ದಾರೆ.

ನೋಯ್ಡಾ ಸೆಕ್ಟರ್ 59 ಮೆಟ್ರೋ ನಿಲ್ದಾಣದ ಬಳಿ ರೆಕಾರ್ಡ್ ಮಾಡಲಾದ ಕ್ಲಿಪ್ ಇದಾಗಿದೆ. ವೈರಲ್ ವೀಡಿಯೊದಲ್ಲಿ, ಸೈಕಲ್ ಬಿಡುವವನು ಪ್ರಯಾಣಿಕನನ್ನು ಸಾಗಿಸುತ್ತಿರುವಾಗ ನಾಯಿ ಸೈಕಲ್ ರಿಕ್ಷಾದ ಮುಂಭಾಗದಲ್ಲಿ ಆರಾಮವಾಗಿ ಕುಳಿತಿರುವುದನ್ನು ಕಾಣಬಹುದು. ಟ್ರಾಫಿಕ್ ನಡುವೆಯೂ ಯಾವುದೇ ಭಯವಿಲ್ಲದೆ, ರಸ್ತೆಯಲ್ಲಿ ಸಾಗುವ ವಾಹನಗಳನ್ನು ನೋಡುತ್ತಾ ಕುಳಿತಿದೆ. ಈ ವೀಡಿಯೊವನ್ನು ಕಂಟೆಂಟ್ ಕ್ರಿಯೇಟರ್‌ ಶಿವಾಂಕ್ ಚೌಧರಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. “ಇವರನ್ನು ದಿನಾ ಸೆಕ್ಟರ್ 59 ಮೆಟ್ರೋ ನಿಲ್ದಾಣದ ಬಳಿ ನೋಡುತ್ತೇವೆ, ಇವರಿಬ್ಬರ ಭಾಂದವ್ಯ ಅದ್ಭುತವಾಗಿದೆ” ಎಂದು ಬರೆದಿದ್ದಾರೆ.

Shwetha M